ಭಾರತವು ಒಂದು ದಿನದಲ್ಲಿ 39,726 ಹೊಸ ಕೊರೊನಾ ವೈರಸ್ ಸೋಂಕುಗಳು ವರದಿಯಾಗಿದ್ದು, ಇದು ಈ ವರ್ಷ ಇಲ್ಲಿಯವರೆಗೆ ದಾಖಲಾದ ಅತಿ ಹೆಚ್ಚು ಏಕದಿನ ಏರಿಕೆಯಾಗಿದೆ. ರಾಷ್ಟ್ರವ್ಯಾಪಿ ಕೊರೊನಾ ಸೋಂಕಿತರ ಸಂಖ್ಯೆ 1,15,14,331 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ಶುಕ್ರವಾರ ಹೇಳಿದೆ.
ಸೋಂಕು ಸತತ ಒಂಬತ್ತನೇ ದಿನ ಹೆಚ್ಚಳ ಆಗುತ್ತಿದ್ದು, ದೇಶದಲ್ಲಿ ಒಟ್ಟು ಸಕ್ರಿಯ ಸೋಂಕಿನ ಪ್ರಕರಣವು 2,71,282 ಕ್ಕೆ ತಲುಪಿದೆ. ಸೋಂಕಿನ ದೈನಂದಿನ ಏರಿಕೆ (39,726) 110 ದಿನಗಳಲ್ಲಿ ಇದು ಅತೀ ಹೆಚ್ಚಾಗಿದ್ದು, ಸೋಂಕಿನಿಂದಾಗಿರುವ ಸಾವಿನ ಸಂಖ್ಯೆ 1,59,370 ಕ್ಕೆ ಏರಿದೆ.
ನವೆಂಬರ್ 29 ರಂದು 41,810 ಹೊಸ ಸೋಂಕುಗಳು ದಾಖಲಾಗಿತ್ತು. ಇದುವರೆಗೂ ರೋಗದಿಂದ ಚೇತರಿಸಿಕೊಂಡವರ ಸಂಖ್ಯೆ 1,10,83,679 ಕ್ಕೆ ಏರಿದೆ. ಐಸಿಎಂಆರ್ ಪ್ರಕಾರ, ಮಾರ್ಚ್ 18 ರವರೆಗೆ 23,13,70,546 ಮಾದರಿಗಳನ್ನು ಪರೀಕ್ಷಿಸಲಾಗಿದೆ.
ಇದನ್ನೂ ಓದಿ: ಕೊರೊನಾ ಸೋಂಕಿಗಿಂತ ರಸ್ತೆ ಅಪಘಾತದಲ್ಲಿ ಮೃತಪಟ್ಟವರೇ ಹೆಚ್ಚು: ಸಚಿವ ನಿತಿನ್ ಗಡ್ಕರಿ
ಇದನ್ನೂ ಓದಿ: ಕೇಂದ್ರ ಅನುಮತಿಸಿದರೆ, ದೆಹಲಿಯ ಎಲ್ಲರಿಗೂ 3 ತಿಂಗಳಲ್ಲಿ ಕೊರೊನಾ ಲಸಿಕೆ – ಕೇಜ್ರಿವಾಲ್


