ವಾರಣಾಸಿ, ಅಯೋಧ್ಯ, ಮಥುರಾ ಪಂಚಾಯತ್‌ ಚುನಾವಣೆ: ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಮುಖಭಂಗ!

ಕಳೆದ ತಿಂಗಳು ಉತ್ತರ ಪ್ರದೇಶದಲ್ಲಿ ನಡೆದ ಪಂಚಾಯತ್ ಚುನಾವಣೆಯ ಫಲಿತಾಂಶಗಳೊಂದಿಗೆ ಆಡಳಿತಾರೂಢ ಆದಿತ್ಯನಾಥ್ ಸರ್ಕಾರವು ದೊಡ್ಡ ಹಿನ್ನಡೆ ಅನುಭವಿಸಿದೆ. ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವು ವಾರಣಾಸಿ ಮತ್ತು ಅಯೋಧ್ಯೆಯಲ್ಲಿ ಸಮಗ್ರ ಗೆಲುವು ಸಾಧಿಸಿದರೆ, ಮಾಯಾವತಿಯ ಬಿಎಸ್ಪಿ ಮತ್ತು ಅಜಿತ್ ಸಿಂಗ್ ಅವರ ಆರ್‌‌ಎಲ್‌ಡಿ ಮಥುರಾದಲ್ಲಿ ಅಗ್ರಸ್ಥಾನದಲ್ಲಿದೆ.

ಈ ಮೂರೂ ಜಿಲ್ಲೆಗಳು ಕೇಸರಿ ಪಕ್ಷದ ಕಾರ್ಯಸೂಚಿಯ ಪ್ರಮುಖವಾದ ಜಿಲ್ಲೆಗಳಾಗಿವೆ. ಆದಿತ್ಯನಾಥ್‌‌ ಸರ್ಕಾರದ ನಾಲ್ಕು ವರ್ಷಗಳ ಅಧಿಕಾರಾವಧಿಯಲ್ಲಿ ಈ ಮೂರು ಜಿಲ್ಲೆಗಳ ಬಗ್ಗೆ ವಿಶೇಷ ಗಮನ ಹರಿಸಲಾಗಿತ್ತು. ಪ್ರಸ್ತುತ ಪಂಚಾಯತ್ ಚುನಾವಣೆಯ ಫಲಿತಾಂಶಗಳು ಬಿಜೆಪಿ ಸರ್ಕಾರಕ್ಕೆ ಹಿನ್ನಡೆಯಾಗಿದೆ ಎಂದು ಸಾಬೀತಾಗಿದೆ.

ಇದನ್ನೂ ಓದಿ: ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

ಪ್ರಧಾನಿ ನರೇಂದ್ರ ಮೋದಿಯ ಸಂಸದೀಯ ಕ್ಷೇತ್ರವಾದ ವಾರಣಾಸಿ ಜಿಲ್ಲಾ ಪಂಚಾಯಿತಿಯ 40 ಸ್ಥಾನಗಳಲ್ಲಿ 8 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಅಲ್ಲಿ ಸಮಾಜವಾದಿ ಪಕ್ಷ 14 ಸ್ಥಾನಗಳನ್ನು ಗೆದ್ದಿದೆ, ಬಿಎಸ್ಪಿಗೆ 5 ಸ್ಥಾನಗಳು, ಅಪ್ನಾ ದಳ (ಎಸ್) ಮೂರು ಸ್ಥಾನಗಳನ್ನು ಗಳಿಸಿವೆ. ಆಮ್ ಆದ್ಮಿ ಪಕ್ಷ ಕೂಡಾ ವಾರಣಾಸಿ ಜಿಲ್ಲೆಯಲ್ಲಿ ತನ್ನ ಖಾತೆಯನ್ನು ತೆರೆದಿದೆ.

ಮಥುರಾದಲ್ಲಿ ಬಿಜೆಪಿಯು ಭಾರಿ ಸೋಲನ್ನು ಅನುಭವಿಸಿದೆ. ಮಥುರಾದಲ್ಲಿ ಮಾಯಾವತಿಯ ಬಿಎಸ್ಪಿ 12 ಸ್ಥಾನಗಳನ್ನು ಮತ್ತು ಚೌಧರಿ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕ ದಳ 9 ಸ್ಥಾನಗಳನ್ನು ಗೆದ್ದಿದೆ. ಬಿಜೆಪಿ ಕೇವಲ 8 ಸ್ಥಾನಗಳನ್ನು ಗೆದ್ದಿದೆ. ಅದೇ ರೀತಿ, ಎಸ್ಪಿ ಒಂದು ಸ್ಥಾನವನ್ನು ಪಡೆಯುವುದರೊಂದಿಗೆ ತನ್ನ ಖಾತೆಯನ್ನು ತೆರೆದಿದೆ. ಕಾಂಗ್ರೆಸ್ ಮಾತ್ರ ಯಾವುದೇ ಸ್ಥಾನವನ್ನು ಗಳಿಸುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. 3 ಸ್ಥಾನಗಳನ್ನು ಪಕ್ಷೇತರರು ಗೆದ್ದಿದ್ದಾರೆ.

ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷವು ಜಿಲ್ಲೆಯ 40 ಸ್ಥಾನಗಳಲ್ಲಿ 24 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಿಜೆಪಿ ಕೇವಲ 6 ಸ್ಥಾನಗಳನ್ನು ಗೆಲ್ಲುವ ಮೂಲಕ ಮುಖಭಂಗ ಅನುಭವಿಸಿದೆ. ಅಲ್ಲಿನ ಉಳಿದ ಸ್ಥಾನವನ್ನು ಪಕ್ಷೇತರರು ಗೆದ್ದುಕೊಂಡಿದ್ದಾರೆ.

ಇದನ್ನೂ ಓದಿ: ಟಿಎಂಸಿಯಿಂದ ಹಾರಿದ 148 ಜನರಿಗೆ BJP ಟಿಕೆಟ್, ಗೆದ್ದವರು 6 ಜನ!

ಅಯೋಧ್ಯೆ-ಮಥುರಾ-ಕಾಶಿಯ ಎಲ್ಲಾ ಮೂರು ಜಿಲ್ಲೆಗಳು ಯಾವಾಗಲೂ ಬಿಜೆಪಿಯ ರಾಜಕೀಯ ಕಾರ್ಯಸೂಚಿಯ ಕೇಂದ್ರಸ್ಥಾನವಾಗಿದೆ. ಬಿಜೆಪಿ ಈ ಪ್ರದೇಶಗಳ ಸುತ್ತ ಸುತ್ತುವ ರಾಜಕೀಯವನ್ನು ಯಾವಾಗಲೂ ಮಾಡುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ನಿರ್ಮಿಸಲಾಗುತ್ತಿದ್ದು, ಬಿಜೆಪಿ ಇದರ ಸಂಪೂರ್ಣ ಮನ್ನಣೆಯನ್ನು ಪಡೆದಿದೆ. ವಾರಣಾಸಿ ಪ್ರಧಾನಿ ನರೇಂದ್ರ ಮೋದಿಯ ಸಂಸದೀಯ ಕ್ಷೇತ್ರವಾಗಿದ್ದು, ಸತತ 2 ಬಾರಿ ಗೆದ್ದು ಬಂದಿದ್ದಾರೆ.

ಅಯೋಧ್ಯೆಯ ಬಾಬರಿ ಮಸೀದಿಯ ನಂತರ ಬಿಜೆಪಿಯು ಮಥುರಾದ ಕೃಷ್ಣ ಜನ್ಮಭೂಮಿ ಮತ್ತು ವಾರಣಾಸಿಯ ಜ್ಞಾನಪೂರಿ ಮಸೀದಿಯ ವಿಷಯದಲ್ಲಿ ವಿವಾದ ಹುಟ್ಟು ಹಾಕಿದೆ. ಆದರೆ ಮುಂದಿನ 8 ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಪಂಚಾಯತ್ ಚುನಾವಣೆಯ ಈ ಅವಮಾನಕರ ಸೋಲು ಆದಿತ್ಯನಾಥ್‌ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.

ಇದನ್ನೂ ಓದಿ: ಅಸ್ಸಾಂ ಚುನಾವಣೆ: ಜೈಲಿನಲ್ಲಿದ್ದುಕೊಂಡೇ ಜಯಗಳಿಸಿದ ಹೋರಾಟಗಾರ ಅಖಿಲ್ ಗೊಗೊಯ್‌

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
Avatar
ನಾನು ಗೌರಿ ಡೆಸ್ಕ್
+ posts

1 COMMENT

  1. ಶುಬ ಸೂಚನೆ, ಸಮಾದಾನಕರ ಸಂಗತಿ. ವಿರೋಧ ಪಕ್ಷಗಳ ಎಲ್ಲಾ ನಾಯಕರು ತಮ್ಮ ಸ್ವಾರ್ತ ಮತ್ತು ಪ್ರತಿಷ್ಠೆಗಳನ್ನು ಬದಿಗೊತ್ತಿ, ಒಗ್ಗಟ್ಟಿನಿಂದ ವರ್ತಿಸಿದರೆ, ವಿಧಾನಸಭಾ (ಉ.ಪ್ರದೇಶ) ಚುನಾವಣೆಯಲ್ಲಿ ಮನುವಾದಿಗಳನ್ನು ಮನೆಗೆ ಕಳುಹಿಸಬಹುದು.

LEAVE A REPLY

Please enter your comment!
Please enter your name here