ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶದ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಗೃಹ ಸಚಿವ ಅಮಿತ್ ಶಾರವರು ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದರೂ ಅವರ ಮೇಲೆ ಕ್ರಮವೇಕಿಲ್ಲ ಎಂದು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಸೇರಿದಂತೆ ನೂರಾರು ನೆಟ್ಟಿಗರು ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.
ಫೆಬ್ರವರಿ 28 ರಂದು ಅಮಿತ್ ಶಾರವರು ಪಾಂಡಿಚೇರಿಯಲ್ಲಿ ಮಾತನಾಡುತ್ತಾ “ಕೇಂದ್ರ ಸರ್ಕಾರದಿಂದ ಪಾಂಡಿಚೇರಿಗಾಗಿ 15,000 ಕೋಟಿ ರೂಗಳನ್ನು ನೀಡಿದ್ದೇವೆ. ಆದರೆ ಮುಖ್ಯಮಂತ್ರಿ ನಾರಾಯಣಸಾಮಿ ಆ ಹಣದಲ್ಲಿ ಒಂದಷ್ಟು ಕಡಿತ ಮಾಡಿ ಗಾಂಧಿ ಕುಟುಂಬಕ್ಕೆ ನೀಡಿದ್ದಾರೆ” ಎಂದು ಆರೋಪಿಸಿದ್ದರು.
ಈ ಕುರಿತು ಆರ್‌ಟಿಐ ಕಾರ್ಯಕರ್ತ ಸಾಕೇತ್ ಗೋಖಲೆ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, “ಮಾದರಿ ನೀತಿ ಸಂಹಿತೆ ಇರುವ ವೇಳೆ ನಾವು ಇಷ್ಟು ಹಣ ನೀಡಿದ್ದೇವೆ, ದುರುಪಯೋಗವಾಗಿದೆ ಎಂದು ಮಾತನಾಡುವುದು ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ. ಇದು ಮಾಜಿ ಸಿಎಂ ವಿರುದ್ಧ ಕೇಂದ್ರ ಗೃಹ ಸಚಿವರು ಮಾಡಿದ ಸುಳ್ಳು, ಲಜ್ಜೆಗೆಟ್ಟ ಮತ್ತು ಮಾನಹಾನಿಕರ ದಾಳಿಯಾಗಿದೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ನಾನು ಚುನಾವಣಾ ಆಯೋಗಕ್ಕೆ ಮತ್ತು ಪಾಂಡಿಚೇರಿ ಚುನಾವಣಾ ದೂರು ನೀಡಿ ಮೂರು ದಿನಗಳಾಗಿದೆ. ದೂರು ನೀಡಿದ ಎರಡು ದಿನಗಳಲ್ಲಿ ಅದನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು ಎಂಬ ನಿಯಮವಿದೆ. ಆದರೆ ನನ್ನ ದೂರನ್ನೇ ಅವರು ದಾಖಲಿಸಿಲ್ಲ. ಏಕೆ ಅಮಿತ್ ಶಾ ವಿಶೇಷ ವ್ಯಕ್ತಿಯೇ? ಅವರ ಮೇಲೆ ತನಿಖೆ ನಡೆಸುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಮುಂದುವರಿದು ಇದು ಮಾಜಿ ಸಿಎಂ ವಿರುದ್ಧ ಕೇಂದ್ರ ಗೃಹ ಸಚಿವರು ಮಾಡಿದ ಸುಳ್ಳು, ಲಜ್ಜೆಗೆಟ್ಟ ಮತ್ತು ಮಾನಹಾನಿಕರ ದಾಳಿಯಾಗಿದೆ. ಆದರೂ ಕಾಂಗ್ರೆಸ್ ಆಗಲಿ, ಮಾಜಿ ಸಿಎಂ ನಾರಾಯಣಸಾಮಿಯಾಗಲಿ ಈ ಹೇಳಿಕೆಯ ವಿರುದ್ಧ ದೂರು ನೀಡದಿರುವುದು, ಮಾನಹಾನಿ ದೂರು ದಾಖಲಿಸದಿರುವುದು ನೋವಿನ ವಿಷಯ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
What's also disappointing is that the Congress hasn't complained against this false, brazen, & defamatory attack made by the Union Home Minister against former CM @VNarayanasami & Hon'ble Congress President.
The party cannot let such disgusting comments slide without action.
— Saket Gokhale (@SaketGokhale) March 6, 2021
ಪಕ್ಷವು ಇಂತಹ ಅಸಹ್ಯಕರ ಹೇಳಿಕೆಗಳನ್ನು ಯಾವುದೇ ಕ್ರಮವಿಲ್ಲದೆ ಬದಿಗೆ ಸರಿಸಲು ಅವಕಾಶ ನೀಡಬಾರದು ಎಂದು ಆಗ್ರಹಿಸಿರುವ ಅವರು, ಎಲ್ಲರೂ ಇದನ್ನು ಚುನಾವಣಾ ಆಯೋಗಕ್ಕೆ ಟ್ಯಾಗ್ ಮಾಡುವ ಮೂಲಕ ಶೀಘ್ರ ವಿಚಾರಣೆಗೆ ಒತ್ತಾಯಿಸಬೇಕು ಎಂದು ಮನವಿ ಮಾಡಿದ್ದಾರೆ.
ನಂತರ ನೂರಾರು ಜನರು ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡಿದ್ದು, ಗೃಹ ಸಚಿವರ ವಿರುದ್ಧ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಮಾ.8 ರಂದು ಬ್ರಿಟನ್ ಸಂಸತ್ತಿನಲ್ಲಿ ಕೃಷಿ ಕಾಯ್ದೆ & ರೈತ ಹೋರಾಟದ ಚರ್ಚೆ!



ಹೇಳಿಕೆ ನೀಡಿರುವುದು ತಪ್ಪಾಗುವುದು ಏಕೆ?!!!
ಜನರ ಹಣದ ಬಗ್ಗೆ ಜನರಿಗೆ ಮಾಹಿತಿ ನೀಡುವುದು ಹೇಗೆ ತಪ್ಪಾಗುವುದು???!!!
ಆ ಹೇಳಿಕೆ ಪ್ರಕಾರ ಹಣದ ದುರುಪಯೋಗ ಆಗಿಲ್ಲ ಎಂದಾದರೆ ಮಾನನಷ್ಟ ಮೊಕದ್ದಮೆ ಹಾಕಿ ಅದು ಸೂಕ್ತ.. ಅದು ಸರಿಯಾದ ಹೇಳಿಕೆ ಆದ ಪಕ್ಷದಲ್ಲಿ ಅವರು ಮಾಡಿರುವುದು ತಪ್ಪು ಎಂದು ಹೇಳಲಾಗದು..