ಭಾರತದ ನ್ಯಾಯಾಂಗ ವ್ಯವಸ್ಥೆಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಿಜೆಐ ರಂಜನ್ ಗೊಗೊಯ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ಎಂದು ಆರ್‌ಟಿಐ ಹೋರಾಟಗಾರ ಸಾಕೇತ್ ಗೋಖಲೆ ಒತ್ತಾಯಿಸಿದ್ದಾರೆ.
ಈ ಕುರಿತು ಅಟಾರ್ನಿ ಜನರಲ್‌ಗೆ ತಾವು ಬರೆದಿರುವ ಪತ್ರವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸಾಕೇತ್ ಗೋಖಲೆ, “ಇಂಡಿಯಾ ಟುಡೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಸುಪ್ರೀಂನ ಮಾಜಿ ಮುಖ್ಯ ನ್ಯಾಯಾಧೀಶರು ನ್ಯಾಯಾಲಯಕ್ಕೆ ಅವಮಾನವಾಗುವಂತೆ ಮಾತನಾಡಿದ್ದಾರೆ” ಎಂದು ಅವರ ಹೇಳಿಕೆಗಳ ಕೆಲವು ಪಟ್ಟಿಯನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ನ್ಯಾಯಾಂಗ ವ್ಯವಸ್ಥೆ ಕುಸಿದಿದೆ: ಅಯೋಧ್ಯೆ ತೀರ್ಪು ನೀಡಿದ್ದ ಮಾಜಿ ಸಿಜೆಐ ರಂಜನ್ ಗೊಗೊಯ್ ಹೇಳಿಕೆ!
Have written to Attorney General for India seeking sanction for contempt of court proceedings against former CJI Gogoi for statements made at the India Today Conclave.
Sanction was given for harmless tweets by @kunalkamra88 & @sanitarypanels.
Why should a former CJI be special? pic.twitter.com/hiDwNBE6d8
— Saket Gokhale (@SaketGokhale) February 23, 2021
ಇದನ್ನೂ ಓದಿ: ರಂಜನ್ ಗೊಗೊಯ್ ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ: ಶೇಮ್ ಎಂಬ ಘೋಷಣೆ ಮೂಲಕ ಪ್ರತಿಭಟನೆ
“ನೀವು 5 ಟ್ರಿಲಿಯನ್ ಆರ್ಥಿಕತೆಯನ್ನು ಬಯಸುತ್ತಿದ್ದೀರಿ. ಆದರೆ ದೇಶದ ನ್ಯಾಯಾಂಗವು ಕುಸಿದು ಬೀಳುವಂತಿದೆ. ನೀವು ನ್ಯಾಯಾಲಯಕ್ಕೆ ಹೋದರೆ ಅಲ್ಲಿ ನಿಮ್ಮ ಕೊಳೆಯಾದ ಬಟ್ಟೆಯನ್ನು ತೊಳೆಯಬೇಕೆ ಹೊರತು ನಿಮಗೆ ತೀರ್ಪು ಸಿಗುವುದಿಲ್ಲ. ಈ ಕುರಿತು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಮಿಲಿಯನ್ ಗಟ್ಟಲೆ ಹಣ ಹೊಂದಿರುವ ಕಾರ್ಪೊರೇಷನ್ ಗಳು ಮಾತ್ರ ಸುಪ್ರೀಂ ಕೋರ್ಟ್ ಗೆ ಹೋಗಬಹುದು. ನ್ಯಾಯಾಂಗವು ಸರಿಯಾಗಿ ಕಾರ್ಯ ನಿರ್ವಹಿಸದ್ದಕ್ಕೆ ಒಂದಲ್ಲ ಹಲವು ಕಾರಣಗಳಿವೆ” ಎಂದು ರಂಜನ್ ಗೊಗೊಯ್ ನೀಡಿರುವ ಹಲವಾರು ಹೇಳಿಕೆಗಳನ್ನು ಸಾಕೇತ್ ಗೋಖಲೆ ಪಟ್ಟಿ ಮಾಡಿದ್ದಾರೆ.
ನೀವು ಈಗಾಗಲೇ ಕಾಮಿಡಿಯನ್ ಕುನಾಲ್ ಕಮ್ರ ಹಾಗೂ ಕಾರ್ಟೂನಿಸ್ಟ್ ರಚಿತಾ ತನೇಜಾ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದೀರಿ. ಆದರೆ, ರಂಜನ್ ಗೊಗೊಯ್ ಹೇಳಿಕೆಯು ಅದಕ್ಕಿಂತಲೂ ತೀವ್ರತರವಾಗಿದ್ದು. ಹಾಗಾಗಿ ಕೂಡಲೇ ಈ ಕುರಿತು ನಿಮ್ಮ ಪ್ರತಿಕ್ರಿಯೆಯನ್ನು ಬಯಸುತ್ತಿದ್ದೇನೆ ಎಂದು ಸಾಕೇತ್ ಗೋಖಲೆ ಪತ್ರದಲ್ಲಿ ಬರೆದಿದ್ದಾರೆ.
ಇದನ್ನೂ ಓದಿ: ಗೊಗೊಯ್ ವಿರುದ್ಧದ ಲೈಂಗಿಕ ಕಿರುಕುಳ ಪ್ರಕರಣ: ಪಿತೂರಿ ನಡೆದಿರಬಹುದು ಎಂದ ಸುಪ್ರೀಂ


