ಭಾರತದಲ್ಲಿ ಕೊರೊನಾ ಪ್ರಕರಣದಲ್ಲಿ ತೀವ್ರ ಮಟ್ಟದಲ್ಲಿ ಏರುತ್ತಿದ್ದು ಆಮ್ಲಜನಕ, ಆಸ್ಪತ್ರೆ ಸೇರಿದಂತೆ ಅಗತ್ಯ ಔಷಧಗಳ ಕೊರತೆ ಬಗ್ಗೆ ಸಾಕಷ್ಟು ವರದಿಯಾಗುತ್ತಿದೆ. ಈ ಮಧ್ಯೆ ಭಾರತವು ಗುರುವಾರ ವೆಂಟಿಲೇಟರ್‌ಗಳು ಹೊಂದಿದ 39 ಆಂಬುಲೆನ್ಸ್‌ಗಳು ಮತ್ತು ಆರು ಶಾಲಾ ಬಸ್‌ಗಳನ್ನು ನೇಪಾಳಕ್ಕೆ ಉಡುಗೊರೆಯಾಗಿ ನೀಡಿದೆ.
ಆಂಬುಲೆನ್ಸ್‌ಗಳನ್ನು ಭಾರತ ಸರ್ಕಾರದ ನಿರಂತರ ಬೆಂಬಲದ ಭಾಗವಾಗಿ ಮತ್ತು ಕೊರೊನಾ ಸಾಂಕ್ರಾಮಿಕ ರೋಗದ ವಿರುದ್ಧ ನೇಪಾಳದ ಹೋರಾಟಕ್ಕೆ ಪೂರಕವಾಗಿ ನೀಡಲಾಯಿತು ಎಂದು ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಇದನ್ನೂ ಓದಿ: ಕೊರೊನಾದಿಂದ ಸಿಪಿಎಂ ನಾಯಕನ ಪುತ್ರ ನಿಧನ; ವಿಕೃತಿ ಮೆರೆದ ಬಿಜೆಪಿ ಉಪಾಧ್ಯಕ್ಷ
“ಭಾರತ ಸರ್ಕಾರದ ನಿರಂತರ ಬೆಂಬಲ ಮತ್ತು ಕೊರೊನಾ ಸಾಂಕ್ರಾಮಿಕ ವಿರುದ್ಧದ ನೇಪಾಳದ ಹೋರಾಟಕ್ಕೆ ಪೂರಕವಾಗಿ, ರಾಯಭಾರ ಕಚೇರಿಯು ಇಂದು ವೆಂಟಿಲೇಟರ್‌ಗಳು, ಇಸಿಜಿ, ಆಕ್ಸಿಜನ್ ಮಾನಿಟರ್ ಮತ್ತು ಇತರ ತುರ್ತು ವೈದ್ಯಕೀಯ ಉಪಕರಣಗಳನ್ನು ಹೊಂದಿದ 39 ಆಂಬ್ಯುಲೆನ್ಸ್‌ಗಳನ್ನು ನೇಪಾಳದ ಸರ್ಕಾರಿ ಮತ್ತು ಎನ್‌ಜಿಒಗಳಿಗೆ ಉಡುಗೊರೆಯಾಗಿ ನೀಡಿತು. ಇಂಡಿಯಾ ನೇಪಾಲ್ ಫ್ರೆಂಡ್ಶಿಪ್” ಎಂದು ಭಾರತೀಯ ರಾಯಭಾರ ಕಚೇರಿ ಸಾಮಾಜಿಕ ಜಾಲತಾಣದಲ್ಲಿ ಬರೆದು ಕೊಂಡಿದೆ.
ಇದನ್ನೂ ಓದಿ: ಓಟುಗಳ ನಡುವೆ ನುಸುಳಿದ ಎರಡನೇ ಅಲೆಯ ದುರಂತಕ್ಕೆ ಮೋದಿ ಆಡಳಿತವೇ ಕಾರಣ!
“ರಾಯಭಾರ ಕಚೇರಿಯು 6 ಶಾಲಾ ಬಸ್ಸುಗಳನ್ನು ಉಡುಗೊರೆಯಾಗಿ ನೀಡಿತು. ಇವುಗಳನ್ನು ರಾಯಭಾರ ಕಚೇರಿಯ ದೀರ್ಘಕಾಲದ ಸಂಪ್ರದಾಯ ಮತ್ತು ಭಾರತ ಸ್ವಾತಂತ್ಯ್ರಗೊಂಡ 75 ವರ್ಷಾಚರಣೆಯ ಭಾಗವಾಗಿ ಉಡುಗೊರೆಯಾಗಿ ನೀಡಲಾಗಿದೆ” ಎಂದು ರಾಯಭಾರ ಕಚೇರಿಯು ಹೇಳಿದೆ.
ಕಳೆದ ವರ್ಷ ಕೂಡಾ ಭಾರತವು ಮಹಾತ್ಮ ಗಾಂಧಿಯವರ 151 ನೇ ಜನ್ಮದಿನದಂದು ನೇಪಾಳಕ್ಕೆ ಒಟ್ಟು 41 ಆಂಬ್ಯುಲೆನ್ಸ್‌ಗಳು ಮತ್ತು ಆರು ಶಾಲಾ ಬಸ್‌ಗಳನ್ನು ಉಡುಗೊರೆಯಾಗಿ ನೀಡಿತು.
ಇಷ್ಟೇ ಅಲ್ಲದೆ ಭಾರತವು ನೇಪಾಳದ ವಿವಿಧ ಯೋಜನೆಗಳಿಗೆ ಧನ ಸಹಾಯವನ್ನು ನೀಡುತ್ತಿದೆ. ಮನೆಗಳು, ಪಾರಂಪರಿಕ ತಾಣಗಳು ಮತ್ತು ಇತರ ಮೂಲಸೌಕರ್ಯಗಳ ಪುನರ್ನಿರ್ಮಾಣಕ್ಕೆ ಕೂಡಾ ಭಾರತ ನೇಪಾಳಕ್ಕೆ ಸಹಾಯ ನೀಡುತ್ತಿದೆ.
ಇದನ್ನೂ ಓದಿ: ಅಗತ್ಯ ಸೇವೆ ಬಿಟ್ಟು ಎಲ್ಲಾ ಬಂದ್: ಹೊಸ ಮಾರ್ಗಸೂಚಿ ಹೊರಡಿಸಿದ ರಾಜ್ಯ ಸರ್ಕಾರ