ಮತ್ತೆ ಒಂದು ದಿನ ಪೊಲೀಸ್ ಕಸ್ಟಡಿಗೆ ದಿಶಾ ರವಿ: ದೆಹಲಿ ಹೈಕೋರ್ಟ್ ಆದೇಶ

ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಪರಿಸರ ಹೋರಾಟಗಾರ್ತಿ ದಿಶಾರವಿ ಜಾಮೀನು ಅರ್ಜಿ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ನಡೆಸುತ್ತಿದೆ. ಈ ವೇಳೆ ದಿಶಾ ರವಿ ಮನವಿಯನ್ನು ಆಲಿಸಿದ ನ್ಯಾಯಾಲಯ, “ಟೂಲ್‌ಕಿಟ್ ಎಂದರೇನು?” ಎಂದು ದೆಹಲಿ ಪೊಲೀಸರನ್ನು ಪ್ರಶ್ನಿಸಿದೆ.

ಟೂಲ್‌ಕಿಟ್ ಆರೋಪದಲ್ಲಿ ಬಂಧಿಸಲಾಗಿರುವ ದಿಶಾ ರವಿಗೆ ಜಾಮೀನು ನೀಡುವುದನ್ನು ತಡೆಯುತ್ತಿರುವ ಕಾನೂನು ಯಾವುದು ಎಂದು ನ್ಯಾಯಾಧೀಶರು ಕೇಳಿದ್ದಾರೆ. ಜೊತೆಗೆ “ಪ್ರಾಸಿಕ್ಯೂಷನ್ ಕಥೆ ಏನು? ದಿಶಾ ರವಿ ವಿರುದ್ಧದ ಆರೋಪಗಳು ಯಾವುವು? ಆಕೆಯ ವಿರುದ್ಧದ ಸಾಕ್ಷ್ಯಗಳು ಯಾವುವು?” ಎಂಬ ಮೂರು ಪ್ರಶ್ನೆಗಳನ್ನು ನ್ಯಾಯಾಲಯ ಪೊಲೀಸರನ್ನು ಪ್ರಶ್ನಿಸಿದೆ.

ಇದಕ್ಕೆ ಉತ್ತರಿಸಿರುವ ದೆಹಲಿ ಪೊಲೀಸರು, ಕೆನಡಾ ಮೂಲದ ಪಿಜೆಎಫ್ ಸಂಘಟನೆ ಖಲಿಸ್ತಾನ್ ರಾಜ್ಯವನ್ನು ರಚಿಸುವುದನ್ನು ಸಮರ್ಥಿಸುತ್ತದೆ. “ಪ್ರತ್ಯೇಕತಾವಾದಿ ಸಂಘಟನೆಯ” ಟ್ವೀಟ್‌ಗಳು ಅವರ ಕಾರ್ಯಸೂಚಿಯಿಂದ ಸ್ಪಷ್ಟವಾಗಿವೆ ಎಂದು ವಿವರಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಪೊಲೀಸರ ಟೂಲ್‌ಕಿಟ್‌ನಲ್ಲಿ 124(A), 153(A), 120(B), UAPA! – ಟೂಲ್‌ಕಿಟ್ ಕೊಟ್ಟವರಾರು?

“ಖಲಿಸ್ತಾನಿಗಳು ರೈತರ ಪ್ರತಿಭಟನೆಯ ಲಾಭವನ್ನು ಪಡೆಯಲು ಬಯಸಿದ್ದರು. ಅವರಿಗೆ ಭಾರತೀಯ ಮುಖ ಬೇಕಿತ್ತು. ಅವರು ದಿಶಾ ರವಿ ಸೇರಿದಂತೆ ಕೆಲವೇ ಜನರೊಂದಿಗೆ ಸಂಪರ್ಕ ಹೊಂದಿದ್ದರು. ಒಂದು ವ್ಯವಸ್ಥೆಯನ್ನು ರೂಪಿಸಲಾಯಿತು. ಈ ಟೂಲ್ಕಿಟ್ ತಯಾರಿಸುವ ಸಂಪೂರ್ಣ ಉದ್ದೇಶ ಪಿತೂರಿಯಾಗಿದೆ” ಎಂದು ಪೊಲೀಸರು ವಾದಿಸಿದ್ದಾರೆ.

“ನಿರಂತರವಾಗಿ ದಿಶಾ ರವಿ ತನಿಖೆಗೆ ಸಹಕರಿಸಲು ನಿರಾಕರಿಸುತ್ತಿದ್ದಾರೆ. ಆಕೆಯ ಎಲೆಕ್ಟ್ರಾನಿಕ್ ಸಾಧನಗಳನ್ನು ಎಫ್‌ಎಸ್‌ಎಲ್ ತಜ್ಞರಿಗೆ ಕಳುಹಿಸಲಾಗಿದೆ. ಪ್ರಾಥಮಿಕ ಸಂಶೋಧನೆಗಳ ಪ್ರಕಾರ ಕೆಲವು ವಿಷಯಗಳನ್ನು ಅಳಿಸಲಾಗಿದೆ ಎಂದು ತೋರಿಸುತ್ತದೆ. ಅದು ಸಾಕ್ಷ್ಯಗಳ ನಾಶ. ತನಿಖೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ” ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಧೀಶರು “ದೆಹಲಿ ಪೊಲೀಸರ ವಾದವನ್ನು ಒಪ್ಪದೆ, ನನ್ನ ಆತ್ಮಸಾಕ್ಷಿಗೆ ಒಪ್ಪಿಗೆಯಾಗದ ಹೊರತು ಮುಂದುವರಿಯಲು ಸಾಧ್ಯವಿಲ್ಲ” ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ ಜನವರಿ 26 ರ ಗಣರಾಜ್ಯೋತ್ಸವದಂದು ನಡೆದ ಅಹಿತಕರ ಘಟನೆಯಲ್ಲಿ ಪೊಲೀಸರ ತನಿಖೆಯ ಒಂದು ಅಂಗವಾದ ಟೂಲ್‌ಕಿಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆಬ್ರವರಿ 13 ರಂದು ದಿಶಾ ರವಿಯನ್ನು ಬೆಂಗಳೂರಿನಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ‘ಹೊಸ ಧರ್ಮಗಳ ಉದಯ’ ಪಾಠ ಮಾಡಬೇಡಿ: ಶಾಲೆಗಳಿಗೆ ಆದೇಶ ನೀಡಿದ ಶಿಕ್ಷಣ ಇಲಾಖೆ!

ಆ ದಿನದ ಘಟನೆಗಳಲ್ಲಿ ವಿದೇಶಿ ಪ್ರತ್ಯೇಕತಾವಾದಿ ಶಕ್ತಿಗಳು ಭಾಗಿಯಾಗಿವೆ ಎಂದು ಅಧಿಕಾರಿಗಳು ಆರೋಪಿಸಿದ್ದು, ಈ ಸಂಬಂಧ ದಿಶಾ ರವಿ ಜೊತೆಗೆ ನಿಕಿತಾ ಜಾಕೋಬ್ ಮತ್ತು ಶಾಂತನು ಮುಲುಕ್ ಎಂಬ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದರು. ಇವರಿಬ್ಬರಿಗೂ ಜಾಮೀನು ನೀಡಲಾಗಿದೆ.

ಈ ಮೂವರು ಭಾರತದ ವಿರುದ್ಧ ಅಂತರರಾಷ್ಟ್ರೀಯ ಅಭಿಯಾನವನ್ನು ಆಯೋಜಿಸಲು ಟೂಲ್‌ಕಿಟ್ ರಚಿಸಿದ್ದಾರೆ ಎಂಬ ಆರೋಪವಿದೆ. ದೆಹಲಿ ಪೊಲೀಸರ ಕೋರಿಕೆಯ ಮೇರೆಗೆ ದೆಹಲಿ ನ್ಯಾಯಾಲಯವು ದಿಶಾ ರವಿ ಅವರನ್ನು ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಫೆಬ್ರವರಿ 22 ರಂದು ಅವರನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಬಯಸಿದ್ದರಿಂದ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಬೇಕೆಂದು ಪೊಲೀಸರು ನ್ಯಾಯಾಧೀಶರನ್ನು ಕೋರಿದ್ದರಿಂದ ನ್ಯಾಯಾಲಯವು ಈ ಆದೇಶ ನೀಡಿದೆ.


ಇದನ್ನೂ ಓದಿ: ಟೂಲ್ಕಿಟ್ ಪ್ರಕರಣ – ದಿಶಾ ರವಿಗೆ ಮೂರು ದಿನಗಳ ನ್ಯಾಯಾಂಗ ಬಂಧನ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

LEAVE A REPLY

Please enter your comment!
Please enter your name here