Homeಮುಖಪುಟಜೀನ್ಸ್ ಪ್ಯಾಂಟ್ ವಿವಾದ: ಸಾಂಸ್ಕೃತಿಕ ಪರಂಪರೆ ಉಳಿಸುವುದು ಮಹಿಳೆಯರ ಜವಾಬ್ದಾರಿ ಎಂದ ಉತ್ತರಾಖಂಡ ಸಿಎಂ ಪತ್ನಿ

ಜೀನ್ಸ್ ಪ್ಯಾಂಟ್ ವಿವಾದ: ಸಾಂಸ್ಕೃತಿಕ ಪರಂಪರೆ ಉಳಿಸುವುದು ಮಹಿಳೆಯರ ಜವಾಬ್ದಾರಿ ಎಂದ ಉತ್ತರಾಖಂಡ ಸಿಎಂ ಪತ್ನಿ

- Advertisement -
- Advertisement -

ಉತ್ತರಾಖಂಡ ಮುಖ್ಯಮಂತ್ರಿ ತಿರತ್‌‌‌ ​​ಸಿಂಗ್ ರಾವತ್‌ ‘ಜೀನ್ಸ್‌ ಪ್ಯಾಂಟ್’‌‌ ಕುರಿತು ನೀಡಿರುವ ಹೇಳಿಕೆಯನ್ನು ಅವರ ಪತ್ನಿ ಶುಕ್ರವಾರ ಸಮರ್ಥಿಸಿಕೊಂಡಿದ್ದು, ಮುಖ್ಯಮಂತ್ರಿಯ ಪೂರ್ಣ ಹೇಳಿಕೆಯನ್ನು ಮಾಧ್ಯಮಗಳು ಪ್ರಸ್ತುತಪಡಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ತಿರತ್ ಸಿಂಗ್ ರಾವತ್‌ ಸಮಾಜ ಮತ್ತು ದೇಶವನ್ನು ನಿರ್ಮಿಸುವಲ್ಲಿ ಮಹಿಳೆಯರ ಕೊಡುಗೆಯನ್ನು ಅಭೂತಪೂರ್ವವಾಗಿದೆ ಎಂದು ಹೇಳಿದ್ದಾರೆ. ನಮ್ಮ ಸಾಂಸ್ಕೃತಿಕ ಪರಂಪರೆ, ಅಸ್ಮಿತೆ, ವೇಷಭೂಷಣಗಳನ್ನು ಉಳಿಸುವುದು ನಮ್ಮ ದೇಶದ ಮಹಿಳೆಯರ ಜವಾಬ್ದಾರಿಯಾಗಿದೆ” ಮುಖ್ಯಮಂತ್ರಿಯ ಪತ್ನಿ ರಶ್ಮಿ ಹೇಳಿದ್ದಾರೆ.

ಇದನ್ನೂ ಓದಿ: ಲವ್ ಜಿಹಾದ್‌ಗೆ ಕೌಂಟರ್: ಅಂತರ್‌ಧರ್ಮೀಯ ವಿವಾಹಿತರಿಗೆ ಪ್ರೋತ್ಸಾಹ ಧನ ಘೋಷಿಸಿದ ಉತ್ತರಾಖಂಡ್‌!

ಮಂಗಳವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ತಿರತ್‌ ಸಿಂಗ್, ಮಹಿಳೆಯರು ರಿಪ್ಪಡ್‌ ಜೀನ್ಸ್ ಧರಿಸಿರುವುದನ್ನು ಟೀಕಿಸಿ, ಅವರು ತಮ್ಮ ಮಕ್ಕಳಿಗೆ ಯಾವ ಮೌಲ್ಯಗಳನ್ನು ನೀಡುತ್ತಿದ್ದಾರೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದರು. ಇದು ತೀವ್ರ ಪ್ರತಿಭಟನೆಗೆ ಕಾರಣವಾಗಿದೆ.

“ಮೌಲ್ಯಗಳ ಕೊರತೆಯಿಂದಾಗಿ, ಈ ದಿನಗಳಲ್ಲಿ ಯುವಕರು ವಿಚಿತ್ರವಾದ ಫ್ಯಾಷನ್ ಪ್ರವೃತ್ತಿಯನ್ನು ಅನುಸರಿಸುತ್ತಾರೆ. ಮೊಣಕಾಲುಗಳು ಕಾಣುತ್ತಿರುವ ರಿಪ್ಪಡ್ ಜೀನ್ಸ್ ಧರಿಸಿರುವ ಯುವಕರು ತಮ್ಮನ್ನು ದೊಡ್ಡ ಜನರೆಂದು ಭಾವಿಸುತ್ತಾರೆ. ಮಹಿಳೆಯರು ಸಹ ಇಂತಹ ಪ್ರವೃತ್ತಿಯನ್ನು ಅನುಸರಿಸುತ್ತಿದ್ದಾರೆ” ಎಂದು ಉತ್ತರಾಖಂಡ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ’ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿಯಾದುದು’: ಮಾಜಿ ಮುಖ್ಯ ನ್ಯಾಯಮೂರ್ತಿ ಎಪಿ ಶಾ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹರಿಯಾಣ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಮೂವರು ಪಕ್ಷೇತರ ಶಾಸಕರು

0
ಲೋಕಸಭೆ ಚುನಾವಣೆಯ ನಡುವೆ ಹರಿಯಾಣದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮೂವರು ಪಕ್ಷೇತರ ಶಾಸಕರು ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದಿದ್ದಾರೆ. ಮೂವರು ಪಕ್ಷೇತರ ಶಾಸಕರಾದ ಸೋಂಬಿರ್...