Homeಕರ್ನಾಟಕಸಿಡಿ ಪ್ರಕರಣ: SIT ತನಿಖೆಯ ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ - ಬಸವರಾಜ ಬೊಮ್ಮಾಯಿ

ಸಿಡಿ ಪ್ರಕರಣ: SIT ತನಿಖೆಯ ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ – ಬಸವರಾಜ ಬೊಮ್ಮಾಯಿ

- Advertisement -
- Advertisement -

ಸರಣಿ ಧಾರವಾಹಿ ರೂಪದಲ್ಲಿ ಬಿಡುಗಡೆಯಾಗುತ್ತಿರುವ ಸಿಡಿ, ಆಡಿಯೋ ಮತ್ತು ವಿಡಿಯೋಗಳ ಕುರಿತು ವೈಜ್ಞಾನಿಕವಾಗಿ ತನಿಖೆ ನಡೆಯಲಿದೆ ಮತ್ತು ಈ ವಿಚಾರದಲ್ಲಿ SIT ತನಿಖೆಯ ದಾರಿ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾವುದೇ ಒತ್ತಡ, ಪ್ರಭಾವಕ್ಕೆ ಒಳಗಾಗದೇ ತನಿಖಾ ತಂಡ ಕೆಲಸ ಮಾಡಲಿದೆ. ಕಾನೂನು ಪ್ರಕಾರ ನಿಷ್ಠೂರವಾಗಿ ನಡೆಯುತ್ತಿರುವ ತನಿಖೆ, ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ ಎಂದರು.

ಈಗ ಬಿಡುಗಡೆ ಆಗಿರುವ ಆಡಿಯೋ ಮತ್ತು ವಿಡಿಯೋ ಗಳನ್ನು ವೈಜ್ಞಾನಿಕವಾಗಿ ಪರಿಶೀಲನೆ ನಡೆಸಲಾಗುವುದು. ಅದರಲ್ಲಿರುವ ಸತ್ಯಾಸತ್ಯತೆ ಅಂಶಗಳನ್ನು ಪರಿಶೀಲಿಸಿ, ತನಿಖೆ ಮುಂದುವರೆಸುತ್ತೇವೆ ಎಂದು ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.

ನಮ್ಮ ಮೇಲೆ ಯಾವುದೇ ರೀತಿಯ ಪ್ರಭಾವವಾಗಲಿ, ಒತ್ತಡವಾಗಲಿ ಇಲ್ಲ, ಎಸ್‌ಐಟಿಯ ದಾರಿ ತಪ್ಪಿಸಲು ಸಾಧ್ಯವಿಲ್ಲ. ಕ್ರಮಬದ್ಧವಾಗಿ, ಕಾನೂನು ಪ್ರಕಾರವಾಗಿ ಸತ್ಯವನ್ನು ಕಂಡುಹಿಡಿಯಲು ತನಿಖೆ ನಡೆಸುತ್ತೇವೆ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: ಸಿಡಿ ಪ್ರಕರಣ: ರಮೇಶ್ ಜಾರಕಿಹೊಳಿ ವಿರುದ್ಧ FIR ದಾಖಲು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಯೋಗೇಶ್ ಗೌಡ ಕೊಲೆ ಪ್ರಕರಣ | ಶಾಸಕ ವಿನಯ್ ಕುಲಕರ್ಣಿ ಜಾಮೀನು ರದ್ದುಪಡಿಸಿದ ಸುಪ್ರೀಂ ಕೋರ್ಟ್: ಎರಡು ವಾರಗಳಲ್ಲಿ ಶರಣಾಗಲು ಆದೇಶ

ನವದೆಹಲಿ: 2016ರ ಧಾರವಾಡದ ಬಿಜೆಪಿ ಮುಖಂಡ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಮತ್ತು ಇತರ ಎಂಟು ಮಂದಿ ಅಪರಾಧಿಗಳಿಗೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ಹಾಗೂ ಜೀವಾವಧಿ...

ಸರ್ಕಾರಿ ಶಾಲೆಗಳ ದತ್ತು ಪ್ರಕ್ರಿಯೆಗೆ ವಿರೋಧ, ನ.26ರಂದು ಅನಿರ್ದಿಷ್ಟಾವಧಿ ಸತ್ಯಾಗ್ರಹ

ರಾಜ್ಯ ಸರ್ಕಾರವು ಸರ್ಕಾರಿ ಕನ್ನಡ ಶಾಲೆಗಳನ್ನು ಖಾಸಗಿಯವರಿಗೆ ದತ್ತು (ಮೆಂಟರಿಂಗ್) ನೀಡಲು ಮುಂದಾಗಿರುವ ಕ್ರಮವನ್ನು ವಿರೋಧಿಸಿ ಮತ್ತು 2009ರ ಶಿಕ್ಷಣ ಹಕ್ಕು ಕಾಯ್ದೆಯನ್ನು (ಆರ್‌ಟಿಇ) ರಾಜ್ಯವ್ಯಾಪಿ ಪರಿಣಾಮಕಾರಿಯಾಗಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ನಾಳೆ (ನ.26)...

ಉಮರ್ ಖಾಲಿದ್ ಮಧ್ಯಂತರ ಜಾಮೀನು ಮನವಿಗೆ ಸುಪ್ರೀಂ ಕೋರ್ಟ್ ನಕಾರ: ದೆಹಲಿ ಪೊಲೀಸರಿಗೆ ನೋಟಿಸ್, ಮುಖ್ಯ ಅರ್ಜಿಗಳ ವಿಚಾರಣೆ ಬಾಕಿ

ನವದೆಹಲಿ: 2020ರ ಈಶಾನ್ಯ ದೆಹಲಿ ಗಲಭೆಯ ದೊಡ್ಡ ಸಂಚು ಪ್ರಕರಣದಲ್ಲಿ ಯುಎಪಿಎ (UAPA) ಕಾಯ್ದೆಯಡಿ ಬಂಧಿತರಾಗಿರುವ ಹೋರಾಟಗಾರರಾದ ಉಮರ್ ಖಾಲಿದ್ ಮತ್ತು ಶರ್ಜೀಲ್ ಇಮಾಮ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್...

ಕನ್ನಡ, ಕನ್ನಡಿಗ ಎಂದು ಘೋಷಣೆ ಕೂಗಿದಾಕ್ಷಣ ಸಮಸ್ಯೆಗಳು ಬಗೆಹರಿಯುವುದೇ?

ಮತ್ತೊಂದು ನವೆಂಬರ್, ಅದರ ಜತೆ ಜತೆಗೇ ರಾಜ್ಯೋತ್ಸವದ ಸಂಭ್ರಮ. ಪ್ರತಿ ವರ್ಷದಂತೆ ಈ ಬಾರಿಯೂ ಸಹ ರಾಜ್ಯದಾದ್ಯಂತ ಕನ್ನಡದ ಶ್ರೇಷ್ಠತೆಯ ಬಗ್ಗೆ ,ಪ್ರಾಚೀನತೆಯ ಬಗ್ಗೆ ಕರ್ನಾಟಕದ ವೈಭವದ ಬಗ್ಗೆ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಭ್ರಮ,...

ಊರು ಯಾರದು? ಕೇರಿ ಯಾರದು?

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಭಾರತದ ಸಂವಿಧಾನದ ವಿಧಿ 19 (1) ಭಾಗವು ಹೀಗಿದೆ: 19.ವಾಕ್ -ಸ್ವಾತಂತ್ರ್ಯ, ಮುಂತಾದವುಗಳ ಬಗ್ಗೆ ಕೆಲವು ಹಕ್ಕುಗಳ ಸಂರಕ್ಷಣೆ.- (1) ಸಮಸ್ತ ನಾಗರಿಕರೂ- (ಎ) ವಾಕ್ ಸ್ವಾತಂತ್ರ್ಯದ ಮತ್ತು...

2027ರ ಯುಪಿ ವಿಧಾನಸಭಾ ಚುನಾವಣೆಯಲ್ಲಿ ಸಿಜೆಪಿ ಸ್ಪರ್ಧಿಸಲ್ಲ, ಯಾವುದೇ ಪಕ್ಷಕ್ಕೂ ಬೆಂಬಲವಿಲ್ಲ: ಅಭಿಜೀತ್ ದೀಪ್ಕೆ

ಛತ್ರಪತಿ ಸಂಭಾಜಿನಗರ: 2027ರಲ್ಲಿ ನಡೆಯಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ಸ್ಪರ್ಧಿಸುವುದಿಲ್ಲ ಮತ್ತು ಯಾವುದೇ ರಾಜಕೀಯ ಪಕ್ಷವನ್ನು ಬೆಂಬಲಿಸುವುದೂ ಇಲ್ಲ ಎಂದು ಪಕ್ಷದ ಸಂಚಾಲಕ ಅಭಿಜೀತ್ ದೀಪ್ಕೆ...

ವಾಸವಾನಿ ಜಯಂತಿಗೆ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧ : ಸಾರ್ವಜನಿಕರಿಂದ ತೀವ್ರ ಆಕ್ರೋಶ!

"ಸಾಧು ವಾಸವಾನಿ ಜಯಂತಿ" ಪ್ರಯುಕ್ತ ನವೆಂಬರ್ 25, 2026ರ ಬುಧವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ವ್ಯಾಪ್ತಿಯಲ್ಲಿ ಪ್ರಾಣಿವಧೆ ಮತ್ತು ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಲಾಗಿದೆ. GBA ಪಶುಪಾಲನೆ ವಿಭಾಗದ...

ತಿರುಪ್ಪರಂಕುಂದ್ರಂ ದೀಪಂ ವಿವಾದ: ಸುಪ್ರೀಂ ಕೋರ್ಟ್ ಆದೇಶ ಜಾರಿಗೆ ಹೈಕೋರ್ಟ್ ಸೂಚನೆ; ಬಿಜೆಪಿ ನಾಯಕರಿಗೆ ಗೃಹಬಂಧನ

ತಮಿಳುನಾಡಿನ ಮದುರೈ ಜಿಲ್ಲೆಯ ತಿರುಪ್ಪರಂಕುಂದ್ರಂ ಬೆಟ್ಟದ ಮೇಲಿರುವ 'ದೀಪತ್ತೂಣ್'ನಲ್ಲಿ ಕಾರ್ತಿಗೈ ದೀಪಂ ಬೆಳಗಿಸುವ ವಿಚಾರಕ್ಕೆ ಸಂಬಂಧಿಸಿದ ವಿವಾದ ಮತ್ತಷ್ಟು ತೀವ್ರಗೊಂಡಿದೆ. ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಜಾರಿಗೊಳಿಸುವಂತೆ ಮದ್ರಾಸ್ ಹೈಕೋರ್ಟ್‌ನ ಮದುರೈ ಪೀಠ...

‘ರಾಜೀವ್ ಗಾಂಧಿ ಹತ್ಯೆ ಆಕಸ್ಮಿಕವಲ್ಲ’: ಅವರ ಭದ್ರತೆಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿತ್ತು: ರಾಹುಲ್ ಗಾಂಧಿ ಗಂಭೀರ ಆರೋಪ

ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಕೇವಲ ಭದ್ರತಾ ವೈಫಲ್ಯದಿಂದ ಸಂಭವಿಸಿದ ಘಟನೆಯಲ್ಲ, ಬದಲಾಗಿ ಅವರನ್ನು ಹತ್ಯೆ ಮಾಡಲು ಅನುಕೂಲವಾಗುವಂತೆ ಅವರ ಭದ್ರತೆಯನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಲಾಗಿತ್ತು ಎಂದು ಲೋಕಸಭೆಯ ವಿರೋಧ...

ಜಿಬಿಎ ಚುನಾವಣೆಗೆ ರಾಜ್ಯದ ಮತಪಟ್ಟಿ ಬಳಸಲು ಸಿದ್ಧ : ಸಂಗ್ರೇಶಿ

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಚುನಾವಣೆಗೆ 2025ರ ಮತದಾರರ ಪಟ್ಟಿಯನ್ನೇ ಬಳಸಲು ರಾಜ್ಯ ಚುನಾವಣಾ ಆಯೋಗ ಸಿದ್ಧವಿದೆ. ಈ ಸಂಬಂಧ ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನ ಬಂದ ಕೂಡಲೇ ರಾಜ್ಯದ ಮತದಾರರ ಪಟ್ಟಿಯನ್ನು...