ಅಸ್ಸಾಂನ ಬರಾಕ್ ಕಣಿವೆ ಪ್ರದೇಶದ ಕರೀಂಗಂಜ್ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗೆ ಸೇರಿದ ಕಾರಿನಲ್ಲಿ ಚುನಾವಣಾ ಅಧಿಕಾರಿಗಳು ಇವಿಎಂ ಜೊತೆ ಪ್ರಯಾಣಿಸಿದ ಘಟನೆ ದೊಡ್ಡ ಕೋಲಾಹಲಕ್ಕೆ ಕಾರಣವಾಗಿದ್ದು, ಆ ನಾಲ್ವರು ಅಧಿಕಾರಿಗಳನ್ನು ಕರ್ತವ್ಯಲೋಪದ ಆರೋಪದ ಮೇಲೆ ಅಮಾನತು ಮಾಡಲಾಗಿದೆ. ಮತ್ತು ಆ ಕ್ಷೇತ್ರದಲ್ಲಿ ಮರುಮತದಾನ ನಡೆಸುವಂತೆ ಚುನಾವಣಾ ಆಯೋಗ ಆದೇಶ ನೀಡಿದೆ.
ಅದೇ ಸಂದರ್ಭದಲ್ಲಿ ಪ್ರತಿಭಟನೆ ಮತ್ತು ಘೇರಾವ್ ನಡೆಸಿದ ಪ್ರತಿಪಕ್ಷಗಳ ಕಾರ್ಯಕರ್ತರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ನಿನ್ನೆ ಅಸ್ಸಾಂನಲ್ಲಿ ಎರಡನೇ ಹಂತದ ಮತದಾನ ಪೂರ್ಣಗೊಂಡಿದೆ. ಆದರೆ ಕರೀಮ್‌ಗಂಜ್‌ನ ರತನಾರಿ ಕ್ಷೇತ್ರದ ಸ್ಟೇಷನ್ ನಂಬರ್ 149ರ ರತನಾರಿ – ಇಂದಿರಾ ಎಂವಿ ಸ್ಕೂಲ್ ಬೂತ್‌ನಲ್ಲಿ ಚುನಾವಣಾ ಅಧಿಕಾರಿಗಳು ಇವಿಎಂ ಅನ್ನು ಪಕ್ಕದ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೃಷ್ಣೇಂದ್ರ ಪೌಲ್‌ರವರ ಪತ್ನಿಯ ಕಾರಿನಲ್ಲಿ ಸಾಗಿಸಿದ್ದರು. ಕಾರು ಸ್ಟ್ರಾಂಗ್‌ರೂಂ ಬಳಿ ಬರುತ್ತಲೇ ವಿರೋಧ ಪಕ್ಷದ ಕಾರ್ಯಕರ್ತರು ಘೇರಾವ್ ಹಾಕಿ ಪ್ರತಿಭಟಿಸಿದ್ದರು. ಹಿಂಸಾಚಾರ ಉಲ್ಭಣಗೊಂಡ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ, ಲಾಠೀ ಚಾರ್ಜ್ ಮಾಡಿದ್ದರು.
ರಾತ್ರಿ 9 ಗಂಟೆಯ ಸಮಯದಲ್ಲಿ ತಮಗಾಗಿ ನಿಯೋಜಿಸಿದ ವಾಹನ ಕೆಟ್ಟುಹೋದ ಕಾರಣ ಬದಲಿ ವಾಹನಕ್ಕಾಗಿ ಚುನಾವಣಾ ಅಧಿಕಾರಿಗಳು ಸೆಕ್ಟರ್ ಅಧಿಕಾರಿಯನ್ನು ಸಂಪರ್ಕಿಸಿದ್ದರು. ಕೆಲ ಸಮಯದಲ್ಲಿ ವಾಹನ ಕಳಿಸುವುದಾಗಿ ಅವರಿಗೆ ಭರವಸೆ ನೀಡಲಾಗಿತ್ತು. ಆದರೂ ಮತದಾನದ ಸಿಬ್ಬಂದಿ ರಾತ್ರಿ 9:20ರ ಸಮಯದಲ್ಲಿ ಖಾಸಗಿ ವಾಹನದಲ್ಲಿ ಇವಿಎಂಗಳೊಂದಿಗೆ ಸ್ಟ್ರಾಂಗ್ ರೂಂ ತಲುಪಿದ್ದಾರೆ. ಆ ಕಾರು ಕರೀಮ್‌ಗಂಜ್ ಜಿಲ್ಲೆಯ ಪಥಾರ್ಕಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯ ಪತ್ನಿಯದಾಗಿತ್ತು. ಅದು ನಮಗೆ ಗೊತ್ತಿರಲಿಲ್ಲ ಎಂದು ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ.
ರತನಾರಿ ಕ್ಷೇತ್ರದ ಮತದಾನ ಸಿಬ್ಬಂದಿ ಇವಿಎಂಗಳೊಂದಿಗೆ ಬಿಜೆಪಿ ಅಭ್ಯರ್ಥಿಯ ಕಾರಿನಲ್ಲಿ ಪ್ರಯಾಣಿಸಿರುವುದು ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಅಸ್ಸಾಂನಲ್ಲಿ ಬಿಜೆಪಿ ಇವಿಎಂಗಳನ್ನು ಕದಿಯುತ್ತಿದೆ ಎಂದು ಪ್ರತಿಪಕ್ಷಗಳು ಗಂಭೀರ ಆರೋಪ ಮಾಡಿವೆ. ಸೋತ ಬಿಜೆಪಿಯ ಕೊನೆಯ ಉಪಾಯ: ಇವಿಎಂಗಳನ್ನು ಕದಿಯುವುದಾಗಿ, ಇದು ಪ್ರಜಾಪ್ರಭುತ್ವದ ಕೊಲೆ” ಎಂದು ಎಐಯುಡಿಎಫ್ ಮುಖಂಡ ಮೌಲನಾ ಬದ್ರುದ್ದೀನ್ ಅಜ್ಮಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Polarisation? Failed.
Buying votes? Failed.
Buying candidates? Failed.
Jumle-baazi? Failed.
Double CMs? Failed.
Doublespeak on CAA? Failed.
Loser BJP’s last resort: steal the EVMs.
Murder of democracy.#EVM_theft_Assam #AssamAssemblyElection2021 https://t.co/2TRZRFvqDb— Maulana Badruddin Ajmal (@BadruddinAjmal) April 2, 2021
“ಆಡಳಿತದಲ್ಲಿರುವ ಬಿಜೆಪಿ ಸರ್ಕಾರವು ಇವಿಎಂಗಳನ್ನು ವಶಪಡಿಸಿಕೊಂಡು ತಿರುಚುತ್ತಿದೆ. ಕೇವಲ ಇದೊಂದೇ ಮಾರ್ಗದಲ್ಲಿ ಮಾತ್ರ ಬಿಜೆಪಿ ಅಸ್ಸಾಂನಲ್ಲಿ ಜಯಗಳಿಸುತ್ತಿದೆ” ಎಂದು ಕಾಂಗ್ರೆಸ್ ವಕ್ತಾರ ಗೌರವ್ ಗೊಗೊಯ್ ಆರೋಪಿಸಿದ್ದಾರೆ.
ತೀವ್ರ ಟೀಕೆ ಕೇಳಿಬಂದ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕರೀಮ್‌ಗಂಜ್‌ನ ರತನಾರಿ ಕ್ಷೇತ್ರದ ಸ್ಟೇಷನ್ ನಂಬರ್ 149ರ ರತನಾರಿ – ಇಂದಿರಾ ಎಂವಿ ಸ್ಕೂಲ್ ಬೂತ್‌ನಲ್ಲಿ ಮರುಮತದಾನಕ್ಕೆ ಆದೇಶಿಸಲಾಗಿದೆ. ನಾಲ್ಕರು ಅಧಿಕಾರಿಗಳನ್ನು ಅಮಾನತ್ತು ಮಾಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಪಶ್ಚಿಮ ಬಂಗಾಳಲ್ಲಿಯೂ ಸಹ ಚುನಾವಣಾ ಆಯೋಗವು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದೆ ಎಂದು ಆಡಳಿತರೂಢ ಟಿಎಂಸಿ ಪಕ್ಷ ಪದೇ ಪದೇ ಆರೋಪಿಸಿದೆ.
ಇದನ್ನೂ ಓದಿ: ಅಸ್ಸಾಂ ಚುನಾವಣಾ ಅಧಿಕಾರಿಗಳು, ಇವಿಎಂ ಜೊತೆ ಬಿಜೆಪಿ ಅಭ್ಯರ್ಥಿ ಕಾರಿನಲ್ಲಿ: ಗಲಭೆಗೆ ತಿರುಗಿದ ವಿವಾದ


