Homeಮುಖಪುಟಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್‌ ತೇಲಿಬಿಟ್ಟ ಜನಸಂಖ್ಯೆ ಹೆಚ್ಚಳ, ಮತಾಂತರ ಕತೆಯ ವಾಸ್ತವವೇನು?

ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್‌ ತೇಲಿಬಿಟ್ಟ ಜನಸಂಖ್ಯೆ ಹೆಚ್ಚಳ, ಮತಾಂತರ ಕತೆಯ ವಾಸ್ತವವೇನು?

- Advertisement -
- Advertisement -

ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರು ವಾರ್ಷಿಕ ದಸರಾ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ, ‘ಎಲ್ಲರಿಗೂ ಸಮಾನವಾಗಿ ಅನ್ವಯಿಸುವ ಜನಸಂಖ್ಯೆ ನಿಯಂತ್ರಣ ಕಾನೂನು’ ಬಗ್ಗೆ ಪ್ರಸ್ತಾಪಿಸಿದ್ದಾರೆ. “ಧರ್ಮ ಆಧಾರಿತ ಅಸಮತೋಲನ ಮತ್ತು ಬಲವಂತದ ಮತಾಂತರ ದೇಶವನ್ನು ಒಡೆಯುತ್ತಿದೆ” ಎಂದು ವಿಷಾದಿಸಿರುವುದಾಗಿ ‘ಎನ್‌ಡಿಟಿವಿ’ ವರದಿ ಮಾಡಿದೆ.

ಧಾರ್ಮಿಕ ಸಮುದಾಯ ಆಧಾರಿತ ಅಸಮತೋಲನದ ಕಾರಣದಿಂದ ಹೊಸದಾಗಿ ಹುಟ್ಟಿಕೊಂಡ ಪೂರ್ವ ಟಿಮೋರ್, ಕೊಸೊವೊ ಮತ್ತು ದಕ್ಷಿಣ ಸುಡಾನ್ ದೇಶಗಳ ಉದಾಹರಣೆಗಳನ್ನು ಭಾಗವತ್‌ ಉಲ್ಲೇಖಿಸಿದ್ದಾರೆ.

“ಜನಸಂಖ್ಯೆಯ ನಿಯಂತ್ರಣದ ಜೊತೆಗೆ, ಧಾರ್ಮಿಕ ಆಧಾರದ ಮೇಲೆ ಜನಸಂಖ್ಯೆಯ ಸಮತೋಲನವು ಸಹ ಪ್ರಮುಖ ವಿಷಯವಾಗಿದೆ. ಅದನ್ನು ನಿರ್ಲಕ್ಷಿಸಲಾಗುವುದಿಲ್ಲ” ಎಂದು ಅವರು ಹಿಂದಿಯಲ್ಲಿ ಭಾಷಣ ಮಾಡಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜನಸಂಖ್ಯೆಗೆ ಸಂಪನ್ಮೂಲಗಳ ಅಗತ್ಯವಿದೆ ಅಥವಾ ಅದು ಹೊರೆಯಾಗುತ್ತದೆ. ಜನಸಂಖ್ಯೆಯು ಒಂದು ಆಸ್ತಿಯಾಗಿರಬಹುದು ಎಂಬ ದೃಷ್ಟಿಕೋನವಿದೆ. ಎರಡೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ನಾವು ನೀತಿಯನ್ನು ರೂಪಿಸಬೇಕಾಗಿದೆ” ಎಂದು ತಿಳಿಸಿದ್ದಾರೆ.

ಜನಸಂಖ್ಯೆಯಲ್ಲಿನ ‘ಧರ್ಮ-ಆಧಾರಿತ ಅಸಮತೋಲನ’ದ ಕುರಿತು ಪ್ರಸ್ತಾಪಿಸುತ್ತಾ, “ಜನನ ಪ್ರಮಾಣವೂ ಒಂದು ಕಾರಣವಾಗಿದೆ. ಬಲವಂತದಿಂದ ಆಮಿಷ ಅಥವಾ ದುರಾಶೆಯಿಂದ ಮತಾಂತರ ಆಗುವುದು, ನುಸುಳುಕೋರರು ಬರುವುದು ಇದಕ್ಕೆ ಕಾರಣವಾಗಿದೆ” ಎಂದಿದ್ದಾರೆ.

“ಹೆರಿಗೆ ಮತ್ತು ಜನಸಂಖ್ಯಾ ನಿಯಂತ್ರಣದ ಬಗ್ಗೆ ಆರೆಸ್ಸೆಸ್ ಪ್ರಸ್ತಾಪಿಸುವ ಯಾವುದೇ ನೀತಿಯಲ್ಲಿ ಮಹಿಳೆಯರ ಆರೋಗ್ಯವನ್ನು ಖಂಡಿತವಾಗಿ ನೆನಪಿನಲ್ಲಿಟ್ಟುಕೊಳ್ಳಲಾಗುತ್ತದೆ” ಎಂದು ಆರೆಸ್ಸೆಸ್ ಮುಖ್ಯಸ್ಥರು ಹೇಳಿದ್ದಾರೆ.

ಮೋಹನ್‌ ಭಾಗವತ್‌ ಮಾತಿನ ಹಿಂದಿನ ಮರ್ಮ ಹಾಗೂ ವಾಸ್ತವ

ಬಹುದೊಡ್ಡ ಅಲ್ಪಸಂಖ್ಯಾತ ಸಮುದಾಯವಾದ ಮುಸ್ಲಿಮರ ಮೇಲೆ ಜನಸಂಖ್ಯಾ ಹೆಚ್ಚಳದ ಆರೋಪ ಹೊರಿಸುವ ಕೆಲಸವನ್ನು ಆರ್‌ಎಸ್‌ಎಸ್‌ ಮತ್ತು ಅದರ ರಾಜಕೀಯ ಮುಖವಾದ ಬಿಜೆಪಿ ಮೊದಲಿನಿಂದಲೂ ಮಾಡುತ್ತಿವೆ. ಅದರ ಮುಂದುವರಿದ ಭಾಗವಾಗಿ ಮೋಹನ್ ಭಾಗವತ್ ಹೇಳಿಕೆ ಹೊರಬಿದ್ದಿದೆ.

ಆದರೆ ವಾಸ್ತವಗಳು ಬೇರೆಯೇ ಕತೆಯನ್ನು ಹೇಳುತ್ತವೆ. ಅಪಾಯಕಾರಿ ಜನಸಂಖ್ಯೆಯ ಹೆಚ್ಚಳದ ಪ್ರತಿಪಾದನೆ ಮತ್ತು ಹಿಂದೂ-ಮುಸ್ಲಿಂ ಜನಸಂಖ್ಯೆಯ ಬೆಳವಣಿಗೆಯಲ್ಲಿ ಇರುವ ವಾಸ್ತವ ವ್ಯತ್ಯಾಸಗಳೇನು ಎಂಬುದನ್ನು ಸಾಕ್ಷಿಗಳು ಬಯಲಿಗೆಳೆದಿವೆ.

ಇದನ್ನೂ ಓದಿರಿ: ಕೋಲ್ಕತಾ: ದುರ್ಗಾಪೂಜೆಯಲ್ಲಿ ಮಹಾತ್ಮಾ ಗಾಂಧಿಯನ್ನು ರಾಕ್ಷಸನಂತೆ ಬಿಂಬಿಸಿದ ಹಿಂದೂ ಮಹಾಸಭಾ

ಈ ಕುರಿತು ‘ದಿ ವೈರ್‌’ ಹಿಂದೆಯೇ ವರದಿ ಮಾಡಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (2019-21) ಪ್ರಕಾರ ಹಿಂದೂ  ಮತ್ತು ಮುಸ್ಲಿಂ ಫಲವತ್ತತೆಯ ನಡುವಿನ ವ್ಯತ್ಯಾಸವು ಕೇವಲ 0.42ರಷ್ಟಿದೆ ಎಂದು ಹೇಳುತ್ತದೆ. ಪ್ರತಿ ಹಿಂದೂ ಮಹಿಳೆಗೆ 1.94 ಮಕ್ಕಳು, ಪ್ರತಿ ಮುಸ್ಲಿಂ ಮಹಿಳೆಗೆ 2.36 ಮಕ್ಕಳು ಇರುವುದಾಗಿ ಸಮೀಕ್ಷೆ ಉಲ್ಲೇಖಿಸಿದೆ.

ನಾವು ಪಾಯಿಂಟ್ ಅಂದಾಜಿನ ಬದಲಿಗೆ ‘ಟ್ರೆಂಡ್’ ಅನ್ನು ಗಣನೆಗೆ ತೆಗೆದುಕೊಂಡಾಗ ನಿಜವಾದ ಚಿತ್ರಣ ಸಿಗುತ್ತದೆ. ಕಳೆದ ಎರಡು ದಶಕಗಳಲ್ಲಿ ಹಿಂದೂಗಳ ಫಲವತ್ತತೆ 30%, ಮುಸ್ಲಿಮರಲ್ಲಿ 35% ಕುಸಿದಿದೆ ಎಂದು ಕಂಡುಬಂದಿದೆ. ವಾಸ್ತವವಾಗಿ, ಕಳೆದ 20 ವರ್ಷಗಳಲ್ಲಿ ಮುಸ್ಲಿಮರಲ್ಲಿ ಜನಸಂಖ್ಯೆಯ ಬೆಳವಣಿಗೆಯಲ್ಲಿನ ಕುಸಿತದ ಪ್ರಮಾಣವು ಹಿಂದೂಗಳಿಗಿಂತ ಹೆಚ್ಚಾಗಿದೆ. 2030ರ ವೇಳೆಗೆ ಹಿಂದೂ-ಮುಸ್ಲಿಂ ಫಲವತ್ತತೆ ದರಗಳು ಸಂಪೂರ್ಣ ಒಮ್ಮುಖದ ಹಾದಿಯಲ್ಲಿರುತ್ತವೆ ಎಂಬುದನ್ನು ಸಮೀಕ್ಷೆಗಳು ಕಂಡುಕೊಂಡಿವೆ.

ಪ್ಯೂ ರಿಸರ್ಚ್ ಸೆಂಟರ್‌ನ 2021ರ ವರದಿಯು ಸಹ ಈ ಸಂಶೋಧನೆಗಳನ್ನು ಸಮರ್ಥಿಸುತ್ತದೆ. ಮುಸ್ಲಿಮರಲ್ಲಿ ಫಲವತ್ತತೆ ಪ್ರಮಾಣವು ಈಗ ಬಹುತೇಕ ಹಿಂದೂಗಳಿಗೆ ಸಮಾನವಾಗಿದೆ. 1992 ಮತ್ತು 2015ರ ನಡುವೆ, ಮುಸ್ಲಿಂ ಫಲವತ್ತತೆ ದರವು 4.4 ರಿಂದ 2.6ಕ್ಕೆ ಕುಸಿದಿದ್ದರೆ, ಹಿಂದೂಗಳಲ್ಲಿ 3.3ರಿಂದ 2.1ಕ್ಕೆ ಇಳಿದಿದೆ ಎಂದು ವರದಿ ಹೇಳಿದೆ.

ಈ ಹಿಂದೆ ‘ದಿ ವೈರ್’ ನಡೆಸಿದ ವೀಡಿಯೊ ಸಂದರ್ಶನದಲ್ಲಿ ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್.ವೈ. ಖುರೈಶಿ ಅವರು ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಅವರನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡಿದ್ದರು. “ದಿ ಪಾಪ್ಯುಲೇಶನ್ ಮಿಥ್: ಇಸ್ಲಾಂ, ಫ್ಯಾಮಿಲಿ ಪ್ಲಾನಿಂಗ್ ಮತ್ತು ಪಾಲಿಟಿಕ್ಸ್ ಇನ್ ಇಂಡಿಯಾ” ಪುಸ್ತಕವನ್ನು ನೀಡಲು ಭೇಟಿಯಾಗಿದ್ದಾಗಿ ಖುರೈಶಿ ಹೇಳುತ್ತಾರೆ. “ಮುಸ್ಲಿಮರು ಹಿಂದೂಗಳನ್ನು ಸಂಖ್ಯಾಬಲದಲ್ಲಿ ಹಿಂದಿಕ್ಕುತ್ತಾರೆ ಎಂಬುದು ಹಿಂದುತ್ವ ಗುಂಪುಗಳ ಕಡೆಯಿಂದ ಬಂದ ಶುದ್ಧ ಪ್ರೊಪಗಾಂಡ ಎಂದು ನಾನು ಆರ್‌ಎಸ್‌ಎಸ್ ಮುಖ್ಯಸ್ಥರಿಗೆ ಹೇಳಿದೆ” ಎಂದು ಖುರೇಷಿ ಹೇಳಿಕೊಳ್ಳುತ್ತಾರೆ. (‘ದಿ ವೈರ್‌’ ನಡೆಸಿದ ವಿಡಿಯೊ ಸಂದರ್ಶನದಲ್ಲಿ 8 ನಿಮಿಷ 20 ಸೆಕೆಂಡ್‌ ವೇಳೆಗೆ ಈ ಚರ್ಚೆ ನಡೆಯುವುದನ್ನು ಗಮನಿಸಬಹುದು.)

“ಇನ್ನು 1,000 ವರ್ಷಗಳಾದರೂ ಇದು (ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಾರೆಂಬುದು) ಸಂಭವಿಸುವುದಿಲ್ಲ. ಬಹುಪತ್ನಿತ್ವದ ಪ್ರಶ್ನೆಯು (ಹಿಂದೂಗಳಿಗಿಂತ ಮುಸ್ಲಿಮರು ಹೆಚ್ಚಾಗುತ್ತಿದ್ದಾರೆ ಎಂದು ವಾದಿಸಲು ಬಳಸುವ ವಾದ) ಭಾರತದಲ್ಲಿ ಬರುವುದೇ ಇಲ್ಲ. ಭಾರತದಲ್ಲಿ ಲಿಂಗಾನುಪಾತವು 1,000 ಪುರುಷರಿಗೆ 940 ಮಹಿಳೆಯರು ಎಂಬ ಲೆಕ್ಕದಲ್ಲಿದೆ. ಸಾವಿರದಲ್ಲಿ 60 ಬ್ಯಾಚುಲರ್‌ಗಳು ತಮ್ಮ ಮೊದಲ ಮದುವೆಯಾಗಲೂ ಹೆಣಗಾಡುತ್ತಿದ್ದಾರೆ ಎಂದು ನಾನು ಅವರಿಗೆ ಹೇಳಿದೆ. ಬಹುಪತ್ನಿತ್ವದ ಪ್ರಶ್ನೆ ಎಲ್ಲಿದೆ ಎಂದು ನಾನು ಕೇಳಿದೆ. ಇದಕ್ಕೆ ಅವರು ಆತ್ಮೀಯ ನಗುವಿನೊಂದಿಗೆ ಪ್ರತಿಕ್ರಿಯಿಸಿದರು. ಅರ್ಥಾತ್, ನಾನು ಏನು ಹೇಳಿದರೂ ಅದನ್ನು ಅವರು ದಾಖಲು ಮಾಡಿಕೊಂಡರು” ಎಂದು ಸಂದರ್ಶನದಲ್ಲಿ ಖುರೇಷಿ ವಿವರಿಸಿದ್ದಾರೆ.

ಜನಸಂಖ್ಯೆ ಸ್ಫೋಟದ ಭೀತಿಯು ಕೂಡ ತಾರ್ಕಿಕವಾಗಿಲ್ಲ. ದತ್ತಾಂಶಗಳು ಬೇರೆಯ ಕತೆಯನ್ನು ಹೇಳುತ್ತವೆ. ಪ್ರಧಾನಿ ನರೇಂದ್ರ ಮೋದಿ ಅವರು 2019ರ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಜನಸಂಖ್ಯಾ ಹೆಚ್ಚಳದ ಕುರಿತು ಮಾತನಾಡಿದ್ದರು. “ಜನಸಂಖ್ಯಾ ಸ್ಫೋಟದ ಬಗ್ಗೆ ನಾವು ಚಿಂತಿಸಬೇಕಾಗಿದೆ. ಇದು ಭಾರತದ ಅಭಿವೃದ್ಧಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ” ಎಂದು ಪ್ರಸ್ತಾಪಿಸಿದ್ದರು.

2019-21ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS) ಪ್ರಕಾರ, ಒಟ್ಟು ಫಲವತ್ತತೆ ದರ (ಟಿಎಫ್‌ಆರ್‌) 2016ರಲ್ಲಿ 2.2ರಿಂದ 2ಕ್ಕೆ ಇಳಿದಿದೆ. ಟಿಎಫ್‌ಆರ್‌ ಮತ್ತು ವಾರ್ಷಿಕ ಜನಸಂಖ್ಯೆಯ ಬೆಳವಣಿಗೆ ದರವನ್ನು ಜನಸಂಖ್ಯೆಯ ಬೆಳವಣಿಗೆಯನ್ನು ಪ್ರಮಾಣೀಕರಿಸಲು ವಿಶ್ವಾದ್ಯಂತ ಬಳಸಲಾಗುತ್ತದೆ. ಅಲ್ಲದೆ, ವಿಶ್ವಬ್ಯಾಂಕ್ ಅಂಕಿಅಂಶಗಳ ಪ್ರಕಾರ ಭಾರತದ ಜನಸಂಖ್ಯೆಯ ಬೆಳವಣಿಗೆ ದರವು 2001ರಲ್ಲಿ 1.73%ರಷ್ಟಿದ್ದು 2018ರಲ್ಲಿ 1.04%ಕ್ಕೆ ಕುಸಿದಿದೆ. 12 ರಾಜ್ಯಗಳಲ್ಲಿ ಜನಸಂಖ್ಯೆಯ ಬೆಳವಣಿಗೆ ದರವು 1%ಕ್ಕಿಂತ ಕಡಿಮೆಯಿತ್ತು. ಬಿಹಾರ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಹರಿಯಾಣದಂತಹ ರಾಜ್ಯಗಳು ಹೆಚ್ಚಿನ ಫಲವತ್ತತೆಯ ರಾಜ್ಯಗಳಾಗಿ ಹೊಮ್ಮಿವೆ. ಕಾಲಾನಂತರದಲ್ಲಿ ತಮ್ಮ ಬೆಳವಣಿಗೆಯ ದರದಲ್ಲಿ ಗಮನಾರ್ಹ ಕುಸಿತವನ್ನು ತೋರಿಸಿದೆ.

ಇದನ್ನೂ ಓದಿರಿ: ಮಹಿಳೆಯರಿಗೆ ಸ್ವಾತಂತ್ರ್ಯ, ಸಮಾನ ಅವಕಾಶ ನೀಡುವುದು ಅಗತ್ಯ: ಮೋಹನ್ ಭಾಗವತ್‌

ತಮ್ಮ ಭಾಷಣದಲ್ಲಿ ಭಾಗವತ್ ‘ಬಲದಿಂದ ಮತಾಂತರ’ ವಿಚಾರವನ್ನೂ ಉಲ್ಲೇಖಿಸಿದ್ದಾರೆ. ಹಿಂದುತ್ವ ಗುಂಪುಗಳು ‘ಬಲವಂತದ ಮತಾಂತರಗಳ ಹುನ್ನಾರ’ವನ್ನು ಪ್ರಸ್ತಾಪಿಸುತ್ತಿರುತ್ತವೆ. ವಿಶೇಷವಾಗಿ ಕ್ರಿಶ್ಚಿಯನ್ ಧರ್ಮವು ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ ಎಂದು ವಾದಿಸುತ್ತಾರೆ. ಈ ಹಿಂದೆ ‘ದಿ ವೈರ್’ ನಡೆಸಿದ ವರದಿಯ ಪ್ರಕಾರ, “ಹಿಂದುತ್ವ ಗುಂಪುಗಳು ಈ ಪ್ರತಿಪಾದನೆಗೂ ಯಾವುದೇ ಪುರಾವೆ ಇಲ್ಲ.”

ಜನಗಣತಿಯಿಂದ ಲಭ್ಯವಿರುವ ಮಾಹಿತಿಯನ್ನು ಅವಲೋಕಿಸಿದರೆ ದೇಶದ ಜನಸಂಖ್ಯೆಯಲ್ಲಿ ಕ್ರಿಶ್ಚಿಯನ್ ಸಮುದಾಯದ ಪ್ರಮಾಣ ಸ್ಥಿರವಾಗಿದೆ ಅಥವಾ 1971ರಿಂದ ಇಳಿಮುಖವಾಗಿದೆ. 1971ರ ಜನಗಣತಿಯು ಭಾರತದ ಜನಸಂಖ್ಯೆಯಲ್ಲಿ 2.6%ರಷ್ಟು ಕ್ರಿಶ್ಚಿಯನ್ನರಿದ್ದಾರೆಂದು ಅಂದಾಜಿಸಿದೆ. 2001ರ ಹೊತ್ತಿಗೆ, ಈ ಅಂಕಿ ಅಂಶವು 2.3% ಕ್ಕೆ ಇಳಿಯಿತು. 2011ರ ಜನಗಣತಿಯ ಅಂಕಿಅಂಶಗಳ ಧಾರ್ಮಿಕ ಸಂಗತಿಗಳು ಎಂದಿಗೂ ಬಿಡುಗಡೆಯಾಗಿಲ್ಲ. ಸೋರಿಕೆಯಾದ ಮಾಹಿತಿಯ ಪ್ರಕಾರ ಸಮುದಾಯದ ಪ್ರಮಾಣದಲ್ಲಿ ಮತ್ತಷ್ಟು ಕುಸಿತ ಕಂಡುಬಂದಿದೆ.

ಧಾರ್ಮಿಕ ಮತಾಂತರದ ವಿವಾದಾತ್ಮಕ ವಿಷಯದ ಕುರಿತು ಜೂನ್ 2021ರಲ್ಲಿ ಪ್ಯೂ ಸಂಶೋಧನಾ ವರದಿಯು ಮತ್ತಷ್ಟು ಬೆಳಕು ಚೆಲ್ಲಿತ್ತು. ಭಾರತದಲ್ಲಿ ಯಾರಾದರೂ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಬದಲಾಯಿಸುವುದು ‘ಅಪರೂಪ’ ಎಂದು ವರದಿ ಗಮನ ಸೆಳೆದಿತ್ತು.

ಕೃಪೆ: ದಿ ವೈರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...

Lazarus To World Leaks : ಆತಂಕ ಸೃಷ್ಟಿಸಿದ ಕೂಡಂಕುಳಂ ಸೈಬರ್ ದಾಳಿಗಳು

ಭಾರತದ ಅತಿ ದೊಡ್ಡ ಪರಮಾಣು ವಿದ್ಯುತ್ ಕೇಂದ್ರವಾದ ತಮಿಳುನಾಡಿನ  ತಿರುನೆಲ್ವೇಲಿಯ ಕೂಡಂಕುಳಂ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಎರಡು ಬಾರಿ ಪ್ರಮುಖ ಸೈಬರ್ ಭದ್ರತಾ ಆತಂಕಗಳಿಗೆ ಕೇಂದ್ರ ಬಿಂದುವಾಗಿದೆ. 2019ರ ಮೊದಲ ಘಟನೆಯು...

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ: ಪ್ರಶ್ನೆಗಳನ್ನು ಖರೀದಿಸಲು 5 ಲಕ್ಷ ರೂ. ಪಾವತಿಸಿದ್ದ ಲಾತೂರ್ ಕೋಚಿಂಗ್ ಮಾಲೀಕ: ನ್ಯಾಯಾಲಯಕ್ಕೆ ಸಿಬಿಐ ಮಾಹಿತಿ

ದೇಶಾದ್ಯಂತ ಕೋಟ್ಯಂತರ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲಿಗೆ ತಳ್ಳಿದ ನೀಟ್ (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣದಲ್ಲಿ ದಿನಕ್ಕೊಂದು ಆಘಾತಕಾರಿ ಸತ್ಯಗಳು ಹೊರಬರುತ್ತಿದ್ದು, ಇಡೀ ಶಿಕ್ಷಣ ವ್ಯವಸ್ಥೆಯನ್ನು ಜರ್ಜರಿತಗೊಳಿಸಿರುವ ಈ ದಂಧೆಯ ಆಳ ಎಷ್ಟು...

ನಾನು ಸತ್ತರೂ ಪರ್ವಾಗಿಲ್ಲ, ಉಪವಾಸ ಹಿಂಪಡೆಯಲ್ಲ: ಜುಲೈ 20ರ ಸಂಸತ್ ಚಲೋಗೆ ವಾಂಗ್‌ಚುಕ್ ಕರೆ

ದೇಶದ ಶಿಕ್ಷಣ ವ್ಯವಸ್ಥೆಯಲ್ಲಿನ ಸರಣಿ ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಹಗರಣದ ವಿರುದ್ಧ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ತಕ್ಷಣವೇ...

ಉತ್ತರ ಪ್ರದೇಶ : ಮೊಹಮ್ಮದ್ ಅಲಿ ಜೌಹರ್ ವಿವಿಯ 38 ಕಟ್ಟಡಗಳನ್ನು ಕೆಡವಲು ಮುಂದಾದ ಸರ್ಕಾರ!

ಸಮಾಜವಾದಿ ಪಕ್ಷದ (ಎಸ್‌ಪಿ) ಮುಖಂಡ ಆಝಂ ಖಾನ್ ಅವರಿಗೆ ಸೇರಿದ ಮೊಹಮ್ಮದ್ ಅಲಿ ಜೌಹರ್ ವಿಶ್ವವಿದ್ಯಾಲಯದ 38 ಕಟ್ಟಡಗಳನ್ನು ಕೆಡವಲು ಉತ್ತರ ಪ್ರದೇಶದ ರಾಂಪುರ ನಗರಾಭಿವೃದ್ಧಿ ಪ್ರಾಧಿಕಾರ (ಆರ್‌ಡಿಎ) ಆದೇಶಿಸಿದೆ ಎಂದು ಬುಧವಾರ...