Homeಮುಖಪುಟಪ.ಬಂಗಾಳ: 3 ರೈಲು ಬಾಡಿಗೆಗೆ ಪಡೆದು ಪ್ರಧಾನಿಯ ರ್‍ಯಾಲಿಗೆ ಜನ ಸೇರಿಸಿದ ಬಿಜೆಪಿ!

ಪ.ಬಂಗಾಳ: 3 ರೈಲು ಬಾಡಿಗೆಗೆ ಪಡೆದು ಪ್ರಧಾನಿಯ ರ್‍ಯಾಲಿಗೆ ಜನ ಸೇರಿಸಿದ ಬಿಜೆಪಿ!

- Advertisement -
- Advertisement -

ಭಾನುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿಯ ಬ್ರಿಗೇಡ್ ರ್‍ಯಾಲಿಯಲ್ಲಿ ಪಾಲ್ಗೊಳ್ಳಲು ರಾಜ್ಯದ ವಿವಿಧ ಜಿಲ್ಲೆಗಳಿಂದ ಜನ ಸೇರಿಸಲು ಬಿಜೆಪಿಯು ಮೂರು ರೈಲುಗಳನ್ನು ಬಾಡಿಗೆಗೆ ಪಡೆದಿತ್ತು ಎಂದು ತಿಳಿದು ಬಂದಿದೆ.

ಮೂಲಗಳ ಪ್ರಕಾರ, ಉತ್ತರ ದಿನಾಜ್‌ಪುರ ಜಿಲ್ಲೆಯ ಅಲಿಪುರ್ದುರ್, ಮಾಲ್ಡಾ ಮತ್ತು ಹರಿಶ್ಚಂದ್ರಪುರದಿಂದ ಬುಕ್ ಮಾಡಲಾಗಿರುವ ಈ ಮೂರು ರೈಲುಗಳನ್ನು ಬಾಡಿಗೆಗೆ ತೆಗೆದುಕೊಳ್ಳಲು ಬಿಜೆಪಿಯು 60 ಲಕ್ಷ ರೂ. ಖರ್ಚು ಮಾಡಿದೆ.

ಇದನ್ನೂ ಓದಿ: ಇಂದು ಬಂಗಾಳಕ್ಕೆ ಸರ್ಕಾರ ಹೋಗಿದೆ, ಮಾರ್ಚ್ 13ಕ್ಕೆ ನಾವು ಹೋಗುತ್ತೇವೆ: ರಾಕೇಶ್ ಟಿಕಾಯತ್

22 ಬೋಗಿಗಳ ಎರಡು ವಿಶೇಷ ರೈಲು ಅಲಿಪುರ್ದುರ್ ಮತ್ತು ಮಾಲ್ಡಾದಿಂದ ಶನಿವಾರ ಸಂಜೆ ಹೊರಟು ಭಾನುವಾರ ಬೆಳಿಗ್ಗೆ 6 ಗಂಟೆಯ ಹೊತ್ತಿಗೆ ಹೌರಾ ನಿಲ್ದಾಣವನ್ನು ತಲುಪಿದೆ ಎನ್ನಲಾಗಿದೆ. ಎರಡು ರೈಲುಗಳ ಬಾಡಿಗೆ ಶುಲ್ಕ ಕ್ರಮವಾಗಿ 26 ಲಕ್ಷ ಮತ್ತು 22 ಲಕ್ಷ ರೂ.ಗಳಾಗಿದೆ.

ಹರಿಶ್ಚಂದ್ರಪುರದಿಂದ ಹೊರಟ 16 ಭೋಗಿಗಳನ್ನು ಹೊಂದಿರುವ ಮೂರನೇ ವಿಶೇಷ ರೈಲು ಶನಿವಾರ ಸಂಜೆ ಹೊರಟು ಭಾನುವಾರ ಬೆಳಿಗ್ಗೆ ಸೀಲ್ಡಾ ನಿಲ್ದಾಣವನ್ನು ತಲುಪಿದ್ದು, ಈ ರೈಲಿನ ಬಾಡಿಗೆ ಶುಲ್ಕ 18 ಲಕ್ಷ ರೂ.ಗಳಾಗಿದೆ.

ಈ ಮೂರು ರೈಲುಗಳು ಹೌರಾ ಮತ್ತು ಸೀಲ್ಡಾದಲ್ಲಿ 18 ಗಂಟೆಗಳ ಕಾಲ ಕಾದು, ಪ್ರಧಾನಿಯ ರ್‍ಯಾಲಿ ಮುಗಿದ ನಂತರ ಬಿಜೆಪಿ ಬೆಂಬಲಿಗರನ್ನು ಆಯಾ ಸ್ಥಳಗಳಿಗೆ ಹಿಂತಿರುಗಿಸಿದೆ. ಸಾಮಾನ್ಯ ವಿಶೇಷ ರೈಲು ಶುಲ್ಕದ ಶೇಕಡಾ 10 ಕ್ಕಿಂತ ಹೆಚ್ಚು ಹಣವನ್ನು ಪಾವತಿಸುವ ಮೂಲಕ ರೈಲುಗಳನ್ನು ಬಾಡಿಗೆಗೆ ಪಡೆಯಲಾಗಿದೆ ಎಂದು ಐಆರ್‌ಸಿಟಿಸಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿಯಾಗಿದೆ.

ಪಂಚರಾಜ್ಯಗಳ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಬಿರುಸಿನ ಪ್ರಚಾರ ನಡೆಸಿವೆ. ಇದರ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪಶ್ಚಿಮ ಬಂಗಾಳದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಇದನ್ನೂ ಓದಿ: ‘ಖೇಲಾ ಹೋಬೆ’ಗೆ ‘ಖೇಲ್ ಖತಂ’ ಎಂದ ಪ್ರಧಾನಿ: ‘ಉಜ್ವಲಾ-ಜುಮ್ಲಾ’ ಎಂದು ದಾಳಿ ಮಾಡಿದ ದೀದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...