Homeಚಳವಳಿಇಂದು ಬಂಗಾಳಕ್ಕೆ ಸರ್ಕಾರ ಹೋಗಿದೆ, ಮಾರ್ಚ್ 13ಕ್ಕೆ ನಾವು ಹೋಗುತ್ತೇವೆ: ರಾಕೇಶ್ ಟಿಕಾಯತ್

ಇಂದು ಬಂಗಾಳಕ್ಕೆ ಸರ್ಕಾರ ಹೋಗಿದೆ, ಮಾರ್ಚ್ 13ಕ್ಕೆ ನಾವು ಹೋಗುತ್ತೇವೆ: ರಾಕೇಶ್ ಟಿಕಾಯತ್

"ಮಾರ್ಚ್ 13 ರಂದು ಪಶ್ಚಿಮ ಬಂಗಾಳದಲ್ಲಿ ಮಹಾಪಂಚಾಯತ್ ಇದೆ. ಅಲ್ಲಿ ರೈತರನ್ನು ಭೇಟಿ ಮಾಡಿ ರೈತ ಚಳವಳಿ ಮತ್ತು ಎಂಎಸ್ಪಿ ಬಗ್ಗೆ ಮಾತನಾಡುತ್ತೇನೆ’..

- Advertisement -
- Advertisement -

ಒಕ್ಕೂಟ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಬಿರುಸಿನಿಂದ ಸಾಗಿದ್ದು, ರೈತರು ಕೂಡ ಅಲ್ಲಿ ಬಿಜೆಪಿ ವಿರುದ್ಧ ಅಭಿಯಾನ ನಡೆಸಲು ನಿರ್ಧರಿಸಿದ್ದಾರೆ.

ಭಾನುವಾರ ಪಶ್ಚಿಮ ಬಂಗಾಳದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಚುನಾವಣಾ ಪ್ರಚಾರದ ರ್‍ಯಾಲಿ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತೀಯ ಕಿಸಾನ್ ಯೂನಿಯನ್ ಟಿಕಾಯತ್ ಬಣದ ಮುಖಂಡ ರಾಕೇಶ್ ಟಿಕಾಯತ್, ಇಂದು ಸರ್ಕಾರ ಕೊಲ್ಕಾತ್ತಾಗೆ ತೆರಳಿದೆ. ನಾವು ಮಾರ್ಚ್ 13 ರಂದು ಪಶ್ಚಿಮ ಬಂಗಾಳಕ್ಕೆ ತೆರಳಿ ರೈತರೊಂದಿಗೆ ಸಂವಾದ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ.

ಒಕ್ಕೂಟ ಸರ್ಕಾರ ರೈತರ ಮಾತುಗಳನ್ನು ಕೇಳುತ್ತಿಲ್ಲ. ಹೀಗಾಗಿ ಮುಂಬರುವ ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಅಭಿಯಾನ ನಡೆಸಲು ರೈತ ಮುಖಂಡರು ನಿರ್ಧರಿಸಿದ್ದರು. ರೈತರ ಮಾತನ್ನು ಕೇಳದ ಸರ್ಕಾರಕ್ಕೆ ಮತ ನೀಡಬೇಡಿ. ಉತ್ತಮ ಅಭ್ಯರ್ಥಿಗೆ ಮತ ನೀಡಿ ಎಂದು ಕೇಳುತ್ತೇವೆ ಎಂದು ಹೇಳಿದ್ದರು.

ಇದನ್ನೂ ಓದಿ: ಡಿಎಂಕೆ-ಕಾಂಗ್ರೆಸ್ ಸೀಟು ಹಂಚಿಕೆ: ಕೊನೆಗೂ 25 ಸೀಟು ಪಡೆದ ಕಾಂಗ್ರೆಸ್!

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಕೆಸರೆರಚಾಟ ಉತ್ತುಂಗದಲ್ಲಿದೆ. ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷಗಳು ಪ್ರಚಾರದಲ್ಲಿ ನಿರತವಾಗಿವೆ. ಈಗ ಕೃಷಿ ಕಾನೂನುಗಳನ್ನು ವಿರೋಧಿಸುತ್ತಿರುವ ರೈತ ಮುಖಂಡರು ಇದೆ ಭಾಗವಾಗಿ ಚುನಾವಣೆಗೆ ಹೊಸ ಕಳೆ ತಂದಿದ್ದಾರೆ.

“ಸರ್ಕಾರವು ಇತ್ತೀಚಿನ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ಹೆಚ್ಚು ಹೋಗುತ್ತಿದೆ. ನಾವು ಅಲ್ಲಿಯೇ ಸರ್ಕಾರವನ್ನು ಭೇಟಿಯಾಗುತ್ತೇವೆ. ಎಂಎಸ್‌ಪಿ ಸರಿಯಾಗಿ ನೀಡಲಾಗುತ್ತಿದೆಯೇ ಅಥವಾ ಇಲ್ಲವೇ, ಅವರಿಗೆ ಏನು ಸಮಸ್ಯೆ ಇದೆ ಎಂಬೆಲ್ಲಾ ವಿಚಾರಗಳ ಬಗ್ಗೆ, ಎಂಎಸ್‌ಪಿ ಬಗ್ಗೆ ತಿಳಿಯಲು ನಾವು ರೈತರೊಂದಿಗೆ ಮಾತನಾಡಲು ಮಾರ್ಚ್ 13 ರಂದು ಬಂಗಾಳಕ್ಕೆ ಹೋಗುತ್ತಿದ್ದೇವೆ’ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ.

“ಮಾರ್ಚ್ 13 ರಂದು ಪಶ್ಚಿಮ ಬಂಗಾಳದಲ್ಲಿ ಮಹಾಪಂಚಾಯತ್ ಇದೆ. ಅಲ್ಲಿ ರೈತರನ್ನು ಭೇಟಿ ಮಾಡಿ ರೈತ ಚಳವಳಿ ಮತ್ತು ಎಂಎಸ್ಪಿ ಬಗ್ಗೆ ಮಾತನಾಡುತ್ತೇನೆ. ನಾಳೆ ಎಲ್ಲಾ ಪ್ರತಿಭಟನಾ ಗಡಿಗಳಲ್ಲಿ ಮಹಿಳಾ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನಾಳೆ ಮಹಿಳೆಯರು ಸಂಪೂರ್ಣ ಕಾರ್ಯಕ್ರಮಗಳನ್ನು ನಡೆಸಲಿದ್ದಾರೆ. ರೈತ ವೇದಿಕೆಗಳು ಮಹಿಳೆಯರದ್ದಾಗಲಿವೆ” ಎಂದು ಹೇಳಿದ್ದಾರೆ.


ಇದನ್ನೂ ಓದಿ: ಮಾರ್ಚ್ 20 ರಂದು ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ್: ದರ್ಶನ್ ಪಾಲ್, ಯೋಗೇಂದ್ರ ಯಾದವ್, ರಾಕೇಶ್ ಟಿಕಾಯತ್ ಭಾಗಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಸಂದೇಶ್‌ಖಾಲಿ ಘಟನೆಗಳ ಬಗ್ಗೆ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ: ಟಿಎಂಸಿ

0
ಸ್ಥಳೀಯ ಬಿಜೆಪಿ ನಾಯಕಿಯೊಬ್ಬರು ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಲು ಖಾಲಿ ಪೇಪರ್‌ಗಳ ಮೇಲೆ ಅನೇಕ ಮಹಿಳೆಯರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೊಸದಾಗಿ ಹೊರಬಂದ ಹಲವಾರು ವೀಡಿಯೊಗಳ ನಂತರ ತೃಣಮೂಲ...