ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರ ಮಾಡಿದ್ದ ಆರೋಪಿಗೆ ಕೇವಲ 55 ದಿನದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿ ಪ್ರಕರಣ ಇತ್ಯರ್ಥಪಡಿಸಿರುವ ಘಟನೆ ಉತ್ತರಪ್ರದೇಶದ ಇಟಾವಾ ಜಿಲ್ಲೆಯಲ್ಲಿ ನಡೆದಿದೆ. ಶೀಘ್ರವಾಗಿ ನಡೆದ ತನಿಖೆಯೆ ಇದಕ್ಕೆ ಕಾರಣ ಎಂದು ಸ್ಥಳೀಯ ಪೊಲೀಸ್ ಮುಖ್ಯಸ್ಥರು ಹೇಳಿದ್ದಾರೆ.
ಅರುಣ್ ಕುಮಾರ್ ಎಂಬ ಆರೋಪಿಯನ್ನು ಜನವರಿ 19 ರಂದು ಇಟಾವಾ ಜಿಲ್ಲೆಯಿಂದ ಬಂಧಿಸಲಾಗಿತ್ತು. ನಂತರ ಅಪ್ರಾಪ್ತ ವಯಸ್ಕರ ವಿರುದ್ಧದ ಲೈಂಗಿಕ ಅಪರಾಧಗಳನ್ನು ನಿರ್ವಹಿಸುವ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಬಂಧನವಾದ ಎರಡು ವಾರಗಳಲ್ಲಿ ಈ ಪ್ರಕರಣದ ತನಿಖೆ ನಡೆಸಿ ಚಾರ್ಜ್‌ಶೀಟ್ ಸಲ್ಲಿಸಿದ್ದೇವೆ ಎಂದು ಇಟಾವಾ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಕುರಿತು ಇಟಾವಾ ಪೊಲೀಸ್ ಮುಖ್ಯಸ್ಥ ಆಕಾಶ್ ತೋಮರ್ ಟ್ವೀಟ್ ಮಾಡಿದ್ದಾರೆ.
This is Arun. He raped a 4 year old girl in Jan 2021. He was arrested after an encounter with police within 24 hours. He has now been sentenced to life imprisonment within 55 days of the incident due to constant supervision/follow up. Justice has been delivered in record time. pic.twitter.com/SYApMdIDQ0
— Akash Tomar IPS (@akashtomarips) March 16, 2021
ಕಳೆದ ವರ್ಷ 11 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ವ್ಯಕ್ತಿಗೆ ಉತ್ತರ ಪ್ರದೇಶದ ಜೌನ್‌ಪುರ ಜಿಲ್ಲೆಯ ನ್ಯಾಯಾಲಯವು ಒಂದು ವಾರದ ಹಿಂದೆ ಮರಣದಂಡನೆ ವಿಧಿಸಿದೆ. ಜೊತೆಗೆ ನ್ಯಾಯಾಲಯವು ಅಪರಾಧಿಗೆ ₹ 10,000 ದಂಡ ವಿಧಿಸಿತು.
ಆರೋಪಿ ಬಾಲ್ ಗೋವಿಂದ್ ಬಾಲಕಿಯನ್ನು ಅಪಹರಿಸಿ ನಂತರ ಜೌನ್‌ಪುರದ ಮಡಿಯಾಹು ಪ್ರದೇಶದ ಹಳ್ಳಿಯಲ್ಲಿ ಅತ್ಯಾಚಾರ ಎಸಗಿದ್ದ. ಬಾಲಕಿಯ ತಂದೆ ಎಫ್‌ಐಆರ್ ದಾಖಲಿಸಿದ್ದರು. ಪೊಲೀಸರು ಈ ಪ್ರಕರಣವನ್ನು ಪರಿಣಾಮಕಾರಿಯಾಗಿ ತನಿಖೆ ನಡೆಸಿದ ಕಾರಣ ಏಳು ತಿಂಗಳಲ್ಲಿ ಅಪರಾಧ ಸಾಬೀತಾಗಿದೆ ಎಂದು ಯುಪಿ ಸರ್ಕಾರ ಹೇಳಿಕೆಯಲ್ಲಿ ತಿಳಿಸಿತ್ತು.
ಇದನ್ನೂ ಓದಿ: ವಿಶ್ವದ 30 ಕಲುಷಿತ ನಗರಗಳಲ್ಲಿ 22 ಭಾರತದಲ್ಲಿವೆ: ಸ್ವಿಸ್ ಸಂಸ್ಥೆ ವರದಿ


