ಸಚಿವ ಬಿ.ಸಿ. ಪಾಟೀಲ್‌ಗೆ ಕೊರೊನಾ ಲಸಿಕೆ ನೀಡಿದ್ದ ವೈದ್ಯಾಧಿಕಾರಿ ಅಮಾನತು! | Naanu gauri

ಕೃಷಿ ಸಚಿವ ಬಿ.ಸಿ ಪಾಟೀಲ್‌ ಅವರ ಮನೆಗೆ ತೆರಳಿ ಸಚಿವರಿಗೆ ಕೊರೊನಾ ಲಸಿಕೆ ನೀಡಿದ್ದ ಹಿರೇಕೆರೂರು ವೈದ್ಯಾಧಿಕಾರಿಯನ್ನು ಗುರುವಾರ ಅಮಾನತುಗೊಳಿಸಲಾಗಿದೆ.

ಮಾರ್ಚ್‌ 02 ರಂದು ಹಿರೇಕೆರೂರಿನಲ್ಲಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರ ಮನೆಗೆ ತೆರಳಿ ಸಚಿವ ಹಾಗೂ ವನಜಾ ಪಾಟೀಲ್ ಅವರಿಗೆ ವೈದ್ಯಾಧಿಕಾರಿ ಮಕಾಂದಾರ್ ಕೊರೊನಾ ಲಸಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಆ ವೈದ್ಯಾಧಿಕಾರಿಯನ್ನು ಅಮಾನತುಗೊಳಿಸಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ಕೆ.ವಿ. ತ್ರಿಲೋಕಚಂದ್ರ ಆದೇಶ ಹೊರಡಿಸಿದ್ದಾರೆ.

ಇದನ್ನೂ ಓದಿ: ’ತಾನೂ ಕೃಷಿಕ’ ಎಂದು ಫೋಟೊ ಫೋಸು ನೀಡಿ ಹಾಸ್ಯಕ್ಕೊಳಗಾದ ಕೃಷಿ ಸಚಿವ ಬಿ.ಸಿ. ಪಾಟಿಲ್!

ಸಚಿವರಾದವರು ಆಸ್ಪತ್ರೆಗೆ ತೆರಳಿ ಕೋವಿಡ್ ಲಸಿಕೆ ಪಡೆದು ಜನರಿಗೆ ಮಾದರಿಯಾಗಬೇಕು. ಆದರೆ, ಬಿ.ಸಿ ಪಾಟೀಲ್‌ ಅವರು ಬೇಜವಾಬ್ದಾರಿತನ ಪ್ರದರ್ಶಿಸಿದ್ದು, ವೈದಾಧಿಕಾರಿಯನ್ನು ಮನೆಗೆ ಕರೆಸಿಕೊಂಡು ಲಸಿಕೆ ಪಡೆದಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು.

ಆದರೆ, ಈ ವರೆಗೆ ಸಚಿವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಬದಲಾಗಿ, ಸಚಿವರ ತಪ್ಪಿಗೆ ವೈದ್ಯಾಧಿಕಾರಿ ಅವರಿಗೆ ಶಿಕ್ಷೆ ನೀಡಿದ್ದು, ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಸಚಿವರ ಮನೆಗೆ ತೆರಳಿ ಲಸಿಕೆ ನೀಡಿದ್ದಕ್ಕಾಗಿ ಕಾರಣ ಕೇಳಿ ಹಿರೇಕೆರೂರು ಟಿ.ಹೆಚ್.‌ಒ ಡಾ. ಮಕಾಂದಾರ್ ಅವರಿಗೆ ಕಳೆದ ತಿಂಗಳು ನೋಟಿಸ್‌ ನೀಡಲಾಗಿತ್ತು. ಸಚಿವರ ಬುಲಾವ್ ಮೇರೆಗೆ ಅವರ ಮನೆಗೆ ತೆರಳಿ ಲಸಿಕೆ ನೀಡಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಅವರನ್ನು ಸಸ್ಪೆಂಡ್‌ ಮಾಡಲಾಗಿದೆ.

ಇದನ್ನೂ ಓದಿ: ರೈತರನ್ನು ಭಯೋತ್ಪಾದಕರು ಎಂದ ಕೃಷಿ ಸಚಿವ ಬಿ. ಸಿ. ಪಾಟಿಲ್; ವಿಡಿಯೋ

1 COMMENT

  1. ಇದು ಬಿಜೆಪಿಯ ನಿಯಮ ಕ್ರಿಮಿನಲ್ ನವರಿಗೆ ಆಶಯ ಕೊಟ್ಟು ಸಂಸ್ತ್ರರಿಗೆ ಸಜೆ
    ಅವರೆದುರು ಮಾತನಾಡಿದವರಿಗೆ ಇಡಿ ಸಿಬಿಐ ಮತ್ತು ಕಸ್ಟಮ್ಸ್ ನವರ ದಾಳಿ ಯಾಗುವುದು

LEAVE A REPLY

Please enter your comment!
Please enter your name here