ತೀರ್ಥಹಳ್ಳಿಯ ಅಪೆಕ್ಸ್ ಮತ್ತು ಡಿಸಿಸಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಹಾಗೂ ಹಾಲಿ ಕೊಡಚಾದ್ರಿ ಸಹ್ಯಾದ್ರಿ ಗ್ರಾಮೀಣ ಟ್ರಸ್ಟ್‌ನ ಅಧ್ಯಕ್ಷರಾದ ಆರ್.ಎಂ ಮಂಜುನಾಥ್ ಗೌಡ ಅಧಿಕೃತವಾಗಿ ಕಾಂಗ್ರೆಸ್ ಸೇರುವ ಕುರಿತಂತೆ ಇಂದು ಕಾರ್ಯಕರ್ತರ ಸಭೆ ನಡೆಸಿದರು. ಕಿಮ್ಮನೆ ರತ್ನಾಕರ್ ಮತ್ತು ಅವರು ಕೂಡಿ ಕೋಮುವಾದಿಗಳನ್ನು ಶಿವಮೊಗ್ಗದಲ್ಲಿ ಎದುರಿಸಲು ಬಹುದೊಡ್ಡ ಪೂರ್ವಭಾವಿ ನಡೆಸಿದ್ದೇವೆ ಎಂದ ಅವರು ಅಧಿಕೃತವಾಗಿ ಕಾಂಗ್ರೆಸ್ ಸೇರುವುದಾಗಿ ಘೋಷಿಸಿದರು. ಕಳೆದ ತಿಂಗಳು ತಾನೇ ಸೊರಬದಲ್ಲಿ ಮಧು ಬಂಗಾರಪ್ಪ ಸಹ ಕಾಂಗ್ರೆಸ್ ಸೇರಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ಬಿಜೆಪಿ ವಿರೋಧಿ ಅಲೆ ಗರಿಗೆದರಲಿದೆ ಎನ್ನಲಾಗಿದೆ.
ಮಲೆನಾಡಿನ ಕಾಂಗ್ರೆಸ್ ಗೆ ಹೊಸ ಚೈತನ್ಯ ನೀಡಲು ಅವರು ಪಕ್ಷ ಸೇರುವುದಾಗಿ ಇಂದು ನಡೆದ ಸಭೆಯಲ್ಲಿ ಅಧಿಕೃತವಾಗಿ ಘೋಷಿಸಿದ್ದಾರೆ. ಇದಕ್ಕೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪೂರ್ಣ ಬೆಂಬಲ ಘೋಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಡಿ.ಕೆ ಶಿವಕುಮಾರ್ ಅವರ ಕರೆಯ ಮೇರೆಗೆ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದ್ದು, ಸಿದ್ದರಾಮಯ್ಯನವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನೋಡಿದರೆ ಜಿಲ್ಲೆಯಲ್ಲಿ ಕಾಂಗ್ರೆಸ್ ಕಡೆಗೆ ಹೋಗುವವರ ಸಂಖ್ಯೆ ಅಧಿಕವಾಗಿದೆ. ಭದ್ರಾವತಿಯಲ್ಲಿ ಶಾಸಕ ಸಂಗಮೇಶ್ ಗಟ್ಟಿಯಾಗಿ ನಿಂತಿದ್ದಾರೆ..



ಉತ್ತಮ ನಡೆ…
Good think….sir…