ಲೈಂಗಿಕ ಸಿಡಿ ಪ್ರಕರಣದ ಸಂತ್ರಸ್ತೆಗೆ ಭಯ ಹುಟ್ಟಿಸುತ್ತಿರುವ ಶಾಸಕ ರಮೇಶ್ ಜಾರಕಿಹೊಳಿಯನ್ನು ಬಂಧಿಸಿ ಎಂದು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಒತ್ತಾಯಿಸಿದೆ.
ಬಿಜೆಪಿ ಸರ್ಕಾರದಲ್ಲಿ ಮಹಿಳೆಯರಿಗೆ ಗೌರವ, ರಕ್ಷಣೆ ಇಲ್ಲ ಎನ್ನುವುದನ್ನು ಪದೇ ಪದೇ ನಿರೂಪಿಸುತ್ತಿದ್ದಾರೆ. ಇದುವರೆಗೂ ಸಂತ್ರಸ್ತ ಯುವತಿಗೆ ಸೂಕ್ತ ರಕ್ಷಣೆ ನೀಡುವುದಾಗಿ ಧೈರ್ಯ ತುಂಬುವ ಮಾತನ್ನು ಬಿಜೆಪಿ ಸರ್ಕಾರ ಆಡಲೇ ಇಲ್ಲ ಎಂದು ಕಾಂಗ್ರೆಸ್ ಅಸಮಾಧಾನ ವ್ಯಕ್ತಪಡಿಸಿದೆ.
ಸಿಡಿ ಪ್ರಕರಣ ಹೊರಬಂದು 25 ದಿನಗಳಾದವು. ಸಂತ್ರಸ್ತ ಯುವತಿ ನಾಲ್ಕು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ರಕ್ಷಣೆಗೆ ಅಂಗಲಾಚಿದ್ದಾರೆ.
ಆದರೂ #BuildupBommai ಅವರು ರಕ್ಷಣೆ ನೀಡಲಿಲ್ಲ, ಕನಿಷ್ಠ ರಕ್ಷಣೆಯ ಭರವಸೆಯ ಮಾತೂ ಆಡಲಿಲ್ಲ.@BJP4Karnataka ಸರ್ಕಾರ ಮೀನಾಮೇಷ ಎಣಿಸದೇ #ArrestRapistRamesh
— Karnataka Pradesh Mahila Congress (@KarnatakaPMC) March 27, 2021
ಸಿಡಿ ಬಿಡುಗಡೆಯಾಗಿ 25 ದಿನಗಳಾಗಿವೆ. ರಮೇಶ್ ಜಾರಕಿಹೊಳಿ ಬಂಧನ ಯಾವಾಗ? ಸಿಡಿ ಬಿಡುಗಡೆಗೆ ತಡೆಯಾಜ್ಞೆ ತಂದಿರುವ 6 ಮಂದಿ ಸಚಿವರ ರಾಜೀನಾಮೆ ಯಾವಾಗ? ಎಂದು ಪ್ರಶ್ನಿಸಿರುವ ಮಹಿಳಾ ಕಾಂಗ್ರೆಸ್, ಬಿಜೆಪಿ ಆಡಳಿತದಲ್ಲಿ ಎಲ್ಲವೂ ಉಲ್ಟಾ! ಇಲ್ಲಿ ಆರೋಪಿಗಳು ರಾಜಾರೋಷವಾಗಿ ತಿರುಗುತ್ತಾರೆ, ದೂರುದಾರರು, ಸಂತ್ರಸ್ತರು ತನಿಖೆ ಎದುರಿಸುತ್ತಾರೆ! ಆರೋಪಿಗಳು ಭಯ ಹುಟ್ಟಿಸುತ್ತಾರೆ, ಆದರೂ ಅವರನ್ನೇ ರಕ್ಷಿಸಲಾಗುತ್ತದೆ. ಕಾನೂನಿನ ಮೇಲಿರುವ ಜನರ ಭರವಸೆಯನ್ನು ಈ ಸರ್ಕಾರ ಹುಸಿಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಎಸ್ಐಟಿ ಮೇಲೆ ಬಿಜೆಪಿ ಸರ್ಕಾರ ಪ್ರಭಾವ ಬೀರುವ ಸಾಧ್ಯತೆಗಳೇ ಹೆಚ್ಚು. ಹೀಗಿರುವಾಗ ಸಂತ್ರಸ್ತ ಯುವತಿ ನ್ಯಾಯದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಹಾಗಾಗಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೇಲ್ವಿಚಾರಣೆಯಲ್ಲಿ ಪ್ರಕರಣದ ಸಮಗ್ರ ತನಿಖೆಯಾಗಲಿ, ತಪ್ಪಿತಸ್ತರಿಗೆ ಶಿಕ್ಷೆ ಆಗಬೇಕು. ಅಲ್ಲಿಯವರೆಗೂ ರಮೇಶ್ ಜಾರಕಿಹೊಳಿಯನ್ನು ಬಂಧಿಸಿ ಎಂದು ಒತ್ತಾಯಿಸಲಾಗಿದೆ.
BJP didn't take a day to arrest Disha Ravi for editing a Toolkit
But in 'Sex For Job' case, Ramesh Jarkiholi hasn't been arrested even when victim says she has a life threat
Ramesh is now saying "His Game Begins Now"
Why are Modi & BSY protecting a Rapist? #ArrestRapistRamesh
— Srivatsa (@srivatsayb) March 27, 2021
ರೈತ ಹೋರಾಟದ ಟೂಲ್‌ಕಿಟ್ ಸಂಪಾದಿಸಿದ್ದಕ್ಕೆ ದಿಶಾ ರವಿಯನ್ನು ಸರ್ಕಾರ ಒಂದೇ ದಿನದಲ್ಲಿ ಬಂಧಿಸಿತು. ಆದರೆ ‘ಕೆಲಸಕ್ಕಾಗಿ ಲೈಂಗಿಕ ದುರ್ಬಳಕೆ’ ಪ್ರಕರಣದಲ್ಲಿ, ತನಗೆ ಜೀವ ಬೆದರಿಕೆ ಇದೆ ಎಂದು ಸಂತ್ರಸ್ತೆ ಹೇಳಿದಾಗಲೂ ರಮೇಶ್ ಜಾರಕಿಹೊಳಿಯನ್ನು ಬಂಧಿಸಲಾಗಿಲ್ಲ. ಆಟ ಈಗ ಶುರು ಎಂದು ರಮೇಶ್ ಜಾರಕಿಹೊಳಿ ಹೇಳುತ್ತಾರೆ. ಮೋದಿ ಮತ್ತು ಬಿಎಸ್‌ವೈ ಸರ್ಕಾರ ಏಕೆ ಅತ್ಯಾಚಾರಿಯನ್ನು ರಕ್ಷಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶ್ರೀವತ್ಸ ಪ್ರಶ್ನಿಸುತ್ತಿದ್ದಾರೆ.
ಇದನ್ನೂ ಓದಿ: ಸಿಡಿ ಪ್ರಕರಣ: SIT ತನಿಖೆಯ ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಬಸವರಾಜ ಬೊಮ್ಮಾಯಿ


