ಬೆಡ್‌ಬ್ಲಾಕ್‌ ದಂಧೆಯಲ್ಲಿ ಬಿಜೆಪಿ ಶಾಸಕ ಭಾಗಿ; ಸಂಬಂಧವಿಲ್ಲದ 17 ಸಿಬ್ಬಂದಿಗಳು `ಮುಸ್ಲಿಂ' ಎಂಬ ಕಾರಣಕ್ಕೆ ವಜಾ!

ಮಂಗಳವಾರದಂದು ಬೆಳಕಿಗೆ ಬಂದಿದ್ದ ‘ಬೆಡ್‌ ಬ್ಲಾಕ್‌’ ಹಗರಣ ಇದೀಗ ಬೇರೆಯೆ ತಿರುವು ಪಡೆದುಕೊಂಡಿದ್ದು, ಹಗರಣ ಬಯಲು ಮಾಡಲು ಬಂದಿದ್ದ ಸಂಸದ ತೇಜಸ್ವಿ ಸೂರ್ಯ ಅವರ ಜೊತೆಯಲ್ಲೇ ಇದ್ದ ಬೊಮ್ಮನಹಳ್ಳಿ ಶಾಸಕ ಸತೀಶ್‌ ರೆಡ್ಡಿ ಅವರೇ ಈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ‘ವಿಜಯ ಕರ್ನಾಟಕ’ ಪತ್ರಿಕೆ ವರದಿ ಮಾಡಿದೆ. ಜೊತೆಗೆ ವಾರ್‌ರೂಂನಲ್ಲಿದ್ದ 17 ಸಿಬ್ಬಂದಿಯನ್ನು ‘ಮುಸ್ಲಿಂ’ ಎಂಬ ಕಾರಣಕ್ಕೆ ವಜಾಗೊಳಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ಬೆಡ್ ಬ್ಲಾಕ್‌ ಹಗರಣ ನಡೆಯುತ್ತಿದೆ ಎಂದು ಸಂಸದ ತೇಜಸ್ವಿ ಜೊತೆಗೆ ಶಾಸಕ ಸತೀಶ್‌, ಎಲ್‌.ಎ.ರವಿ, ಸುಬ್ರಮಣ್ಯ ಹಾಗೂ ಉದಯ್ ಗರುಡಾಚಾರ್‌ ಅವರ ತಂಡದೊಡನೆ ಬಿಬಿಎಂಪಿ ದಕ್ಷಿಣ ವಲಯದ ವಾರ್‌ ರೂಂಗೆ ದಾಳಿ ಮಾಡಿದ್ದರು. ಈ ವಾರ್‌ ರೂಂನಲ್ಲಿ ಒಟ್ಟು 205 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಗರಣದಲ್ಲಿ ಈ ಸಿಬ್ಬಂದಿಗಳ ಪಾಲಿಲ್ಲದಿದ್ದರೂ 17 ಮುಸ್ಲಿಂ ಸಿಬ್ಬಂದಿಗಳ ಹೆಸರನ್ನು ಓದಿ, ಇಡೀ ಹಗರಣದಲ್ಲಿ ಇವರ ಪಾಲಿದೆ ಎಂಬಂತೆ ಬಿಂಬಿಸಿದ್ದರು.

ಇದನ್ನೂ ಓದಿ: ಗುಜರಾತ್ ನಕಲಿ ರೆಮ್ಡೆಸಿವಿರ್ ದಂಧೆ: ಬಂಧಿತರಲ್ಲಿ ಇಬ್ಬರು ಮುಸ್ಲಿಮರಷ್ಟೇ ಅಲ್ಲ, 5 ಹಿಂದೂಗಳೂ ಇದ್ದಾರೆ!

ಇದು ಕೊರೊನಾ ನಿರ್ವಹಣೆಯಲ್ಲಿ ತನ್ನ ವೈಫಲ್ಯವನ್ನು ಮುಚ್ಚಿಡಲು ಬೇಕಾಗಿ ಕೊಮುರಾಜಕಾರಣವನ್ನು ಮುನ್ನಲೆಗೆ ತಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪವಾಗಿತ್ತು. ಸಿದ್ದರಾಮಯ್ಯ ಅವರು ಕೂಡಾ, “ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ” ತೀಕ್ಷ್ಣವಾಗಿ ಟೀಕೆ ವ್ಯಕ್ತಪಡಿಸಿದ್ದರು.

ಬಿಜೆಪಿ ಶಾಸಕ ಸತೀಶ್‌ ರೆಡ್ಡಿ ಅವರ ಬೆಂಬಲಿಗರು ವಾರ್‌ರೂಂಗೆ ಅನಧೀಕೃತವಾಗಿ ಪ್ರವೇಶಿಸಿ, ಬೆಡ್‌ಗಳನ್ನು ಬ್ಲಾಕ್‌ ಮಾಡಿಸಿ ತಮಗೆ ಬೇಕಾದವರಿಗೆ ಬೇಡ್‌‌ಬುಕ್ ಮಾಡಿಸುತ್ತಿದ್ದರು ಎಂದು ವಿಜಯ ಕರ್ನಾಟಕ ವರದಿಯಲ್ಲಿ ಹೇಳಿದ. ವಾರ್‌ರೂಂನಲ್ಲಿ ಅನಧೀಕೃತವಾಗಿದ್ದು ಅಧಿಕಾರ ಚಲಾಯಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಐಎಎಸ್ ಅಧಿಕಾರಿಯೊಬ್ಬರು ಅವರನ್ನು ಹೊರಗೆ ಹಾಕಿದ್ದರು. ಇದಕ್ಕೆ ಶಾಸಕ ಸತೀಶ್ ರೆಡ್ಡಿ ತಮ್ಮ ಕಾರ್ಯಕರ್ತರೊಂದಿಗೆ ತೆರಳಿ ಪ್ರತಿಭಟನೆ ಕೂಡಾ ಮಾಡಿದ್ದರು. ಈ ಘಟನೆ ವಿಜಯ ಕರ್ನಾಟಕ ಆರೋಪಕ್ಕೆ ಮತ್ತಷ್ಟು ಆಧಾರ ನೀಡಿದಂತಾಗುತ್ತದೆ.

ಈ ಬಗ್ಗೆ ಪ್ರತಿಕ್ರಿಯೆಗೆ ಸಂಸದ ತೇಜಸ್ವಿ ಸೂರ್ಯ ಅವರಿಗೆ ನಾನುಗೌರಿ.ಕಾಂ ಕರೆ ಮಾಡಿದೆ. ಆದರೆ ಅವರು ಕರೆಗೆ ಉತ್ತರಿಸಿಲ್ಲ.

ವಾಸ್ತವದಲ್ಲಿ ಬೆಡ್‌ಬ್ಲಾಕಿಂಗ್ ದಂಧೆಯ ಕುರಿತು ಇ ಮೊದಲೆ ಸುಳಿವು ಪಡೆದಿದ್ದ ವಂದೇ ಭಾರತಂ ಎಂಬ ತಂಡವೊಂದು ಡಿಸಿಎಂ ಡಾ. ಅಶ್ವತ್ಥನಾರಾಯಣ ಅವರಿಗೆ ಮಾಹಿತಿ ನೀಡಿತ್ತು. ಇದನ್ನು ಪರಿಗಣಿಸಿದ ಅವರು ದಿನಗಳ ಹಿಂದೆ ವಾರ್‌ ರೂಂ, ಕಂಟ್ರೋಲ್ ರೂಂ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಬೆಡ್‌ಬ್ಲಾಕ್‌ ಹಗರಣದ ಬಗ್ಗೆ ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ನಡೆಸುವುದಕ್ಕಿಂತ ಮುಂಚೆಯೆ ಹಗರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: ವಾರಣಾಸಿ, ಅಯೋಧ್ಯ, ಮಥುರಾ ಪಂಚಾಯತ್‌ ಚುನಾವಣೆ: ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಮುಖಭಂಗ!

ಸಂಸದ ತೇಜಸ್ವಿ ಸೂರ್ಯ ಅವರು ಆರೆಸ್ಸೆಸ್ ನಾಯಕ ಬಿ.ಎಲ್. ಸಂತೋಷ್‌ ಬಣದಲ್ಲಿ ಗುರುತಿಸಿಕೊಂಡಿದ್ದು, ಯಡಿಯೂರಪ್ಪ ಅವರ ಮೇಲೆ ಅಸಮಾಧಾನವಿದೆ. ಈ ಬಣದಲ್ಲಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌, ಸಿ.ಟಿ. ರವಿ ಕೂಡಾ ಸೇರಿದ್ದಾರೆ. ಇತ್ತೀಚಿನಿಂದ ಇವರುಗಳು ರಾಜ್ಯಸರ್ಕಾರದ ವಿರುದ್ದ ಟೀಕೆಯನ್ನು ಬಹಿರಂಗವಾಗಿ ಮಾಡುತ್ತಿದ್ದಾರೆ. ಬೆಡ್‌ ಬ್ಲಾಕ್‌ ಹಗರಣ ವಿಚಾರದಲ್ಲಿ ತಮ್ಮವರ ಅಕ್ರಮ ಬಯಲಿಗೆ ಬರದಂತೆ ಮಾಡುವ ಸಲುವಾಗಿ ಪ್ರಕರಣಕ್ಕೆ ಕೋಮುಬಣ್ಣ ಹಚ್ಚಲು ಸಂಸದರು ಪ್ರಯತ್ನಿಸಿದ್ದಾರೆ ಎಂಬ ಸಂಶಯ ಕಾಡುತ್ತಿದೆ. ಅದಕ್ಕಾಗಿಯೆ ಹಗರಣದಲ್ಲಿ ಭಾಗಿಯಾಗಿರುವ ಸತೀಶ್ ರೆಡ್ಡಿ ಅವರೊಂದಿಗೆ ತಾವೇ ವಾರ್‌ರೂಂಗೆ ಭೇಟಿ ನೀಡಿ, ವಾಡಿಕೆಯಂತೆ ಸಮಸ್ಯೆಗೆ ಕಾರಣ ಮುಸ್ಲಿಮರು ಎಂದು ಬಿಂಬಿಸುವುದರ ಜೊತೆಗೆ ಯಡಿಯೂರಪ್ಪ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

ತೇಜಸ್ವಿ ಸೂರ್ಯ ಒಟ್ಟು 205 ಸಿಬ್ಬಂದಿಯಲ್ಲಿ ಕೇವಲ 17 ಮುಸ್ಲಿಮರ ಹೆಸರನ್ನು ಕ್ಯಾಮರಾ ಮುಂದೆ ಹೇಳಿದ್ದಾರೆ. ಆದರೆ ಈ ಲಿಸ್ಟಲ್ಲಿ ಇರುವ ಸಿಬ್ಬಂದಿಯೊಬ್ಬರು “ನಮಗೂ ಹಗರಣಕ್ಕೂ ಯಾವುದೆ ಸಂಬಂಧವಿಲ್ಲ. ವಾಸ್ತವದಲ್ಲಿ ಬೆಡ್‌ಬುಕಿಂಗ್  ಮಾಡುವ ಅಧಿಕಾರವೆ ನಮಗೆ ಇಲ್ಲವೆ ಇಲ್ಲ. ಘಟನೆಗೆ ಕೋಮುಬಣ್ಣ ಹಚ್ಚಲು ಅವರು ಈ ರೀತಿಯಾಗಿ ಮಾಡಿದ್ದಾರೆ” ಎಂದು ನಾನುಗೌರಿ.ಕಾಂ ಗೆ ತಿಳಿಸಿದ್ದಾರೆ.

ತೇಜಸ್ವಿ ಸೂರ್ಯ ಅಲ್ಲಿ ಹೆಸರು ಹೇಳುತ್ತದ್ದಂತೆ ಬಿಜೆಪಿಯ ಐಟಿ ಸೆಲ್‌ ಕೂಡಾ ಪ್ರವೃತ್ತರಾಗಿದ್ದು, ಸ್ವತಃ ಬಿಜೆಪಿಯ ಅಧೀಕೃತ ಟ್ವಿಟರ್‌ ಖಾತೆಯ ಮೂಲಕ ಸಮಸ್ಯೆಗೆ ಮುಸ್ಲಿಮರೇ ಕಾರಣ ಎಂಬಂತೆ ಬಿಂಬಿಸಲು ಸರಣಿಯಾಗಿ ಟ್ವೀಟ್ ಮಾಡಲು ಪ್ರಾರಂಭಿಸಿತ್ತು. ಬಿಜೆಪಿ ನೇರವಾಗಿ ಈ ಮುಸ್ಲಿಮರನ್ನು ‘ಭಯೋತ್ಪಾದಕರು’ ಎಂದು ಹೇಳಿಕೊಂಡಿತ್ತು.

ಇದನ್ನೂ ಓದಿ: ‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’

ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ವಿಜಯ ಕರ್ನಾಟಕ ಆರೋಪವನ್ನು ಶಾಸಕ ಸತೀಶ್ ರೆಡ್ಡಿ ನಿರಾಕರಿಸಿದ್ದು, ಬೆಡ್‌ ಬ್ಲಾಕ್‌ ಹರಗರಣದಲ್ಲಿ ತನ್ನ ಪಾತ್ರವಿಲ್ಲ ಎಂದು ಹೇಳಿದ್ದಾರೆ. ಈ ನಡುವೆ ಸಿಸಿಬಿ ಪೊಲೀಸರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಇಬ್ಬರು ಡಾಕ್ಟರ್‌ಗಳನ್ನು ಬಂಧಿಸಿದೆ.

ಮುಸ್ಲಿಂ ಎಂಬ ಕಾರಣಕ್ಕೆ ಕೆಲಸದಿಂದ ವಜಾ

ತೇಜಸ್ವಿ ಸೂರ್ಯ ಕ್ಯಾಮೆರಾ ಮುಂದೆ ಹೇಳಿದ್ದ 17 ಜನ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಲಾಗಿದೆ. ಹಗರಣದಲ್ಲಿ ಯಾವುದೆ ಪಾತ್ರವಿಲ್ಲದ ನಮ್ಮನ್ನು ಕೆಲಸದಿಂದ ವಜಾಮಾಡಲಾಗಿದೆ. ಎರಡು ದಿನ ಕೆಲಸಕ್ಕೆ ಬರಬೇಡಿ, ನಾವು ಫೋನ್ ಮಾಡಿ ಕರೆಯುತ್ತೇವೆ ಎಂದು ವಾರ್‌ರೂಂನಿಂದ ನಮಗೆ ಹೇಳಿದ್ದಾರೆ ಎಂದು ವಜಾಗೊಂಡ ಸಿಬ್ಬಂದಿಯೊಬ್ಬರು ನಾನುಗೌರಿ.ಕಾಂ ಜೊತೆ ಹೇಳಿದರು.

‘ಸಂಸದ ನಮ್ಮ ಹೆಸರನ್ನು ಹೇಳಿದ ನಂತರ ರಾತ್ರಿ 11 ಗಂಟೆಗೆ ನಮ್ಮನ್ನು ಪೊಲೀಸ್ ಸ್ಟೇಷನ್‌ಗೆ ಕರೆದರು. ಆದರೆ ಅಲ್ಲಿ ಯಾವುದೆ ಕಾರಣ ನೀಡದೆ ಬೆಳಿಗ್ಗೆ 3 ರವರೆಗೂ ಕೂರಿಸಲಾಗಿತ್ತು. ಮರು ದಿನ ಕೂಡಾ ಬೆಳಗ್ಗೆ 11 ರಿಂದ ಸಂಜೆ 4 ರವರೆಗೆ ನಮ್ಮ ಪೊಲೀಸ್ ಸ್ಟೇಷನ್‌ಗೆ ಕರೆಸಿಕೊಳ್ಳಲಾಗಿತ್ತು. ಆದರೆ ಎರಡು ದಿನವು ಯಾವುದೆ ತನಿಖೆ ಮಾಡಲಿಲ್ಲ’ ಎಂದು ಅವರು ನಾನುಗೌರಿ.ಕಾಂ ಜೊತೆಗೆ ಬೇಸರ ತೋಡಿಕೊಂಡರು.

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ ಕಾಣೆಯಾದರೆ?

ವಾರ್‌ರೂಂನಿಂದ ವಜಾಮಾಡಿದ್ದಕ್ಕೆ ಲಿಖಿತ ರೂಪದಲ್ಲಿ ಕಾರಣ ನೀಡಿದ್ದಾರೆಯೆ ಎಂಬ ನಾನುಗೌರಿ.ಕಾಂ ಪ್ರಶ್ನೆಗೆ, “ಸಂಸದ ನಮ್ಮ ಹೆಸರು ಹೇಳಿದ ಕಾರಣಕ್ಕೆ ವಜಾಮಾಡಿದ್ದಾರೆ. ಆಯುಕ್ತರು ನಮ್ಮ ಕೆಲಸವನ್ನು ತಡೆಹಿಡಿದಿದ್ದಾರೆ ಎಂದು ವಾರ್‌ರೂಂ ಕಡೆಯಿಂದ ಹೇಳಿದ್ದಾರೆ. ಯಾವುದೆ ಲಿಖಿತ ಕಾರಣ ನೀಡಿಲ್ಲ. ಎರಡು ದಿನ ಬರಬೇಡಿ, ಪೋನ್ ಮಾಡುತ್ತೇವೆ ಎಂದಷ್ಟೇ ಹೇಳಿದ್ದಾರೆ. ಇದುವರೆಗೂ ಅಲ್ಲಿಂದ ಯಾವುದೆ ಫೋನ್‌ ಬಂದಿಲ್ಲ” ಎಂದು ಈ ಸಿಬ್ಬಂದಿ ಉತ್ತರಿಸಿದರು.

ಒಟ್ಟಿನಲ್ಲಿ ಸಂಸದ ಹಗರಣ ಒಂದರ ಬಯಲಿಗೆ ಎಳೆದಿದ್ದೇನೆ ಎಂದು ಹೇಳುತ್ತಾ ತಮ್ಮ ತಮ್ಮ ಹಳೆಯ ಚಾಳಿಯಾದ ಎಲ್ಲಾ ಸಮಸ್ಯೆಗೆ ಮುಸ್ಲಿಮರೆ ಕಾರಣ ಎಂಬ ಸವಕಲು ಪ್ರತಿಪಾದನೆಯನ್ನು ಮುನ್ನಲೆಗೆ ತಂದಿದ್ದಾರೆ. ಆದರೆ ಇದನ್ನು ಸಾರ್ವಜನಿಕರು ಪ್ರಶ್ನಿಸಿದ್ದು, ಕೊರೊನಾದಂತಹ ಭಯಾನಕ ಪರಿಸ್ಥಿತಿಯಲ್ಲೂ ಕೋಮುವಾದ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್‌ಡ್‌’ ಎಂದು ಟ್ವಿಟರ್‌ನಲ್ಲಿ ರಾಷ್ಟ್ರೀಯ ಟ್ರೆಂಡ್ ಕೂಡಾ ಆಗಿತ್ತು.

‘ಬೆಡ್‌ದಂಧೆಯ ಕಿಂಗ್‌‌ಪಿನ್‌ ತೇಜಸ್ವಿ ಸೂರ್ಯ ಅವರೆ ಯಾಕೆ ಆಗಿರಬಾರದು? ಹಂಚಿಕೆಯಲ್ಲಿ ಸಮಸ್ಯೆಯಾದುದರಿಂದ ಈ ರೀತಿ ವಾರ್‌ರೂಂಗೆ ತೆರಳಿ ಕೂಗಾಡಿದ್ದಾರೆಯೆ?. ಶಾಸಕ ಸತೀಶ್ ರೆಡ್ಡಿ ಮತ್ತು ತೇಜಸ್ವಿ ಸೂರ್ಯ ಅವರನ್ನು ಬಂಧಿಸಿ ಎಂದು ಇಂದು ಟ್ವಿಟರ್‌ನಲ್ಲಿ ಟ್ರೆಂಡ್ ಆಗಿದೆ.

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

2 COMMENTS

  1. ಹಿಂದೂ ಸಹೋದರರ ಶವಸಂಸ್ಕಾರ ಮಾಡುತ್ತಿರುವ ಮುಸ್ಲಿಂ ಯುವಕರಲ್ಲಿ ವಿನಂತಿ,
    ಆ ಸೂರ್ಯ ಏನೇನು ಬೊಗಳಿದ ಎಂದು ಮಹತ್ಕಾರ್ಯವನ್ನು ನಿಲ್ಲಿಸಬೇಡಿ, ಒಂದುವೇಳೆ ಆ ಸೂರ್ಯನ ಶವಸಂಸ್ಕಾರ ಮಾಡುವ ಸಂದರ್ಭ ಬಂದರೂ ನೀವು ಹಿಂದೆ ಸರಿಯ ಬೇಡಿ

  2. Hats off to my Muslim brothers for their yeoman service to the society there are some rabid dogs in our midst, don’t bother about them

LEAVE A REPLY

Please enter your comment!
Please enter your name here