Homeನ್ಯಾಯ ಪಥಗೌರಿಯ ಮಗ ಕನ್ಹಯ್ಯ ಕುಮಾರ್ ಮತ್ತು ಬೆಗುಸರಾಯ್‍ನಲ್ಲಿ ಆಜಾದಿ

ಗೌರಿಯ ಮಗ ಕನ್ಹಯ್ಯ ಕುಮಾರ್ ಮತ್ತು ಬೆಗುಸರಾಯ್‍ನಲ್ಲಿ ಆಜಾದಿ

- Advertisement -
- Advertisement -

| ರೇಣುಕಾ ನಿಡಗುಂದಿ |

2017ರ ಅಗಸ್ಟ್ ತಿಂಗಳ ರಣಗುಡುವ ಬಿಸಿಲು, ಉರಿವ ಸೂರ್ಯ ದುಗುಡ ತುಂಬಿದ ಹಗಲಿನಲ್ಲಿ ಐಟಿಓದ ಬಳಿ ಯೂಜಿಸಿ ಕಛೇರಿಯ ಹತ್ತಿರ ಜೆಎನ್ಯೂ ವಿದ್ಯಾರ್ಥಿಗಳು ನಡೆಸಿದ್ದ ಪ್ರತಿಭಟನೆಯ ಗುಂಪಿನಲ್ಲಿ ಪುಟ್ಟ ಬಿಳಿ ಪಾರಿವಾಳದಂತೆ ಗೌರಕ್ಕ ಪುಟುಪುಟು ಓಡಾಡಿದ್ದು, ಮಾತಾಡಿದ್ದು, ಕಣ್ಣಿಗೆ ಕಟ್ಟಿದಂತಿದೆ.

ಯೂಜಿಸಿ ಎಲ್ಲ ಗೇಟುಗಳನ್ನು ಭದ್ರಪಡಿಸಿ ಪೊಲೀಸ್ ಪಡೆಗಳು ಭದ್ರತೆಗಾಗಿ ಕರ್ತವ್ಯನಿರತರಾಗಿದ್ದರು. ಗೌರಕ್ಕ ರಸ್ತೆಯಲ್ಲಿ ಹಲಗೆ ಬಾರಿಸುತ್ತ ಆಜಾದಿಯ ಗೀತೆಯನ್ನು ಹಾಡುತ್ತಿದ್ದ ವಿದ್ಯಾರ್ಥಿಗಳ ಗುಂಪಿನಲ್ಲಿ ನುಸುಳಿ ತಮ್ಮ ಮಗ ಕನ್ಹಯ್ಯನನ್ನು, ಉಮರ್‍ನನ್ನು ಗುರುತಿಸಿ ‘ನಾನಿದ್ದೇನೆ ನಿಮ್ಮೊಂದಿಗೆ’ ಎಂದು ಬೆನ್ನುತಟ್ಟಿ ಬಂದಿದ್ದರು. ನಾನು, ವಿಶ್ವಾಸ್ ಮತ್ತು ಗೌರಕ್ಕ ಮೂವರೂ ಯೂಜಿಸಿ ಕಛೇರಿಯ ಪಕ್ಕದ ಫುಟ್ಪಾತಿನಲ್ಲೇ ..ಗಬ್ಬು ನಾರುತ್ತಿದ್ದ ನಾಲಾದ ಪಕ್ಕದಲ್ಲಿ, ಪೋಲಿಸರ ಸಾಲುಗಳಲ್ಲಿ ಸೇರಿ ಪ್ರೇಕ್ಷಕರಾಗಿ ಹೋದದ್ದು ನಿನ್ನೆ ಮೊನ್ನೆಯಂತಿದೆ. ಬಿಸಿಲಿಳಿದು, ದಣಿದ ಸೂರ್ಯನೂ ಪಶ್ಚಿಮದಲ್ಲಿ ಕರಗುವ ಹೊತ್ತಿನವರೆಗೂ ನಾವು ಕನ್ನ್ಹಯ್ಯ, ಉಮರ್ ಅವರ ಸಂಗಾತಿಗಳೊಡನೆಯೇ ಇದ್ದೆವು. ಅದೆಲ್ಲ ಈಗ ಎದೆ ಸುಡುವ ನೆನಪುಗಳಷ್ಟೇ !ಇಂದು ನಮ್ಮ ಗೌರಕ್ಕನ ಹೆಮ್ಮೆಯ ಮಗ ಬೆಗೂಸರಾಯ್‍ದಿಂದ ಚುನಾವಣೆಗೆ ನಿಂತಿದ್ದಾನೆ.

2016 ಅಲ್ಲಿ ಜೆಎನ್ಯೂನ ಕೆಲ ವಿದ್ಯಾರ್ಥಿಗಳು ಅಫ್ಜಲ್ ಗುರು ಪರ ಘೋಷಣೆಯನ್ನು ಕೂಗಿದ್ದರೆಂಬ ಆರೋಪದಡಿ ಅಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿದ್ದ ಕನ್ಹಯ್ಯನ ಮತ್ತು ಸಂಗಡಿಗರ ಮೇಲೆ ದೇಶದ್ರೋಹದ ಕೇಸನ್ನು ದಾಖಲಿಸಲಾಗಿತ್ತು. ಅವೆಲ್ಲ ಸುಳ್ಳು ಆರೋಪಗಳೆಂದು ಸಾಬೀತಾದವು. ಚಾರಿತ್ರಿಕವಾಗಿ ಈ ಘಟನೆ ತಥಾಕಥಿತ ದೇಶಭಕ್ತರ ಮುಖವಾಡಗಳನ್ನು ಕಳಚಿ ಹೊಸ ರಾಷ್ಟ್ರವಾದದ ಕರಾಳ ಮುಖವನ್ನು ಪರಿಚಯಿಸಿತು.

ಕನ್ಹಯ್ಯನ ಹೃದಯದ ಭಾಷೆ ದೇಶದ ಬಹುಸಂಖ್ಯಾತರ ಅಂತಃಸಾಕ್ಷಿಯನ್ನು ಬಡಿದೆಬ್ಬಿಸಿ ಹೊಸ ಚೈತನ್ಯವನ್ನು ತುಂಬಿತು. ಕನ್ಹಯ್ಯ ಸಾರಿದ ಸ್ವಾತಂತ್ರ್ಯದ ಸಮರ ಹೊರಗಿನ ಸ್ವಾತಂತ್ರ್ಯದ ಸಮರವಾಗಿರದೇ ನಮ್ಮೊಳಗಿನ ಆಂತರಿಕ ಸ್ವಾತಂತ್ರ್ಯಕ್ಕಾಗಿ ಕೂಗಿದ ಘೋಷವಾಕ್ಯವಾಗಿತ್ತು. ಬಂಡವಾಳಶಾಹಿ ವಿರುದ್ಧ ಸಮರ; ಸಂಘ ಪರಿವಾರದ ವಿರುದ್ಧ ಸಮರ; ಪಾಳೇಗಾರಿ ಪದ್ಧತಿ ವಿರುದ್ಧ ಸಮರ; ಹಸಿವಿನ ವಿರುದ್ಧ ಸಮರ; ಜಾತಿ ವ್ಯವಸ್ಥೆ ವಿರುದ್ಧ ಸಮರ; ಮನುವಾದದ ವಿರುದ್ಧ ಸಮರ’ ದಿಕ್ಕು ದಿಕ್ಕುಗಳಲ್ಲಿ ಅನುರಣಿಸುತ್ತಿದ್ದ ದನಿಯನ್ನು ಈ ದೇಶ ಬಹುಕಾಲದಿಂದ ಎದುರುನೋಡುತ್ತಿತ್ತು. ಕೋಟ್ಯಾಂತರ ಯುವಕರ ಭವಿಷ್ಯದ ಕುರಿತು ಮಾತಾಡುವವರೇ ಇಲ್ಲದಾಗ, ತಮ್ಮೆಲ್ಲ ಒಳಗುದಿಯನ್ನು ಅದುಮಿಟ್ಟುಕೊಂಡ ಯುವಪೀಳಿಗೆ ಕೂಪದೊಳಗಿಂದ ಹೊರಬಂದು ದನಿಯೆತ್ತುವಂತೆ ಮಾಡಿಬಿಟ್ಟ.

ಐದು ವರ್ಷದಿಂದ ಮೋದಿ ಗುಣಗಾನವನ್ನು ಕೇಳಿಕೇಳಿ ರೋಸಿಹೋಗಿದ್ದ ಜನರಲ್ಲಿ ಕನ್ಹ್ಯಯ್ಯನ ಮಾತುಗಳು ಜೀವತುಂಬಿದವು. ತನ್ನ ತಲೆಮಾರಿನ ಯುವಜನರನ್ನು ದ್ವೇಷ ಅಸಹಿಷ್ಣುತೆ, ಕೋಮುವಾದ, ಹಿಂಸೆಯ, ರಾಜಕಾರಣದ ದಾಸ್ಯದಿಂದ ಬಿಡಿಸಬಲ್ಲ ಶಕ್ತಿಯೊಂದರ ಅಗತ್ಯ ಇಂದು ತುರ್ತಾಗಿದ್ದಾಗ ಕನ್ಹಯ್ಯ ಭರವಸೆಯ ಬೆಳಕಾಗಿ ತಮ್ಮ ಹುಟ್ಟೂರು ಬೆಗೂಸರಾಯ್‍ದ ಘಟಾನುಘಟಿಗಳನ್ನು ಎದುರುಹಾಕಿಕೊಂಡು ಚುನಾವಣಾ ಕಣಕ್ಕೆ ಇಳಿದಿದ್ದಾನೆ. ಭವಿಷ್ಯದ ಮುನ್ನೋಟವಿರದೇ ಧರ್ಮಾಂಧತೆ ಮತ್ತು ಕೋಮುವಾದಗಳಲ್ಲಿ ದೇಶವನ್ನು ಕತ್ತಲಯುಗಕ್ಕೆ ತಳ್ಳುತ್ತಿರುವ ವಿಪ್ಲವ ಕಾಲದಲ್ಲಿ ಪ್ರತಿಯೊಂದು ರಾಜ್ಯದಲ್ಲೂ ಕನ್ಹಯ್ಯರು ಬೇಕಿದ್ದಾರೆ.

2011ರಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ ಜೆಎನ್ಯೂವಿನ ಸೆಂಟರ್ ಫಾರ್ ಆಫ್ರಿಕನ್ ಸ್ಟಡೀಸ್‍ನಲ್ಲಿ ಪ್ರವೇಶ ಪಡೆದಿದ್ದ ಕನ್ಹಯ್ಯ ಇದೇ ವರ್ಷ ವಿರೋಧಿಗಳು ಒಡ್ಡಿದ ದೇಶದ್ರೋಹದ ಆರೋಪ, ಸುಳ್ಳು ವದಂತಿ, ಒಳಸಂಚು, ದ್ವೇಷ ಪ್ರಚಾರಗಳ ನಡುವೆಯೂ ತನ್ನ – The Process of De-colonisation and Social Transformation in South Afriica, 1994-2015  ಥೀಸಿಸ್‍ಗೆ ಡಾಕ್ಟರೇಟ್ ಡಿಗ್ರಿಯನ್ನು ಪಡೆದಿದ್ದಾನೆ. ಅವಕಾಶ ಸಿಕ್ಕರೆ ಅಧ್ಯಾಪಕನಾಗುವ ಆಸೆಯಿದೆಯಂತೆ.

ರಾಜಕಾರಣ ಅವನ ಅಗತ್ಯವಲ್ಲ ಅದು ತೀರಿಸಬೇಕಾದ ಋಣ; ಸಾಮಾಜಿಕ ಜವಾಬ್ದಾರಿ.! ವ್ಯವಸ್ಥೆಯಲ್ಲಿನ ಪಾಚಿಯನ್ನು ಬುಡಸಹಿತ ಕಿತ್ತೊಗೆಯಬೇಕಾದರೆ ತನ್ನಂಥ ಯುವಕರು ರಾಜಕೀಯಕ್ಕೆ ಬರಬೇಕು ಎನ್ನುವ ಅಭಿಪ್ರಾಯ ಕನ್ಹಯ್ಯನದು. ಇದೇ ಮಾತನ್ನು ಡಾ.ಅಂಬೇಡ್ಕರ್ ಅವರೂ ಹೇಳಿದ್ದರು. “ಪರಿಶಿಷ್ಟ ಜಾತಿಯವರು ಭಾರತದ ರಾಜಕಾರಣದಲ್ಲಿ ಸಕ್ರಿಯವಾದ ಪಾತ್ರ ವಹಿಸದಿದ್ದರೆ ಅವರಿಗೆ ಉಳಿಗಾಲವಿಲ್ಲ”ವೆಂದು ಎಚ್ಚರಿಸಿದ್ದರು.

ಬಾಲ್ಯದಲ್ಲಿ ಚುರುಕಾಗಿದ್ದ ಶಾಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಕನ್ಹಯ್ಯನನ್ನು ಅವನ ತಾಯಿ ನೇತಾ ಅಂತಲೇ ಕರೆಯುತ್ತಿದ್ದಳಂತೆ. ನಾಲ್ಕನೇ ತರಗತಿಯಲ್ಲಿದ್ದಾಗಲೇ ಭಾಷಣ ಸ್ಪರ್ಧೆಯಲ್ಲಿ ಪುರಸ್ಕಾರವನ್ನೂ ಪಡೆದಿದ್ದ ಕನ್ಹಯ್ಯ ಅತ್ಯುತ್ತಮ ವಾಗ್ಮಿ. ಭಾಷಣದ ವಿಷಯ “ಮಮತಾಮಯಿ ಮದರ್ ತೆರೇಸಾ”. ಕಾಕತಾಳೀಯವೆಂಬಂತೆ ಕನ್ಹಯ್ಯನನ್ನು ದೇಶದ್ರೋಹದ ಆರೋಪದಡಿ ಜೈಲಿನಲ್ಲಿಟ್ಟಾಗ ಅವನಿದ್ದ ವಾರ್ಡ್ ಹೆಸರೂ “ಮದರ್ ತೆರೆಸಾ ವಾರ್ಡ“ ಆಗಿತ್ತೆಂದು ಕನ್ಹಯ್ಯ ನೆನೆದಿದ್ದಾನೆ. ಕನ್ಹಯ್ಯನ ಆತ್ಮಕಥೆ “ಫ್ರಾಮ್ ಬಿಹಾರ್ ಟೂ ತಿಹಾರ್” ಪುಸ್ತಕವನ್ನು ಯುವಪೀಳಿಗೆ ಓದಬೇಕಿದೆ.

ಕನ್ಹಯ್ಯ 2015ರಲ್ಲಿ ಜೆಎನ್ಯೂ ವಿದ್ಯಾರ್ಥಿ ಸಂಘದ ಅಧ್ಯಕ್ಷನಾದ AISF ನ ಮೊದಲ ಸದಸ್ಯ. ಆಗ AISA, ABVP, SFI & NSUI ದ ಎಲ್ಲ ಉಮೇದುವಾರರನ್ನು ಸೋಲಿಸಿ ಅಧ್ಯಕ್ಷ ಸ್ಥಾನವನ್ನು ಗೆದ್ದಿದ್ದು ಒಂದು ಐತಿಹಾಸಿಕ ಗೆಲುವಾಗಿತ್ತು. ಆದರೆ ಮಂದಿನ ದಿನಗಳಲ್ಲಿ ಅವನ ಜನಪ್ರಿಯತೆಯನ್ನು, ಅವನ ಸಿದ್ಧಾಂತಗಳನ್ನು ವಿರೋಧಿಗಳು ಸಹಿಸಲಿಲ್ಲ. ಅನೇಕ ಬಾರಿ ಅವನ ಮತ್ತು ಅವನ ಸಂಗಡಿಗರ ಮೇಲೆ ಮಾರಣಾಂತಿಕ ಹಲ್ಲೆಗಳಾದವು.

ಒಮ್ಮೆ ಇಂದೋರಿನಲ್ಲಿ ಸಿಪಿಐ ಪಕ್ಷದ ಎಐವೈಎಫ್ ಮತ್ತು ಎಐಎಸ್‍ಎಫ್ ಆಯೋಜಿಸಿದ್ದ “ಲಾಂಗ್ ಮಾರ್ಚ್”ನಲ್ಲಿ ಭಾಗವಹಿಸಲು ಹೋಗುತ್ತಿದ್ದ ಕನ್ಹಯ್ಯನ ಕಾರಿನ ಮೇಲೆ ಮೋದಿ ಭಕ್ತರು ದಾಳಿ ಮಾಡಿದ್ದರು. ದೇಶದ ಅನೇಕ ರಾಜ್ಯಗಳಿಗೆ ಭೆಟ್ಟಿಯಿತ್ತು ಬಿಜೆಪಿ ಸರ್ಕಾರದ ಜನ ವಿರೋಧಿ ನೀತಿಗಳನ್ನು ಜನರ ಮುಂದಿಡಲಾಗುತ್ತಿದ್ದ ಈ ಗುಂಪಿನ “ಲಾಂಗ್ ಮಾರ್ಚ” ನಡಿಗೆಯನ್ನು ಸಹಿಸದ ಮೂಲಭೂತವಾದಿಗಳು ದಾಳಿ ಮಾಡಿದ್ದರೂ ಕನ್ಹಯ್ಯಾ ಬೆದರಿರಲಿಲ್ಲ. ಆದರೆ ಅವನ ಗೆಳೆಯರಿಬ್ಬರಿಗೆ ಗಾಯಗಳಾಗಿದ್ದವು. ಇಂದೋರಿನಲ್ಲಿ ಕಲ್ಲುತೂರಿದರೆ, ಪಶ್ಚಿಮ ಬಂಗಾಳದಲ್ಲಿ ಕೊಳೆತ ಮೊಟ್ಟೆಗಳನ್ನು ತೂರಿದ್ದರು ಸಂಘಿಗಳು.

ಕನ್ಹಯ್ಯ ಫ್ರೀಲಾನ್ಸ್ ಮತ್ತು ಉಪನ್ಯಾಸಗಳನ್ನು ನೀಡುತ್ತಿದ್ದುದನ್ನು, ಪುಸ್ತಕದ ರಾಯಲ್ಟಿ ಹಣ, ಎರಡು ವರ್ಷದ ಆದಾಯ 8.5ಲಕ್ಷ, ಸ್ವಂತ ಭೂಮಿಯಿಲ್ಲ, ನಗದು 24,000 ಮತ್ತು ಮೂರುವರೆ ಲಕ್ಷದಷ್ಟು ಠೇವಣಿಯನ್ನು ಅಫಿಡವಿಟ್‍ನಲ್ಲಿ ನಮೂದಿಸಿದ್ದರೂ ತೃಪ್ತರಾಗದ ಭಕ್ತರು ಮೊನ್ನೆ ನಾಮಪತ್ರ ಸಲ್ಲಿಸಿದ ಬಳಿಕ ಎಂಟು ಲಕ್ಷ ಎಲ್ಲಿಂದ ಬಂತು ಅಂತ ವಾಗ್ದಾಳಿ ಮಾಡಿದ್ದಾರೆ. ಕೋಟಿಗಟ್ಟಲೆ ದೋಚಿಕೊಂಡು ಹೋದವರನ್ನು ಎಳೆದುತರುವ ತಾಕತ್ತಿರದವರು ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ಬಿಟ್ಟರು!

ಕನ್ಹಯ್ಯನ ಮಟ್ಟಿಗೆ ಚುನಾವಣೆಯೆಂಬುದು ದೇಶದ ಬಹುತ್ವ, ಐಕ್ಯತೆ, ಸಹಬಾಳ್ವೆಯ ಸಾಂಸ್ಕೃತಿಕ ಹೆಣಿಕೆಯನ್ನು ವಿರೂಪಗೊಳಿಸಿ ದ್ವೇಷವನ್ನು ಬಿತ್ತುತ್ತಿರುವ ಪ್ರಭುತ್ವದ ವಿರುದ್ಧದ ಹೋರಾಟವಾಗಿದೆ. ತತ್ವ ಸಿದ್ಧಾಂತಗಳಲ್ಲಿ ಬದ್ಢತೆಯುಳ್ಳ ಕಮ್ಯುನಿಸ್ಟರು ಜನರನ್ನು ತಲುಪುವಲ್ಲಿ ಸೋತಿದ್ದಾರೆಂಬ ವಾಸ್ತವದ ಅರಿವು ಕನ್ಹಯ್ಯನಿಗಿದೆ. ಇಂದಿನ ಸಂಘರ್ಷದ ಸಮಯದಲ್ಲಿ ಪ್ರಜಾಪ್ರಭುತ್ವವನ್ನು, ಸಂವಿಧಾನದ ಆಶಯಗಳನ್ನು ಎತ್ತಿಹಿಡಿಯಬೇಕಾಗಿದೆ. ದೇಶದ ನೂರಾರು ಕಲಾವಿದರು, ಚಿಂತಕರು, ಗೆಳೆಯರು, ಹೋರಾಟಗಾರರು, ವಿಚಾರವಾದಿಗಳು ಕನ್ಹಯ್ಯನಿಗೆ ಒತ್ತಾಸೆಯಾಗಿ ನಿಂತಿದ್ದಾರೆ. ಇನ್ನು ಅನೇಕ ಕಲಾವಿದರು, ಬರಹಗಾರರು, ಬ್ಯೂರೋಕ್ರಾಟ್ಸಗಳು ಕೋಮುದ್ವೇಷವನ್ನು ಪ್ರೋತ್ಸಾಹಿಸುವ ಪಕ್ಷಕ್ಕೆ ವೋಟು ನೀಡದಂತೆ ಅಂತರ್ಜಾಲದ ಆಂದೋಲನವನ್ನೇ ಸಾರಿದ್ದಾರೆ.

ಕನ್ಹಯ್ಯನನ್ನು ನನ್ನ ಪ್ರೀತಿಯ ಕೂಸು ಎನ್ನುತ್ತಿದ್ದ ಗೌರಿಯನ್ನು ಕೊಂದ ಫ್ಯಾಸಿಸ್ಟ ಶಕ್ತಿಗಳು ನಾಶವಾಗಲೇ ಬೇಕು. ಈ ಸಮಯದಲ್ಲಿ ಅವಳಿದ್ದಿದ್ದರೆ ತನ್ನ ಕಂದನ ಹುಟ್ಟೂರಾದ ಬೇಗೂಸರಾಯಿಗೆ ಹೋಗಿ ಕನ್ಹಯ್ಯನಿಗೆ ಬೆಂಬಲವಾಗಿ ನಿಂತಿರುತ್ತಿದ್ದಳು. ಗೌರಿ ಬರೀ ವ್ಯಕ್ತಿಯಲ್ಲ, ಈ ದೇಶದ ಅಂತಃಶಕ್ತಿಯಾಗಿ ಜಿಗ್ನೇಶ್ ಮೇವಾನಿ, ಕನ್ಹಯ್ಯನಂತ ಯುವಶಕ್ತಿಗಳಿಗೆ ತಾಯಿಯಾಗಿದ್ದಾಳೆ. ಕಾರ್ಪೊರೇಟ್ ಪರ ಮತ್ತು ರೈತವಿರೋಧಿ, ಕಾರ್ಮಿಕ ವಿರೋಧಿ ಜನ ವಿರೋಧಿ ನೀತಿಗಳ ವಿರುದ್ದ ಸಿಡಿದೆದ್ದ ಚಳವಳಿಯ ಕಿಡಿಯಾಗಿ ದೇಶದಾದ್ಯಂತ ಬೆಳಗುತ್ತಿದ್ದಾಳೆ.

ಇವತ್ತು ನಮ್ಮೆಲ್ಲರ ಭರವಸೆಯ ದೀವಿಗೆಗಾಗಿ ನಮ್ಮ ಪ್ರೀತಿಯ ಕನ್ಹಯ್ಯ ದೊಡ್ದ ದೊಡ್ದ ಬಂಡವಾಳಗಾರರ ಮತ್ತು ದೊಡ್ಡ ದೊಡ್ಡ ನುರಿತ ರಾಜಕೀಯ ಧುರೀಣರೆದುರು ಚುನಾವಣೆಯ ಕಣಕ್ಕಿಳಿದಿದ್ದಾನೆ. ಕನ್ಹಯ್ಯನ ಗೆಲುವು ಪ್ರಜಾಪ್ರಭುತ್ವದ ಗೆಲುವು ! ಸಹಬಾಳ್ವೆ, ಸಮಾನತೆ, ಜಾತ್ಯತೀತ ಭಾರತವನ್ನು ಪ್ರೀತಿಸುವ ನಮ್ಮ ನಿಮ್ಮೆಲ್ಲರ ಗೆಲುವಾಗಲೆಂದು ಆಶಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...

‘NAZA’ಗೆ ವೆನಿಸ್ ವಿಶೇಷ ಜ್ಯೂರಿ ಪ್ರಶಸ್ತಿ; ಸ್ವದೇಶ ಇಸ್ರೇಲ್‌ನ ಎಐ ಹತ್ಯಾಕಾಂಡ ಬಯಲಿಗೆಳೆದ ನಿರ್ದೇಶಕರಿಗೆ ಪೌರತ್ವ ಕಸಿಯುವ ಬೆದರಿಕೆ

ವೆನಿಸ್ ಚಲನಚಿತ್ರೋತ್ಸವದಲ್ಲಿ ವಿಶೇಷ ಜ್ಯೂರಿ ಪ್ರಶಸ್ತಿ ಗೆದ್ದ ‘NAZA’ ಸಾಕ್ಷ್ಯಚಿತ್ರದ ನಿರ್ದೇಶಕರ ವಿರುದ್ಧ ಇಸ್ರೇಲಿ ಸಂಸ್ಕೃತಿ ಸಚಿವ ಮಿಕಿ ಜೋಹರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ‘ರಾಜ್ಯಕ್ಕೆ ದ್ರೋಹ’ ಎಸಗಿದ್ದಾರೆಂದು ಆರೋಪಿಸಿ ಅವರ ಇಸ್ರೇಲಿ...

ಕರ್ನಾಟಕದಲ್ಲಿ ಬರದ ಬರೆ; ನೀರು, ವಿದ್ಯುತ್‌ ಕೊರತೆ ಸಾಧ್ಯತೆ: ಸಿಎಂ ಡಿಕೆ ಶಿವಕುಮಾರ್‌ ಎಚ್ಚರಿಕೆ

ದುರ್ಬಲ ಮುಂಗಾರು ಹಾಗೂ ಮಳೆಯ ಕೊರತೆಯಿಂದ ಕರ್ನಾಟಕದಲ್ಲಿ ಬರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಮುಂದಿನ ದಿನಗಳಲ್ಲಿ ರಾಜ್ಯವು ಕುಡಿಯುವ ನೀರು ಮತ್ತು ವಿದ್ಯುತ್‌ ಕೊರತೆಯನ್ನು ಎದುರಿಸುವ ಸಾಧ್ಯತೆಯಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌...

2,000 ರೂ.ವರೆಗಿನ UPI ಪಾವತಿಗೆ ಶುಲ್ಕವಿಲ್ಲ ಎಂದ ಕೇಂದ್ರ ಸರ್ಕಾರ

ಡಿಜಿಟಲ್ ಪಾವತಿ ಬಳಸುವ ಕೋಟ್ಯಂತರ ಸಾಮಾನ್ಯ ಜನರಿಗೆ ಕೇಂದ್ರ ಹಣಕಾಸು ಸಚಿವಾಲಯ ಮಹತ್ವದ ಸ್ಪಷ್ಟನೆ ನೀಡಿದ್ದು, 2,000 ರೂಪಾಯಿವರೆಗಿನ ಯುಪಿಐ (UPI) ವಹಿವಾಟುಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವಂತಿಲ್ಲ ಎಂದು ಅಧಿಸೂಚನೆ ಹೊರಡಿಸಿದೆ....

ಯಾದಗಿರಿ| ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತರ ಮೇಲೆ ಮಾರಣಾಂತಿಕ ಹಲ್ಲೆ

ಸಿದ್ಧಲಿಂಗೇಶ್ವರ ದೇವಸ್ಥಾನಕ್ಕೆ ತೆರಳಿದ್ದ ದಲಿತ ಸಮುದಾಯದ ಭಕ್ತರ ಮೇಲೆ ಸವರ್ಣೀಯರು ಮಾರಣಾಂತಿಕ ಹಲ್ಲೆ ನಡೆದಿರುವ ಆರೋಪ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗುರುಸುಣಿಗಿ ಗುಡ್ಡದಲ್ಲಿ ಕೇಳಿಬಂದಿದೆ. ಚಾಮನಾಳ ಗ್ರಾಮದ ದಲಿತ ಭಕ್ತರನ್ನು ಗುರಿಯಾಗಿಸಿಕೊಂಡು ಗುರುಸುಣಿಗಿ...

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...