Homeಮುಖಪುಟತಮಿಳುನಾಡು ಚುನಾವಣೆ: BJPಗೆ 20 ಮತ್ತು PMKಗೆ 23 ಸೀಟು ನೀಡಿದ AIADMK

ತಮಿಳುನಾಡು ಚುನಾವಣೆ: BJPಗೆ 20 ಮತ್ತು PMKಗೆ 23 ಸೀಟು ನೀಡಿದ AIADMK

ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಅಷ್ಟು ಮನ್ನಣೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಅಲ್ಲೇನಿದ್ದರೂ ಪ್ರಾದೇಶಿಕ ಪಕ್ಷಗಳದ್ದೆ ಮೇಲುಗೈ.

- Advertisement -
- Advertisement -

ಏಪ್ರಿಲ್ 6 ರಂದು ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ AIADMK ಮೈತ್ರಿಕೂಟವು ಸೀಟು ಹಂಚಿಕೆ ಆರಂಭಿಸಿದೆ. ತಮಿಳುನಾಡಿನ ಒಟ್ಟು 243 ವಿಧಾನಸಭಾ ಕ್ಷೇತ್ರಗಳಲ್ಲಿ ಅದು ರಾಷ್ಟ್ರೀಯ ಪಕ್ಷ ಬಿಜೆಪಿಗೆ 20 ಸ್ಥಾನ ಮತ್ತು ಪ್ರಾದೇಶಿಕ ಪಕ್ಷ PMKಗೆ 23 ಸ್ಥಾನ ಹಂಚಿಕೆ ಮಾಡಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಈ ಸೀಟು ಹಂಚಿಕೆ ಒಪ್ಪಂದಕ್ಕೆ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಬಿಜೆಪಿಯ ತಮಿಳುನಾಡು ಚುನಾವಣಾ ಉಸ್ತುವಾರಿ ಸಿ.ಟಿ ರವಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಎಲ್ ಮುರುಗನ್ ಸಹಿ ಹಾಕಿದ್ದಾರೆ. AIADMK ಮೈತ್ರಿಕೂಟದ ಮತ್ತೊಂದು ಮೈತ್ರಿ ಪಕ್ಷ ನಟ ವಿಜಯಕಾಂತ್‌ರವರ DMDK ಇನ್ನು ಸೀಟು ಹಂಚಿಕೆ ನಿಗಧಿಪಡಿಸಿಲ್ಲ.

ಕಳೆದ ಲೋಕಸಭಾ ಚುನಾವಣೆ ವೇಳೆ AIADMK ಮೈತ್ರಿಕೂಟವು ಭಾರೀ ಹಿನ್ನಡೆ ಅನುಭವಿಸಿತ್ತು. ಒಟ್ಟು 39 ಕ್ಷೇತ್ರಗಳಲ್ಲಿ 38 ಕ್ಷೇತ್ರಗಳಲ್ಲಿ ಅದು ಸೋಲನ್ನು ಅನುಭವಿಸಿತ್ತು. ಬಿಜೆಪಿ ಪಕ್ಷವು 5 ಸ್ಥಾನಗಳಲ್ಲಿ ಸ್ಪರ್ಧಿಸಿ 5 ರಲ್ಲಿಯೂ ಪರಾಭವಗೊಂಡಿತ್ತು.

ಇನ್ನೊಂದು ಕಡೆ ಡಿಎಂಕೆ ಮೈತ್ರಿಕೂಟ ಸೀಟು ಹಂಚಿಕೆಯಲ್ಲಿ ಭಿನ್ನಾಭಿಪ್ರಾಯ ಎದುರಿಸುತ್ತಿದೆ. 2021 ರ ವಿಧಾನಸಭಾ ಚುನಾವಣೆಯಲ್ಲಿ ಡಿಎಂಕೆಯು ಸ್ಪಷ್ಟವಾಗಿ ಕಾಂಗ್ರೆಸ್ ಕೇವಲ 20 ಸ್ಥಾನಗಳನ್ನು ಮಾತ್ರ ನೀಡಬಲ್ಲೆವು ಎಂದು ಹೇಳಿದೆ. ಮೊದಲಿಗೆ 18 ಸ್ಥಾನ ನೀಡುವುದಾಗಿ ಹೇಳಿದ ಅದು ಆರಂಭಿಕ ಮಾತುಕತೆಗಳ ನಂತರ 20 ಸ್ಥಾನದ ಆಫರ್ ಮಾಡಿದೆ. ಆದರೆ ಕಾಂಗ್ರೆಸ್ ಕನಿಷ್ಠ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ.

ತಮಿಳುನಾಡಿನಲ್ಲಿ ರಾಷ್ಟ್ರೀಯ ಪಕ್ಷಗಳಿಗೆ ಅಷ್ಟು ಮನ್ನಣೆ ಇಲ್ಲ ಎಂಬುದನ್ನು ಇದು ತೋರಿಸುತ್ತದೆ. ಅಲ್ಲೇನಿದ್ದರೂ ಪ್ರಾದೇಶಿಕ ಪಕ್ಷಗಳದ್ದೆ ಮೇಲುಗೈ. ಅದಕ್ಕೆ ಸಾಕ್ಷಿ ಎಂಬಂತೆ ಬಿಜೆಪಿ ಮತ್ತು ಕಾಂಗ್ರೆಸ್ ಎರಡು ರಾಷ್ಟ್ರೀಯ ಪಕ್ಷಗಳಿಗೂ ಕೇವಲ ತಲಾ 20 ಸ್ಥಾನಗಳಷ್ಟೇ ನೀಡಲಾಗಿದೆ.


ಇದನ್ನೂ ಓದಿ: ಸೀಟು ಹಂಚಿಕೆ ವಿವಾದ: ಅಪಾಯದ ಅಂಚಿನಲ್ಲಿ ಡಿಎಂಕೆ-ಕಾಂಗ್ರೆಸ್ ಮೈತ್ರಿ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...