ಊನಾ ಚಳವಳಿಯ ನಾಯಕ, ಶಾಸಕ ಜಿಗ್ನೇಶ್ ಮೇವಾನಿ ಅವರ ವಿಧಾನಸಭಾ ಕ್ಷೇತ್ರವಾಗಿರುವ ಬನಸ್ಕಂತ ಜಿಲ್ಲೆಯ ವಡಗಾವ್ ತಾಲ್ಲೂಕು 2020-21ರ ಆರ್ಥಿಕ ವರ್ಷದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ ಅಡಿಯಲ್ಲಿ ಅತಿ ಹೆಚ್ಚು ಉದ್ಯೋಗ ನೀಡಿದ ಮನ್ನಣೆಗೆ ಪಾತ್ರವಾಗಿದೆ.
ಬನಸ್ಕಂತ ಜಿಲ್ಲೆಯ ಉದ್ಯೋಗ ಖಾತ್ರಿ ಯೋಜನೆಯ ಕೆಲಸದ ಅಂಕಿಅಂಶಗಳ ಪ್ರಕಾರ, 2020-21ರಲ್ಲಿ ಕೇಂದ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯಡಿ ವಡಗಾವ್‌ನಲ್ಲಿ 7,893 ಮನೆಗಳ 12,531 ವ್ಯಕ್ತಿಗಳಿಗೆ ಉದ್ಯೋಗ ನೀಡಲಾಗಿದೆ.
ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ 34,406 ವ್ಯಕ್ತಿಗಳು ಮತ್ತು 19,067 ಮನೆಗಳನ್ನು ನೋಂದಾಯಿಸಲಾಗಿದೆ. 19,067 ಮನೆಗಳಲ್ಲಿ 5,044 ಮನೆಗಳು ಎಸ್‌ಸಿ (ಪರಿಶಿಷ್ಟ ಜಾತಿ) ಸಮುದಾಯಗಳಿಗೆ ಸೇರಿದ್ದು, ಎಸ್‌ಟಿ (ಪರಿಶಿಷ್ಟ ಪಂಗಡ) ಸಮುದಾಯದ 700 ಮನೆಗಳು ಮತ್ತು 13,323 ಮನೆಗಳು ಇತರ ಸಮುದಾಯಗಳದ್ದಾಗಿದೆ ಎಂದು ದಾಖಲೆಯು ವಿವರಿಸಿದೆ.
ಇದನ್ನೂ ಓದಿ: ಸಾರಿಗೆ ನೌಕರರ ಮುಷ್ಕರ: ಪಟ್ಟು ಬಿಡದ ಸರ್ಕಾರ, ರೋಡಿಗಿಳಿದ ಖಾಸಗಿ ಬಸ್‌ಗಳು
Our mission to create the model constituency #Vadgam doesn't stop here. We are pushing even harder for more MNREGA benefits for our people, creating private jobs and entrepreneurship opportunities, bringing in water in #Karmavat lake to solve our water problem & more.
— Jignesh Mevani (@jigneshmevani80) April 7, 2021
ಉದ್ಯೋಗ ಖಾತ್ರಿಗೆ ಹೆಚ್ಚಿನ ಸಂಖ್ಯೆಯ ಜನರನ್ನು ಸೇರಿಸಲು 63 ದಿನಗಳ ಅಭಿಯಾನವನ್ನು ತಮ್ಮ ತಂಡ ನಡೆಸಿದ್ದು, ಅದುವೆ ಈ ಸಾಧನೆ ಕಾರಣ ಎಂದು ಶಾಸಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
“ನನ್ನ ತಂಡದ ಸದಸ್ಯರೊಂದಿಗೆ ಅಭಿಯಾನ ಸಮಯದಲ್ಲಿ ನಾನು ನನ್ನ ಕ್ಷೇತ್ರದಲ್ಲಿ ಹಾಜರಿದ್ದೆ. ಅರ್ಹರು ಉದ್ಯೋಗ ಖಾತ್ರಿ ಯೋಜನೆಯ ಪ್ರಯೋಜನಗಳನ್ನು ಪಡೆಯಲು ನಮೂನೆಗಳನ್ನು ಭರ್ತಿ ಮಾಡಿದ್ದೇನೆ. ಅಲ್ಲದೆ ನಮ್ಮ ತಂಡವು ಸಹಾಯವಾಣಿ ಸಂಖ್ಯೆಯನ್ನು ಸಹ ಪ್ರಾರಂಭಿಸಿ, ಜನರು ಕರೆ ಮಾಡಿ ತಮ್ಮನ್ನು ತಾವು ಯೋಜನೆಗೆ ನೋಂದಾಯಿಸಿ ಕೊಳ್ಳುವಂತಹ ವ್ಯವಸ್ಥೆಯನ್ನು ಮಾಡಲಾಗಿತ್ತು” ಎಂದು ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ಇದನ್ನೂ ಓದಿ: ಬಿಜೆಪಿ ಎಷ್ಟು ದಲಿತರನ್ನು ಸಿಎಂ ಮಾಡಿದೆ, ಎಷ್ಟು ದಲಿತ ಮಂತ್ರಿಗಳನ್ನು ಹೊಂದಿದೆ? ಕಾಂಗ್ರೆಸ್ ಪ್ರಶ್ನೆ


