Homeಮುಖಪುಟಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

- Advertisement -
- Advertisement -

ದೇಶದಲ್ಲಿ ಕೊರೊನಾ ಎರಡನೆ ಅಲೆ ತೀವ್ರವಾಗಿ ಹರಡುತ್ತಿದೆ. ಬಿಜೆಪಿ ‘ಐಟಿ ಸೆಲ್‌’ ಅವುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದೆ. ಈ ನಡುವೆ ಬಂಗಾಳದಲ್ಲಿ ಚುನಾವಣೋತ್ತರ ಗಲಭೆ ನಡೆದಿದ್ದು, ಬಿಜೆಪಿ ಐಟಿ ಸೆಲ್ ಹಳೆಯ ಫೋಟೋಗಳನ್ನು ಬಳಸಿಕೊಂಡು ಬಂಗಾಳ ಗಲಭೆಯ ಚಿತ್ರಗಳು ಎಂದು ಸುಳ್ಳು ಹರಡುತ್ತಾ ಜನರ ದಾರಿ ತಪ್ಪಿಸುತ್ತಿದೆ. ಬಿಜೆಪಿಯು ಬೃಹತ್‌ ಐಟಿ ಸೆಲ್‌ ನೆಟ್ವರ್ಕ್ ಹೊಂದಿದೆ.

ಬಿಜೆಪಿ ಐಟಿ ಸೆಲ್‌ನ ಖಾತೆಯಾದ ‘ವಿನಿತಾ ಹಿಂದೂಸ್ತಾನಿ’ ಎಂಬ ಖಾತೆಯು ಬೆಂಬಲಿಗರನ್ನು ಸೆಳೆಯಲು ‘ಇನ್ನೋಸೆಂಟ್‌ & ಕ್ಯೂಟ್‌ ಪಾಕಿಸ್ತಾನಿ ಗರ್ಲ್ಸ್’ ಎಂಬ ಫೇಸ್‌ಬುಕ್ ಪೇಜ್‌ನಲ್ಲಿ ಅಪ್ಲೋಡ್‌ ಮಾಡಲಾಗಿದ್ದ ಯುವತಿಯ ಫೋಟೋವನ್ನು ಬಳಸಿಕೊಂಡಿದ್ದು ಪತ್ತೆ ಹಚ್ಚಲಾಗಿದೆ. ಇದೀಗ ಈ ಖಾತೆಯನ್ನು ಡಿಲಿಟ್ ಮಾಡಲಾಗಿದೆ.

ಇದನ್ನೂ ಓದಿ: ಬೆಡ್‌ಬ್ಲಾಕ್‌ ದಂಧೆಯಲ್ಲಿ ಬಿಜೆಪಿ ಶಾಸಕ ಭಾಗಿ; ಸಂಬಂಧವಿಲ್ಲದ 17 ಸಿಬ್ಬಂದಿಗಳು `ಮುಸ್ಲಿಂ’ ಎಂಬ ಕಾರಣಕ್ಕೆ ವಜಾ

‘ವಿನಿತಾ ಹಿಂದೂಸ್ತಾನಿ’ ಖಾತೆಯೂ ಟ್ವಿಟರ್‌ನಲ್ಲಿ ಸುಮಾರು 21 ಸಾವಿರಕ್ಕೂ ಅಧಿಕ ಫಾಲೋವರ್‌‌ಗಳನ್ನು ಹೊಂದಿತ್ತು. ಇದರ ಬಯೋದಲ್ಲಿ, ಬಿಹಾರಿ ಮತ್ತು ಭಾರತೀಯ ಆಗಿದ್ದಕ್ಕೆ ಹೆಮ್ಮ, ಟೀಚರ್‌, ಕೇಸರಿ ಪ್ರೀತಿ, ಬಿಜೆಪಿ ಮತ್ತು ಆರೆಸ್ಸೆಸ್ ಫಾಲೋವರ್‌, ಹೆಮ್ಮೆಯ ಹಿಂದೂ ಎಂದು ಬರೆಯಲಾಗಿತ್ತು.

ಈ ಖಾತೆಯು ಬಿಜೆಪಿ ಐಟಿ ಸೆಲ್‌ನ ಖಾತೆಯಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ವೆಬ್‌ಸೈಟ್‌ಗೆ ಲಿಂಕ್ ಆಗಿತ್ತು. ಟ್ವಿಟರ್‌ನಲ್ಲಿ ಸಾಮಾನ್ಯವಾಗಿ ಈ ರೀತಿಯ ಖಾತೆಗಳು ಬಿಜೆಪಿ ಸಂಬಂಧಿತ ಸುದ್ದಿಗಳನ್ನು ಅಥವಾ ಸುಳ್ಳು ಸುದ್ದಿಗಳನ್ನು ಹರಡುವಲ್ಲಿ ತೊಡಗಿಕೊಂಡಿದೆ. ಇದೀಗ ಈ ಖಾತೆಯನ್ನು ಡಿಲೀಟ್ ಮಾಡಲಾಗಿದ್ದು ಅದೇ ಚಿತ್ರವನ್ನು ಬಳಸಿಕೊಂಡು ‘ವಿನಿತಾ’ ಹೆಸರಲ್ಲಿ ಮತ್ತೆ ಎರಡು ಖಾತೆಗಳು ಟ್ವಿಟರ್‌ನಲ್ಲಿ ಸಕ್ರೀಯವಾಗಿದೆ. ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಇದನ್ನೂ ಓದಿ: ಬೆಂಗಳೂರು ‘ಬೆಡ್‌ ಬ್ಲಾಕ್’ ಹಗರಣ; ವಾಸ್ತವ ಏನು? ಹೊಣೆಗಾರರು ಯಾರು?

ಈ ಖಾತೆಗಳಲ್ಲಿನ ಫ್ರೋಫೈಲ್‌ ಚಿತ್ರವನ್ನು ‘ಇನ್ನೋಸೆಂಟ್‌ & ಕ್ಯೂಟ್‌ ಪಾಕಿಸ್ತಾನಿ ಗರ್ಲ್ಸ್’ ಎಂಬ ಹೆಸರಿನ ಫೇಸ್‌ಬುಕ್ ಫೇಜ್‌ನಿಂದ ಪಡೆಯಲಾಗಿದೆ. ಈ ಚಿತ್ರವನ್ನು ಎಪ್ರಿಲ್‌ 12 2014 ರಂದು ಪೇಜ್‌ಗೆ ಅಪ್ಲೋಡ್ ಮಾಡಲಾತ್ತು·

ಈ ಬಗ್ಗೆ ಆಲ್ಟ್‌ನ್ಯೂಸ್ ಸಂಸ್ಥಾಪಕ ಮೊಹಮ್ಮದ್ ಝುಬೇರ್‌, “ಕ್ಯೂಟ್‌ ‘ಹಿಂದೂಸ್ತಾನಿ’ ಹುಡುಗ @ vinita4india ಮುಗ್ಧ ಬಿಜೆಪಿ ಬೆಂಬಲಿಗರನ್ನು ಆಕರ್ಷಿಸಲು ‘ಇನ್ನೋಸೆಂಟ್‌ & ಕ್ಯೂಟ್‌ ಪಾಕಿಸ್ತಾನಿ ಗರ್ಲ್ಸ್’ ಪೇಜ್‌ನಿಂದ ಚಿತ್ರವನ್ನು ಎತ್ತುತ್ತಿದ್ದಾನೆ” ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ‘ಬೆಡ್‌ ಬ್ಲಾಕ್‌’ ವಿವಾದ: ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬರೆದ ಭಾವನಾತ್ಮಕ ಪತ್ರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...