ಮಂಗಳ ಗ್ರಹದಲ್ಲಿ ಹೆಲಿಕಾಪ್ಟರ್ ಅನ್ನು ಹಾರಿಸುವ ಮೂಲಕ ಅಮೆರಿಕದ ಬ್ಯಾಹ್ಯಾಕಾಶ ಸಂಸ್ಥೆ ‘ನಾಸಾ’ ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪಿಸಿದೆ. ಇನ್‌ಜೆನ್ಯುಟಿ ಎಂಬ ಸಣ್ಣ ರೊಬೊಟಿಕ್ ಹೆಲಿಕಾಪ್ಟರ್ ಅನ್ನು ನಾಸಾ ಮಂಗಳ ಗ್ರಹದ ಮೇಲ್ಮೈಯಿಂದ ಹಾರಿಸಿದೆ. ಭೂಮಿಯನ್ನು ಬಿಟ್ಟು ಬೇರೆ ಗ್ರಹದಲ್ಲಿ ಇದುವೆ ಮೊದಲ ಬಾರಿಗೆ ಹೆಲಿಕಾಪ್ಟರ್ ಅನ್ನು ಹಾರಿಸಲಾಗಿದೆ.
ಮಂಗಳ ಗ್ರಹದ ಮೇಲೆ ಹೆಲಿಕಾಪ್ಟರ್ ಹಾರಾಡುತ್ತಿರುವ ದೃಶ್ಯವು ಕ್ಯಾಲಿಫೋರ್ನಿಯಾದ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಗೆ ಮಂಗಳವಾರ ಬೆಳಿಗ್ಗೆ 7 ಗಂಟೆಗೆ ತಲುಪುತ್ತಿದ್ದಂತೆ ಅಲ್ಲಿನ ಇಂಜಿನಿಯರ್‌ಗಳು ಕುಣಿದು ಕುಪ್ಪಳಿಸಿದರು.
Have you heard? We flew a craft on another world for the first time ever with flying colors. Now, relive the scene in Mission Control as news of Ingenuity's nail-biting takeoff made it back to Earth.#MarsHelicopter pic.twitter.com/ER25G6uhdp
— NASA JPL (@NASAJPL) April 20, 2021
ಇದನ್ನೂ ಓದಿ: ಬೆಳ್ಳಿ ಚುಕ್ಕಿ: ದೂರದರ್ಶಕದಿಂದ ನಕ್ಷತ್ರ ಮತ್ತು ಗ್ರಹಗಳನ್ನು ನೋಡಿದಾಗ ಅವು ಬಹಳ ದೊಡ್ಡದಾಗಿ ಕಾಣುತ್ತವೆಯೇ?
ರೊಬೋಟಿಕ್ ಹೆಲಿಕಾಪ್ಟರ್ ಮಂಗಳ ಗ್ರಹದ ಮೇಲೆ ಮಂಗಳವಾರ ಮುಂಜಾನೆ 3:30 ಕ್ಕೆ ಹಾರಾಟ ನಡೆಸಿದೆ ಎಂದು ನಾಸಾ ತಿಳಿಸಿದೆ.
Witness the historic moment in full. The Mastcam-Z cameras on @NASAPersevere show us the takeoff, hovering and landing of the #MarsHelicopter. pic.twitter.com/ypdIWmC4D1
— NASA JPL (@NASAJPL) April 19, 2021
ಹೆಲಿಕಾಪ್ಟರ್ 10 ಅಡಿಗಳಷ್ಟು ಎತ್ತರಕ್ಕೆ ಏರಿದ್ದು, ಸುಮಾರು ಮೂವತ್ತು ಸೆಕೆಂಡುಗಳಷ್ಟು ಕಾಲ ಹಾರಾಡುತ್ತಲೆ ಇತ್ತು ಎಂದು ನಾಸಾ ತಿಳಿಸಿದೆ.
ಮಂಗಳಗ್ರಹದ ವಾತಾವರಣದಲ್ಲಿ ಕಡಿಮೆ ಗಾಳಿ ಇರುವುದರಿಂದ ಹೆಲಿಕಾಪ್ಟರ್ ಹಾರಿಸುವುದು ಕಷ್ಟಕರವಾಗಿದೆ. ಮಂಗಳ ಗ್ರಹದ ವಾತಾವರಣವು ಭೂಮಿಗಿಂತ ಕೇವಲ 1/100 ರಷ್ಟೇ ಇರುತ್ತದೆ. ಮಂಗಳ ಗ್ರಹದ ಮೇಲ್ಮೈಯಲ್ಲಿ ಹಾರಾಟ ನಡೆಸುವುದು ಭೂಮಿಯ ಮೇಲೆ 1,00,000 ಅಡಿ ಎತ್ತರದಲ್ಲಿ ಹಾರಾಡುವುದಕ್ಕೆ ಸಮವಾಗಿದೆ. ಭೂಮಿಯಲ್ಲಿ ಅಷ್ಟು ಎತ್ತರಕ್ಕೆ ಇದುವರೆಗೂ ಯಾವುದೆ ಹೆಲಿಕಾಪ್ಟರ್ ಹಾರಿಲ್ಲ.
ಇದನ್ನೂ ಓದಿ: ಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ
ವಿಡಿಯೋ ನೋಡಿ: ಸಾರಿಗೆ ನೌಕರರ ಮುಷ್ಕರವನ್ನು ಮುರಿಯಲು ಪ್ರಯತ್ನಿಸುತ್ತಿರುವ ಸರ್ಕಾರ?; ಗೃಹ ಸಚಿವ ಹೇಳಿದ್ದೇನು?


