‘ತುರ್ತುಪರಿಸ್ಥಿತಿ ಹೇರಿದ್ದು ನಿಜಕ್ಕೂ ತಪ್ಪು’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತನ್ನ ಅಜ್ಜಿ ಇಂದಿರಾ ಗಾಂಧಿಯವರ ನಿಲುವನ್ನು ಒರೆಗೆ ಹಚ್ಚಿ ಹೇಳಿಕೆ ನೀಡಿದ್ದಾರೆ.
“ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 21 ತಿಂಗಳುಗಳ ಕಾಲ ದೇಶಾದ್ಯಂತ ತುರ್ತುಪರಿಸ್ಥಿತಿ ಹೇರಿದ್ದು ತಪ್ಪು. ಆದರೆ, ಕಾಂಗ್ರೆಸ್ ಯಾವುದೇ ಸಂದರ್ಭದಲ್ಲೂ ದೇಶದ ಸಾಂಸ್ಥಿಕ ಚೌಕಟ್ಟನ್ನು ಸೆರೆ ಹಿಡಿಯಲು ಪ್ರಯತ್ನಿಸಲಿಲ್ಲ. ಅದು ಪ್ರಸ್ತುತ ಸನ್ನಿವೇಶಕ್ಕಿಂತ ಮೂಲಭೂತವಾಗಿ ಭಿನ್ನವಾಗಿತ್ತು” ಎಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದ್ದಾರೆ.
1975 ಮತ್ತು 1977ರ ಸಮಯದಲ್ಲಿ 21 ತಿಂಗಳು ಕಾಲ ಹೇರಲಾಗಿದ್ದ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಏನೆಲ್ಲಾ ನಡೆಯಿತೋ, ಅದೆಲ್ಲವೂ ಖಂಡಿತವಾಗಿಯೂ ತಪ್ಪು. ನನ್ನ ಅಜ್ಜಿ ಆ ರೀತಿಯಲ್ಲಿ ಮಾಡಬಾರದಿತ್ತು ಎಂದು ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಅವರೊಂದಿಗೆ ವರ್ಚುವಲ್ ಚರ್ಚೆಯಲ್ಲಿ ರಾಹುಲ್‌ಗಾಂಧಿ ಹೇಳಿದ್ದಾರೆ.
ಇದನ್ನೂ ಓದಿ: ರಮೇಶ್ ಜಾರಕಿಹೋಳಿ ಲೈಂಗಿಕ ಹಗರಣದ ಬಗ್ಗೆ CBI ತನಿಖೆ ಅಗತ್ಯ: ಬಾಲಚಂದರ್ ಜಾರಕಿಹೋಳಿ
ತುರ್ತುಪರಿಸ್ಥಿತಿ ವೇಳೆಯಲ್ಲಿ ಏನಾಯಿತು ಮತ್ತು ಈಗ ಏನಾಗುತ್ತಿದೆ ಎಂಬುದರ ನಡುವೆ ಮೂಲಭೂತ ವ್ಯತ್ಯಾಸವಿದೆ. ಕಾಂಗ್ರೆಸ್ ಪಕ್ಷ ಯಾವುದೇ ಸಮಯದಲ್ಲಿ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ, ಅದರ ಸಾಂಸ್ಥಿಕ ಚೌಕಟ್ಟನ್ನು ಸೆರೆಹಿಡಿಯಲು ಪ್ರಯತ್ನಿಸಲಿಲ್ಲ. ನಮ್ಮ ಸೈದಾಂತಿಕತೆಯೂ ಅದನ್ನು ಅನುಮತಿಸುವುದಿಲ್ಲ. ನಾವು ಬಯಸಿದರೂ ಅದನ್ನು ಮಾಡಲು ಸಾಧ್ಯವಿಲ್ಲ ಎಂದು ರಾಹುಲ್‌ಗಾಂಧಿ ತಿಳಿಸಿದ್ದಾರೆ.
“ಆದರೆ, ಆರ್‌ಎಸ್‌ಎಸ್ ದೇಶದ ಸಾಂಸ್ಥಿಕ ಚೌಕಟ್ಟಿನಲ್ಲಿಯೇ ವ್ಯತ್ಯಾಸ ತರಲು ಯತ್ನಿಸುತ್ತಿದೆ. ಸಂಘ ಪರಿವಾರದ ಜನರನ್ನು ಸಾಂಸ್ಥಿಕ ಸಂಸ್ಥೆಗಳಲ್ಲಿ ತುಂಬಿಸುತ್ತಿದೆ. ಬಿಜೆಪಿ ಚುನಾವಣೆಯಲ್ಲಿ ಸೋತರೂ, ಸಾಂಸ್ಥಿಕ ರಚನೆಯಲ್ಲಿ ನಾವು ಅವರ ಜನರನ್ನು ತಡೆಯುವುದು ಸುಲಭವಲ್ಲ” ಎಂದು ವಿವರಿಸಿದ್ದಾರೆ.
ಇದನ್ನೂ ಓದಿ: ‘ಕಣಕಣದಲ್ಲೂ ಕೇಸರಿ’ ಖ್ಯಾತಿಯ ಅಜಯ್ ದೇವ್‌ಗನ್ ಕಾರಿಗೆ ಮುತ್ತಿಗೆ ಹಾಕಿದ ಸಿಖ್ಖರು!


