ಮುಸ್ಲಿಮರನ್ನು ಮತಾಂಧರು, ಭಯೋತ್ಪಾದಕರು ಮತ್ತು ದೇಶದ್ರೋಹಿಗಳು ಎಂದು ಬಿಂಬಿಸುವವರ ವಿರುದ್ದ ಖಂಡನೆಯಾಗಿ, ರಂಜಾನ್‌ನ ‘ಅಲ್ವಿದಾ ಜುಮಾ’ ದಿನವಾದ ನಾಳೆ (ಮೇ 7 ರ ಶುಕ್ರವಾರ) ಮುಸ್ಲಿಮರೊಂದಿಗೆ ಸೇರಿ ಒಂದು ದಿನದ ಉಪವಾಸ ಹಿಡಿಯಿರಿ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಾಟ್ಜು ಅವರು ಗುರುವಾರ ಕರೆ ನೀಡಿದ್ದಾರೆ.
ಈ ಬಗ್ಗೆ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅದರಲ್ಲಿ “ನಾಳೆ, ಮೇ 7, ರಂಜಾನ್ ಪವಿತ್ರ ತಿಂಗಳ ‘ಅಲ್ವಿದಾ ಜುಮಾ’ ಅಂದರೆ ಕೊನೆಯ ಶುಕ್ರವಾರ. ನನ್ನ ಮುಸ್ಲಿಂ ಸಹೋದರ ಸಹೋದರಿಯರೊಂದಿಗಿನ ಗೌರವ ಮತ್ತು ಒಗ್ಗಟ್ಟಿನ ಸಂಕೇತವಾಗಿ ಕಳೆದ 25 ವರ್ಷಗಳಿಂದ ನಾನು ಉಪವಾಸ ಹಿಡಿಯುತ್ತಿರುವಂತೆ, ನಾಳೆ ಕೂಡಾ ಉಪವಾಸ ಹಿಡಿಯುತ್ತಿದ್ದೇನೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!
“ಪ್ರಪಂಚದಾದ್ಯಂತದ ಎಲ್ಲ ಮುಸ್ಲಿಮೇತರರಿಗೆ ಅದೇ ರೀತಿ ಮಾಡಲು ನಾನು ಮನವಿ ಮಾಡುತ್ತೇನೆ. ಈ ಬಗ್ಗೆ ನಿಮ್ಮ ಮುಸ್ಲಿಂ ಸ್ನೇಹಿತರಿಂದ ಸಹರಿ (ಬಹುಶಃ ಅದು ಬೆಳಿಗ್ಗೆ 4.15 ಕ್ಕೆ) ಮತ್ತು ಇಫ್ತಾರ್ (ಬಹುಶಃ ಸಂಜೆ 7 ಗಂಟೆಗೆ) ಸಮಯವನ್ನು ತಿಳಿದುಕೊಳ್ಳಿರಿ. ಇದನ್ನು ನೀವು ಇಂಟರ್‌ನೆಟ್‌ನಲ್ಲಿಯೂ ನೋಡಬಹುದು. ಈ ಅವಧಿಯಲ್ಲಿ ದಯವಿಟ್ಟು ಏನನ್ನೂ ತಿನ್ನಬೇಡಿ ಅಥವಾ ಕುಡಿಯಬೇಡಿ” ಎಂದು ಅವರು ವಿನಂತಿಸಿದ್ದಾರೆ.
“ನಮ್ಮನ್ನು ಧಾರ್ಮಿಕ ದೃಷ್ಟಿಯಿಂದ ವಿಭಜಿಸಲು ಮತ್ತು ಮುಸ್ಲಿಮರನ್ನು ಮತಾಂಧರು, ಭಯೋತ್ಪಾದಕರು ಮತ್ತು ರಾಷ್ಟ್ರ ವಿರೋಧಿಗಳು ಎಂದು ಚಿತ್ರಿಸುವವರ ವಿರುದ್ದದ ಸಾಂಕೇತಿಕ ಖಂಡನೆ ಮತ್ತು ನಿರಾಕರಣೆಯಾಗಿ ಈ ಉಪವಾಸ ಹಿಡಿಯಿರಿ” ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ


