Homeಕರ್ನಾಟಕ`ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು' - ಸಿಎಂಗೆ ಶಾಸಕ ಎಚ್. ಕೆ. ಪಾಟೀಲ್ ಮುಖಾಮುಖಿ ಕ್ಲಾಸ್!

`ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ – ಸಿಎಂಗೆ ಶಾಸಕ ಎಚ್. ಕೆ. ಪಾಟೀಲ್ ಮುಖಾಮುಖಿ ಕ್ಲಾಸ್!

- Advertisement -
- Advertisement -

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್‌ನ ಕುಮಾರಸ್ವಾಮಿ ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ದಿನವೂ ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತ ಬಂದಿದ್ದಾರೆ. ಇನ್ನೊಂದು ಕಡೆ ಅಸಂಖ್ಯಾತ ಸಾಮಾಜಿಕ ಸಂಘಟನೆಗಳು ಪ್ರತಿನಿತ್ಯ ಕೋವಿಡ್ ಸಂತ್ರಸ್ತರು ಮತ್ತು ಕುಟುಂಬಗಳಿಗೆ ನೆರವು ನೀಡುತ್ತಿವೆ. ಜೊತೆಗೇ ಪ್ರತಿದಿನ ಹಲವು ನಿರ್ಣಾಯಕ ಪ್ರಶ್ನೆಗಳನ್ನು ಕೇಳುತ್ತಿವೆ. ಆದರೆ, ದುರುದ್ದೇಶದಲ್ಲಿ ಬಿಬಿಎಂಪಿ ಕೋವಿಡ್ ರೂಮ್ ಹೊಕ್ಕ ಸಂಸದ ತೇಜಸ್ವಿ ಸೂರ್ಯ ಮತ್ತು ಪಟಾಲಂನ ಮಾತು ಕೇಳಿ ಸರ್ಕಾರ ಕ್ರಮ ಜರುಗಿಸಿದೆ.

ಆದರೆ ಯಾವುದೋ ಗೊಂದಲದಲ್ಲಿರುವ, ಅಸಹಾಯಕತೆಯಲ್ಲಿರುವಂತೆ ಕಾಣುವ ಸಿಎಂ ಯಡಿಯೂರಪ್ಪ ಏನನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ.

ನಿನ್ನೆ ಬುಧವಾರ, ಆಕ್ಸಿಜನ್ ಪಡೆದುಕೊಳ್ಳುವ ಬಗೆಯನ್ನು ನೇರ ಯಡಿಯೂರಪ್ಪರಿಗೆ ವಿವರಿಸಿರುವ, ಅದಕ್ಕೆ ಅಗತ್ಯವಾದ ವೈಜ್ಞಾನಿಕ ಮತ್ತು ಕಾರ್ಯಸಾಧ್ಯವಾದ ವಿವರಗಳನ್ನು ನೀಡಿ ಬಂದಿರುವ ಮಾಜಿ ಸಚಿವ, ಗದಗಿನ ಹಾಲಿ ಶಾಸಕ ಎಚ್.ಕೆ ಪಾಟೀಲರಿಗೆ, ‘ನೀವು ಆಕ್ಸಿಜನ್ ಕುರಿತು ವಿವರಿಸುವಾಗ ಸಿಎಂ ಸಾಹೇಬರ ಭಾವ, ಮನಸ್ಥಿತಿ ಹೇಗಿತ್ತು?’ ಎಂದು ನಾನುಗೌರಿ.ಕಾಂ ಪ್ರಶ್ನೆ ಮಾಡಿತು.

ಇದನ್ನೂ ಓದಿ: ‘ಬೆಡ್‌ ಬ್ಲಾಕ್‌’ ವಿವಾದ: ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬರೆದ ಭಾವನಾತ್ಮಕ ಪತ್ರ

‘ಒಂಥರಾ ಅಸಹಾಕತೆಯಿದೆ, ಇನ್ನೊಂದು ಕಡೆ ಒಳ ರಾಜಕಾರಣದ ಒತ್ತಡವಿದೆ. ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಬಗ್ಗೆ ಅವರಲ್ಲಿ ವಿವರವಾದ ಮಾಹಿತಿ ಇಲ್ಲ’ ಎಂದು ಪಾಟೀಲ್ ಹೇಳಿದರು.

‘ಸಂಗ್ರಹಣೆ ಸಮಸ್ಯೆ ಇದೆ, ಸಾಗಾಣಿಕೆ ಸಮಸ್ಯೆ ಇದೆ ಎಂದು ಮುಖ್ಯಮಂತ್ರಿ ಹೇಳುತ್ತ ಹೋದರು. ಇದು ಅವರ ಅಜ್ಞಾನವೋ ಅಥವಾ ಟೆನ್ಸನ್ನೋ? ಇಲ್ಲಾ ಈ ತಜ್ಞರ ಸಮಿತಿ ಆಕ್ಸಿಜನ್ ಕುರಿತ ವಾಸ್ತವವನ್ನು ಅವರಿಗೆ ತಿಳಿಸಲಿಲ್ಲವೋ? ’ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ ಎಂಬುದನ್ನು ಅವರಿಗೆ ಹೇಳಿದೆ. ವಿಧಾನಸೌಧದ ಮೂರನೇ ಮಹಡಿ ಮೇಲೆ ನಿಂತು ನೋಡಿದರೆ ಅಲ್ಲಿಂದಲೇ ಆಕ್ಸಿಜನ್ ಸಂಗ್ರಹಿಸಬಹುದಾದ ಮೂರು ಸ್ಥಳಗಳು ಗೋಚರಿಸುತ್ತವೆ ಎಂಬುದನ್ನೂ ಸಿಎಂ ಅವರಿಗೆ ಹೇಳಿದ್ದೇನೆ.

ಆದರೆ, ಒಟ್ಟಿನಲ್ಲಿ ಈ ಸರ್ಕಾರಕ್ಕೆ ಮೊದಲನೆದಾಗಿ, ರಾಜಕೀಯ ಇಚ್ಛಾಶಕ್ತಿಯಿಲ್ಲ. ಎರಡನೇದಾಗಿ, ಈ ಸರ್ಕಾರದ ಬಳಿ ಸುಸೂತ್ರ ಯೋಜನೆಗಳಿಲ್ಲ, ಸಚಿವರ ನಡುವೆ ಸಮನ್ವತೆಯೇ ಇಲ್ಲ. ಮೂರನೇದಾಗಿ, ಅವರ ಪಕ್ಷದ ಆಂತರಿಕ ಭಿನ್ನಮತವನ್ನು ಈ ಬಿಕ್ಕಟ್ಟಿನ ಸಮಯದಲ್ಲೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಹೀನ ಕೆಲಸ ನಡೆದಿದೆ’ ಎಂದರು

ಯಡಿಯೂರಪ್ಪನವರಿಗೆ ಹೇಳಿದ್ದನ್ನು ಅವರು ಲಿಖಿತ ರೂಪದ ಮನವಿಯಲ್ಲೂ ಹೇಳಿದರು. ಯಡಿಯೂರಪ್ಪ ಮನೆಯ ಹೊರಗಡೆ ಮಾಧ್ಯಮಗಳ ಮುಂದೆ ಎಲ್ಲವನ್ನೂ ತಿಳಿಸಿದರು. ’ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ ಎಂದೂ ಹೇಳಿದರು. ಆದರೆ ತೇಜಸ್ವಿ ಸೂರ್ಯ ಎಂಬ ಪಲಾಯನವಾದಿ, ಕುತಂತ್ರಿ ಸಂಸದನ ಹಿಂದೆ ಸುತ್ತುತ್ತಿದ್ದ ಮಾಧ್ಯಮಗಳಿಗೆ ಎಚ್. ಕೆ. ಪಾಟೀಲ್ ಹೇಳಿದ್ದು ಮುಖ್ಯ ಅನಿಸಲೇ ಇಲ್ಲ.

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

ತೇಜಸ್ವಿ ಸೂರ್ಯನಂತೆ ಎಲ್ಲಿಗೋ ಎಚ್. ಕೆ. ಪಾಟೀಲ್ ನುಗ್ಗಲಿಲ್ಲ, ಅವರು ದೇಶದ ಹಲವು ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು ಮತ್ತು ನೀತಿ ನಿರೂಪಕರನ್ನು ಮಾತನಾಡಿಸಿ ಈ ಮನವಿ ತಯಾರಿಸಿದರು.
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊ. ಭ್ರಮರ್ ಮುಖರ್ಜಿಯನ್ನು ಉಲ್ಲೇಖಿಸಿದ ಅವರು, ಮೇ ಮಧ್ಯದ ಹೊತ್ತಿಗೆ, 8-15 ಲಕ್ಷ ದೈನಿಕ ಪಾಸಿಟಿವ್ ಪ್ರಕರಣಗಳು ಮತ್ತು ಸುಮಾರು 4,500 ಸಾವುಗಳು ಸಂಭವಿಸಬಹುದು ಎಂದು ಯಡಿಯೂರಪ್ಪನವರಿಗೆ ಹೇಳಿದ್ದಾರೆ.

ಬಳ್ಳಾರಿ, ಕೊಪ್ಪಳ ಮತ್ತು ರಾಜ್ಯಗಳ ವಿವಿಧ ಭಾಗಗಳಲ್ಲಿ ದಿನವೂ ಉತ್ಪಾದನೆಯಾಗುವ ಆಮ್ಲಜನಕ ಪ್ರಮಾಣವನ್ನು ಮತ್ತು ಆ ಸ್ಥಾವರಗಳ ಒಟ್ಟು ಸಾಮರ್ಥ್ಯದ ಮಾಹಿತಿಯನ್ನು ಕೆಮಿಕಲ್ ಇಂಜಿನಿಯರ್ ಡಾ. ಅರುಣ್ ಪಾಟೀಲ್ ಮತ್ತು ಕೆಲವು ಸಣ್ಣ ಉದ್ಯಮಿಗಳ ಮೂಲಕ ಪಡೆದು, ನಿಖರ ಮಾಹಿತಿ ಒದಗಿಸಿರುವ ಎಚ್.ಕೆ.ಪಾಟೀಲರು, ಈ ಸ್ಥಾವರಗಳಿಂದ ಗರಿಷ್ಠ ಉತ್ಪಾದನೆ ಹೇಗೆ ಮಾಡಬಹುದು ಎಂಬುದನ್ನು ವಿಜ್ಞಾನಿಗಳು, ಇಂಜಿನಿಯರ್‌ಗಳ ಉಲ್ಲೇಖಗಳೊಂದಿಗೆ ವಿವರಿಸಿದ್ದಾರೆ.

’ಸಂಗ್ರಹಣೆ ಮತ್ತು ಸಾಗಾಣಿಕೆ ಕಷ್ಟವಾಗಿದೆ’ ಎಂಬ ಯಡಿಯೂರಪ್ಪನವರ ಅಪ್ರಬುದ್ಧ ಅಸಹಾಯಕತೆಗೂ, ಶಾಸಕ ಪಾಟೀಲ್ ಪರಿಹಾರ ಸೂಚಿಸಿದ್ದಾರೆ. ರಾಜ್ಯದಲ್ಲಿ 17 ಲಕ್ಷ ಲೀಟರ್ ದ್ರವ ಆಮ್ಲಜನಕ ಶೇಖರಿಸುವ ಸಾಮರ್ಥ್ಯವಿದೆ ಎಂಬುದನ್ನು ಸಿಎಂಗೆ ವಿವರಿಸಿದ ಅವರು, ಯಾವ ಯಾವ ಪಾಯಿಂಟ್‌ಗಳಲ್ಲಿ ಶೇಖರಣೆ ಮಾಡಬಹುದೆಂಬ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಕೋವಿಡ್ ಎರಡನೆ ಅಲೆಯ ಸುನಾಮಿ; ಸಕಾರಾತ್ಮಕವಾಗಿ ಮುನ್ನಡೆಯಬೇಕು, ಸರಕಾರಾತ್ಮಕವಾಗಿಯಲ್ಲ

ಸಾಗಾಣಿಕೆ ಸಮಸ್ಯೆ ಕುರಿತು ತಜ್ಞರೊಂದಿಗೆ ಮಾತನಾಡಿರುವ ಅವರು, ನೈಟ್ರೋಜನ್ ಟ್ಯಾಂಕರುಗಳ ವಾಲ್ವ್ ಚೇಂಜ್ ಮಾಡಿ, ಅದಕ್ಕೆ ಕಾಪರ್ (ಸತುವಿನ) ವಾಲ್ವ್ ಹಾಕಿದರೆ ಸಮಸ್ಯೆ ಬಗೆಹರಿದಂತೆ. ಇದು ಎರಡು ದಿನದ ಕೆಲಸ ಎಂದಿದ್ದಾರೆ.

ನಾನುಗೌರಿ.ಕಾಂ ಜೊತೆ ಈ ವಿಷಯವಾಗಿ ಮಾತನಾಡಿದ ಅವರು, “ನಮ್ಮ ವಾಯುಸೇನೆಯ ವಿಮಾನಗಳನ್ಮು ಯಾವುದೋ ಕಾರಣಕ್ಕೆ ಮನರಂಜನೆಗೆ ಹಾರಿಸುತ್ತದೆ ಕೇಂದ್ರ ಸರ್ಕಾರ. ಈಗ ರಾಜ್ಯ ಸರ್ಕಾರವು, ಕೇಂದ್ರ ಮತ್ತು ಮೋದಿಯವರಿಗೆ ವಾಯುದಳದ ವಿಮಾನ ಒದಗಿಸಲು ಒತ್ತಡ ಹಾಕಬೇಕು. ದುಬಾರಿ ಸೇನಾ ವಿಮಾನಗಳು ಮೇಲಿನಿಂದ ಹೂ ಚೆಲ್ಲುವುದಕ್ಕಲ್ಲ, ಜನರು ಸಾಯುತ್ತಿರುವಾಗ ಅವನ್ನು ಆಕ್ಸಿಜನ್ ಪೂರೈಕೆಗೆ ಬಳಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯ ತೋರಣಘಟ್ಟ ವಿಮಾನ ನಿಲ್ದಾಣದಿಂದ ದ್ರವ ಆಮ್ಲಜನಕದ ಟ್ಯಾಂಕರ್‌ಗಳನ್ನು ಏರ್ ಕಾರ್ಗೊದಲ್ಲಿ ಕಳಿಸಿದರೆ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಲು ಒಂದು ತಾಸೂ ಹಿಡಿಯುವುದಿಲ್ಲ. ನಂತರ ಮಾರತ್‌ಹಳ್ಳಿಯ ಸಂಗ್ರಾಹಾರ ಮತ್ತು ಐಐಎಸ್‌ಸಿಯ ಯು. ಅರ್. ರಾವ್ ಸಂಗ್ರಹಾರಕ್ಕೆ ಕಳಿಸುವುದೇನೂ ಸಮಸ್ಯೆ ಅಲ್ಲ ಎಂದರು.

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

’ಆದರೆ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದ, ಇಂತಹ ದುರಂತದ ಸಮಯದಲ್ಲೂ ಕೇಂದ್ರ ಸರ್ಕಾರದ ಮುಂದೆ ಹಕ್ಕು ಮಂಡಿಸದ ರಾಜ್ಯ ಸರ್ಕಾರ ನಿರ್ಜೀವವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ನೀವು ವಿರೋಧ ಪಕ್ಷದವರಾಗಿ ಇಂತಹ ಪಾಸಿಟಿವ್ ಸಲಹೆ ನೀಡ್ತಾ ಇದ್ದೀರಾ…ಹೈಕೋರ್ಟ್ ಕೂಡ ಕೇಂದ್ರಕ್ಕೆ ರಾಜ್ಯದ ಪಾಲಿನ ಆಕ್ಸಿಜನ್ ಒದಗಿಸಿ ಎಂದು ತರಾಟೆಗೆ ತೆಗೆದುಕೊಂಡಿದೆ.. ಆದರೆ ನಮ್ಮ 25 ಬಿಜೆಪಿ ಸಂಸದರು ಧ್ವನಿ ಎತ್ತಾನೇ ಇಲ್ವಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್ ಕೆ ಪಾಟೀಲ್, `ಈ ಬಗ್ಗೆ ಏನು ಹೇಳಬೇಕೋ ತಿಳಿಯದಾಗಿದೆ. ಅವರ (ಬಿಜೆಪಿ) ಭಾಷೆಯಲ್ಲಿ ಬಯ್ಯೋದೊಂದೇ ಬಾಕಿ ಉಳಿದಿದೆ’ ಎಂದರು.

ದಿಢೀರನೆ ಬಂದು ಕಲ್ಲು ತೂರಿ ಪರಾರಿ ಆಗಿರುವ ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಕೇಳಿದಾಗ, “ಇಂತಹ ನೀಚರನ್ನು ಇಟ್ಟುಕೊಂಡು ಕೋವಿಡ್ ನಿಯಂತ್ರಣ ಸಾಧ್ಯವೇ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅವರ ಮನವಿಯನ್ನು ಅಂದರೆ ಯಡಿಯೂರಪ್ಪನವರಿಗೆ ಅವರು ಹೇಳಿದ್ದನ್ನು ಇಲ್ಲಿ ಹಾಕಿದ್ದೇವೆ, ಓದಿ..

ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...