ಬೆಂಗಳೂರಿನಲ್ಲಿ ಶವ ಸುಡಲೂ ಸೌದೆಯ ಕೊರತೆ: ಬೆಡ್ ಎತ್ತಿಕೊಂಡು ಸಂಸದ ಸೂರ್ಯ ನಾಪತ್ತೆ! | NaanuGauri

ಬೆಂಗಳೂರಿನ ಜನಪ್ರತಿನಿಧಿಗಳು, ಮುಖ್ಯವಾಗಿ ಆಡಳಿತ ಪಕ್ಷಕ್ಕೆ ಸಂಬಂಧಿಸಿದವರು ಪಲಾಯನ ಮಾಡಿದ್ದಾರೆ. ಬೆಡ್ ಬ್ಲಾಕಿಂಗ್ ಬಗ್ಗೆ ‘ಹವಾ’ ಎಬ್ಬಿಸಿದ ಸಂಸದ ತೇಜಸ್ವಿ ಸೂರ್ಯ ಕೂಡಾ ಈಗ ನಾಪತ್ತೆಯಾಗಿದ್ದಾರೆ. ಅವರೀಗ ಯಾವ ಮಾಧ್ಯಮದ ಫೋನ್ ಕರೆಯನ್ನು ಸ್ವೀಕರಿಸದ ಮಟ್ಟಿಗೆ ಜನದ್ರೋಹಿಯಾಗಿದ್ದಾರೆ.

ಹತ್ತು ದಿನಗಳ ಹಿಂದಷ್ಟೆ, ಆಕ್ಸಿಜನ್ ಮತ್ತು ಬೆಡ್‌ಗಳ ಕೊರತೆಯಿದ್ದಾಗ ಕಂದಾಯ ಸಚಿವ, ಬೆಂಗಳೂರಿನ ಶಾಸಕ ಆರ್. ಅಶೋಕ್ ಹೊಸ ಸ್ಮಶಾನ ನಿರ್ಮಿಸುತ್ತೇವೆ ಎಂದರು. ಅದು ಇನ್ನೂವರೆಗೂ ಆಗಿಲ್ಲ. ರಿಯಲ್ ಎಸ್ಟೇಟ್ ಮಾಡುವ ಜನರಿಗೆ ‘ಅಮೂಲ್ಯ’ ಭೂಮಿಯನ್ನು ಸ್ಮಶಾನಕ್ಕೆ ಪಡೆಯಲು ಮನಸ್ಸು ಒಪ್ಪುತ್ತದೆಯೇ ಎಂಬ ಪ್ರಶ್ನೆ ಬೆಂಗಳೂರಿಗರನ್ನು ಈಗ ಕಾಡುತ್ತಿದೆ.

ಇದನ್ನೂ ಓದಿ: ಕೇಂದ್ರವೇ ಏಕೆ ಎಲ್ಲಾ ಲಸಿಕೆ ಖರೀದಿಸಬಾರದು? ಲಸಿಕೆ ದರದಲ್ಲಿ ತಾರತಮ್ಯವೇಕೆ: ಸುಪ್ರೀಂ ಪ್ರಶ್ನೆ

ಸೂರ್ಯ ಮತ್ತೆ ಪ್ರತ್ಯಕ್ಷರಾಗಿ, ಸೌದೆ ಕದ್ದ ಮುಸ್ಲಿಮರು ಎಂದೂ ಹೇಳುವ ಸಾಧ್ಯತೆಗಳಿವೆ! ಜೀವವಿರೋಧಿ ಸಿದ್ದಾಂತದವರನ್ನು ಮತ್ತು ರಿಯಲ್ ಎಸ್ಟೇಟ್ ದಂಧೆಯವರನ್ನು (ಬಹುಪಾಲು ಅವರೇ ಇದ್ದಾರೆ) ಜನಪ್ರತಿನಿಧಿಗಳನ್ನಾಗಿ ಆರಿಸಿದ ಬೆಂಗಳೂರಿನ ಜನತೆಗೆ ಈಗ ಆಸ್ಪತ್ರೆಯಲ್ಲಿ ಬೆಡ್ ಸಿಗುತ್ತಿಲ್ಲ, ಸಿಕ್ಕರೆ ಆಕ್ಸಿಜನ್, ಚಿಕಿತ್ಸೆ ಸಿಗುತ್ತಿಲ್ಲ. ಆಕಸ್ಮಿಕ ಅಸು ನೀಗಿದರೆ ಸ್ಮಶಾನಗಳಲ್ಲಿ ಕಾಯಬೇಕು. ಅಲ್ಲೂ ಈಗ ಹೊಸ ಸಮಸ್ಯೆ ತಲೆದೋರಿದೆ. ಅಲ್ಲೀಗ ಶವ ಸುಡಲು ಸೌದೆಯ ಅಭಾವ ಉಂಟಾಗಿದೆ.

ಶವಗಾರದಲ್ಲಿ ಶವ ಸುಡಲು ಸೌದೆ ಕೊರತೆ ಈಗ ಎದುರಾಗಿದ್ದು, ಇದು ಬರುವ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಉಂಟಾಗಲಿದೆ. ಶವ ಹೂಳುವ ಪದ್ಧತಿ ಅಚರಿಸುವವರೂ ಕೂಡ ಈಗ ಅನಿವಾರ್ಯವಾಗಿ ಸುಡುವ ಪದ್ಧತಿ ಒಪ್ಪಿಕೊಂಡಿದ್ದಾರೆ. ಒಂದು ಕಡೆ ಸ್ಮಶಾನದಲ್ಲಿ ಕ್ಯೂ, ಇನ್ನೊಂದು ಕಡೆ ಸೌದೆ ಕೊರತೆ.

ಇಂತಹ ಹೊತ್ತಿನಲ್ಲೇ ‘ಸ್ಮಶಾನಕ್ಕೆ ಹೋಗುವ ದಾರಿ’ ಎಂಬ ಫ್ಲೆಕ್ಸ್ ಬೋರ್ಡ್ ಹಾಕಿ, ಅಲ್ಲಿ ನೀರು, ಚಹಾ ವಿತರಣೆ ಮಾಡುತ್ತೇವೆ ಎಂದು ಹೆಮ್ಮೆ ಪಡುವ ಬಿಜೆಪಿ ಶಾಸಕರ ಕ್ರೌರ್ಯವೂ ಜನರನ್ನು ಆಕ್ರೋಶಿತರನ್ನಾಗಿ ಮಾಡಿದೆ. ಜನರಿಗೆ ನೆರವು ನೀಡದ ಈ ಜನಪ್ರತಿನಿಧಿಗಳು ಅಕ್ಷರಶಃ ‘ಸ್ಮಶಾನಕ್ಕೆ ತಲುಪುವ ದಾರಿ’ಯನ್ನು ಸೃಷ್ಟಿ ಮಾಡಿದ್ದಾರೆ.
ಪ್ರತಿ ವ್ಯಕ್ತಿಯ ಅಂತ್ಯಸಂಸ್ಕಾರಕ್ಕೆ ಸುಮಾರು 1,500 ಕೆ.ಜಿ ಕಟ್ಟಿಗೆ ಬೇಕು ಎನ್ನಲಾಗಿದೆ. ನಿತ್ಯ ಸೌದೆ ಸಂಗ್ರಹ ಬಿಬಿಎಂಪಿಗೆ ಭಾರಿ ತಲೆನೋವು ಉಂಟು ಮಾಡಿದೆ. ಶವ ಸುಡಲು ಸೌದೆಗೂ ಶುರುವಾಗುತ್ತಾ ಹಾಹಾಕಾರ ಎಂಬ ಪ್ರಶ್ನೆ ಎದ್ದಿದೆ. ಪ್ರತಿ ಸ್ಮಶಾನದಲ್ಲಿ ನಿತ್ಯ 40 ಕ್ಕಿಂತ ಹೆಚ್ಚು ಶವ ಸುಡಲಾಗುತ್ತಿದೆ.

ಇದನ್ನೂ ಓದಿ: Explainer: ಸದ್ಯಕ್ಕೆ ಲಭ್ಯವಿರುವ ಲಸಿಕೆಗಳೆಷ್ಟು? ತಡವಾಗಲು ಕಾರಣವೇನು?

ಪರಿಸ್ಥಿತಿ ನಿಭಾಯಿಸಲು ಹೆಚ್ಚು ಮರಗಳನ್ನು ಕಡಿಯುವತ್ತ ಪಾಲಿಕೆಯ ಅರಣ್ಯ ವಿಭಾಗ ಮುಂದಾಗಬಹುದು ಎನ್ನಲಾಗಿದೆ.

ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ತಲಾ ಒಂದು ಅಥವಾ ಎರಡು ಸ್ಮಶಾನಗಳಿದ್ದು, ಅವು ಈಗ ಕೋವಿಡ್ ಶವಗಳ ದಟ್ಟಣೆಗೆ ತತ್ತರಿಸಿವೆ. ಈಗ ಸೌದೆಯ ಕೊರತೆಯೂ ಸೇರಿಕೊಂಡು ಅಂತ್ಯಸಂಸ್ಕಾರವೇ ಒಂದು ದೊಡ್ಡ ಸಮಸ್ಯೆಯಾಗಿದೆ. ಸುಡುವ ಈ ಹೊತ್ತಿನಲ್ಲಿ ಬೆಡ್ ವಿಚಾರದಲ್ಲಿ ಕೋಮುವಾದೀಕರಣ ಮಾಡಿ ಪರಾರಿಯಾದ ಸಂಸದರು ಯಾರ ಫೋನಿಗೂ ಸಿಗುತ್ತಿಲ್ಲ. ಕೊಲ್ಲುವ ಸಿದ್ದಾಂತದ ಜನರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?

ದೊಡ್ಡ ನಗರಗಳ ಸಮಸ್ಯೆ!

ಕಳೆದ ತಿಂಗಳಿನಿಂದ ಭಾರತವು ಇತರ ದೇಶಗಳಿಗಿಂತ ಹೆಚ್ಚು ಕೋವಿಡ್ ಪ್ರಕರಣಗಳನ್ನು ಕಂಡಿದೆ.
ಜನರು ಹಾಸಿಗೆಗಳಿಗಾಗಿ ಕಾಯುತ್ತ ಸಾವನ್ನಪ್ಪಿದ್ದಾರೆ, ಇನ್ನೊಂದು ಕಡೆ, ಆಮ್ಲಜನಕದ ಸರಬರಾಜು ಕಡಿಮೆಯಾಗಿ ಸಾವುಗಳು ಸಂಭವಿಸುತ್ತಿವೆ.

ಈಗ ಸ್ಮಶಾನಗಳಲ್ಲಿ ಸಹ ಸ್ಥಳಾವಕಾಶವಿಲ್ಲ, ಸ್ಮಶಾನದ ಕಾರ್ಮಿಕರು ಶವಗಳನ್ನು ಸುಡುತ್ತಲೇ ಬೆಂದು ಹೋಗಿದ್ದಾರೆ.

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

ಹಿಂದೂ ಧರ್ಮದಲ್ಲಿ, ಶವಸಂಸ್ಕಾರವು ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆಯ ವಿಧಿಗಳಲ್ಲಿ ಪ್ರಮುಖ ಭಾಗವಾಗಿದೆ. ಏಕೆಂದರೆ ಆತ್ಮವನ್ನು ಅದರಿಂದ ಬೇರ್ಪಡಿಸುವಂತೆ ಒತ್ತಾಯಿಸಲು ದೇಹವನ್ನು ನಾಶಪಡಿಸಬೇಕು ಎಂದು ಹಿಂದೂಗಳು ನಂಬುತ್ತಾರೆ.

ಭಾರತದ ರಾಜಧಾನಿ ದೆಹಲಿಯಲ್ಲಿ, ತಾತ್ಕಾಲಿಕ ಅಂತ್ಯಕ್ರಿಯೆಯ ನೆರವೇರಿಸಲು ಸೌದೆ ಬಳಸಿ ಸುಡುವಂತೆ ಸ್ಮಶಾನ ಕಾರ್ಮಿಕರು ಮತ್ತು ಪೌರ ಕಾರ್ಮಿಕರನ್ನು ಒತ್ತಾಯಿಸಲಾಗಿದೆ, ಉದ್ಯಾನವನಗಳು ಮತ್ತು ಇತರ ಖಾಲಿ ಸ್ಥಳಗಳನ್ನು ಶವಸಂಸ್ಕಾರಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

ಉರುವಲುಗಳಾಗಿ ಬಳಸಲು ಅಧಿಕಾರಿಗಳು ದೆಹಲಿ ನಗರದ ಉದ್ಯಾನವನಗಳಲ್ಲಿನ ಮರಗಳನ್ನು ಕಡಿದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ. ಈಗ ಬೆಂಗಳೂರಿನ ಉದ್ಯಾನವನಗಳ ಮರಗಳನ್ನು ಕತ್ತರಿಸದೇ ಅನ್ಯಮಾರ್ಗವಿಲ್ಲೆವೇನೋ?

ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ಮಲ್ಲನಗೌಡರ್‌ ಪಿ.ಕೆ
+ posts

LEAVE A REPLY

Please enter your comment!
Please enter your name here