Homeಮುಖಪುಟಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

ಬೆಳ್ಳಿ ಚುಕ್ಕಿ: ರಾತ್ರಿ ಆಕಾಶದಲ್ಲಿ ಒರಿಯಾನ್ ನಿಹಾರಿಕೆ ಮತ್ತು ಕೃತಿಕಾ ನಕ್ಷತ್ರ ಪುಂಜ

- Advertisement -
- Advertisement -

ಆಕಾಶ ವೀಕ್ಷಣೆಯಲ್ಲಿ ಗ್ರಹಗಳು ಮತ್ತು ನಕ್ಷತ್ರ ಪುಂಜಗಳನ್ನು ನೋಡುವುದಷ್ಟೇ ಅಲ್ಲ, ಇತರೆ ಖಗೋಳೀಯ ಕಾಯಗಳಾದ ನಿಹಾರಿಕೆಗಳು (ನೆಬುಲ್ಲಾಗಳು), ತೆರೆದ ಕ್ಲಸ್ಟರ್‌ಗಳು (ನಕ್ಷತ್ರಗಳ ಗೊಂಚಲು) ಮತ್ತು ಗೋಳಾಕಾರ ಕ್ಲಸ್ಟರ್‌ಗಳು ಮತ್ತು ಗ್ಯಾಲಾಕ್ಸಿಗಳನ್ನು ಕೂಡ ನೋಡಬಹುದು. ಇಂತಹ ಆಕಾಶ ಕಾಯಗಳನ್ನು ಆಕಾಶ ವೀಕ್ಷಣಾಕಾರರು ಆಳವಾದ ಆಕಾಶಕಾಯಗಳು (Deep Sky Objects- DSO’s)ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ DSO’s ನೋಡಲು ಕನಿಷ್ಠ ಅಂದರೂ ಬೈನಾಕ್ಯೂಲರ್ ಮುಂದುವರೆದು ಟೆಲಿಸ್ಕೋಪ್ ಅತ್ಯಗತ್ಯ. ಬರಿಕಣ್ಣಿನಲ್ಲೂ ನೋಡಬಹುದಾದ ಕೆಲವು ನಿಹಾರಿಕೆಗಳು, ಕ್ಲಸ್ಟರ್‌ಗಳು ಮತ್ತು ಗ್ಯಾಲಾಕ್ಸಿಗಳು ಇವೆ. ನಗರ ಪ್ರದೇಶಗಳಲ್ಲಿ ಬೆಳಕಿನ ಮಾಲಿನ್ಯ ಹೆಚ್ಚು ಇರುವುದರಿಂದ ಈ ಕಾಯಗಳನ್ನು ನೋಡಲು ಕಷ್ಟವಿದ್ದರೂ ಪ್ರಯತ್ನಿಸಬಹುದು.

ಒರಿಯಾನ್ ಮತ್ತು ಒರಿಯಾನ್ ನಿಹಾರಿಕೆ

ಚಿತ್ರ(1)

ಡಿಸೆಂಬರ್ ತಿಂಗಳನಲ್ಲಿ ನಾವು ಒರಿಯಾನ್ ಮತ್ತು ಒರಿಯಾನ್ ನಿಹಾರಿಕೆಯನ್ನು ಹೇಗೆ ಗುರುತಿಸುವುದು ಎಂಬುದನ್ನು ನೋಡಿದೆವು. ಈ ತಿಂಗಳೂ ಕೂಡ ಯಾವುದೇ ರಾತ್ರಿಯಂದು 8 ಗಂಟೆಯ ಸುಮಾರಿಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಂತರೆ, ಅಂದಾಜು 45 ಡಿಗ್ರಿ ಎತ್ತರದಲ್ಲಿ ಈ ಒರಿಯಾನ್ ನಕ್ಷತ್ರ ಪುಂಜ ಕಾಣುತ್ತದೆ (ಚಿತ್ರ- 1ನ್ನು ಗಮನಿಸಿ). ಒರಿಯಾನ್ ಬಹಳ ಸುಲಭವಾಗಿ ಗುರುತಿಸಬಹುದಾದ ನಕ್ಷತ್ರ ಪುಂಜ. ಚಿತ್ರ(1)ರಲ್ಲಿ ಗುರುತು ಮಾಡಿರುವ ಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಮೂರು ನಕ್ಷತ್ರಗಳು ಗೋಚರಿಸುತ್ತವೆ. ಅದರಲ್ಲಿ ಮಧ್ಯ ಭಾಗದಲ್ಲಿರುವುದು ಒರಿಯಾನ್ ನಿಹಾರಿಕೆ. ನಕ್ಷತ್ರಗಳು ಹುಟ್ಟುವ ಪ್ರದೇಶ!

ಚಿತ್ರ (1)- ಒರಿಯಾನ್ ನಕ್ಷತ್ರ ಪುಂಜ ಮತ್ತು ಒರಿಯಾನ್ ನಿಹಾರಿಕೆ

ಚಿತ್ರ(1)

ಚಳಿಗಾಲದ ಆಕಾಶ ವೀಕ್ಷಣೆಗೆ ಒರಿಯಾನ್ ನಕ್ಷತ್ರ ಪುಂಜ ಒಂದು ದಿಕ್ಸೂಚಿ. ಈ ನಕ್ಷತ್ರ ಪುಂಜದ ಸಹಾಯದಿಂದ ಇತರೆ ನಕ್ಷತ್ರ ಪುಂಜಗಳು, ನಿಹಾರಿಕೆಗಳು ಮತ್ತು ಕ್ಲಸ್ಟರ್‌ಗಳನ್ನು (ನಕ್ಷತ್ರಗಳ ಗೊಂಚಲು) ಸುಲಭವಾಗಿ ನೋಡಬಹುದಾಗಿದೆ.

ಕೃತಿಕಾ ನಕ್ಷತ್ರಗಳ ಗೊಂಚಲು

ಚಿತ್ರ (2)ರಲ್ಲಿ ತೋರಿಸಿರುವಂತೆ, ಒರಿಯಾನ್ ನಕ್ಷತ್ರ ಪುಂಜದ ಮಧ್ಯಭಾಗದ ಮೂರು ಪ್ರಕಾಶಮಾನವಾದ ನಕ್ಷತ್ರಗಳನ್ನು ಸೇರಿಸಿದಂತೆ ಒಂದು ಕಾಲ್ಪನಿಕ ಗೆರೆಯನ್ನು ಕಲ್ಪಿಸಿಕೊಂಡು ಅದೇ ಚಿತ್ರದಲ್ಲಿ ತೋರಿಸಿರುವ ದಿಕ್ಕಿನಲ್ಲಿ ನಕ್ಷತ್ರಗಳನ್ನು ಗಮನಿಸುತ್ತಾ ಬನ್ನಿ. ಹಾಗೆ ಗಮನಿಸುವಾಗ, ಆ ಕಾಲ್ಪನಿಕ ರೇಖೆಯು ಒಂದು ನಕ್ಷತ್ರ ಗೊಂಚಲುಗಳ ಬಳಿ ಹಾದುಹೋಗುತ್ತದೆ. ಇದೇ ಕೃತಿಕಾ ನಕ್ಷತ್ರಗಳ ಗೊಂಚಲು.

ಚಿತ್ರ(2)

ಕೃತಿಕಾ ನಕ್ಷತ್ರ ಗೊಂಚಲು ಒಂದು ತೆರೆದ ನಕ್ಷತ್ರಗಳ ಗೊಂಚಲುಗಳಾಗಿದ್ದು (Open Cluster) ಅತ್ಯಂತ ಸುಂದರವಾಗಿ ಬರಿಗಣ್ಣಿಗೆ ಕಾಣುತ್ತದೆ. ಇದನ್ನು ಇಂಗ್ಲಿಷ್‌ನಲ್ಲಿ Pleiades Cluster ಎಂದು ಕರೆಯುತ್ತಾರೆ. ಕೃತಿಕಾ ನಕ್ಷತ್ರಗಳ ಗೊಂಚಲುಗಳನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ, ಈ ಗೊಂಚಲಿನಲ್ಲಿ ಏಳು ನಕ್ಷತ್ರಗಳನ್ನು ಗುರುತಿಸಬಹುದು. ಪುರಾಣ ಕಥೆಗಳಿಗೆ ಹೋಲಿಸಿಕೊಂಡು ಈ ಏಳು ನಕ್ಷತ್ರಗಳನ್ನು ಸೆವೆನ್ ಸಿಸ್ಟ್‌ರ್‍ಸ್ ಎಂದು ಕರೆಯುವುದು ವಾಡಿಕೆಯಲ್ಲಿದೆ. ಬೈನಾಕ್ಯೂಲರ್‌ನಲ್ಲಿ ನೋಡಿದರೆ ಈ ನಕ್ಷತ್ರಗಳ ಗೊಂಚಲು ಇನ್ನೂ ಚಂದವಾಗಿ ಕಾಣುತ್ತದೆ.

ಚಿತ್ರ (3) ಕೃಪೆ: Hubble Site

ಈ ನಕ್ಷತ್ರಗಳ ಗೊಂಚಲುಗಳ ಚಿತ್ರವನ್ನು ಸಾಮಾನ್ಯವಾಗಿ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಎಲ್ಲ ಪುಸ್ತಕಗಳಲ್ಲಿ ಚಿತ್ರಿಸಿರುತ್ತಾರೆ. ಹೆಚ್ಚು ಸಮಯದ ಎಕ್ಸ್‌ಪೋಶರ್ ಹೊಂದಿರುವ ಕ್ಯಾಮರಾದಿಂದ ಈ ನಕ್ಷತ್ರಗಳ ಗೊಂಚಲಿನ ಫೋಟೋ ತೆಗೆದರೆ, ಈ ಏಳು ನಕ್ಷತ್ರಗಳ ಸುತ್ತಲೂ ತಿಳಿ ನೀಲಿ ಬಣ್ಣದ ಮೋಡಗಳನ್ನು ಕಾಣಬಹುದು. ಈ ಮೋಡಗಳು ಹೈಡ್ರೋಜನ್ ಅನಿಲಗಳಿಂದ ಕೊಡಿದೆ. ಹೈಡ್ರೋಜನ್ ಅನಿಲದ ಮೋಡಗಳು ನಕ್ಷತ್ರಗಳ ಉಗಮಕ್ಕೆ ಕಾರಣ.

ಚಿತ್ರ(3), ಕೃಪೆ: Hubble Site

ಖಗೋಳೀಯ ಅಧ್ಯಯನಗಳ ಪ್ರಕಾರ ನಕ್ಷತ್ರಗಳ ಗೊಂಚಲುಗಳು ಅಥವಾ ಕ್ಲಸ್ಟರ್‌ಗಳಲ್ಲಿರುವ ನಕ್ಷತ್ರಗಳು ಸಾಮಾನ್ಯವಾಗಿ ಒಂದೇ ಮೋಡಗಳಿಂದ ಒಂದೇ ಸಮಯದಲ್ಲಿ ಹುಟ್ಟಿರುತ್ತವೆ. ಈ ಕೃತಿಕಾ ನಕ್ಷತ್ರ ಪುಂಜದ ನಕ್ಷತ್ರಗಳೂ ಸಹ ಒಂದೇ ಮೋಡದಿಂದ ಹುಟ್ಟಿದ್ದು. ಇವು ನಕ್ಷತ್ರಗಳ ಜೀವಿತಾವಧಿಯ ಯೌವ್ವನದ ಅವಧಿಗಳಲ್ಲಿವೆ ಅಂದರೆ, all these are young stars. ನಕ್ಷತ್ರಗಳ ಹುಟ್ಟು ಮತ್ತು ಸಾವಿನ ಬಗ್ಗೆ ಅಧ್ಯಯನ ನಡೆಸುವ ಖಗೋಳ ವಿಜ್ಞಾನಿಗಳಿಗೆ ಯೌವ್ವನದ ನಕ್ಷತ್ರಗಳ ಬಗ್ಗೆ ಅಧ್ಯಯನ ನಡೆಸಲು ಕೃತಿಕಾ ನಕ್ಷತ್ರ ಗೊಂಚಲು ಒಂದು ಪ್ರಯೋಗಾಲಯವೇ ಸರಿ.

ರೋಹಿಣಿ ನಕ್ಷತ್ರ, ವೃಷಭ ರಾಶಿ

ಮತ್ತೊಮ್ಮೆ ಒರಿಯಾನ್ ನಕ್ಷತ್ರ ಪುಂಜಕ್ಕೆ ಹೋಗೋಣ. ಚಿತ್ರ (2) ರಲ್ಲಿ ಒರಿಯಾನ್ ನಕ್ಷತ್ರ ಪುಂಜದಿಂದ ಎಳೆದ ಕಾಲ್ಪನಿಕ ರೇಖೆ ಒಂದು ಕಿತ್ತಳೆ ಬಣ್ಣದ ನಕ್ಷತ್ರದ ಆಸು ಪಾಸಿನಲ್ಲಿ ಹಾದು ಹೋಗುವುದನ್ನ ಕಾಣುತ್ತೇವೆ. ಈ ಕಿತ್ತಳೆ ಬಣ್ಣದ ನಕ್ಷತ್ರವೇ ರೋಹಿಣಿ ನಕ್ಷತ್ರ. ಈ ರೋಹಿಣಿ ನಕ್ಷತ್ರ ಮತ್ತು ಕೃತಕಾ ನಕ್ಷತ್ರದ ಗೊಂಚಲುಗಳು ವೃಷಭ ರಾಶಿಯಲ್ಲಿವೆ/ ನಕ್ಷತ್ರ ಪುಂಜದಲ್ಲಿದೆ. ಅಂತೆಯೇ, ಚಿತ್ರ (2)ರಲ್ಲಿನ ಕಾಲ್ಪನಿಕೆ ಗೆರೆಗಳ ಸಹಾಯದಿಂದ ವೃಷಭ ರಾಶಿಯ ಇತರೆ ನಕ್ಷತ್ರಗಳನ್ನು ನೀವು ನೋಡಬಹುದು.

ಚಂದ್ರನ ಸಹಾಯದಿಂದ ದಿಕ್ಕು ಕಂಡುಹಿಡಿಯುವುದು ಹೇಗೆ?

ಚಂದ್ರ ರಾತ್ರಿ ಆಕಾಶದಲ್ಲಿ ಕಾಣುವ ದೊಡ್ಡದಾದ ಆಕಾಶ ಕಾಯ. ಕೆಲವೊಂದು ಸಾರಿ ಇಳಿಸಂಜೆಯಲ್ಲೂ, ಮುಂಜಾನೆಯಲ್ಲೂ ಮತ್ತು ಸೂರ್ಯನಿದ್ದಾಗಲೂ ಕಾಣುತ್ತಾನೆ. ಚಂದ್ರನ ಸಹಾಯದಿಂದ ದಿಕ್ಕುಗಳನ್ನು ಗುರುತಿಸುವುದು ಹೇಗೆ?

ಚಿತ್ರ(4)

ವೃದ್ಧಿಸುವ ಚಂದ್ರ ಮತ್ತು ಕ್ಷೀಣಿಸುವ ಚಂದ್ರನ ಬಿಂಬಾವಸ್ಥೆಗಳ ಸಹಾಯದಿಂದ ದಿಕ್ಕುಗಳನ್ನು ಗುರುತಿಸುವುದನ್ನು ನೋಡೋಣ.

ಚಿತ್ರ (4)ನ್ನು ನೋಡಿ, ಫೆಬ್ರವರಿ ಐದರಂದು ಮುಂಜಾನೆ 4.10ಕ್ಕೆ ಆಕಾಶದಲ್ಲಿ ಚಂದ್ರ ಕಾಣಿಸುತ್ತಿರುವುದನ್ನು ಈ ಚಿತ್ರವು ಸೂಚಿಸುತ್ತದೆ. ಚಂದ್ರ ಕಾಣುತ್ತಿರುವ ದಿಕ್ಕು ಯಾವುದು ಅಂತ ಚಿತ್ರ (4)ನ್ನು ನೋಡಿ ಹೇಳಬಹುದಾ? ಚಿತ್ರ (5)ರಲ್ಲಿ ಪೂರ್ವ ದಿಕ್ಕು ಅಂತ ಸೂಚಿಸಲಾಗಿದೆ. ಆದರೆ, ಚಿತ್ರ (4)ರಿಂದಲೇ ಈ ದಿಕ್ಕನ್ನು ಗುರುತಿಸಬಹುದಾ ಎನ್ನುವುದು ಪ್ರಶ್ನೆ.

ಚಿತ್ರ (5)

ಚಿತ್ರ(5)

ಚಿತ್ರ (4)ರಲ್ಲಿ ಅರ್ಧ ಚಂದ್ರ ಕಾಣುತ್ತಿದೆ. ನಮಗೆ ಕಾಣುತ್ತಿರುವ ಚಂದ್ರನ ಅರ್ಧ ಭಾಗವನ್ನು(A)ಎಂದು, ಕಾಣದಿರದ ಅರ್ಧ ಭಾಗವನ್ನು (B) ಎಂದು ಕರೆಯೋಣ. ಚಂದ್ರನಿಗೆ ತನ್ನದೇ ಆದ ಬೆಳಕು ಇಲ್ಲದಿರುವುದು ನಮಗೆ ತಿಳಿದ ವಿಚಾರ. ಹಾಗಾಗಿ, ಚಂದ್ರನನ್ನು ನಾವು ನೋಡುತ್ತಿದ್ದರೆ ಅದು ಸೂರ್ಯನ ಬೆಳಕು ಚಂದ್ರನ ಮೇಲೆ ಬಿದ್ದು, ಪ್ರತಿಫಲಿತ ಕಿರಣಗಳು ನಮ್ಮ ಕಣ್ಣಿಗೆ ಬರುತ್ತಿರುವುದರಿಂದ ಮಾತ್ರ. ಚಿತ್ರ (4)ರಲ್ಲಿ ತೋರಿಸಿರುವಂತೆ ಚಂದ್ರನ(A) ಭಾಗದ ಪ್ರದೇಶದಲ್ಲಿ ಸೂರ್ಯನ ಬೆಳಕು ಬೀಳಬೇಕೆಂದರೆ ಸೂರ್ಯ ಕ್ಷಿತಿಜದ (Horizan) ಕೆಳಗೆ ಇದ್ದರೇ ಮಾತ್ರ ಸಾಧ್ಯ. ಸೂರ್ಯ ಬೇರೆ ಕಡೆಗೆ ಇದ್ದರೆ, ಈ ರೀತಿ ಚಂದ್ರನ(B) ಭಾಗದಲ್ಲಿ ಬೆಳಕು ಬಿದ್ದು, ಪ್ರತಿಫಲಿಸುವುದು ಅಸಾಧ್ಯ. ಇದಲ್ಲದೆ ಚಂದ್ರ ಕಾಣುತ್ತಿರುವ ಸಮಯವನ್ನು ಗಮನಿಸಿದರೆ ಅದು ಮುಂಜಾನೆ 04 ಗಂಟೆಯ ಸಮಯ. ಒಂದೆರಡು ಗಂಟೆಯಲ್ಲಿ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸುತ್ತಾನೆ ಎಂಬುದು ತಿಳಿದ ವಿಚಾರ. ಚಂದ್ರನ(A) ಭಾಗದ ಮೇಲೆ ಸೂರ್ಯನ ಬೆಳಕು ಬಿದ್ದು, ಪ್ರತಿಫಲಿಸುತ್ತಿರುವುದರಿಂದ, ಸೂರ್ಯ ಈ ಕ್ಷಿತಿಜದಿಂದಲೇ ಉದಯಿಸಬೇಕು. ಹಾಗಾಗಿ ಇದು ಪೂರ್ವ ದಿಕ್ಕು ಎನ್ನುವ ಅಭಿಪ್ರಾಯಕ್ಕೆ ಬರಬಹುದು.

ನಾನು ಈ ಚಿತ್ರಗಳನ್ನು Stellariumತಂತ್ರಾಂಶದ ಮುಖಾಂತರ ಸೃಷ್ಟಿಸಿರುವುದರಿಂದ, ಇದರಲ್ಲಿ ಸಮಯವನ್ನು ಮುಂದಕ್ಕೆ ಹಾಕಿ ಸೂರ್ಯ ಉದಯಿಸುವುದನ್ನು ಕೂಡ ನೋಡಬಹುದು. ಅದೇ ಚಿತ್ರ (5). ಈ ಚಿತ್ರದಲ್ಲಿ, ಸೂರ್ಯ ಮತ್ತು ಚಂದ್ರ ಮತ್ತು ಅದರ(A)& (B) ಭಾಗಗಳನ್ನು ಗಮನಿಸಿ, ಬೆಳಕಿನ ಪ್ರತಿಫಲನ ನಿಯಮ ಸರಿ ಇದೆಯೇ ಪರೀಕ್ಷಿಸಿ.

ಇದೇ ವಿಧಾನದಲ್ಲಿ ಚಂದ್ರನನ್ನು ನೀವು ನೋಡಿದಾಗಲೆಲ್ಲಾ ದಿಕ್ಕುಗಳನ್ನು ಗುರುತಿಸಲು ಪ್ರಯತ್ನಿಸಿ. ಅಲ್ಲದೆ, ಆಕಾಶ ವೀಕ್ಷಣೆಯ ಬಗ್ಗೆ ನಿಮ್ಮ ಪ್ರಶ್ನೆಗಳನ್ನು, ಅಭಿಪ್ರಾಯಗಳನ್ನು ಸಹ ಹಂಚಿಕೊಳ್ಳಲು ಈಮೇಲ್ ವಿಳಾಸಕ್ಕೆ ಬರೆಯಿರಿ: [email protected].


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ಧ್ರುವ ನಕ್ಷತ್ರವನ್ನು ಗುರುತಿಸುವುದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...

ಬಿಹಾರ: ನಕಲಿ ದಾಖಲೆ ನೀಡಿ ಕೆಲಸ ಗಿಟ್ಟಿಸಿದ್ದ 3,000ಕ್ಕೂ ಹೆಚ್ಚು ಶಿಕ್ಷಕರು ವಜಾ!

ನಕಲಿ ಪದವಿ ಹಾಗೂ ನಕಲಿ ಶೈಕ್ಷಣಿಕ ಪ್ರಮಾಣಪತ್ರಗಳನ್ನು ನೀಡಿ ಸರ್ಕಾರಿ ಶಾಲೆಗಳಲ್ಲಿ ಉದ್ಯೋಗ ಗಿಟ್ಟಿಸಿಕೊಂಡಿದ್ದ 3,000ಕ್ಕೂ ಹೆಚ್ಚು ಶಿಕ್ಷಕರನ್ನು ಸೇವೆಯಿಂದ ವಜಾಗೊಳಿಸಲು ಬಿಹಾರ ಸರ್ಕಾರ ನಿರ್ಧರಿಸಿದೆ. ಈ ಕುರಿತು ಶುಕ್ರವಾರ ಅಧಿಕೃತ ಪ್ರಕಟಣೆ...

TMC ತೊರೆದು BJP ಸೇರಿದ ಮಾಜಿ ಸಂಸದರಿಗೆ ಬಿಜೆಪಿಯಿಂದ ರಾಜ್ಯಸಭಾ ಟಿಕೆಟ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (TMC) ಪಕ್ಷದ ರಾಜ್ಯಸಭಾ ಸ್ಥಾನಗಳಿಗೆ ರಾಜೀನಾಮೆ ನೀಡಿದ ಕೆಲವೇ ವಾರಗಳಲ್ಲಿ, ಆ ಮೂವರು ಮಾಜಿ ಸಂಸದರು ಈಗ ಬೇರೆ ಬಣ್ಣದ (BJP) ಶಾಲು ಧರಿಸಿ ಮತ್ತೆ...

ಪಶ್ಚಿಮ ಬಂಗಾಳ: ಟಿಎಂಸಿ ಖಾತೆ ಫ್ರೀಜ್ ಮಾಡಿದ್ದ ಪೊಲೀಸರಿಗೆ ಕಲ್ಕತ್ತಾ ಹೈಕೋರ್ಟ್ ತರಾಟೆ!

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಹಲವು ಬ್ಯಾಂಕ್ ಖಾತೆಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಮುಟ್ಟುಗೋಲು ಹಾಕಿಕೊಂಡ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದ ಪಕ್ಷದ ಮೂರು ಬ್ಯಾಂಕ್...

ಬಂಗಾಳದ ಬಿಸಿಯೂಟ ಇಸ್ಕಾನ್‌ಗೆ ಹಸ್ತಾಂತರವಿಲ್ಲ: ಸರ್ಕಾರದ ಸ್ಪಷ್ಟನೆ, ಕಲ್ಕತ್ತಾ ಹೈಕೋರ್ಟ್‌ನಿಂದ ಅಫಿಡವಿಟ್‌ಗೆ ನಿರ್ದೇಶನ 

ಕೋಲ್ಕತ್ತಾ: ರಾಜ್ಯದ ಶಾಲೆಗಳಲ್ಲಿ ಜಾರಿಯಲ್ಲಿರುವ ಪಿಎಂ-ಪೋಷಣ್ (ಮಧ್ಯಾಹ್ನದ ಬಿಸಿಯೂಟ) ಯೋಜನೆಯ ನಿರ್ವಹಣೆಯನ್ನು ಇಸ್ಕಾನ್ ಸಂಸ್ಥೆಗೆ ಹಸ್ತಾಂತರಿಸುವ ಯಾವುದೇ ಅನುಮೋದಿತ ಪ್ರಸ್ತಾಪ ಸರ್ಕಾರಕ್ಕಿಲ್ಲ ಎಂದು ಪಶ್ಚಿಮ ಬಂಗಾಳ ಸರ್ಕಾರ ಸ್ಪಷ್ಟಪಡಿಸಿದೆ. ಈ ಕುರಿತು ಅಫಿಡವಿಟ್...

ಗಾಜಿಯಾಬಾದ್‌| ಗೋಮಾಂಸ ಸಾಗಾಣಿಕೆ ಆರೋಪ; ವ್ಯಕ್ತಿ ಮೇಲೆ ಗುಂಪಿನಿಂದ ಹಲ್ಲೆ

ಉತ್ತರ ಪ್ರದೇಶದ ಗಾಜಿಯಾಬಾದ್‌ ನಗರದ ಶಾಸ್ತ್ರಿ ನಗರದಲ್ಲಿ ಗೋಮಾಂಸ ಸಾಗಿಸುತ್ತಿದ್ದಾರೆ ಎಂಬ ಅನುಮಾನದ ಮೇಲೆ ಸಲೀಂ ಎಂದು ಗುರುತಿಸಲಾದ ವ್ಯಕ್ತಿಯ ಮೇಲೆ ನಕಲಿ ಗೋರಕ್ಷಕರ ಗುಂಪೊಂದು ಹಲ್ಲೆ ನಡೆಸಿದೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ...