ಆಗಸ್ಟ್ 2018 ರಲ್ಲಿ ಗ್ರೆಟಾ ಥನ್ಬರ್ಗ್ 15 ವರ್ಷದವರಾಗಿದ್ದಾಗ ಸ್ಥಾಪಿಸಿದ ಫ್ರೈಡೇಸ್ ಫಾರ್ ಫ್ಯೂಚರ್ (ಎಫ್‌ಎಫ್‌ಎಫ್), “ಎಲ್ಲರಿಗೂ ನ್ಯಾಯವನ್ನು ಖಾತ್ರಿಪಡಿಸಿಕೊಳ್ಳಲು ಹೋರಾಡಿದವರ ಪರ ನಮ್ಮ ಧ್ವನಿಯನ್ನು ಶಾಂತಿಯುತವಾಗಿ ಮತ್ತು ಗೌರವದಿಂದ ಎತ್ತುತ್ತೇವೆ” ಎಂದು ಟ್ವೀಟ್ ಮಾಡಿದೆ.
“ವಾಕ್ ಸ್ವಾತಂತ್ರ‍್ಯ ಮತ್ತು ಶಾಂತಿಯುತ ಪ್ರತಿಭಟನೆ ಮತ್ತು ಸಭೆ ಸೇರುವ ಹಕ್ಕು ಚರ್ಚೆಯ ವಿಷಯವೇ ಅಲ್ಲದ ಮಾನವ ಹಕ್ಕುಗಳು. ಇವು ಯಾವುದೇ ಪ್ರಜಾಪ್ರಭುತ್ವದ ಮೂಲಧ್ಯೇಯವಾಗಿರಬೇಕು. # ಸ್ಟ್ಯಾಂಡ್‌ವಿತ್‌ದಿಶಾರವಿ” ಎಂದು ಟ್ವೀಟ್ ಮಾಡಿರುವ ಗ್ರೇಟಾ, ಎಫ್‌ಎಫ್‌ಎಫ್ ಪೋಸ್ಟ್ ಮಾಡಿದ ಎಳೆಯನ್ನು ಇಷ್ಟಪಟ್ಟಿದ್ದಾರೆ.
Freedom of speech and the right to peaceful protest and assembly are non-negotiable human rights. These must be a fundamental part of any democracy. #StandWithDishaRavi https://t.co/fhM4Cf1jf1
— Greta Thunberg (@GretaThunberg) February 19, 2021
ರೈತರ ಪ್ರತಿಭಟನೆ ಹೇಗೆ ನಡೆಯಬೇಕು ಎಂದು ಯೋಜಿಸಲು ನಿಕಿತಾ ಜಾಕೋಬ್, ಶಾಂತನು ಮುಲುಕ್ ಅವರೊಂದಿಗೆ ದಿಶಾ “ಟೂಲ್ಕಿಟ್” ಅನ್ನು ಸಂಪಾದಿಸಿದ್ದಾರೆ ಎಂದು ಆರೋಪಿಸಿದ್ದ ದೆಹಲಿ ಪೊಲೀಸರು ದಿಶಾರನ್ನು ಬಂಧಿಸಿದ್ದರು. ಇಂತಹ ಕೃತ್ಯವು ದೇಶದ್ರೋಹಕ್ಕೆ ಸಮನಾಗಿರುತ್ತದೆ ಎಂದು ಪೊಲೀಸರು ಹೇಳಿದ್ದರು. ಯಾವುದೇ ಸಾಮಾಜಿಕ ಹೋರಾಟಕ್ಕೂ ಪ್ರಚಾರಕ್ಕೂ ಇಂತಹ ಯೋಜನೆ ಸಾಮಾನ್ಯವಾಗಿದೆ ಎಂಬ ವ್ಯಾಪಕ ಟೀಕೆಗಳು ಪೊಲೀಸರ ವಿರುದ್ಧ ಕೇಳಿಬಂದಿವೆ.
“ದಿಶಾ ಎಫ್‌ಎಫ್‌ಎಫ್ ಚಳವಳಿಯ ಅವಿಭಾಜ್ಯ ಅಂಗವಾಗಿದ್ದಾರೆ. ಅವರು ಭಾರತದಲ್ಲಿ ಪರಿಸರ ಕಾಳಜಿಯನ್ನು ವ್ಯಕ್ತಪಡಿಸುತ್ತಿರುವುದು ಮಾತ್ರವಲ್ಲದೆ ಜಾಗತಿಕ ಹವಾಮಾನ ಚಳವಳಿಯ ನಿರೂಪಣೆಯಲ್ಲಿ ದೇಶದ ಹೆಚ್ಚು ಪೀಡಿತ ಮತ್ತು ಅಂಚಿನಲ್ಲಿರುವ ಗುಂಪುಗಳ ಸಮಾನತೆ ಮತ್ತು ಪ್ರಾತಿನಿಧ್ಯಕ್ಕಾಗಿ ಶ್ರಮಿಸಿದ್ದಾರೆ” ಎಂದು ಎಫ್‌ಎಫ್‌ಎಫ್ ಟ್ವೀಟ್ ಮಾಡಿದೆ.
ದಿಶಾ ಅವರ ಜಾಮೀನು ಅರ್ಜಿಯನ್ನು ಶನಿವಾರ ವಿಚಾರಣೆ ನಡೆಸಲಾಗುವುದು. “ಸಾಕ್ಷ್ಯವನ್ನು ಹಾಳುಮಾಡುವ” ಸಾಧ್ಯತೆಯನ್ನು ಒತ್ತಿಹೇಳಿದ ಪೊಲೀಸರು ಶುಕ್ರವಾರ ದಿಶಾರಿಗೆ ಇನ್ನೂ ಮೂರು ದಿನಗಳ ನ್ಯಾಯಾಂಗ ಬಂಧನ ವಿಸ್ತರಿಸುವಲ್ಲಿ ಸಫಲರಾಗಿದ್ದಾರೆ.
ದಿಶಾ ಮೂರು ಸುದ್ದಿ ವಾಹಿನಿಗಳ ವಿರುದ್ಧ ಕ್ರಮಕೈಗೊಳ್ಳಲು ಮತ್ತು ಅವರ ಖಾಸಗಿ ಚಾಟ್‌ಗಳ ವಿಷಯ ಸೇರಿದಂತೆ ತನಿಖಾ ಸಾಮಗ್ರಿಗಳನ್ನು ಪೊಲೀಸರು ಸೋರಿಕೆ ಮಾಡದಂತೆ ಕೋರಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ ನಂತರ, ದೆಹಲಿ ಹೈಕೋರ್ಟ್ ಸೆನ್ಸೆಷಲಿಸಂ ವಿರುದ್ಧ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದೆ. ಯಾವುದೇ ಖಾಸಗಿ ಚಾಟ್‌ಗಳನ್ನು ವರದಿಗಾರರಿಗೆ ಸೋರಿಕೆ ಮಾಡಿರುವುದನ್ನು ತನಿಖಾಧಿಕಾರಿಗಳು ನಿರಾಕರಿಸಿದ್ದಾರೆ.
ಇದನ್ನೂ ಓದಿ: ಉನ್ನಾವೊ ದಲಿತ ಬಾಲಕಿಯರ ಸಾವು: ಪ್ರೀತಿ ನಿರಾಕರಿಸಿದ್ದಕ್ಕೆ ವಿಷಪ್ರಾಶನ ಮಾಡಿದವನ ಬಂಧನ


