Homeಮುಖಪುಟಈ ಸಲದ ಬೇಸಿಗೆ: ಉತ್ತರ ಉರಿಯಲಿದೆ, ದಕ್ಷಿಣಕ್ಕೆ ಕೊಂಚ ರಿಲೀಫ್!

ಈ ಸಲದ ಬೇಸಿಗೆ: ಉತ್ತರ ಉರಿಯಲಿದೆ, ದಕ್ಷಿಣಕ್ಕೆ ಕೊಂಚ ರಿಲೀಫ್!

- Advertisement -
- Advertisement -

ಉತ್ತರ, ಈಶಾನ್ಯ, ಪೂರ್ವ ಮತ್ತು ಪಶ್ಚಿಮ ಭಾರತದ ಕೆಲವು ಭಾಗಗಳಲ್ಲಿ ದಿನದ ತಾಪಮಾನವು ಸಾಮಾನ್ಯಕ್ಕಿಂತ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತನ್ನ ಬೇಸಿಗೆಯ ಮಾರ್ಚ್-ಮೇ ಮುನ್ಸೂಚನೆಯಲ್ಲಿ ತಿಳಿಸಿದೆ.

ಆದರೂ, ಇದು ದಕ್ಷಿಣ ಮತ್ತು ಪಕ್ಕದ ಮಧ್ಯ ಭಾರತದಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಕಡಿಮೆ ಇರುವ ಸಾಧ್ಯತೆಯನ್ನು ಮುನ್ಸೂಚನೆ ನೀಡಿದೆ.

“ಉತ್ತರ, ವಾಯುವ್ಯ ಮತ್ತು ಈಶಾನ್ಯ ಭಾರತದ ಹೆಚ್ಚಿನ ಉಪವಿಭಾಗಗಳು, ಮಧ್ಯ ಭಾರತದ ಪೂರ್ವ ಮತ್ತು ಪಶ್ಚಿಮ ಭಾಗಗಳ ಕೆಲವು ಉಪವಿಭಾಗಗಳು ಮತ್ತು ಕೆಲವು ಕರಾವಳಿ ಉಪವಿಭಾಗಗಳಲ್ಲಿ ಸಾಮಾನ್ಯ ಋತುಮಾನದ ಗರಿಷ್ಠ (ದಿನ) ತಾಪಮಾನಕ್ಕಿಂತ ಉಷ್ಣತೆ ಹೆಚ್ಚಾಗಿರುತ್ತದೆ ಎಂದು ಮುನ್ಸೂಚನೆ ಹೇಳಿದೆ.

ಛತ್ತೀಸ್‌ಗಢ್, ಒಡಿಶಾ, ಗುಜರಾತ್, ಕರಾವಳಿ ಮಹಾರಾಷ್ಟ್ರ, ಗೋವಾ ಮತ್ತು ಕರಾವಳಿ ಆಂಧ್ರಪ್ರದೇಶಗಳಲ್ಲಿ ಗರಿಷ್ಠ ತಾಪಮಾನಕ್ಕಿಂತ ಹೆಚ್ಚಿನ ತಾಪಮಾನದ ಸಂಭವನೀಯತೆಯ ಮುನ್ಸೂಚನೆ ಇದೆ.

ಐಎಂಡಿ ಮಹಾನಿರ್ದೇಶಕ ಮೃತುಂಜಯ್ ಮೊಹಾಪಾತ್ರ ಅವರು, ಇಂಡೋ-ಗಂಗಾ ಬಯಲು ಪ್ರದೇಶಗಳ ಬಗ್ಗೆ ಹೀಗೆ ಹೇಳಿದ್ದಾರೆ: ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ, ಪೂರ್ವ ಯುಪಿ, ಪಶ್ಚಿಮ ಯುಪಿ, ಛತ್ತೀಸ್‌ಗಢ, ಜಾರ್ಖಂಡ್‌ನಿಂದ ಒಡಿಶಾದವರೆಗೆ – ತಾಪಮಾನವು ಮಾರ್ಚ್ ನಿಂದ ಮೇ ಅವಧಿಯಲ್ಲಿ 0.5 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ.

ಛತ್ತೀಸ್‌ಗಡ್ ಮತ್ತು ಒಡಿಶಾದಲ್ಲಿ ಸಾಮಾನ್ಯ ತಾಪಮಾನಕ್ಕಿಂತ ಶೇಕಡಾ 75ಕ್ಕೂ ಹೆಚ್ಚು ತಾಪಮಾನ ಇರುವ ಸಂಭವನೀಯತೆ ಇದೆ. ಈ ಎರಡು ರಾಜ್ಯಗಳಲ್ಲಿ ತಾಪಮಾನವು ಕ್ರಮವಾಗಿ 0.86 ಡಿಗ್ರಿ ಸೆಲ್ಸಿಯಸ್ ಮತ್ತು 0.66 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಮೊಹಾಪಾತ್ರ ತಿಳಿಸಿದ್ದಾರೆ.

“ಹರಿಯಾಣ, ಚಂಡೀಗಢ ಮತ್ತು ದೆಹಲಿಯಲ್ಲಿ 0.5 ಡಿಗ್ರಿ ಸೆಲ್ಸಿಯಸ್ ಹೆಚ್ಚಿನ ತಾಪಮಾನ ಸಂಭವಿಸುವ ಸಾಧ್ಯತೆ ಶೇ. 60ರಷ್ಟಿದೆ’ ಎಂದು ಅವರು ಹೇಳಿದ್ದಾರೆ.
ದಕ್ಷಿಣ ಭಾರತದ ಬಹು ಭಾಗಗಳಲ್ಲಿ ತಾಪಮಾನದಿಂದ ಸ್ವಲ್ಪ ರಿಲೀಫ್ ಸಿಗಲಿದೆ ಎಂದು ಮುನ್ಸೂಚನೆ ಹೇಳಿದೆ.


ಇದನ್ನೂ ಓದಿ: ಪ.ಬಂಗಾಳ ಚುನಾವಣೆ: ಮಮತಾ ಬ್ಯಾನರ್ಜಿಗೆ ಬೆಂಬಲ ಘೋಷಿಸಿದ ತೇಜಸ್ವಿ ಯಾದವ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...