ದೆಹಲಿ ಪೊಲೀಸರ ಕೋರಿಕೆಯ ಮೇರೆಗೆ ದೆಹಲಿ ನ್ಯಾಯಾಲಯವು ದಿಶಾ ರವಿ ಅವರನ್ನು ಒಂದು ದಿನದ ಮಟ್ಟಿಗೆ ಪೊಲೀಸ್ ಕಸ್ಟಡಿಗೆ ಕಳುಹಿಸಿ ಆದೇಶ ಹೊರಡಿಸಿದೆ. ಫೆ. 19 ರಂದು ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿತ್ತು. ಆಗ ದೆಹಲಿ ಪೊಲೀಸ್ ದಿಶಾಳನ್ನು ಮುಂದಿನ ವಾರ ಮತ್ತೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿತ್ತು.
#DishaRavi sent to one day police custody https://t.co/OscalZ3mj3 pic.twitter.com/UnN8NLegue
— Bar & Bench (@barandbench) February 22, 2021
ಗ್ರೇಟಾ ಥನ್ಬರ್ಗ್ ಟೂಲ್ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 13 ರಂದು ಬೆಂಗಳೂರಿನ ತಮ್ಮ ಮನೆಯಿಂದ ಬಂಧಿಸಲ್ಪಟ್ಟಿದ್ದ ದಿಶಾ ರವಿ ಅವರನ್ನು ಐದು ದಿನಗಳ ಕಾಲ ಪೊಲೀಸರು ಪ್ರಶ್ನಿಸಿದ್ದು, ಶುಕ್ರವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು.
ಫೆಬ್ರವರಿ 22 ರಂದು ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಬಯಸಿದ್ದರಿಂದ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಬೇಕೆಂದು ಪೊಲೀಸರು ನ್ಯಾಯಾಧೀಶರನ್ನು ಕೋರಿದ್ದರಿಂದ ನ್ಯಾಯಾಲಯವು ಈ ಆದೇಶ ನೀಡಿತ್ತು.
ದಿಶಾ ಅವರು ವಿಚಾರಣೆ ವೇಳೆ ಸಹಕರಿಸಲಿಲ್ಲ ಎಂದು ಪೊಲೀಸರ ಪರ ಹಾಜರಾದ ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಇರ್ಫಾನ್ ಅಹ್ಮದ್ ನ್ಯಾಯಾಲಯಕ್ಕೆ ತಿಳಿಸಿದರು. ಪೊಲೀಸರು ಮತ್ತೆ ಅವರನ್ನು ಪ್ರಶ್ನಿಸಲು ಮತ್ತು ಈ ಪ್ರಕರಣದ ಇತರ ಸಹ ಆರೋಪಿಗಳೊಂದಿಗೆ ಮುಖಾಮುಖಿಯಾಗಿ ತರಲು ಬಯಸಿದ್ದಾರೆ ಎಂದು ಇರ್ಫಾನ್ ಹೇಳಿದ್ದಾರೆ.
ಇದನ್ನೂ ಓದಿ: ದಿಶಾ ರವಿ ಕೇಸ್: ಟೂಲ್ಕಿಟ್ ಎಂದರೇನು..? ಪೊಲೀಸರಿಗೆ ಹೈಕೋರ್ಟ್ ಪ್ರಶ್ನೆ


