ತನ್ನ ಪೋನ್ ಸಂಖ್ಯೆಯನ್ನು ತಮಿಳುನಾಡು ಬಿಜೆಪಿ ಮತ್ತು ಬಿಜೆಪಿ ಐಟಿ ಸೆಲ್‌ನ ಸದಸ್ಯರು ಸೋರಿಕೆ ಮಾಡಿದ್ದು, ತನಗೆ ಮತ್ತು ಕುಟುಂಬಕ್ಕೆ ಅತ್ಯಾಚಾರ ಹಾಗೂ ಸಾವಿನ ಬೆದರಿಕೆಗಳು ಬರುತ್ತಿದೆ ಎಂದು ಖ್ಯಾತ ನಟ ಸಿದ್ದಾರ್ಥ್ ಅವರು ಗುರುವಾರ ಆರೋಪಿಸಿದ್ದಾರೆ.
ನಟ ಸಿದ್ದಾರ್ಥ್ ಅವರು ಬಿಜೆಪಿ ಸರ್ಕಾರದ ವಿಫಲತೆಯನ್ನು ನಿರಂತರವಾಗಿ ಸಾಮಾಜಿಕ ಜಾಲತಾಣದಲ್ಲಿ ಟೀಕಿಸುತ್ತಲೆ ಬರುತ್ತಿದ್ದಾರೆ. ಇದರಿಂದಾಗಿ ಅವರನ್ನು ಬಲಪಂಥೀಯರು ಮತ್ತು ಬಿಜೆಪಿ ಬೆಂಬಲಿಗರು ಗುರಿಯಾಗಿಸಿಕೊಂಡಿದ್ದಾರೆ.
ಇದನ್ನೂ ಓದಿ: ಜನರ ಗಮನ ಬೇರೆಡೆ ಸೆಳೆಯಲು ರೋಮ್ ಚಕ್ರವರ್ತಿಗಳು ಗ್ಲಾಡಿಯೇಟರ್‌ಗಳನ್ನು ಆಡಿಸುತ್ತಿದ್ದರು, ನಮಗೆ ಐಪಿಎಲ್ ಇದೆ!
ಇಂದು ತಮ್ಮ ಟ್ವಿಟರ್‌ನಲ್ಲಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನು ಟ್ಯಾಗ್ ಮಾಡಿ, “ನನ್ನ ಫೋನ್ ಸಂಖ್ಯೆಯನ್ನು ತಮಿಳುನಾಡು ಬಿಜೆಪಿ ಮತ್ತು ಬಿಜೆಪಿಯ ಐಟಿ ಸೆಲ್ ಸದಸ್ಯರು ಸೋರಿಕೆ ಮಾಡಿದ್ದಾರೆ. ಕಳೆದ 24 ಗಂಟೆಗಳಿಗಿಂತ ಹೆಚ್ಚು ಕಾಲ ನನಗೆ ಮತ್ತು ಕುಟುಂಬಕ್ಕೆ 500 ಕ್ಕೂ ಹೆಚ್ಚು ನಿಂದನೆ, ಅತ್ಯಾಚಾರ ಮತ್ತು ಸಾವಿನ ಬೆದರಿಕೆಗಳು ಬಂದಿದೆ. ಎಲ್ಲಾ ಸಂಖ್ಯೆಗಳನ್ನು ದಾಖಲಿಸಲಾಗಿದ್ದು ಅವುಗಳೆಲ್ಲವು ಬಿಜೆಪಿಗೆ ಸಂಬಂಧಿಸಿದ್ದಾಗಿದೆ. ಅವುಗಳನ್ನು ಪೊಲೀಸರಿಗೆ ಹಸ್ತಾಂತರಿಸಲಾಗುವುದು. ನಾನು ಮೌನವಾಗಿ ಇರಲ್ಲ, ಪ್ರಯತ್ನಿಸುತ್ತಲೇ ಇರಿ” ಎಂದು ನಟ ಸಿದ್ದಾರ್ಥ್ ಟ್ವೀಟ್ ಮಾಡಿದ್ದಾರೆ.
My phone number was leaked by members of TN BJP and @BJPtnITcell
Over 500 calls of abuse, rape and death threats to me & family for over 24 hrs. All numbers recorded (with BJP links and DPs) and handing over to Police.I will not shut up. Keep trying.@narendramodi @AmitShah
— Siddharth (@Actor_Siddharth) April 29, 2021
ಜೊತಗೆ ಫೇಸ್‌ಬುಕ್‌ನಲ್ಲಿ ಅವರ ಸಂಖ್ಯೆಯನ್ನು ಹಾಕಿ, ಅವರ ಮೇಲೆ ದಾಳಿ ಮಾಡುವಂತೆ ಕೇಳಿಕೊಂಡಿರುವ ಮಹಿಳೆಯೊಬ್ಬರ ಬಗ್ಗೆ ಕಮೆಂಟ್‌ನ ಸ್ಕ್ರೀನ್‌ಶಾರ್ಟ್ ಅನ್ನು ಕೂಡಾ ಸಿದ್ದಾರ್ಥ್ ಹಾಕಿದ್ದಾರೆ.
ಇದನ್ನೂ ಓದಿ: #ResignModi ಹ್ಯಾಷ್‌ಟ್ಯಾಗ್ ನಿರ್ಬಂಧಿಸಿ ಟೀಕೆಗೊಳಗಾದ ಫೇಸ್‌ಬುಕ್: ಟೀಕೆ ನಂತರ ಎಚ್ಚೆತ್ತು ಮರುಸ್ಥಾಪನೆ
ಅದರಲ್ಲಿ ಗೀತಾ ವಸಂತ್ ಎಂಬ ಮಹಿಳೆಯ ಹೆಸರಿರುವ ಫೇಸ್‌ಬುಕ್ ಖಾತೆಯೊಂದು ಸಿದ್ದಾರ್ಥ್ ಅವರು ನಂಬರನ್ನು ಹಾಕಿ, “ಅವನು ಇನ್ನು ಈ ಸಿಮ್ ನಂಬರ್ ಬಳಕೆ ಮಾಡಲೇ ಬಾರದು. ಬೇರೆ ನಂಬರ್ ಅವರು ಕೊಂಡರೆ ಅನ್ನು ಕಂಡು ಹಿಡಿಯಲು ನಮಗೆ ಕಷ್ಟವೇನು. ಅವನು ಇನ್ನು ಮುಂದೆ ಬಾಯಿಯೆ ತೆರೆಯ ಕೂಡದು” ಎಂದು ಹೇಳಿದ್ದಾರೆ.

ಈ ಸ್ಕ್ರೀನ್‌ಶಾರ್ಟ್ ಹಾಕಿರುವ ಸಿದ್ದಾರ್ಥ್, “ನಾವು ಕೊರೊನಾದಿಂದಾದರೂ ಬದುಕಿ ಉಳಿಯಬಹುದು ಆದರೆ ಈ ಜನರಿಂದ ಅಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಭಾರತದಲ್ಲಿ ಆಕ್ಸಿಜನ್‌ಗೆ ಹಾಹಾಕಾರ; ನೇಪಾಳಕ್ಕೆ ವೆಂಟಿಲೇಟರ್ ಹೊಂದಿರುವ 39 ಆಂಬುಲೆನ್ಸ್ ಗಿಫ್ಟ್!



ಜುಜುಬಿ BJP ಪಕ್ಷವೇ ಹೀಗೆ..
ಶಾಡಾದ BJP…LOFERS …