Homeಕರ್ನಾಟಕಬೆಂಗಳೂರು | ಶಿಕ್ಷಕನಿಂದ ಥಳಿತ, ಕಿರುಕುಳ; ದಲಿತ ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು | ಶಿಕ್ಷಕನಿಂದ ಥಳಿತ, ಕಿರುಕುಳ; ದಲಿತ ವಿದ್ಯಾರ್ಥಿ ಆತ್ಮಹತ್ಯೆ

- Advertisement -
- Advertisement -

ಬೆಂಗಳೂರಿನ ಶಾಲೆಯೊಂದರಲ್ಲಿ ಶಿಕ್ಷಕರಿಂದ ಕಿರುಕುಳಕ್ಕೊಳಗಾದ 17 ವರ್ಷದ ದಲಿತ ಬಾಲಕ ಸೆಪ್ಟೆಂಬರ್ 27 ರಂದು ಉಳ್ಳಾಲ ಉಪನಗರದಲ್ಲಿರುವ ತನ್ನ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಬಾಲಕನನ್ನು ಶ್ರೇಯಸ್‌ ಎಂದು ಗುರುತಿಸಲಾಗಿದ್ದು 10ನೇ ತರಗತಿಯಲ್ಲಿ ಕಲಿಯುತ್ತಿದ್ದರು. ಬಾಲಕ ಮನೆಯಲ್ಲಿ ಪೋಷಕರು ಇರದ ಸಮಯದಲ್ಲಿ ಕೃತ್ಯ ಎಸಗಿದ್ದಾರೆ. ನೆರೆಹೊರೆಯವರು ಅವರ ಶವವನ್ನು ಪತ್ತೆ ಹಚ್ಚಿದ್ದರು. ಮರುದಿನವೇ ಪೋಷಕರಿಗೆ ವಿದ್ಯಾರ್ಥಿ ಬರೆದಿರುವ ಆತ್ಮಹತ್ಯೆ ಪತ್ರ ಪತ್ತೆಯಾಗಿತ್ತು.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಶಿಕ್ಷಕರು ಬಾಲಕನಿಗೆ ಥಳಿಸಿ, ಜಾತಿ ನಿಂದನೆ ಮಾಡಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಕಿರುಕುಳ ನೀಡಿದ್ದಾರೆ ಎಂಬ ಕುಟುಂಬದ ಆರೋಪದ ಮೇಲೆ ಶಾಲೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಪಶ್ಚಿಮದಲ್ಲಿರುವ ಜ್ಞಾನಭಾರತಿ ಪೊಲೀಸ್ ಠಾಣೆ ಎಫ್‌ಐಆರ್ ದಾಖಲಿಸಿದೆ.

ಇದನ್ನೂ ಓದಿ: ಮಾತು ಮರೆತ ಭಾರತ-21; ಹತ್ರಾಸ್ ಫೈಲ್: ಬಿಜೆಪಿ ಆಡಳಿತದ ’ಬೇಟಿ ಬಚಾವೋ’ಗೊಂದು ಉದಾಹರಣೆ

ಸೇಂಟ್ ಪ್ಯಾಟ್ರಿಕ್ ಮೆಮೋರಿಯಲ್ ಹೈಸ್ಕೂಲ್ ವಿರುದ್ಧ ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ-2015 ರ ಸೆಕ್ಷನ್ 75 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕಿರುಕುಳದ ಬಗ್ಗೆ ಮಾತನಾಡಿದ ಶ್ರೇಯಸ್ ತಂದೆ ಮಾರ ಹನುಮಯ್ಯ,“ಒಂದು ದಿನ ಶಾಲೆಗೆ ಬರುವಂತೆ ಶಿಕ್ಷಕರು ನನ್ನನ್ನು ಕೇಳಿದರು. ನಾನು ಅಲ್ಲಿಗೆ ಹೋದಾಗ ನನ್ನ ಮಗ ಸರಿಯಾಗಿ ಓದುತ್ತಿಲ್ಲ ಎಂದು ಅವರು ದೂರಿದ್ದರು. ಇದರ ಎರಡು ದಿನಗಳ ನಂತರ, ಅವರು ನನ್ನ ಮಗನನ್ನು ಹೊಡೆದಿರುವುದನ್ನು ನಾನು ನೋಡಿದ್ದೇನೆ” ಎಂದು ಅವರು ಹೇಳಿದ್ದಾರೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.

“ಮಗನ ಬಾಯಿ ಮತ್ತು ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು. ನನ್ನ ಮಗ ಕೆಳಗೆ ಬಿದ್ದು ಗಾಯಗೊಂಡಿದ್ದಾನೆ ಎಂದು ಶಾಲೆಯವರು ಹೇಳಿದ್ದರು. ಆದರೆ ದಿಲೀಪ್ ಎಂಬ ಗಣಿತ ಶಿಕ್ಷಕ ಅವನನ್ನು ನಿಂದಿಸಿದ್ದಾನೆ ಎಂದು ನನಗೆ ತಿಳಿಯಿತು. ನನ್ನ ಮಗ 10 ನೇ ತರಗತಿಯಲ್ಲಿದ್ದು, ಅವನು ಶಾಲೆ ತೊರೆಯಲು ಇದು ಕಾರಣ ಆಗಬಾರದು ಎಂದು ನಾನು ಪೊಲೀಸರಿಗೆ ದೂರು ನೀಡಲು ಹಿಂದೇಟು ಹಾಕಿದೆ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುಪಿ: ದಲಿತ ಬಾಲಕಿಗೆ ಶಿಕ್ಷಣ ನೀಡಲು ನಿರಾಕರಿಸಿದ ಶಿಕ್ಷಕಿ

ದೌರ್ಜನ್ಯ ನಡೆದ ನಂತರ ಹನುಮಯ್ಯ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದರು. ಇನ್ನು ಮುಂದೆ ಇಂತಹ ಘಟನೆ ನಡೆಯುವುದಿಲ್ಲ ಎಂದು ಶಾಲಾ ಮಂಡಳಿ ಭರವಸೆ ಕೂಡಾ ನೀಡಿತ್ತು. ಆದರೆ ಗಣಿತ ಶಿಕ್ಷಕ ಮಾತ್ರ ಶಾಲೆಗೆ ದೂರು ನೀಡಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಕ್ಕೆ ವಿದ್ಯಾರ್ಥಿಯನ್ನು ನಿಂದಿಸಿದ್ದನು ಎಂದು ಹನುಮಯ್ಯ ಆರೋಪಿಸಿದ್ದಾರೆ.

“ಶ್ರೇಯಸ್ ಈಗ ಸ್ವಲ್ಪ ಸಮಯದಿಂದ ಒತ್ತಡ ಮತ್ತು ಅಸಮಾಧಾನದಿಂದ ಕಾಣುತ್ತಿದ್ದನು. ಆದರೆ ಅವನು 10 ನೇ ತರಗತಿಯಲ್ಲಿದ್ದಾಗಿನಿಂದ ಅವನು ತನ್ನ ಅಧ್ಯಯನ ಮತ್ತು ಪರೀಕ್ಷೆಗಳ ಬಗ್ಗೆ ಚಿಂತೆ ಮಾಡುತ್ತಿದ್ದಾನೆ ಎಂದು ನಾವು ಭಾವಿಸಿದ್ದೆವು. ಅವನು ಶಾಲೆಯಲ್ಲಿ ಇಷ್ಟು ಕಷ್ಟ ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿದಿರಲಿಲ್ಲ” ಎಂದು ಹನುಮಯ್ಯ ನೆನಪಿಸಿಕೊಂಡಿದ್ದಾರೆ.

ಹನುಮಯ್ಯ ಅವರು ತಮ್ಮ ದೂರಿನಲ್ಲಿ ಆರಂಭಿಕ ದೌರ್ಜನ್ಯವನ್ನು ಸೆರೆಹಿಡಿದಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುವಂತೆ  ಪೊಲೀಸ್ ಅಧಿಕಾರಿಗಳಿಗೆ ಕೋರಿದ್ದಾರೆ. ಆದರೆ ದೃಶ್ಯಾವಳಿಗಳನ್ನು ಪರಿಶೀಲಿಸಲು ಪೊಲೀಸರು ನಿರಾಕರಿಸಿದ್ದು, ಅದು ಎರಡು ತಿಂಗಳ ಹಿಂದಿನದ್ದಾಗಿರುವುದರಿಂದ ಅದು ಡಿಲೀಟ್ ಆಗಿದೆ ಎಂದು ಹೇಳಿದ್ದಾಗಿ ಹನುಮಯ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ: ಯಾದಗಿರಿ | ‘ತನ್ನ ಸಾವಿಗೆ ಶಿಕ್ಷಕರೇ ಕಾರಣ’; ಪತ್ರ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ದಲಿತ ವಿದ್ಯಾರ್ಥಿ

ತಮ್ಮ ಮಗನ ಮೇಲೆ ಶಿಕ್ಷಕ ಮೊದಲ ಬಾರಿಗೆ ದೌರ್ಜನ್ಯ ಎಸಗಿದಾಗಲೆ ತಾನು ತಮ್ಮನ್ನು ಸಂಪರ್ಕಿಸಬೇಕಿತ್ತು ಎಂದೂ ಪೊಲೀಸರು ಹೇಳಿದ್ದಾರೆ ಎಂದು ಹನುಮಯ್ಯ ಹೇಳಿದ್ದಾರೆ.

ಜೀವ ಅಮೂಲ್ಯವಾಗಿದೆ. ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ. ಮಾನಸಿಕ ಆರೋಗ್ಯ ಸಮಸ್ಯೆಗಳಿದ್ದರೆ ಅಥವಾ ಆತ್ಮಹತ್ಯೆ ಮಾಡಿಕೊಳ್ಳುವ ಭಾವನೆ ಬಂದರೆ ನಿಮಗೆ ಭಾವನಾತ್ಮಕ ಬೆಂಬಲವನ್ನು ನೀಡಿ ಆತ್ಮಹತ್ಯೆ ತಡೆಗಟ್ಟುವ ಸಂಸ್ಥೆಗಳ ಕೆಲವು ಸಹಾಯವಾಣಿ ಸಂಖ್ಯೆಗಳು ಇಲ್ಲಿವೆ.
ಸಹಾಯ (24-ಗಂಟೆ): 080 65000111, 080 65000222
24×7 ಸಹಾಯವಾಣಿ: 98204667260

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಇರಾನ್‌ ಮಹಿಳೆಯರ ದಿಟ್ಟ ಹೋರಾಟ: ಮೊರಾಲಿಟಿ ಪೊಲೀಸ್‌ ವ್ಯವಸ್ಥೆ ರದ್ದು

1
ಇರಾನ್‌ ದೇಶದ ಕಟ್ಟುನಿಟ್ಟಾದ ಮಹಿಳಾ ಡ್ರೆಸ್ ಕೋಡ್ ಅನ್ನು ಉಲ್ಲಂಘಿಸಿದ ಆರೋಪದ ಮೇಲೆ ಬಂಧನದ ಸಮಯದಲ್ಲಿ ಮಹ್ಸಾ ಅಮಿನಿ ಎಂಬ ಮಹಿಳೆ ಸಾವಿಗೀಡಾದ ಬಳಿಕ ಸ್ಫೋಟಿಸಿದ ಮಹಿಳಾ ಹೋರಾಟಕ್ಕೆ ಆರಂಭಿಕ ಜಯ ಸಿಕ್ಕಿದೆ....