ಪಂಚರಾಜ್ಯ ಚುನಾವಣೆಯ ಮೊದಲ ಹಂತದ ಮತದಾನ ಪ್ರಕ್ರಿಯೆ ಮಾರ್ಚ್ 27 ರಂದು ಮುಗಿದಿದೆ. ಮೊದಲ ಹಂತದಲ್ಲಿ ಅಸ್ಸಾಂ ಮತ್ತು ಪಶ್ಚಿಮ ಬಂಗಾಳದ ಕೆಲವು ಕ್ಷೇತ್ರದಲ್ಲಿ ಚುನಾವಣೆ ನಡೆದಿದೆ. ಈ ಹಿನ್ನಲೆಯಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸೇರಿದಂತೆ ಹತ್ತು ಪ್ರಮುಖ ವಿರೋಧ ಪಕ್ಷದ ನಾಯಕರಿಗೆ ಪತ್ರ ಬರೆದು ಚುನಾವಣೆ ನಂತರ ಬಿಜೆಪಿ ತೆಗೆದುಕೊಳ್ಳುವ ಕಾರ್ಯತಂತ್ರದ ವಿರುದ್ಧ ಎಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಬೇಕಿದೆ ಎಂದು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.
ಮುಖ್ಯಮಂತ್ರಿ ಬರೆದಿರುವ ಪತ್ರದಲ್ಲಿ “ಬಿಜೆಪಿಯ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ದಾಳಿಯ ವಿರುದ್ಧ ಒಗ್ಗಟ್ಟಿನ ಮತ್ತು ಪರಿಣಾಮಕಾರಿ ಹೋರಾಟ ನಡೆಸಬೇಕಿದೆ. ಭಾರತದ ಜನರಿಗೆ ವಿಶ್ವಾಸಾರ್ಹ ಪರ್ಯಾಯವನ್ನು ರಾಜಕೀಯವನ್ನು ಪ್ರಸ್ತುತಪಡಿಸುವ ಸಮಯ ಬಂದಿದೆ” ಎಂದು ಅವರು ಒಟ್ಟು ಏಳು ಅಂಶಗಳನ್ನು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರದ 4 ವರ್ಷ; ಸಂಘ ಪರಿವಾರ ಮಾದರಿ ಆಳ್ವಿಕೆಯ ಸತ್ವ…
ದೆಹಲಿಯ ಚುನಾಯಿತ ಸರ್ಕಾರಕ್ಕಿಂತ ಹೆಚ್ಚಿನ ಅಧಿಕಾರವನ್ನು ನೀಡುವ ವಿವಾದಾತ್ಮಕ ಹೊಸ ಕಾನೂನನ್ನು ಉಲ್ಲೇಖಿಸಿರುವ ಮಮತಾ, “ಈ ಕಾನೂನು ಪ್ರಜಾಪ್ರಭುತ್ವ ಮತ್ತು ಒಕ್ಕೂಟ ಸರ್ಕಾರದ ಮೇಲಿನ ಬಿಜೆಪಿಯ ಆಕ್ರಮಣಗಳು” ಎಂದು ಕರೆದಿದ್ದಾರೆ.
“ಬಿಜೆಪಿ ಅಲ್ಲದ ಪಕ್ಷಗಳು ತಮ್ಮ ಸಾಂವಿಧಾನಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳನ್ನು ಚಲಾಯಿಸಲು ಅಸಾಧ್ಯವಾಗಿಸಲು ಬಿಜೆಪಿ ಬಯಸಿದೆ. ಇದು ರಾಜ್ಯ ಸರ್ಕಾರಗಳ ಅಧಿಕಾರವನ್ನು ದುರ್ಬಲಗೊಳಿಸಲು ಮತ್ತು ಅವುಗಳನ್ನು ಕೇವಲ ಪುರಸಭೆಗಳಿಗೆ ಇಳಿಸಲು ಬಯಸಿದೆ. ಸಂಕ್ಷಿಪ್ತವಾಗಿ, ಇದು ಒಂದು ಪಕ್ಷದ ಸರ್ವಾಧಿಕಾರವನ್ನು ಭಾರತದಲ್ಲಿ ಸ್ಥಾಪಿಸಲು ಬಯಸಿದೆ” ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿಯೂ ಚುನಾವಣೆ; ಈ ಉಪಚುನಾವಣೆಗಳಲ್ಲಿಯೂ ಬಿಜೆಪಿಯದ್ದೇ ಮೇಲುಗೈ?
“ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲಿನ ಬಿಜೆಪಿಯ ದಾಳಿಯ ವಿರುದ್ಧ ಏಕೀಕೃತ ಮತ್ತು ಪರಿಣಾಮಕಾರಿ ಹೋರಾಟದ ಸಮಯ ಬಂದಿದೆ ಎಂದು ನಾನು ಬಲವಾಗಿ ನಂಬುತ್ತೇನೆ … ಟಿಎಂಸಿಯ ಅಧ್ಯಕ್ಷರಾಗಿ, ಈ ಯುದ್ಧದಲ್ಲಿ ನಾನು ನಿಮ್ಮೊಂದಿಗೆ ಮತ್ತು ಇತರ ಎಲ್ಲ ಮನಸ್ಸಿನ ಪಕ್ಷಗಳೊಂದಿಗೆ ಪೂರ್ಣ ಹೃದಯದಿಂದ ಕೆಲಸ ಮಾಡುತ್ತೇನೆ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಸೋನಿಯಾ ಗಾಂಧಿಯವರಲ್ಲದೆ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್, ಡಿಎಂಕೆ ಪಕ್ಷದ ಸ್ಟಾಲಿನ್, ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ವೈಎಸ್ಆರ್ ಕಾಂಗ್ರೆಸ್ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ, ಬಿಜೆಡಿ ಮುಖ್ಯಸ್ಥ ನವೀನ್ ಪಟ್ನಾಯಕ್, ತೆಲಂಗಾಣ ರಾಷ್ಟ್ರ ಸಮಿತಿ ಮುಖ್ಯಸ್ಥ ಕೆ ಚಂದ್ರಶೇಖರ್ ರಾವ್, ಸಮಾಜವಾದಿ ರಾಷ್ಟ್ರೀಯ ಜನ ದಳದ ತೇಜಸ್ವಿ ಯಾದವ್ ಮತ್ತು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರಿಗೆ ಮಮತಾ ಬ್ಯಾನರ್ಜಿ ಪತ್ರ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ರೈಲುಗಳಲ್ಲಿ ರಾತ್ರಿ ವೇಳೆ ಚಾರ್ಜಿಂಗ್ ಪಾಯಿಂಟ್‌ಗಳ ಬಳಕೆಗೆ ನಿಷೇಧ ಹೇರಿದ ರೈಲ್ವೆ ಇಲಾಖೆ


