Homeಮುಖಪುಟ‘ಖೇಲಾ ಹೋಬೆ’ಗೆ ‘ಖೇಲ್ ಖತಂ’ ಎಂದ ಪ್ರಧಾನಿ: ‘ಉಜ್ವಲಾ-ಜುಮ್ಲಾ’ ಎಂದು ದಾಳಿ ಮಾಡಿದ ದೀದಿ

‘ಖೇಲಾ ಹೋಬೆ’ಗೆ ‘ಖೇಲ್ ಖತಂ’ ಎಂದ ಪ್ರಧಾನಿ: ‘ಉಜ್ವಲಾ-ಜುಮ್ಲಾ’ ಎಂದು ದಾಳಿ ಮಾಡಿದ ದೀದಿ

- Advertisement -
- Advertisement -

ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ ರ‍್ಯಾಲಿಗಳ ಥೀಮ್ ಸಾಂಗ್ “ಖೇಲಾ ಹೋಬೆ” (ಗೇಮ್ ಆನ್-ಆಟ ಶುರು) ಕುರಿತು ಇಂದು ಕೋಲ್ಕತ್ತಾದಲ್ಲಿ ನಡೆದ ಮೆಗಾ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ‘ಖೇಲ್ ಖತಂ’ ಎಂದು ವ್ಯಂಗ್ಯವಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ಇಂದು ನಡೆದ ಗ್ಯಾಸ್ ದರ ಏರಿಕೆ ವಿರುದ್ಧದ ಬೃಹತ್ ರ‍್ಯಾಲಿಯಲ್ಲಿ ಮಮತಾ ಬ್ಯಾನರ್ಜಿ, ‘ಉಜ್ವಲಾ-ಜುಮ್ಲಾ’ ಎಂದು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಅವರ ಆಡಳಿತವನ್ನು “ಭ್ರಷ್ಟಾಚಾರ ಮತ್ತು ಲೂಟಿ-ತಂತ್ರ ” ಎಂದು ಟೀಕಿಸಿದ ಪಿಎಂ ಮೋದಿ, “ಏನೂ ಮರೆಮಾಡಲಾಗಿಲ್ಲ. ಬಂಗಾಳಕ್ಕೆ ಎಲ್ಲವೂ ತಿಳಿದಿದೆ. ಆದರೆ ಈ ಖೇಲ್ (ಆಟ) ಮುಂದುವರಿಯುವುದಿಲ್ಲ. ಖೇಲ್ ಖತಮ್ ಹೋನಾ ಚಾಹಿಯೇ (ಈ ಆಟ ನಿಲ್ಲಲೇಬೇಕು) ಎಂದರು.

ಆಗ ಪ್ರಧಾನಿ ಬಂಗಾಳ ಮುಖ್ಯಮಂತ್ರಿಗೆ ನೇರ ಸವಾಲು ಎಸೆದರು. “ದೀದಿ, ಇದನ್ನು ಕೇಳಿ, ಟಿಎಂಸಿಯ ಆಟ ಮುಗಿದಿದೆ. ಆಟ ಮುಗಿಯುತ್ತದೆ, ಅಭಿವೃದ್ಧಿ ಪ್ರಾರಂಭವಾಗುತ್ತದೆ’ ಎಂದರು.
ಇಂದು ನಡೆದ ರ‍್ಯಾಲಿಯಲ್ಲಿ ಬಾಲಿವುಡ್ ಮಾಜಿ ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರಿದರು.

“ಖೇಲಾ ಹೋಬೆ” ಎಂಬ ರ‍್ಯಾಪ್ ಹಾಡು ತೃಣಮೂಲದ ಪ್ರಚಾರ ಗೀತೆಯಾಗಿ ಮಾರ್ಪಟ್ಟಿದೆ. ‘ಖೇಲಾ ಹೋಬೆ’ ಎಂಬ ಘೋಷಣೆಯೂ ಟಿಎಂಸಿ ರ‍್ಯಾಲಿಗಳಲ್ಲಿ ಸಾಮಾನ್ಯವಾಗಿದೆ.
ಈ ಹಾಡನ್ನು ತೃಣಮೂಲ ನಾಯಕ ದೇಬಾಂಗ್ಶು ಭಟ್ಟಾಚಾರ್ಯ ರಚಿಸಿದ್ದಾರೆ ಎನ್ನಲಾಗಿದೆ. ಮಮತಾ ಬ್ಯಾನರ್ಜಿ ಅವರು ಬಿಜೆಪಿ ಮತ್ತು ಪ್ರಧಾನಿ ಮೋದಿಯವರಿಗೆ ಸವಾಲು ಹಾಕುತ್ತಿರುವುದರಿಂದ ಅವರ ಹೆಚ್ಚಿನ ರ‍್ಯಾಲಿಗಳಲ್ಲಿ ‘ಖೇಲಾ ಹೋಬೆ’ ಘೋಷಣೆಯನ್ನು ಬಳಸುತ್ತಿದ್ದಾರೆ.

ಶುಕ್ರವಾರ, ಮಮತಾ ಬ್ಯಾನರ್ಜಿ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಲು ನಡೆದ ಪತ್ರಿಕಾಗೋಷ್ಠಿಯಲ್ಲಿ “ಖೇಲಾ ಹೋಬೆ, ದೇಖಾ ಹೋಬೆ, ಜೆಟಾ ಹೋಬೆ … (ಆಟ ಶುರು, ನಾವು ನೋಡುತ್ತೇವೆ, ನಾವು ಗೆಲ್ಲುತ್ತೇವೆ).” ಎಂದು ಹೇಳಿದ್ದರು.

ಇಂದು ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಮಮತಾ ನೇತೃತ್ವದಲ್ಲಿ ಸಿಲಿಗುರಿಯಲ್ಲಿ ನಡೆದ ಬೃಹತ್ ಪಾದಯಾತ್ರೆ ಮತ್ತು ಸಭೆಯಲ್ಲಿ ಪಾಲ್ಗೊಂಡ ಮಮತಾ ಬ್ಯಾನರ್ಜಿ, ಚುನಾವಣೆಗೂ ಮೊದಲು ಉಜ್ವಲಾ, ನಂತರ ಎಲ್ಲವು ಜುಮ್ಲಾ’ ಎಂದು ಕೇಂದ್ರದ ಗ್ಯಾಸ್ ಯೋಜನೆ ಉಜ್ವಲಾವನ್ನು ಟೀಕಿಸಿದರು. ಉಚಿತ ಅಕ್ಕಿ ಇದೆ, ಬೇಯಿಸಲು ಗ್ಯಾಸ್ ಇಲ್ಲ ಎಂದು ಅವರು ಕೇಂದ್ರವನ್ನು ತರಾಟೆಗೆ ತೆಗೆದುಕೊಂಡರು.


ಇದನ್ನೂ ಓದಿ: ಇಂದು ಬಂಗಾಳಕ್ಕೆ ಸರ್ಕಾರ ಹೋಗಿದೆ, ಮಾರ್ಚ್ 13ಕ್ಕೆ ನಾವು ಹೋಗುತ್ತೇವೆ: ರಾಕೇಶ್ ಟಿಕಾಯತ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಅರವಿಂದ್ ಕೇಜ್ರಿವಾಲ್, ಕೆ. ಕವಿತಾಗೆ ನೋ ರಿಲೀಫ್‌: ನ್ಯಾಯಾಂಗ ಬಂಧನ ಮೇ 7ರವರೆಗೆ ವಿಸ್ತರಣೆ

0
ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ನಾಯಕಿ ಕೆ ಕವಿತಾ ಅವರ ನ್ಯಾಯಾಂಗ ಬಂಧನವನ್ನು...