Homeದಲಿತ್ ಫೈಲ್ಸ್ಯುಪಿ: ದಲಿತ ಬಾಲಕಿಗೆ ಶಿಕ್ಷಣ ನೀಡಲು ನಿರಾಕರಿಸಿದ ಶಿಕ್ಷಕಿ

ಯುಪಿ: ದಲಿತ ಬಾಲಕಿಗೆ ಶಿಕ್ಷಣ ನೀಡಲು ನಿರಾಕರಿಸಿದ ಶಿಕ್ಷಕಿ

- Advertisement -
- Advertisement -

ದಲಿತ ಬಾಲಕಿಗೆ ಶಿಕ್ಷಣ ನೀಡಲು ಶಿಕ್ಷಕಿಯೇ ನಿರಾಕರಿಸಿರುವ ಘಟನೆ ಉತ್ತರ ಪ್ರದೇಶದ ಗೋಂಡಾ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ದಲಿತ (ಪರಿಶಿಷ್ಟ ಜಾತಿ) ಬಾಲಕಿ ಸೋನಿಯಾ ಈ ಆರೋಪ ಮಾಡಿದ್ದು, “ನನ್ನ ಶಿಕ್ಷಕಿ ಪೂಜಾ ಸಿಂಗ್ ನನಗೆ ಕಲಿಸಲು ನಿರಾಕರಿಸುತ್ತಾರೆ” ಎಂದು ತಿಳಿಸಿದ್ದಾರೆ.

ಶಾಲೆಗೆ ಹೋದಾಗಲೆಲ್ಲಾ ಶಿಕ್ಷಕಿ ಪೂಜಾ ಸಿಂಗ್ ನನ್ನನ್ನು ಶಾಲೆಯಿಂದ ಹೊರಹಾಕುತ್ತಿದ್ದಾರೆ. ಇದು ಜುಲೈನಿಂದಲೂ ನಡೆಯುತ್ತಿದೆ. ಯಾವುದೇ ಚಮ್ಮಾರ್‌ ಅಥವಾ ಇತರೆ ಕೆಳಜಾತಿಯವರಿಗೆ ಪಾಠ ಮಾಡುವುದಿಲ್ಲ ಎಂದು ಪೂಜಾ ಸಿಂಗ್ ಹೇಳುತ್ತಿರುವುದಾಗಿ ದೂರಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬಾಲಕಿ ಸೋನಿಯಾ ಮಾತನಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದೇ ವೇಳೆ ಸೋನಿಯಾ ಅವರ ತಂದೆ ಭಗವಾನ್ ಪ್ರಸಾದ್ ಅವರ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

“ಎಷ್ಟೋ ಬಾರಿ ಶಾಲೆಗೆ ಹೋಗಿದ್ದರೂ ಶಿಕ್ಷಕಿ ಪೂಜಾ ಸಿಂಗ್ ನಮ್ಮ ಮಾತನ್ನು ಕೇಳುತ್ತಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ, ನಿಮ್ಮ ಮಗಳನ್ನು ತರಗತಿಯಲ್ಲಿ ಕುಳಿತುಕೊಳ್ಳಲು ನಾನು ಬಿಡುವುದಿಲ್ಲ” ಎಂದು ಸಂತ್ರಸ್ತ ಬಾಲಕಿಯ ತಂದೆ ಹೇಳಿದ್ದಾರೆ ಎಂದು ‘ದಲಿತ್‌ ಟೈಮ್ಸ್‌’ ವರದಿ ಮಾಡಿದೆ.

ಈ ಸಂಬಂಧ ಮೂಲ ಶಿಕ್ಷಣಾಧಿಕಾರಿಗೆ ಪತ್ರವನ್ನೂ ಬರೆಯಲಾಗಿದೆ. ಸಂತ್ರಸ್ತ ಪೋಷಕರು ಈ ಕುರಿತು ಪ್ರತಿಕ್ರಿಯಿಸಿ, “ನಿಮ್ಮ ಮಗಳೊಂದಿಗೆ ಶಾಲೆಗೆ ಹೋಗಿ ಎಂದು ಅಧಿಕಾರಿ ಹೇಳಿದ್ದರು. ಪೂಜಾ ಸಿಂಗ್ ಅಧಿಕಾರಿಗಳ ಜೊತೆ ಮಾತನಾಡಲಿಲ್ಲ” ಎಂದಿದ್ದಾರೆ.

“ದಲಿತ ಪೋಷಕರಾದ ಭಗವಾನ್ ಪ್ರಸಾದ್ ಮತ್ತು ಗಿಯಾನಾ ದೇವಿ ಅವರಿಗೂ ಜಾತಿ ನಿಂದನೆ ಮಾಡಿ ಪೂಜಾ ಸಿಂಗ್‌ ಶಾಲೆಯಿಂದ ಹೊರಹಾಕಿದ್ದಾರೆ” ಎಂದು ‘ದಲಿತ್‌ ಟೈಮ್ಸ್’ ವರದಿ ಮಾಡಿದೆ.

ನಂತರದಲ್ಲಿ ಅಧಿಕಾರಿಯು ಶಿಕ್ಷಕಿಗೆ ನೋಟೀಸ್‌ ನೀಡಿದ್ದಾರೆ. ತನಿಖೆಗಾಗಿ ಅಧಿಕಾರಿಗಳ ತಂಡವನ್ನೂ ರಚಿಸಲಾಗಿದೆ.

ಆರೋಪಗಳನ್ನು ನಿರಾಕರಿಸಿರುವ ಶಿಕ್ಷಕಿ ಪೂಜಾ, “ತನ್ನ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುತ್ತಿದ್ದೇನೆ. ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳು” ಎಂದು ವಾದಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷವು ಟ್ವೀಟ್ ಮಾಡಿದೆ. ಮಾಧ್ಯಮವೊಂದು ಪ್ರಸಾರ ಮಾಡಿದ ಸುದ್ದಿಯ ಫೋಟೋವನ್ನು ಪೋಸ್ಟ್ ಮಾಡಲಾಗಿದ್ದು, “ಯೋಗಿಜೀ, ನಿಮಗೆ ಮದರಸಾಗಳ ಸಮೀಕ್ಷೆಯಲ್ಲಿ ಸಮಯ ಸಿಕ್ಕಿದ್ದರೆ, ಜಾತಿ ದಬ್ಬಾಳಿಕೆಯ ಈ ಅನಿಷ್ಟ ಪದ್ಧತಿಯ ಬಗ್ಗೆಯೂ ಗಮನ ಕೊಡಿ” ಎಂದು ಆಗ್ರಹಿಸಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಈ ಮನುವಾದಿ ಶಿಕ್ಷಕಿಯ ವಿರುದ್ಧ ಕಟಿಣ ಕಾನೂನು ಕ್ರಮ ಜರುಗಿಸಬೇಕು.

LEAVE A REPLY

Please enter your comment!
Please enter your name here

- Advertisment -

Must Read

ಮತದಾರರ ಹೆಸರು ಕೈಬಿಟ್ಟ ಹಗರಣ; ಬಿಜೆಪಿ ಪಕ್ಷದ ಕೈವಾಡದ ಆರೋಪ

0
ಭಾರತದ ಪ್ರಜಾಪ್ರಭುತ್ವದಲ್ಲಿ ಗ್ರಾಮ ಪಂಚಾಯ್ತಿಯಿಂದ ಹಿಡಿದು ಸಂಸತ್‌ವರೆಗೆ ಹಲವು ಹಂತಗಳ ಚುನಾವಣೆಗಳಲ್ಲಿ ಮತ ಚಲಾಯಿಸುವ ಮೂಲಕ ಜನಪ್ರತಿನಿಧಿಗಳನ್ನು ಮತದಾರರು ಆರಿಸುವುದಲ್ಲದೆ, ಆಳುವ ಸರ್ಕಾರಗಳನ್ನು ನಿರ್ಧರಿಸುತ್ತಾರೆ. ಈ ಚುನಾವಣಾ ವ್ಯವಸ್ಥೆಯು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕಾದದ್ದು...