ಆಡಳಿತಾರೂಢ ಬಿಜೆಪಿಯ ‘ಆಪರೇಷನ್ ಕಮಲ’ ಭೀತಿಗೆ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ (ಬಿಪಿಎಫ್) ಪಕ್ಷವು ಅಸ್ಸಾಂ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ಚುನಾವಣೆಗೆ ಸ್ಪರ್ಧಿಸಿದ್ದ 11 ಅಭ್ಯರ್ಥಿಗಳಲ್ಲಿ 10 ಜನರನ್ನು ವಿದೇಶಕ್ಕೆ ಸ್ಥಳಾಂತರಿಸಿದೆ ಎಂದು ಭಾನುವಾರ ವರದಿಯಾಗಿದೆ. ವಿಶೇಷವೆಂದರೆ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಪಕ್ಷವು ಅಸ್ಸಾಂನಲ್ಲಿ ಬಿಜೆಪಿಯ ಮೈತ್ರಿಪಕ್ಷವಾಗಿದೆ.
ಎರಡು ದಿನಗಳ ಹಿಂದೆಯಷ್ಟೇ ಅಖಿಲ ಭಾರತ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ ಹಾಗೂ ಕಾಂಗ್ರೆಸ್ ಕ್ರಮವಾಗಿ ತಮ್ಮ 18 ಮತ್ತು ಇಬ್ಬರು ಅಭ್ಯರ್ಥಿಗಳನ್ನು ರಾಜಸ್ಥಾನಕ್ಕೆ ಕಳುಹಿಸಿತ್ತು.
ಅಸ್ಸಾಂನಲ್ಲೇ ಉಳಿದಿರುವ ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್‌ನ ಏಕೈಕ ಅಭ್ಯರ್ಥಿ ಸಚಿವೆ ಪ್ರಮಿಲಾ ರಾಣಿ ಬ್ರಹ್ಮ ಅವರು ತಮ್ಮ ಪಕ್ಷದ ಸುತ್ತ ನಡೆಯುತ್ತಿರುವ ಬೆಳವಣಿಯನ್ನು ದೃಡಪಡಿಸಿದ್ದಾರೆ.
ಇದನ್ನೂ ಓದಿ: ಜಯ್ ಶಾ ಮಾನಹಾನಿ ಪ್ರಕರಣದಲ್ಲಿ ದಿ ವೈರ್ ಕ್ಷಮೆ ಕೇಳಿತೆ? ಅಸಲಿ ಸಮಾಚಾರ ಇಲ್ಲಿದೆ!
ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು “ಹೌದು, ಅವರು ಶನಿವಾರ ಹೊರಟುಹೋದರು ಆದರೆ ಅವರು ನಿಖರವಾಗಿ ಯಾವ ದೇಶಕ್ಕೆ ಭೇಟಿ ನೀಡುತ್ತಿದ್ದಾರೆಂದು ನನಗೆ ತಿಳಿದಿಲ್ಲ. ನಾನು ಅವರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ, ” ಎಂದು ತಿಳಿಸಿದ್ದಾರೆ.
ಬೋಡೋಲ್ಯಾಂಡ್ ಪೀಪಲ್ಸ್ ಫ್ರಂಟ್ ಅಭ್ಯರ್ಥಿಗಳು ಸಿಂಗಾಪುರಕ್ಕೆ ತೆರಳಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ TNIE ವರದಿ ಮಾಡಿದೆ. ಅವರೊಂದಿಗೆ ನಾಲ್ಕು ಜಿಲ್ಲೆಗಳನ್ನು ನಿರ್ವಹಿಸುವ ಸ್ವಾಯತ್ತ ಬೋಡೋಲ್ಯಾಂಡ್ ಪ್ರಾದೇಶಿಕ ಮಂಡಳಿಯ ಕೌನ್ಸಿಲ್ ವಿಧಾನಸಭೆಯ (ಎಂಸಿಎಲ್ಎ) ಹದಿನಾರು ಸದಸ್ಯರು ಕೂಡಾ ತೆರಳಿದ್ದಾರೆ ಎನ್ನಲಾಗಿದೆ.
ಬಿಜೆಪಿಯಿಂದ ಆಪರೇಷನ್ ಕಮಲದ ಪ್ರಯತ್ನಗಳನ್ನು ತಡೆಯಲು ಬೇಕಾಗಿ ಅಭ್ಯರ್ಥಿಗಳನ್ನು ವಿದೇಶಕ್ಕೆ ಕಳುಹಿಸಲಾಗಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಬ್ರಹ್ಮ ಅವರು, “ಕುದುರೆ ವ್ಯಾಪಾರದ ಸಾಧ್ಯತೆಯನ್ನು ನಾವು ತಳ್ಳಿಹಾಕುವಂತಿಲ್ಲ” ಎಂದು ತಿಳಿಸಿದ್ದಾರೆ.
ಎರಡು ದಿನಗಳ ಹಿಂದೆಯಷ್ಟೇ ಬಿಜೆಪಿಯಿಂದ ‘ಆಪರೇಷನ್ ಕಮಲ’ ನಡೆಯುತ್ತದೆ ಎಂಬ ಭೀತಿಗೆ ಚುಣಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ಸುಮಾರು 20 ಅಭ್ಯರ್ಥಿಗಳನ್ನು ಜೈಪುರಕ್ಕೆ ಸ್ಥಳಾಂತರಿಸಲಾಗಿತ್ತು.
ಇದನ್ನೂ ಓದಿ: ಎಡಪಕ್ಷಗಳ ಬೃಹತ್ ರ‍್ಯಾಲಿಯ ಫೋಟೊಗಳನ್ನು ಮೋದಿ ರ‍್ಯಾಲಿಯೆಂದು ಹಂಚಿದ ಬಿಜೆಪಿಗರು!
ವಿದ್ಯಾರ್ಥಿಗಳಿಬ್ಬರ ನೃತ್ಯಕ್ಕೆ ಕೋಮು ಬಣ್ಣ ಹಚ್ಚಿದ ಬಲಪಂಥೀಯರಿಗೆ ಕೇರಳ ಪ್ರತಿರೋಧಿಸಿದ್ದು ಹೇಗೆ ಗೊತ್ತೇ?


