Homeಅಂತರಾಷ್ಟ್ರೀಯವಿಶ್ವದ 30 ಕಲುಷಿತ ನಗರಗಳಲ್ಲಿ 22 ಭಾರತದಲ್ಲಿವೆ: ಸ್ವಿಸ್ ಸಂಸ್ಥೆ ವರದಿ

ವಿಶ್ವದ 30 ಕಲುಷಿತ ನಗರಗಳಲ್ಲಿ 22 ಭಾರತದಲ್ಲಿವೆ: ಸ್ವಿಸ್ ಸಂಸ್ಥೆ ವರದಿ

ಸಾರಿಗೆ ವ್ಯವಸ್ಥೆ, ಅಡುಗೆಗಾಗಿ ಕಟ್ಟಿಗೆ ಬೆರಣಿಗಳ ಬಳಕೆ, ವಿದ್ಯುತ್ ಉತ್ಪಾದನೆ, ಕೈಗಾರಿಕೆ, ನಿರ್ಮಾಣ ಕಾರ್ಯ, ತ್ಯಾಜ್ಯ ಸುಡುವಿಕೆ ಮತ್ತು ಕೃಷಿ ತ್ಯಾಜ್ಯ ಸುಡುವಿಕೆಗಳು ಭಾರತದ ವಾಯುಮಾಲಿನ್ಯದ ಪ್ರಮುಖ ಮೂಲಗಳಾಗಿವೆ

- Advertisement -
- Advertisement -

ವಿಶ್ವದ 30 ಅತಿ ಹೆಚ್ಚು ಕಲುಷಿತ ನಗರಗಳಲ್ಲಿ ಇಪ್ಪತ್ತೆರಡು ನಗರಗಳು ಭಾರತದಲ್ಲಿದ್ದು, ರಾಷ್ಟ್ರ ರಾಜಧಾನಿ ದೆಹಲಿಯು ಜಾಗತಿಕವಾಗಿ ಹೆಚ್ಚು ಕಲುಷಿತ ರಾಜಧಾನಿಯಾಗಿ ಮೊದಲ ಸ್ಥಾನ ಪಡೆದಿದೆ ಎಂದು ಸ್ವಿಸ್ ಸಂಸ್ಥೆ ಐಕ್ಯೂಏರ್ ಹೊಸ ವರದಿ ತಿಳಿಸಿದೆ.

ಮಂಗಳವಾರ ಜಾಗತಿಕವಾಗಿ ಬಿಡುಗಡೆಯಾದ ‘ವಿಶ್ವ ವಾಯು ಗುಣಮಟ್ಟ ವರದಿ- 2020’ ಅನ್ನು ಸ್ವಿಸ್ ಸಂಸ್ಥೆ ಐಕ್ಯೂಏರ್ ಈ ವರದಿಯನ್ನು ಸಿದ್ಧಪಡಿಸಿದೆ.

2019 ರಿಂದ 2020 ರವರೆಗೆ ದೆಹಲಿಯ ವಾಯು ಗುಣಮಟ್ಟವು ಶೇಕಡಾ 15 ರಷ್ಟು ಸುಧಾರಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಆದರೆ, ಸುಧಾರಣೆಯ ಹೊರತಾಗಿಯೂ, ದೆಹಲಿ ಕಲುಷಿತಗೊಂಡಿರುವ ನಗರಗಳಲ್ಲಿ 10 ನೇ ಸ್ಥಾನ ಮತ್ತು ವಿಶ್ವದ ಕಲುಷಿತ ರಾಜಧಾನಿಗಳಲ್ಲಿ ಮೊದಲ ಸ್ಥಾನ ಪಡೆದಿದೆ ಎಂದು ವರದಿ ಉಲ್ಲೇಖಿಸಿದೆ.

“ಭಾರತವು ಹೆಚ್ಚು ಕಲುಷಿತ ನಗರಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಜಾಗತಿಕವಾಗಿ ಪಟ್ಟಿ ಮಾಡಲಾಗಿರುವ 30 ಕಲುಷಿತ ನಗರಗಳಲ್ಲಿ 22 ನಗರಗಳು ಭಾರತದಲ್ಲಿವೆ” ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಕೊಪ್ಪಳ: ಹಾರುಬೂದಿಗೆ ಕಂಗೆಟ್ಟ ಜನ – ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು

ದೆಹಲಿಯಲ್ಲದೆ, ವಿಶ್ವದ ಅತಿ ಹೆಚ್ಚು ಕಲುಷಿತವಾದ 30 ನಗರಗಳಲ್ಲಿ 21 ಇತರ ನಗರಗಳು ಹೀಗಿವೆ.

1. ಗಾಜಿಯಾಬಾದ್  (ಉತ್ತರಪ್ರದೇಶ)                         2.ಬುಲಂದ್‌ಶಹರ್(ಉತ್ತರಪ್ರದೇಶ)

3. ಬಿಸ್ರಖ್ ಜಲಾಲ್‌ಪುರ್(ಉತ್ತರಪ್ರದೇಶ)                  4. ನೋಯ್ಡಾ(ಉತ್ತರಪ್ರದೇಶ)

5. ಗ್ರೇಟರ್ ನೋಯ್ಡಾ (ಉತ್ತರಪ್ರದೇಶ)                      6. ಕಾನ್ಪುರ್(ಉತ್ತರಪ್ರದೇಶ)

7. ಲಕ್ನೋ (ಉತ್ತರಪ್ರದೇಶ)                                   8. ಮೀರತ್ (ಉತ್ತರಪ್ರದೇಶ)

9. ಆಗ್ರಾ (ಉತ್ತರಪ್ರದೇಶ)                                      10. ಮುಜಫರ್‌ನಗರ (ಉತ್ತರಪ್ರದೇಶ)

11. ಭೀವಾರಿ (ರಾಜಸ್ಥಾನ)                                      12. ಜಿಂದ್ (ರಾಜಸ್ಥಾನ)

13. ಹಿಸಾರ್  (ಹರಿಯಾಣ)                                   14.ಫತೇಹಾಬಾದ್ (ಹರಿಯಾಣ)

15. ಬಾಂಧ್ವಾರಿ (ಹರಿಯಾಣ)                                 16. ಗುರುಗ್ರಾಮ್ (ಹರಿಯಾಣ)

17. ಯಮುನಾ ನಗರ (ಹರಿಯಾಣ)                          18. ರೋಹ್ಟಕ್ (ಹರಿಯಾಣ)

19 ಧರೂಹೆರಾ (ಹರಿಯಾಣ)                                 20. ಫಿರಿದಾಬಾದ್ (ಹರಿಯಾಣ)

21. ಮುಜಾಫುರ್‌ಪುರ್‌ (ಬಿಹಾರ)

ಈ ವರದಿಯ ಪ್ರಕಾರ, ಚೀನಾದ ಕ್ಸಿನ್‌ಜಿಯಾಂಗ್ ಹೆಚ್ಚು ಕಲುಷಿತವಾದ ನಗರವಾಗಿದೆ. ನಂತರದ ಒಂಬತ್ತು ಸ್ಥಾನಗಳಲ್ಲಿ ಭಾರತದ ನಗರಗಳಿವೆ. ಗಾಜಿಯಾಬಾದ್ ವಿಶ್ವದ ಎರಡನೇ ಅತಿ ಹೆಚ್ಚು ಕಲುಷಿತ ನಗರವಾಗಿದ್ದು, ಬುಲಂದ್‌ಶಹರ್, ಬಿಸ್ರಖ್ ಜಲಾಲ್‌ಪುರ, ನೋಯ್ಡಾ, ಗ್ರೇಟರ್ ನೋಯ್ಡಾ, ಕಾನ್ಪುರ್, ಲಕ್ನೋ ಮತ್ತು ಭೀವಾರಿ ನಂತರದ ಸ್ಥಾನದಲ್ಲಿವೆ.

ಜಾಗತಿಕ ನಗರಗಳ ಶ್ರೇಯಾಂಕ ವರದಿಯು 106 ದೇಶಗಳ PM2.5 ದತ್ತಾಂಶವನ್ನು ಆಧರಿಸಿದೆ. ಇದನ್ನು ಸರ್ಕಾರಿ ಸಂಸ್ಥೆಗಳಿಂದ ನಿರ್ವಹಿಸಲ್ಪಡುವ ಭೂ-ಆಧಾರಿತ ಮೇಲ್ವಿಚಾರಣಾ ಕೇಂದ್ರಗಳು ಮಾಪನ ಮಾಡುತ್ತವೆ.

ಇದನ್ನೂ ಓದಿ: ಮೀಸಲಾತಿ ವಿಚಾರದಲ್ಲಿ ಬಿಜೆಪಿ ಸರ್ಕಾರಗಳಿಗೆ ಸ್ಪಷ್ಟತೆಯಾಗಲೀ, ಇಚ್ಛಾಶಕ್ತಿಯಾಗಲೀ ಇಲ್ಲ; ಸಿದ್ದರಾಮಯ್ಯ

ಸಾರಿಗೆ ವ್ಯವಸ್ಥೆ, ಅಡುಗೆಗಾಗಿ ಕಟ್ಟಿಗೆ, ಬೆರಣಿಗಳ ಬಳಕೆ, ವಿದ್ಯುತ್ ಉತ್ಪಾದನೆ, ಕೈಗಾರಿಕೆ, ನಿರ್ಮಾಣ ಕಾರ್ಯಗಳು, ತ್ಯಾಜ್ಯ ಸುಡುವಿಕೆ ಮತ್ತು ಕೃಷಿ ತ್ಯಾಜ್ಯ ಸುಡುವಿಕೆಗಳು ಭಾರತದ ವಾಯುಮಾಲಿನ್ಯದ ಪ್ರಮುಖ ಮೂಲಗಳಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

“ಭಾರತದ ನಗರಗಳಾದ್ಯಂತ ಸಾರಿಗೆ ಕ್ಷೇತ್ರವು ಪಿಎಂ 2.5 ಹೊರಸೂಸುವಿಕೆ ಮೂಲಗಳಿಗೆ ಪ್ರಮುಖ ಕಾರಣವಾಗಿದೆ” ಎಂದು ವರದಿ ತಿಳಿಸಿದೆ.

ಸರ್ಕಾರಗಳು ಸುಸ್ಥಿರ ಮತ್ತು ಶುದ್ಧ ಇಂಧನ ಮೂಲಗಳಿಗೆ ಆದ್ಯತೆ ನೀಡುವುದು ಈಗೀನ ಪರಿಸ್ಥಿತಿಗೆ ಸೂಕ್ತವಾಗಿದೆ, ಜೊತೆಗೆ ನಗರಗಳಲ್ಲಿ ಜನರು ಹೆಚ್ಚಾಗಿ ವಾಕಿಂಗ್, ಸೈಕ್ಲಿಂಗ್ ಮತ್ತು ಸಾರ್ವಜನಿಕ ಸಾರಿಗೆಯನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.


ಇದನ್ನೂ ಓದಿ: ಪಕ್ಷಾಂತರಿಗಳಿಗೆ ಟಿಕೆಟ್: ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ; ರಾಜ್ಯದಾದ್ಯಂತ ಭಾರಿ ಪ್ರತಿಭಟನೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದಲಿತ ಸಮುದಾಯದ ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ; ‘ಪ್ರಬುದ್ಧ’ ಯೋಜನೆ ಪುನರಾರಂಭ

0
ಎಸ್‌ಸಿ-ಎಸ್‌ಟಿ ಮತ್ತು ಇತರ ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳು ತಮ್ಮ ಸ್ನಾತಕೋತ್ತರ ಮತ್ತು ಪಿಎಚ್‌ಡಿ ಕೋರ್ಸ್‌ಗಳನ್ನು ವಿದೇಶದ ವಿಶ್ವವಿದ್ಯಾಲಯಗಳಲ್ಲಿ ಅಧ್ಯಯನ ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ನೀಡುವ ಆರ್ಥಿಕ ಯೋಜನೆಯಾದ 'ಪ್ರಬುದ್ಧ' ಕಾರ್ಯಕ್ರಮವನ್ನು ನಿಲ್ಲಿಸಿದ್ದ...