Homeಕರೋನಾ ತಲ್ಲಣಬೆಂಗಳೂರು ‘ಬೆಡ್‌ ಬ್ಲಾಕ್’ ಹಗರಣ; ವಾಸ್ತವ ಏನು? ಹೊಣೆಗಾರರು ಯಾರು?

ಬೆಂಗಳೂರು ‘ಬೆಡ್‌ ಬ್ಲಾಕ್’ ಹಗರಣ; ವಾಸ್ತವ ಏನು? ಹೊಣೆಗಾರರು ಯಾರು?

- Advertisement -
- Advertisement -

ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ‘ಬೆಡ್‌ ಬ್ಲಾಕ್‌’ ಹಗರಣ ರಾಜ್ಯದಲ್ಲಿ ಭಾರೀ ಸುದ್ದಿ ಮತ್ತು ಸದ್ದು ಮಾಡುತ್ತಿದೆ. ಬಿಜೆಪಿ ಸಂಸದ ತೇಜಸ್ವಿ ಸೂರ್ಯ ತಮ್ಮ ಸರ್ಕಾರದ ಅಧೀನದಲ್ಲಿ ನಡೆಯುತ್ತಿರುವ ಬೆಡ್‌ ಹಗರಣವನ್ನು ಬಯಲಿಗೆಳೆದಿದ್ದಾರೆ! ದಿಢೀರ್ ಆಗಿ ನಡೆದ ಕಾರ್ಯಾಚರಣೆಯಲ್ಲಿ ಬೆಡ್‌ ಹಗರಣ ಹೇಗೆ ನಡೆಯಿತು ಎಂಬುವುದನ್ನು ತೆರೆದಿಟ್ಟಿದ್ದಾರೆ. ಮಾಧ್ಯಮಗಳಲ್ಲೂ ಸಾಕಷ್ಟು ಪ್ರಚಾರವನ್ನು ಪಡೆದುಕೊಳ್ಳುತ್ತಿದ್ದಾರೆ. ಮತ್ತೊಂದು ಕಡೆ ವಾರ್‌ ರೂಂನಲ್ಲಿ ಕೆಲಸ ಮಾಡುತ್ತಿದ್ದ ಮುಸ್ಲಿಂ ಯುವಕರ ಹೆಸರು ಹೇಳುವ ಮೂಲಕ ಪರೋಕ್ಷವಾಗಿ ಈ ದಂಧೆಯಲ್ಲಿ ಒಂದು ಧರ್ಮದವರ ಪಾಲಿದೆ ಎಂದು ಬಿಂಬಿಸುವ ಪ್ರಯತ್ನ ನಡೆಸಿದ್ದಾರೆ. ಈ ಹೆಸರುಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ಐಟಿ ಸೆಲ್‌ ಮತೀಯ ನೆಟ್‌ ದಾಳಿ ನಡೆಸಲು ಶುರುಮಾಡಿದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಬೆಡ್‌ ಹಗರಣದ ವಾಸ್ತವವನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬೆಡ್‌ ಹಗರಣ ಮಂಗಳವಾರ ದಿಢೀರ್ ಆಗಿ ಬೆಳಕಿಗೆ ಬಂದಿದ್ದಲ್ಲ. ವಂದೇ ಭಾರತಂ ಎಂಬ ಸಂಘಪರಿವಾರ ಹಿನ್ನಲೆಯನ್ನು ಹೊಂದಿರುವ ತಂಡವೊಂದು ಅಕ್ರಮ ಬೆಡ್‌ ಬ್ಲಾಕ್‌ ಹಾಗೂ ಮೆಡಿಸಿನ್ ಮಾರಾಟದ ಬಗ್ಗೆ ಸುಳಿವು ಪಡೆದುಕೊಂಡಿತ್ತು.

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

ಈ ವಿಚಾರವನ್ನು ರಾಜ್ಯ ಸರ್ಕಾರದ ಗಮನಕ್ಕೂ ತರುವ ಪ್ರಯತ್ನ ನಡೆಸಿತ್ತು. ಆದರೆ ಸರ್ಕಾರ ಇದ್ಯಾವುದನ್ನು ಕಿವಿಗೆ ಹಾಕಿಕೊಂಡಿರಲಿಲ್ಲ. ಹೀಗಿದ್ದರೂ ಬೆನ್ನಿಗೆ ಬಿದ್ದ ತಂಡ ಈ ದಂಧೆ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮಾಹಿತಿ ನೀಡಿತ್ತು. ಆದರೂ ಸರ್ಕಾರ ಈ ಬಗ್ಗೆ ಯಾವುದೇ ರೀತಿಯಲ್ಲಿ ತಲೆಕೆಡಿಸಿಕೊಂಡಿಲ್ಲ.!

ಇದರ ಬೆನ್ನಲ್ಲೇ ಡಿಸಿಎಂ ಡಾ. ಅಶ್ವತ್ಥನಾರಾಯಣ ಅವರನ್ನು ಈ ತಂಡ ಭೇಟಿ ಮಾಡಿ ದಂಧೆಯ ಬಗ್ಗೆ ಮಾಹಿತಿ ನೀಡಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಎಂ ಅಶ್ವತ್ಥ ನಾರಾಯಣ ಅವರು ದಿನಗಳ ಹಿಂದೆ ವಾರ್‌ ರೂಂ, ಕಂಟ್ರೋಲ್ ರೂಂ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಎರಡು ದಿನಗಳ ಹಿಂದೆಯಷ್ಟೇ ಸಹಾಯವಾಣಿಯಲ್ಲಿ ಆಗುತ್ತಿರುವ ಅವ್ಯವ್ಯಸ್ಥೆ ಬಗ್ಗೆ ಸಭೆಯನ್ನು ನಡೆಸಿ ಅಧಿಕಾರಿಗಳಿಗೆ ಖಡಕ್ ಸೂಚನೆಯನ್ನೂ ನಿರ್ದೇಶನವನ್ನೂ ನೀಡಿದ್ದರು. ಹಾಗೂ ಕೇಂದ್ರೀಕೃತ ಬೆಡ್‌ ಹಂಚಿಕೆ ವ್ಯವಸ್ಥೆಯನ್ನು ಮಾಡಿದ್ದರು. ಅದರ ಉಸ್ತುವಾರಿ ನೋಡಿಕೊಳ್ಳಲು ಐಎಎಸ್ ಅಧಿಕಾರಿ ಪೊನ್ನುರಾಜ್‌ ಅವರನ್ನು ನಿಯೋಜನೆ ಮಾಡಲಾಗಿದೆ.

ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ ಕಾಣೆಯಾದರೆ?

ಜನರಿಗೆ ಅನುಕೂಲ ಮಾಡಲು ಸರ್ಕಾರ ಬೆಡ್‌ ಹಂಚಿಕೆಗೆ ಐಎಎಸ್ ಅಧಿಕಾರಿಗಳು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿತ್ತು. ಆದರೆ ಕೆಲವು ಐಎಎಸ್ ಅಧಿಕಾರಿಗಳು ಖಾಸಗಿ ಆಸ್ಪತ್ರೆಗಳ ಜೊತೆ ಸೇರಿಕೊಂಡು ತಮಗೆ ಬೇಕಾದವರಿಗೆ ಬೆಡ್‌ ಹಂಚಿಕೆ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

ಅಷ್ಟಕ್ಕೂ, ತೇಜಸ್ವಿ ಸೂರ್ಯ ದಾಳಿಯ ಸಂದರ್ಭದಲ್ಲಿ ಕೆಲವು ಮುಸ್ಲಿಮ್ ಯುವಕರ ಹೆಸರುಗಳನ್ನು ಓದಿ ಹೇಳುತ್ತಾರೆ. ಆದರೆ ಇವೆರೆಲ್ಲಾ ಕೇವಲ ಅಲ್ಲಿಯ ಸಿಬ್ಬಂದಿಷ್ಟೇ, ಈ ಯುವಕರ ಬಳಿ ಬೆಡ್ ಹಂಚಿಕೆಯ ಯಾವುದೇ ನಿಯಂತ್ರಣ ಇರುವುದಿಲ್ಲ ಎಂಬುವುದು ಕನಿಷ್ಠ ಜ್ಞಾನ. ಬದಲಾಗಿ ಇದರ ನಿಯಂತ್ರಣ ಇರುವುದು ಐಎಎಸ್ ಅಧಿಕಾರಿಗಳ ಜೊತೆಗೆ.

ಕೆಲವು ಅಧಿಕಾರಿಗಳು ಬೆಡ್‌ ಹಂಚಿಕೆಯಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ಜೊತೆಗೆ ಕೈಜೋಡಿಸಿಕೊಂಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಡಿಸಿಎಂ ಅಶ್ವತ್ಥ ನಾರಾಯಣ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ನಡುವೆ ಪೊಲೀಸರು ಕಾರ್ಯಾಚರಣೆ ನಡೆಸಿ ದಂಧೆಯಲ್ಲಿ ತೊಡಗಿಕೊಂಡಿದ್ದ ಇಬ್ಬರನ್ನು ಬಂಧನಕ್ಕೆ ಒಳಪಡಿಸಿದ್ದರು.

ಇದನ್ನೂ ಓದಿ: ‘ಎಲ್ಲಾ ಬಿಟ್ಟ ಬಿಜೆಪಿ’- ಕೊರೊನಾ ವಿರುದ್ಧ ಹೋರಾಡಲಿಲ್ಲ, ವೈರಸ್ ಜೊತೆಗೇ ಒಳ ಒಪ್ಪಂದ!

ಸದ್ಯಕ್ಕೆ ಇವೆಲ್ಲವೂ ಮುಗಿದು ಹೋಗಿತ್ತು, ಅಷ್ಟಕ್ಕೂ ಇದರ ಕ್ರಿಡಿಟ್ ಸಲ್ಲಬೇಕಾಗಿದ್ದು ವಂದೇ ಭಾರತಂ ಸಂಘಟನೆ ಹಾಗೂ ಅದರ ಸದಸ್ಯರಿಗೆ. ಆದರೆ ದಿಢೀರ್‌ ಆಗಿ ತೇಜಸ್ವಿ ಸೂರ್ಯ ಎಂಟ್ರಿ ಪಡೆದುಕೊಳ್ಳುತ್ತಾರೆ. ಕಂಟ್ರೋಲ್ ರೂಂಗೆ ಹೀಗಿ ಮುಸ್ಲಿಂ ಹುಡುಗರು ಏಕೆ ಇದ್ದಾರೆ ಎಂದು ಹೆಸರು ಓದುತ್ತಾರೆ. ಇದು ಮದರಸವೇ? ಎಂದು ಪ್ರಶ್ನಿಸುತ್ತಾರೆ. ಮಾಧ್ಯಮಗಳಲ್ಲೂ ದೊಡ್ಡ ಪ್ರಚಾರ ಪಡೆದುಕೊಳ್ಳುತ್ತಾರೆ. ದಂಧೆಯಲ್ಲಿ ಭಾಗಿಯಾಗಿದ್ದ ನೇತ್ರಾ ಹಾಗೂ ರೋಹಿತ್ ಬಂಧನ ಆದಾಗಲೂ ಸುದ್ದಿಯಾಗದ ಪ್ರಕರಣ ಸೂರ್ಯ ಎಂಟ್ರಿಯೊಂದಿಗೆ ಭರ್ಜರಿ ಸುದ್ದಿ ಯಾಗುತ್ತದೆ.

ಅಷ್ಟಕ್ಕೂ, ಒಂದು ವೇಳೆ ಅಲ್ಲಿನ ಸಿಬ್ಬಂದಿ ಬೆಡ್‌ ಬ್ಲಾಕ್‌ ಮಾಡಿ ದುಡ್ಡು ಸಂಗ್ರಹ ಮಾಡಿದರೆ ಬಿಬಿಎಂಪಿ ಅಧಿಕಾರಿಗಳು ಏನು ಮಾಡುತ್ತಿದ್ದರು? ಅವರು ಸುಮ್ಮನಿರಲು ಕಾರಣ ಏನು? ಹಾಗಾದರೆ ಇದರಲ್ಲಿ ಪಾಲುದಾರರು ಎಂದು ಅರ್ಥ ಅಲ್ಲವೇ?

ಅವರು ಬಿಡಿ ಅಲ್ಲಿಯ ಉಸ್ತುವಾರಿ ಹೊಣೆ ಹೊತ್ತಿರುವ ಸಚಿವ ಆರ್‌. ಅಶೋಕ್ ಏನು ಮಾಡುತ್ತಿದ್ದರು? ಸ್ಪಷ್ಟವಾಗಿ ಇದು ರಾಜ್ಯ ಸರ್ಕಾರದ ವೈಫಲ್ಯ. ಇದರಲ್ಲಿ ಅಧಿಕಾರಿಗಳು, ಆಸ್ಪತ್ರೆ ಹಾಗೂ ಅಯಕಟ್ಟಿನಲ್ಲಿರುವವರು ಎಲ್ಲರೂ ಭಾಗಿಯಾಗಿದ್ದಾರೆ. ಈ ಬಗ್ಗೆ ಚರ್ಚೆ ಆಗುವ ಬದಲಾಗಿ ಅಲ್ಲಿದ್ದ ನಾಲ್ಕು ಮುಸ್ಲಿಂ ಹುಡುಗರ ಹೆಸರನ್ನು ತೇಲಿಸಿ ಬಿಟ್ಟು ಅವರೇ ಕಾರಣಕರ್ತರು ಎಂಬಂತೆ ಬಿಂಬಿಸಲಾಗುತ್ತಿದೆ.

ಇದನ್ನೂ ಓದಿ: ‘ನಮ್ಮ ಕೈಗಳಿಗೆ ರಕ್ತ ಮೆತ್ತಿಕೊಂಡಿದೆ…’ – ಸಂಪಾದಕರೊಬ್ಬರ ತಪ್ಪೊಪ್ಪಿಗೆ!

ಅಸಲಿಗೆ ಇದರ ಹೊಣೆಯನ್ನು ಸಿಎಂ, ಆರೋಗ್ಯ ಸಚಿವ ಸುಧಾಕರ್‌, ಆರ್‌ ಅಶೋಕ್ ಎಲ್ಲರೂ ಹೊರಬೇಕಾಗಿದೆ. ಚಾಮರಾಜನಗರ ಘಟನೆ, ಕೋವಿಡ್‌ ನಿಯಂತ್ರಣ ವಿಫಲವಾಗಿದ್ದಕ್ಕೆ ಹೈಕೋರ್ಟ್‌ ಛೀಮಾರಿ, ವಿರೋಧ ಪಕ್ಷಗಳ ಆರೋಪ ಇವೆಲ್ಲದರಿಂದ ತಪ್ಪಿಸಿಕೊಳ್ಳಲು ಬೆಡ್‌ ಬ್ಲಾಕ್‌ ಪ್ರಕರಣವನ್ನು ಸಾಬರ ತಲೆಗೆ ಕಟ್ಟುವ ಪ್ರಯತ್ನ ಇದಾಗಿದೆ ಎಂಬುವುದು ಆಳಕ್ಕಿಳಿದು ನೋಡಿದರೆ ಸ್ಪಷ್ಟಗೊಳ್ಳುತ್ತದೆ.

ಇನ್ನೊಂದು ಬಹಳ ಪ್ರಮುಖ ವಿಚಾರ ಏನಂದರೆ, ವಾರ್‌ ರೂಂನಲ್ಲಿ ತೇಜಸ್ವಿ ಸೂರ್ಯ ಭೇಟಿ ಕೊಟ್ಟ ಸಂದರ್ಭದಲ್ಲಿ ಐಎಎಸ್ ಅಧಿಕಾರಿ ತುಳಸಿ ಮದ್ದಿನೇನಿ ಮುಂದೆ ಒಂದಿಷ್ಟು ಮುಸ್ಲಿಂ ಯುವಕರ ಹೆಸರನ್ನು ಓದಿ ಹೇಳುತ್ತಾರೆ. ಆದರೆ ಸೌತ್ ಝೋನ್ ವಾರ್ ರೂಂನಲ್ಲಿರುವ 205 ಸಿಬ್ಬಂದಿ ಪೈಕಿ 16 ಮಂದಿ ಮಾತ್ರ ಮುಸ್ಲಿಮರು ಇರುವುದು. ಹಾಗಿದ್ದರೂ ಮುಸ್ಲಿಮರ ಹೆಸರನ್ನು ಸಂಸದ ತೇಜಸ್ವಿ ಸೂರ್ಯ ಓದಿ ಹೇಳುವ ಉದ್ದೇಶ ಏನು? ಎಂಬುವುದು ಇಲ್ಲಿ ಕುತೂಹಲ ಕೆರಳಿಸಿರುವ ಬಹುಮುಖ್ಯ ಪ್ರಶ್ನೆಯಾಗಿದೆ.

ಇದನ್ನೂ ಓದಿ: ಗುಜರಾತ್ ನಕಲಿ ರೆಮ್ಡೆಸಿವಿರ್ ದಂಧೆ: ಬಂಧಿತರಲ್ಲಿ ಇಬ್ಬರು ಮುಸ್ಲಿಮರಷ್ಟೇ ಅಲ್ಲ, 5 ಹಿಂದೂಗಳೂ ಇದ್ದಾರೆ!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಭಾರತ್ ಜೋಡೋ ಯಾತ್ರೆಗೆ ಬಿಜೆಪಿ ನಡುಗಿದೆಯಂತಲ್ಲಾ

0
ಮುಂದೆ ಎದುರಿಸಲಿರುವ ಚುನಾವಣೆಯ ವಿಷಯವಾಗಿ, ಜನರ ಬಳಿಗೆ ತೆಗೆದುಕೊಂಡು ಹೋಗಲು ಗುರುತರದಾದ ಯಾವುದೇ ಸಾಧನೆಯಿಲ್ಲದಿರುವುದನ್ನು ಮನಗಂಡ ಬಿಜೆಪಿಗಳು ರಾಷ್ಟ್ರದಾದ್ಯಂತ ಮುಸ್ಲಿಂ ಸಂಘಟನೆಯ ಮೇಲೆ ದಾಳಿ ಮಾಡಿ ಬೀಗ ಜಡಿದದ್ದೂ ಅಲ್ಲದೆ ಕೆಲವು ಸಂಘಟನೆಗಳ...