ಕಳೆದ 12 ತಿಂಗಳಲ್ಲಿ 52% ದಷ್ಟು ಭಾರತೀಯ ಸಂಸ್ಥೆಗಳು ಸೈಬರ್ ದಾಳಿಗೆ ಬಲಿಯಾಗಿವೆ ಎಂದು ಮಂಗಳವಾರ ಬಿಡುಗಡೆಯಾದ ಸಮೀಕ್ಷೆಯ ವರದಿಯು ತಿಳಿಸಿದೆ.
ಈ ದಾಳಿಗೊಳಗಾದ 71% ದಷ್ಟು ಸಂಸ್ಥೆಗಳು ಇದು ಗಂಭೀರ ಅಥವಾ ಅತೀ ಗಂಭೀರವಾದ ದಾಳಿ ಎಂದು ಒಪ್ಪಿಕೊಂಡಿವೆ. 65% ದಷ್ಟು ಸಂಸ್ಥೆಗಳು ಇದನ್ನು ಸರಿಪಡಿಸಲು ಒಂದು ವಾರಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ ಎಂದು ಜಾಗತಿಕ ಸೈಬರ್ ಸೆಕ್ಯುರಿಟಿ ಸಂಸ್ಥೆ ಸೋಫೋಸ್ ನಡೆಸಿದ ಸಮೀಕ್ಷೆ ಹೇಳಿದೆ.
ಇದನ್ನೂ ಓದಿ: ವರ್ಣಬೇಧ ನೀತಿಯ ಬಲಿಪಶು ಜಾರ್ಜ್ ಫ್ಲಾಯ್ಡ್ ಕುಟುಂಬಕ್ಕೆ 196 ಕೋಟಿ ರೂ. ಪರಿಹಾರ
ತೀವ್ರ ತರದ ಸೈಬರ್ ದಾಳಿಗಳು ಹೆಚ್ಚಾಗುತ್ತಿದ್ದರೆ, ಸೈಬರ್ ಸೆಕ್ಯುರಿಟಿ ಬಜೆಟ್‌ಗಳ 2019 ಮತ್ತು 2021 ರ ನಡುವಿನ ಆದಾಯದ ಶೇಕಡಾವಾರು ಪ್ರಮಾಣದಲ್ಲಿ ಬದಲಾಗದೆ ಹಾಗೆ ಉಳಿದಿವೆ ಎಂದು ಅಧ್ಯಯನ ತಿಳಿಸಿದೆ. ಅದೇ ಸಮಯದಲ್ಲಿ, ಸ್ವತಂತ್ರ ಭದ್ರತಾ ಬಜೆಟ್ ಹೊಂದಿರುವ ಹೆಚ್ಚಿನ ಶೇಕಡಾವಾರು ಕಂಪನಿಗಳನ್ನು ಭಾರತವು ಹೊಂದಿದೆ ಎಂದು ವರದಿಯಾಗಿದೆ.
ಇದಲ್ಲದೆ, ಸೈಬರ್ ಸುರಕ್ಷತೆಗಾಗಿ ಖರ್ಚು ಮಾಡಿದ ತಂತ್ರಜ್ಞಾನ ಬಜೆಟ್‌ಗಳ ಸರಾಸರಿ ಶೇಕಡಾವಾರು ಪ್ರಮಾಣವು 9% ದಿಂದ ಮುಂದಿನ 24 ತಿಂಗಳಲ್ಲಿ 10% ಕ್ಕೆ ಏರಿಕೆಯಾಗಲಿದೆ ಎಂದು ಅಧ್ಯಯನವು ನಿರೀಕ್ಷಿಸಿದೆ.
ಇದನ್ನೂ ಓದಿ: ಜಾರ್ಜ್ ಫ್ಲಾಯ್ಡ್ ಹೆಸರಿನಲ್ಲಿ ಪೊಲೀಸ್ ಸುಧಾರಣಾ ಶಾಸನ ಅಂಗೀಕರಿಸಿದ ಅಮೆರಿಕ


