Homeಮುಖಪುಟಮಾರ್ಚ್‌ 27 ರಿಂದ ಏಪ್ರಿಲ್ 4ರ ನಡುವೆ 7 ದಿನಗಳು ಬ್ಯಾಂಕ್‌ಗಳಿಗೆ‌ ರಜೆ

ಮಾರ್ಚ್‌ 27 ರಿಂದ ಏಪ್ರಿಲ್ 4ರ ನಡುವೆ 7 ದಿನಗಳು ಬ್ಯಾಂಕ್‌ಗಳಿಗೆ‌ ರಜೆ

- Advertisement -
- Advertisement -

ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳು ಮಾರ್ಚ್ 27 ಮತ್ತು ಏಪ್ರಿಲ್ 4 ರ ನಡುವೆ 7 ದಿನಗಳು ಕಾರ್ಯನಿರ್ವಹಿಸುವುದಿಲ್ಲ. ಮಾರ್ಚ್ 27 ರಿಂದ ಮಾರ್ಚ್ 29 ರವರೆಗೆ ಸತತ 3 ದಿನಗಳವರೆಗೆ ಬ್ಯಾಂಕಿಂಗ್ ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ಬ್ಯಾಂಕ್ ರಜಾ ವಿವರಗಳ ಪ್ರಕಾರ, ಹೋಳಿ ಹಬ್ಬದ ಕಾರಣ ಮಾರ್ಚ್ 29 ರಂದು ಬ್ಯಾಂಕುಗಳಿಗೆ ರಜೆ. ಮಾರ್ಚ್ 30 ರಂದು ಪಾಟ್ನಾದಲ್ಲಿ (ಹೋಳಿ ಹಬ್ಬದ ಪ್ರಯುಕ್ತ) ಮಾತ್ರ ಬ್ಯಾಂಕುಗಳು ಮುಚ್ಚಲ್ಪಡುತ್ತವೆ; ಇತರ ಸ್ಥಳಗಳಲ್ಲಿ ತೆರೆದಿರುತ್ತವೆ ಎಂದು ಆರ್‌ಬಿಐ ತಿಳಿಸಿದೆ. ಏಪ್ರಿಲ್ 1 ರಂದು ಎಲ್ಲಾ ಬ್ಯಾಂಕುಗಳ ಅಕೌಂಟ್ ಕ್ಲೋಸಿಂಗ್ ದಿನವಾಗಿರುವುದರಿಂದ ಅಂದು ಬ್ಯಾಂಕುಗಳು ಕಾರ್ಯನಿರ್ವಹಿಸುವುದಿಲ್ಲ. ಮಾರ್ಚ್‌ 31 ಮತ್ತು ಏಪ್ರಿಲ್ 3 ರಂದು ಬ್ಯಾಂಕುಗಳು ಕಾರ್ಯನಿರ್ವಹಿಸುತ್ತವೆ.

ಮಾರ್ಚ್ 2021 ರ ಬ್ಯಾಂಕ್ ರಜಾದಿನಗಳ ಪಟ್ಟಿ:

ಮಾರ್ಚ್ 27: ನಾಲ್ಕನೇ ಶನಿವಾರ

ಮಾರ್ಚ್ 28: ಭಾನುವಾರ

ಮಾರ್ಚ್ 29: ಹೋಳಿ ಹಬ್ಬ

ಮಾರ್ಚ್ 30: ಪಾಟ್ನಾದಲ್ಲಿ, ಹೋಳಿ ಹಬ್ಬದ ಕಾರಣ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಇತರ ಸ್ಥಳಗಳಲ್ಲಿ ಬ್ಯಾಂಕುಗಳು ತೆರೆದಿರುತ್ತವೆ.

ಏಪ್ರಿಲ್ 1: ಬ್ಯಾಂಕುಗಳ ಅಕೌಂಟ್ ಕ್ಲೋಸಿಂಗ್ ದಿನ

ಏಪ್ರಿಲ್ 2: ಗುಡ್ ಫ್ರೈಡೆ

ಏಪ್ರಿಲ್ 4: ಭಾನುವಾರ

ಈ ಎಲ್ಲಾ ಬ್ಯಾಂಕ್ ರಜಾದಿನಗಳಲ್ಲಿ ಗ್ರಾಹಕರಿಗೆ ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳಿರುತ್ತವೆ


ಇದನ್ನೂ ಓದಿ: #LieLikeModi ಟ್ವಿಟರ್ ಟ್ರೆಂಡಿಂಗ್: ನಕ್ಕು ಹೊಟ್ಟೆ ಹುಣ್ಣಾದರೆ ನಾವು ಜವಾಬ್ದಾರರಲ್ಲ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಂಗಳೂರು: ‘ಶೂದ್ರ ವರ್ಗದವ ನಮ್ಮನ್ನು ಆಳಲು ಹೊರಟರೆ, ಬಂಟರು ಸಹಿಸುವುದಕ್ಕೆ ಸಾಧ್ಯವಿದೆಯೇ?’: ಬಿಜೆಪಿಗೆ ಮತ...

0
ಲೋಕಸಭೆ ಚುನಾವಣೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತದಾನಕ್ಕೆ 24 ಗಂಟೆಗಳು ಮಾತ್ರ ಬಾಕಿ ಉಳಿದಿದೆ. ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬಂಟ ಸಮುದಾಯದ  ಕ್ಯಾಪ್ಟನ್ ಬ್ರಿಜೇಶ್ ಚೌಟ ಮತ್ತು ಕಾಂಗ್ರೆಸ್‌ ಅಭ್ಯರ್ಥಿಯಾಗಿ ಬಿಲ್ಲವ...