Homeಮುಖಪುಟಸಂದೇಶ್‌ಖಾಲಿ ಘಟನೆಗಳ ಬಗ್ಗೆ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ: ಟಿಎಂಸಿ

ಸಂದೇಶ್‌ಖಾಲಿ ಘಟನೆಗಳ ಬಗ್ಗೆ ಬಿಜೆಪಿ ಸುಳ್ಳು ಸುದ್ದಿ ಹರಡುತ್ತಿದೆ: ಟಿಎಂಸಿ

- Advertisement -
- Advertisement -

ಸ್ಥಳೀಯ ಬಿಜೆಪಿ ನಾಯಕಿಯೊಬ್ಬರು ಟಿಎಂಸಿ ನಾಯಕರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಲು ಖಾಲಿ ಪೇಪರ್‌ಗಳ ಮೇಲೆ ಅನೇಕ ಮಹಿಳೆಯರ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಹೊಸದಾಗಿ ಹೊರಬಂದ ಹಲವಾರು ವೀಡಿಯೊಗಳ ನಂತರ ತೃಣಮೂಲ ಕಾಂಗ್ರೆಸ್ ಗುರುವಾರ ಬಿಜೆಪಿಯು ಸಂದೇಶ್‌ಖಾಲಿ ಘಟನೆಗಳ ಬಗ್ಗೆ ಸುಳ್ಳು ಸುದ್ದಿಯನ್ನು ಹರಡುತ್ತಿದೆ ಎಂದು ಆರೋಪಿಸಿದೆ.

“ಅತ್ಯಾಚಾರದ ಆರೋಪಗಳನ್ನು ಸೃಷ್ಠಿಸಲಾಗಿದೆ ಮತ್ತು ರಾಜ್ಯ ನಾಯಕರ ಆಜ್ಞೆಯ ಮೇರೆಗೆ ದಾಖಲಿಸಲಾಗಿದೆ” ಎಂದು ಹೇಳುವ ಸ್ಥಳೀಯ ಬಿಜೆಪಿ ನಾಯಕ ಗಂಗಾಧರ ಕೋಯಲ್ ಅವರನ್ನು ಒಳಗೊಂಡ ಸಂದೇಶಖಾಲಿ “ಸ್ಟಿಂಗ್ ಆಪರೇಷನ್” ವೀಡಿಯೊವನ್ನು ಟಿಎಂಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ ಮಾಡಿದ ಮೂರು ದಿನಗಳ ನಂತರ ಸುವೆಂದು ಅಧಿಕಾರಿ ವಿರುದ್ಧ ಈ ಆರೋಪವನ್ನು ಹೊರಿಸಲಾಗಿದೆ.

ಪ್ರಕರಣದ ಕುರಿತು, ಟಿಎಂಸಿ ಗುರುವಾರ ಸಂದೇಶಖಾಲಿಯ ಮಹಿಳಾ ನಿವಾಸಿಗಳ ಹೊಸ ವೀಡಿಯೊಗಳನ್ನು ಹಂಚಿಕೊಂಡಿದೆ. “ಬಿಜೆಪಿ ಸುಳ್ಳು ಅತ್ಯಾಚಾರ ಪ್ರಕರಣಗಳನ್ನು ದಾಖಲಿಸಲು ಜನರನ್ನು ಬಳಸಿಕೊಂಡಿದೆ” ಎಂದು ಆರೋಪಿಸಿದ್ದಾರೆ.

ಬಿಜೆಪಿಯ ಬಸಿರ್‌ಹತ್ ಅಭ್ಯರ್ಥಿ ಮತ್ತು ಸಂದೇಶ್‌ಖಾಲಿ ಪ್ರತಿಭಟನೆಯ ಪ್ರಮುಖ ಮುಖಗಳಲ್ಲಿ ಒಬ್ಬರಾದ ರೇಖಾ ಪಾತ್ರಾ ಅವರು ಈ ಹಿಂದೆ ರಾಜ್ಯ ಬಿಜೆಪಿ ನಾಯಕರು ಭೇಟಿಯಾಗಲು ದೆಹಲಿಗೆ ಕರೆದೊಯ್ದ “ಸಂದೇಶಖಾಲಿ ಸಂತ್ರಸ್ತರ” ತುಕಡಿಯ ಗುರುತನ್ನು ಪ್ರಶ್ನಿಸುತ್ತಿರುವ ಹೊಸ ವೀಡಿಯೊವನ್ನು ಪಕ್ಷವು ಹಂಚಿಕೊಂಡಿದೆ.

ಅತ್ಯಾಚಾರದ ದೂರುಗಳನ್ನು ಹಿಂಪಡೆಯಲು ಇಚ್ಛೆ ವ್ಯಕ್ತಪಡಿಸಿದ ಮಹಿಳೆಯರಿಗೆ ಬಿಜೆಪಿ ನಾಯಕರು ಕೊಲೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಟಿಎಂಸಿ ಬುಧವಾರ ಆರೋಪಿಸಿತ್ತು.

ಹೊಸದಾಗಿ ಬಿಡುಗಡೆಯಾದ ವೀಡಿಯೊಗಳನ್ನು ಉಲ್ಲೇಖಿಸಿ, ರಾಜ್ಯ ಸಚಿವ ಮತ್ತು ಹಿರಿಯ ಟಿಎಂಸಿ ನಾಯಕ ಶಶಿ ಪಂಜ ಅವರು, “ಸಂದೇಶಖಾಲಿ ಲೈಂಗಿಕ ದೌರ್ಜನ್ಯಗಳ ಬಗ್ಗೆ ಸುಳ್ಳು ನಿರೂಪಣೆಯನ್ನು ಮುಂದುವರಿಸಲು ಮತ್ತು ತಮ್ಮ ಪೊಲೀಸ್ ದೂರುಗಳನ್ನು ಹಿಂತೆಗೆದುಕೊಳ್ಳಲು ಪ್ರಯತ್ನಿಸಿದ ಸಂತ್ರಸ್ತರಿಗೆ ಬೆದರಿಕೆ ಹಾಕಲಾಗುತ್ತಿದೆ” ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

“ಸಂದೇಶಖಾಲಿ ಸಂತ್ರಸ್ತರಿಗೆ ಭೂಹಗರಣದ ಕುರಿತು ಕೆಲವು ದೂರುಗಳು ಬಂದಿರಬಹುದು. ಆದರೆ ಅವರಲ್ಲಿ ಲೈಂಗಿಕ ಅಪರಾಧದ ದೂರುಗಳು ಇರಲಿಲ್ಲ. ಇದು ಬಿಜೆಪಿಯು ಸುಳ್ಳು ಸುದ್ದಿಯನ್ನು ಹರಡುತ್ತಿದೆ ಎಂದು ಮತ್ತೊಮ್ಮೆ ಸಾಬೀತುಪಡಿಸುತ್ತದೆ” ಎಂದು ಪಂಜ ಹೇಳಿದರು.

ಮತ್ತೊಂದೆಡೆ, ಪಶ್ಚಿಮ ಬಂಗಾಳದ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ, ಟಿಎಂಸಿಯ ಆರೋಪಗಳನ್ನು ತಳ್ಳಿಹಾಕಿದರು, ವೀಡಿಯೊಗಳನ್ನು ಅಭಿಷೇಕ್ ಬ್ಯಾನರ್ಜಿ ಮತ್ತು ಪಕ್ಷದ ಖಾಸಗಿ ಚುನಾವಣಾ-ಕಮ್-ರಾಜಕೀಯ ಸಲಹೆಗಾರ ಐ-ಪಿಎಸಿಯ ಓರೆಯಾದ ಉಲ್ಲೇಖದಿಂದ ನಿರ್ಮಿಸಲಾಗಿದೆ” ಎಂದು ಆರೋಪಿಸಿದರು.

“ನಾವು ಇಬ್ಬರ ವಿರುದ್ಧವೂ ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹೋಗುತ್ತಿದ್ದೇವೆ ಮತ್ತು ಅಂತಹ ದುರುದ್ದೇಶಪೂರಿತ ಸುಳ್ಳುಗಳನ್ನು ಹರಡಿದ್ದಕ್ಕಾಗಿ ಇಬ್ಬರನ್ನೂ ತರಾಟೆಗೆ ತೆಗೆದುಕೊಳ್ಳುತ್ತೇವೆ ಎಂದು ಖಚಿತಪಡಿಸಿಕೊಳ್ಳುತ್ತೇವೆ” ಎಂದು ಬಸಿರ್‌ಹತ್‌ನಲ್ಲಿ ರೇಖಾ ಪಾತ್ರ ಅವರ ನಾಮಪತ್ರ ಸಲ್ಲಿಕೆ ರ್ಯಾಲಿಯಲ್ಲಿ ಭಾಗವಹಿಸಿದ ಅಧಿಕಾರಿ ಹೇಳಿದರು.

ಇತ್ತೀಚಿನ ಬಿಡುಗಡೆಯಾದ ವೀಡಿಯೋ ಒಂದರಲ್ಲಿ ಮಹಿಳೆಯೊಬ್ಬರು, “ನಮಗೆ ಖಾಲಿ ಪೇಪರ್‌ಗಳ ಮೇಲೆ ಸಹಿ ಹಾಕಿ ವಂಚಿಸಲಾಗಿದೆ. ನಮ್ಮ ಹೆಸರಿನಲ್ಲಿ ಅತ್ಯಾಚಾರದ ದೂರುಗಳು ದಾಖಲಾಗಿರುವುದು ನಮಗೆ ನಂತರ ಪತ್ತೆಯಾಯಿತು. ಇದು ಹಸಿ ಸುಳ್ಳು” ಎಂದು ಹೇಳುತ್ತಿರುವುದು ಕೇಳಿಬಂದಿದೆ. ಖಾಲಿ ಪೇಪರ್‌ಗಳಿಗೆ ಸಹಿ ಹಾಕುವಂತೆ ದುರ್ಬಳಕೆ ಮಾಡಿದ ಬಿಜೆಪಿ ಮಹಿಳಾ ಮುಖಂಡರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮಹಿಳೆ ಹೇಳಿದ್ದಾರೆ.

ಮತ್ತೊಬ್ಬ ಆಪಾದಿತ ಸಂದೇಶ್‌ಖಾಲಿ ನಿವಾಸಿಯೂ ಇದೇ ರೀತಿಯ ಭಾವನೆಗಳನ್ನು ಪ್ರತ್ಯೇಕ ವೀಡಿಯೊದಲ್ಲಿ ಪ್ರತಿಧ್ವನಿಸಿದ್ದು, ಬಿಜೆಪಿ ನಾಯಕ ಪಿಯಾಲಿ ದಾಸ್ ರೂಪಿಸಿದ ಯೋಜನೆಗೆ ತಾವು ಬಲಿಪಶುಗಳಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ಮೂರನೇ ಮಹಿಳೆ ಕೂಡ ಪಿಯಾಲಿ ದಾಸ್ ವಿರುದ್ಧ ಅದೇ ಆರೋಪವನ್ನು ಮಾಡಿದ್ದಾರೆ. “ಅವರು ನಮ್ಮ ಖ್ಯಾತಿಯನ್ನು ಹಾಳುಮಾಡಿದ್ದಾರೆ ಮತ್ತು ನಮಗೆ ಅಪಾರ ನೋವನ್ನು ತಂದಿದ್ದಾರೆ” ಎಂದು ಹೇಳಿದರು. ಕೊನೆಯದಾಗಿ ಸ್ವೀಕರಿಸಿದ ಮಾಹಿತಿಯ ಪ್ರಕಾರ, ದಾಸ್ ಅವರನ್ನು ವಿಚಾರಣೆಗಾಗಿ ಸ್ಥಳೀಯ ಪೊಲೀಸರು ಕರೆದಿದ್ದಾರೆ.

ಪತ್ರಾ ಒಳಗೊಂಡಿರುವ ವೀಡಿಯೊದಲ್ಲಿ, ಬಿಜೆಪಿ ಅಭ್ಯರ್ಥಿಯು ತನ್ನ ಪಕ್ಕದಲ್ಲಿ ನಿಂತಿದ್ದ ಇನ್ನೊಬ್ಬ ಮಹಿಳೆಯನ್ನು ಬೆಂಬಲಿಸಿದ್ದು, ರಾಷ್ಟ್ರಪತಿಯನ್ನು ಭೇಟಿ ಮಾಡಲು ಕರೆದೊಯ್ಯಲ್ಪಟ್ಟ ಸಂತ್ರಸ್ತರನ್ನು ಸ್ಥಳೀಯ ಬಿಜೆಪಿ ನಾಯಕರು ಅನಿಯಂತ್ರಿತವಾಗಿ ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.

ಇದನ್ನೂ ಓದಿ; ಪ.ಬಂಗಾಳ: ‘ನನ್ನ ಮೇಲೆ ದೌರ್ಜನ್ಯ ನಡೆದಿಲ್ಲ..’; ಅತ್ಯಾಚಾರ ಆರೋಪ ಹಿಂತೆಗೆದುಕೊಂಡ ಸಂದೇಶಖಾಲಿ ಮಹಿಳೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಮಾತೇ ಇಲ್ಲ: ಸಿಎಂ ಸಿದ್ದರಾಮಯ್ಯ

0
ಗ್ಯಾರಂಟಿ ಯೋಜನೆಗಳಿಗಾಗಿ 52,009 ಕೋಟಿ ರೂಪಾಯಿ ಹಣವನ್ನು ಮೀಸಲಿಟ್ಟಿದ್ದೇವೆ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ ಎಂಬುವುದು ಬಿಜೆಪಿಯ ಅಪ್ಪಟ ಸುಳ್ಳು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯ ಕಾಂಗ್ರೆಸ್ ಸರ್ಕಾರ ಒಂದು...