Homeಕರ್ನಾಟಕ‘ಎಲ್ಲಾ ಬಿಟ್ಟ ಬಿಜೆಪಿ’- ಕೊರೊನಾ ವಿರುದ್ಧ ಹೋರಾಡಲಿಲ್ಲ, ವೈರಸ್ ಜೊತೆಗೇ ಒಳ ಒಪ್ಪಂದ!

‘ಎಲ್ಲಾ ಬಿಟ್ಟ ಬಿಜೆಪಿ’- ಕೊರೊನಾ ವಿರುದ್ಧ ಹೋರಾಡಲಿಲ್ಲ, ವೈರಸ್ ಜೊತೆಗೇ ಒಳ ಒಪ್ಪಂದ!

- Advertisement -
- Advertisement -

ಸಂಸದ ತೇಜಸ್ವಿ ಸೂರ್ಯ ಮಂಗಳವಾರ (ನಿನ್ನೆ) ಅದೇನೋ ಕಂಡುಹಿಡಿದವರಂತೆ ಪೋಸ್ ಕೊಟ್ಟಿದ್ದಾರೆ. ಕೇಂದ್ರ, ರಾಜ್ಯಗಳಲ್ಲಿ, ಬಿಬಿಎಂಪಿಯಲ್ಲಿ ಅವರ ಪಕ್ಷದ ಅಧಿಕಾರವಿದೆ. ಬಿಬಿಎಂಪಿ ವ್ಯಾಪ್ತಿಯ ಶಾಸಕರೂ ಕೂಡ ಬಿಜೆಪಿಯವರೆ. ಹಾಗಾದರೆ, ಸಂಘಪರಿವಾರದ ಹೊಸ ಪೋಸ್ಟರ್ ಬಾಯ್ ಆಗುತ್ತಿರುವ ಸಂಸದ ತೇಜಸ್ವಿ ಸೂರ್ಯ ಯಾರ ವಿರುದ್ಧ ಅಪಾದನೆ ಮಾಡಿದರು? ತಾತ್ವಿಕವಾಗಿ ನೋಡಿದರೆ, ಅವರು ಬಿಜೆಪಿ ವಿರುದ್ಧ, ತಮ್ಮ ಬೆಂಗಳೂರು ಶಾಸಕರ ವಿರುದ್ಧ, ಅವರಿಗೇ ಗೊತ್ತಿಲ್ಲದೇ ಅವರದೇ ವಿರುದ್ಧ ಮತ್ತು ಕೊನೆಗೆ ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಗಳ ವಿರುದ್ಧವೂ ಅಪಾದನೆ ಮಾಡಿ, ತಮ್ಮ ಜೊತೆಗೆ ಕಟಕಟೆಯಲ್ಲಿ ಯಡಿಯೂರಪ್ಪ ಮತ್ತು ಮೋದಿಯವರನ್ನೂ ನಿಲ್ಲಿಸಿದ್ದಾರೆ.

ಆ ಮಟ್ಟಿಗೆ ಈ ಸಂಸದರಿಗೆ ಥ್ಯಾಂಕ್ಸಸ್ ಹೇಳಬೇಕು. ಆದರೆ, ಹಾಗೆ ನಿರ್ಲಕ್ಷ್ಯ ಮಾಡುವಂತಿಲ್ಲ. ಅವರು ಪ್ರೆಸ್‌ಮೀಟ್ ಮಾಡಿದ ತಕ್ಷಣ, ಬಿಜೆಪಿ ಐಟಿ ಸೆಲ್ (ಪೂರ್ವ ನಿಯೋಜನೆಯಂತೆ?) ಕಾರ್ಯಾಚರಣಗೆ ಇಳಿದು, ಬೆಡ್ ಬ್ಲಾಕಿಂಗ್ ದಂಧೆಗೆ ಕೋಮು ಬಣ್ಣ ಕೊಡಲು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿತು.

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

‘ಯಾವಾಗ ತೇಜಸ್ವಿ ಸೂರ್ಯ, ಇದು ಬಿಬಿಎಂಪಿ ವಾರ್‌ರೂಮೋ ಅಥವಾ ಮದರಸಾನೋ ಎಂದು ಕೇಳಿದಾಗಲೇ, ಇದು ಮುಸ್ಲಿಮರನ್ನು ಮತ್ತೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಹುನ್ನಾರ ಎಂಬುದು ಸ್ಪಷ್ಟವಾಗಿತ್ತು’ ಎಂದು ನಟ ಅಹಿಂಸಾ ಚೇತನ್ ಟ್ವೀಟ್ ಮಾಡುವುದರಲ್ಲಿ ಸತ್ಯ ಇದೆ.

‘ತೇಜಸ್ವಿ ಸೂರ್ಯ ಒಬ್ಬ ಚೈಲ್ಡ್ ಎಂಬ ನಿರ್ಲಕ್ಷಿಸುವಿಕೆಯನ್ನು ಪ್ರಗತಿಪರರು ಬಿಡಬೇಕು. ಆತ ದಕ್ಷಿಣ ಭಾರತದ ಅಗ್ರ ಹಿಂದೂ ಭಯೋತ್ಪಾದಕ’ ಎಂದು ಪತ್ರಕರ್ತ ಆದಿತ್ಯ ಭಾರದ್ವಾಜ್ ಪೋಸ್ಟ್ ಮಾಡಿದ್ದಾರೆ.

ಕಳೆದ ವಾರ ನಾನುಗೌರಿ.ಕಾಂನಲ್ಲಿ, ‘ಕೋವಿಡ್ ಸಂದರ್ಭದಲ್ಲಿ ನಾಪತ್ತೆಯಾದ ಸಂಸದ ತೇಜಸ್ವಿ ಸೂರ್ಯ ಎಂಬ ವರದಿ ಪ್ರಕಟಿಸಿದ್ದೆವು. ಈಗ ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ಸಾವು ಸಂಭವಿಸಿದ ನಂತರ, ಸಂಘದ `ನೀಲಗಣ್ಣಿನ ಹುಡುಗ’ (blue eyed boy!) ನನ್ನು ಕಣಕ್ಕೆ ಇಳಿಸಿ, ಕೋವಿಡ್ ನಿಯಂತ್ರಣ ವೈಫಲ್ಯ ಮರೆಮಾಚುವ ಕೆಲಸಕ್ಕೆ ದೂಕಲಾಗಿದೆ.

ಇದನ್ನೂ ಓದಿ: ‘ತಂಬಿ ತೇಜಸ್ವಿ ಸೂರ್ಯ, ಇದು ತಮಿಳುನಾಡು; ನಿಮ್ಮ ನಾಟಕ ಬೆಂಗಳೂರಲ್ಲೇ ಬಿಟ್ಟು ಬನ್ನಿ’

ಮೇ. 2 ರಿಂದಲೇ ಕೋಮು ವೈರಸ್!

ಕೊರೋನಾ ವೈರಸ್‌ಗಿಂತ ಅಪಾಯಕಾರಿಯಾದ ಸಂಘಪರಿವಾರದ ಕೋಮು ವೈರಸ್, ಮೇ 2 ರಂದು ಐದು ರಾಜ್ಯಗಳ ಫಲಿತಾಂಶ ಪ್ರಕಟವಾದ ಕೂಡಲೇ ಮತ್ತಷ್ಟು ಸಕ್ರಿಯವಾಗಿದೆ. ಅದು ಕೊರೊನಾದಿಂದ ಸಾಯುತ್ತಿರುವ, ನರಳುತ್ತಿರುವ ಜನರ ಜೊತೆ ನಿಲ್ಲದೇ, ಕೊರೊನಾ ಜೊತೆಗೇ ಮೈತ್ರಿ ಮಾಡಿಕೊಂಡಂತಿದೆ.

ಬಂಗಾಳದ ಸೋಲು ಅದಕ್ಕೆ ಮರ್ಮಾಘಾತ ಮಾಡಿದೆ. ಚುನಾವಣೆಗಳ ನಂತರ ನಡೆಯುವ ಸ್ಥಳೀಯ ಕಿತ್ತಾಟಗಳನ್ನು ಅದು, ಕಡ್ಡಿಯನ್ನು ಗುಡ್ಡ ಮಾಡಿ ಬಿಂಬಿಸಲು ಹೊರಟಿದೆ. ಬಂಗಾಳದಲ್ಲಿ ಹಿಂದೂಗಳು ’ಖತರೆ ಮೆಂ ಹೈ’ ಎಂಬ ಸಂದೇಶವನ್ನು ತನ್ನ ಹಿಂಬಾಲಕರಿಗೆ ತಲುಪಿಸಿದೆ. ಅದರ ಪರಿಣಾಮವೇ ಪ್ರಕಾಶ್ ಬೆಳವಾಡಿ ಅಂತಹ ಜೀವ ವಿರೋಧಿ ಪೋಸ್ಟ್ ಹಾಕಿದ್ದು. ಕಂಗನಾ ಎಂಬ ಚೆಲುವೆ ಹಿಂಸಾಚಾರ ಬೆಂಬಲಿಸುವ ಅರ್ಜೆಂಟಿನಲ್ಲಿ, 2002 ರ ಗುಜರಾತ್ ಹತ್ಯಾಕಾಂಡಕ್ಕೆ ಮೋದಿಯೇ ಕಾರಣ ಎಂದು ಪರೋಕ್ಷವಾಗಿ ಹೇಳಿ ತೊಂದರೆಗೆ ಸಿಲುಕಿದ್ದು!

ಇಲ್ಲಿ ನಡೆದ ಮೂರು ಉಪ ಚುನಾವಣೆಗಳಲ್ಲಿ ಬಿಜೆಪಿ ಗೆದ್ದ ಬೆಳಗಾವಿ ಲೋಕಸಭಾ ಕ್ಷೇತ್ರ ಮತ್ತು ಬಸವಕಲ್ಯಾಣ ವಿಧಾನಸಭಾಕ್ಷೇತ್ರಗಳಲ್ಲಿ ಗಲಾಟೆಯಿಲ್ಲ, ಆದರೆ ಸೋತ ಮಸ್ಕಿಯಲ್ಲಿ ಪ್ರತಾಪಗೌಡರ ಮಕ್ಕಳಾದ ರಾಜೇಶ್ ಮತ್ತು ಚೇತನ್ ಗ್ಯಾಂಗ್ ಕಾಂಗ್ರೆಸ್ಸಿಗರ ಮೇಲೆ ಹಲ್ಲೆ ನಡೆಸಿದೆ, ಈ ಕುರಿತು ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿದೆ. ಜನ ಠಾಣೆಗೆ ಮುತ್ತಿಗೆಯನ್ನು ಹಾಕಿದ್ದಾರೆ.

ಇದನ್ನೂ ಓದಿ: BJP ಎಂದೂ ಸಂವಿಧಾನವನ್ನು ನಂಬುವುದಿಲ್ಲ: ತೇಜಸ್ವಿ ಸೂರ್ಯ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಇಂಥದ್ದು ಬಂಗಾಳದಲ್ಲೂ ನಡೆದಿರಬಹುದು, ಅಲ್ಲಿ ಹತಾಶರಾದ ಬಿಜೆಪಿ ಕಾರ್ಯಕರ್ತರು ಗಲಾಟೆಗೆ ಇಳಿದಿರಬಹುದು ಅಥವಾ ರಾಜಕೀಯ ಹಿಂಸೆಯಲ್ಲಿ ಪಳಗಿರುವ ಟಿಎಂಸಿ ಕಾರ್ಯಕರ್ತರು ಸ್ಥಳೀಯವಾಗಿ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರಬಹುದು. ಇದು ಕಾನೂನು ವ್ಯವಸ್ಥೆಯ ವೈಫಲ್ಯದ ಪ್ರಶ್ನೆ. ಇದು ಅಪಾಯದ ಮಟ್ಟ ಮುಟ್ಟಿ ಅಲ್ಲಿ 14 ಜನ ಪ್ರಾಣ ತೆತ್ತಿದ್ದಾರೆ ಎನ್ನಲಾಗಿದೆ.

ಆದರೆ ಈ ಸಂದರ್ಭ ಬಳಸಿಕೊಂಡ ಬಿಜೆಪಿ, ಅಲ್ಲಿ ಮುಸ್ಲಿಮರು ಹಿಂದೂಗಳ ಮೇಲೆ ದಾಳಿ ನಡೆಸುತ್ತಿದ್ದಾರೆ ಎಂದು ಜಾಲತಾಣಗಳಲ್ಲಿ ಕೋಮುವಿಷ ಹರಡತೊಡಗಿತು. ಬಂಗಾಳದ ಹೀನಾಯ ಸೋಲು, ಆರ್ಭಟಿಸಿದ ಮೋದಿ-ಶಾಗಳಿಗಾದ ಅವಮಾನ ಮತ್ತು ಇದಕ್ಕೂ ಮುಖ್ಯವಾಗಿ ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದ ಸಂಫೂರ್ಣ ವೈಫಲ್ಯವನ್ನು ಮುಚ್ಚಿಡಲು ಜನರ ಗಮನ ಬೇರೆ ಕಡೆ ಸೆಳೆಯುವ ಉದ್ದೇಶದಲ್ಲಿ ಬಂಗಾಳ ಗಲಭೆ ಎಂದು ಹಳೆಯ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ.

ನಾಲ್ಕು ದಿನದ ಹಿಂದೆ, ನಮ್ಮ ಕೈಗಳಿಗೆ ರಕ್ತ ಮೆತ್ತಿದೆ; ಸಂಪಾದಕನೊಬ್ಬನ ತಪ್ಪೊಪ್ಪಿಗೆ ಎಂದು ಸಂಪಾದಕೀಯ ಬರೆದ ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕ ಜಿ.ಎಸ್ ವಾಸು ಅವರು, ಈ ದೇಶದ ಎಲ್ಲ ಸಮಸ್ಯೆಗಳಿಗೆ ಅಲ್ಪಸಂಖ್ಯಾತರ ಅಸ್ತಿತ್ವವೇ ಕಾರಣ ಎಂದು ನಾವೆಲ್ಲ (ಮಾಧ್ಯಮಗಳು) ತಪ್ಪಾಗಿ ಬಿಂಬಿಸುತ್ತ ಬಂದೆವು ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ’ಬಂಗಾಳದಲ್ಲಿ ಮುಸ್ಲಿಮರ ಮೇಲೆ ಭೀಕರ ದಾಳಿ ನಡೆಯಲಿದೆ’- ಕೋಮುಗಲಭೆಗೆ ಪ್ರಚೋದನೆ ನೀಡಿದ ಪ್ರಕಾಶ್‌‌ ಬೆಳವಾಡಿ

ಈಗ ಬಂಗಾಳದ ಸೋಲಿಗೂ, ಕೋವಿಡ್ ನಿಯಂತ್ರಣದ ವೈಫಲ್ಯಕ್ಕೂ ಮುಸ್ಲಿಮರನ್ನೇ ಗುರಿ ಮಾಡಲು ಬಿಜೆಪಿ ಹೊರಟಿದೆ.

ಕಳೆದ ವಾರ ಗುಜರಾತಿನಲ್ಲಿ ನಕಲಿ ರೆಮ್ಡೆಸೆವಿರ್ ಇಂಜೆಕ್ಷನ್‌ ಮಾರಾಟ ಮಾಡುವ ಗ್ಯಾಂಗ್ ಒಂದನ್ನು ಬಂಧಿಸಲಾಗಿತು. ಬಂಧಿತರಾದ ಏಳು ಜನರಲ್ಲಿ ಇಬ್ಬರು ಮುಸ್ಲಿಮರು, ಐವರು ಹಿಂದೂಗಳಿದ್ದಾರೆ. ಆದರೆ, ಹತಾಶ ಬಿಜೆಪಿ ಬೆಂಬಲಿಗರು ಇಬ್ಬರ ಮುಸ್ಲಿಮರ ಹೆಸರನ್ನಷ್ಟೇ ಹಾಕಿ ಜಾಲತಾಣದಲ್ಲಿ ಅಪಪ್ರಚಾರ ಮಾಡಿದರು.

ಬಿಬಿಎಂಪಿ ‘ಬೆಡ್ ಬ್ಲಾಕಿಂಗ್‌’ನಲ್ಲಿ ಈವರೆಗೆ ಬಂಧಿತರಾದ ಇಬ್ಬರು ಹಿಂದೂಗಳೇ. ಆದರೆ ಜಾಲತಾಣದಲ್ಲಿ, ತೇಜಸ್ವಿ ಸೂರ್ಯ ಹೆಸರಿಸಿದ ಮುಸ್ಲಿಮರ ಹೆಸರನ್ನು ಅನಗತ್ಯವಾಗಿ ಎಳೆದು ತಂದು ಇಡೀ ಪ್ರಕರಣಕ್ಕೆ ಕೋಮು ಸ್ವರೂಪ ನೀಡಲು ತಿಣುಕುತ್ತಿದ್ದಾರೆ ಬಲಪಂಥೀಯ ಹತಾಶ ಮನಸ್ಸಿನ ಜೀವವಿರೋಧಿಗಳು.

ರಾಜ್ಯಕ್ಕೆ ಆಮ್ಲಜನಕ ಸರಬರಾಜು ಕುರಿತಂತೆ ರಾಜ್ಯ ಹೈಕೋರ್ಟ್ ಕೇಂದ್ರದ ವೈಫಲ್ಯವನ್ನು ಕಟು ಶಬ್ದಗಳಲ್ಲಿ ನಿನ್ನೆ ಮಂಗಳವಾರ ಟೀಕಿಸಿದೆ. ಚಾಮರಾಜನಗರದಲ್ಲಿ ಆಮ್ಲಜನಕ ಕೊರತೆಯಿಂದ 24 ಜನರು ಅಸುನೀಗಿದ ನಂತರ, ನಿನ್ನೆ ಮಂಗಳವಾರ ಆಮ್ಲಜನಕ ಕೊರತೆಯ ಕಾರಣಕ್ಕೆ ರಾಜ್ಯದಲ್ಲಿ ಮತ್ತೆ 8 ಸಾವು ಸಂಭವಿಸಿವೆ.
ಇದೆಲ್ಲವನ್ನೂ ಕೇಂದ್ರ ಸರ್ಕಾರದ ಎದುರು ಪ್ರಶ್ನಿಸಬೇಕಿದ್ದ ತೇಜಸ್ವಿ ಸೂರ್ಯ ಮತ್ತು ಇತರ 24 ಬಿಜೆಪಿ ಸಂಸದರು `ಹಾಸಿಗೆ’ ಹಿಡಿದು ಬೆಚ್ಚಗೆ ಇದ್ದಾರೆ.

ಇದನ್ನೂ ಓದಿ: ವಾರಣಾಸಿ, ಅಯೋಧ್ಯ, ಮಥುರಾ ಪಂಚಾಯತ್‌ ಚುನಾವಣೆ: ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಮುಖಭಂಗ!

ಇಲ್ಲಿವೆ ನೊಡಿ ಸಾಕ್ಷ್ಯಗಳು

ಬಂಗಾಳದಲ್ಲಿ ಟಿಎಂಸಿ ಭೀಕರ ಹಿಂಸಾಚಾರ ನಡೆಸುತ್ತಿದೆ ಎಂದು ಹೇಳುತ್ತ, ಅದನ್ನು ಮುಸ್ಲಿಮರ ಮೇಲೆ ಆರೋಪಿಸಲು ನೋಡಲಾಗುತ್ತಿದೆ. ಅಲ್ಲಿ ಮುಸ್ಲಿಮರ ಮೇಲೆ ಗುಜರಾತ್-2002 ರ ಹತ್ಯಾಕಾಂಡದಂತಹ ದಾಳಿ ನಡೆಯಬೇಕು ಎಂದು ಕಂಗನಾ-ಮಂಗನಾ, ಬೆಳವಾಡಿಗಳು ಆಗ್ರಹಿಸಿದ್ದಾರೆ! ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರದಲ್ಲಿ ಅಲ್ಲಲ್ಲಿ ಸ್ಥಳಿಯ ಮಟ್ಟದಲ್ಲಿ ರಾಜಕೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ, ಹಳೆಯ ಮತ್ತು ಸಂಬಂಧವಿಲ್ಲದ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ ಮತ್ತು ಇದನ್ನು ಕೋಮುವಾದಿ ಆಯಾಮಕ್ಕೆ ತಿರುಗಿಸಲು ನೋಡುತ್ತಿವೆ.

ಹಳೆಯ ಫೋಟೊ ಮತ್ತು ವಿಡೀಯೋಗಳನ್ನು ಹಾಕಿ, ಅಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ಸಂಭವಿಸುತ್ತಿದೆ ಎಂದು ಸುಳ್ಳು ಹರಡಲಾಗುತ್ತಿದೆ. ಅಲ್ಟ್‌ನ್ಯೂಸ್ ಫ್ಯಾಕ್ಟ್‌ಚೆಕ್ ಮಾಡಿ ಹಲವಾರು ಸುಳ್ಳುಗಳನ್ನು ಬಯಲು ಮಾಡಿದೆ. ಅದರಲ್ಲಿ ಕೆಲವನ್ನು ಲಿಂಕ್ ಸಮೇತ ಇಲ್ಲಿ ನೀಡಿದ್ದೇವೆ.

  • ಪ್ರಶ್ನಾರ್ಹ ಚಿತ್ರವು 2019 ರ ಮೇ ತಿಂಗಳಲ್ಲಿ ವಿದ್ಯಾಸಾಗರ್ ಕಾಲೇಜಿನಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಬೆಂಬಲಿಗರ ನಡುವಿನ ಘರ್ಷಣೆಗೆ ಸಂಬಂಧಿಸಿದೆ. ಚಿತ್ರವನ್ನು ಸ್ಟೇಟ್ಸ್‌ಮನ್ ಮತ್ತು ಸ್ವರಾಜ್ ಡಿಜಿಟಲ್ ಆಗಲೇ ಪ್ರಕಟಿಸಿವೆ. ಇದನ್ನು ಮತದಾನದ ನಂತರದ ಹಿಂಸಾಚಾರ ಎಂದು Twitter@ishowcase01 ಪ್ರಸಾರ ಮಾಡಿದ್ದು, ಅದು ಈಗ ಸಕ್ರಿಯವಾಗಿಲ್ಲ! ಗೃಹ ಸಚಿವ ಅಮಿತ್ ಶಾ ಅವರ ಬೃಹತ್ ರೋಡ್ ಶೋ ಸಂದರ್ಭದಲ್ಲಿ ಬಿಜೆಪಿ ಮತ್ತು ಟಿಎಂಸಿ ಬೆಂಬಲಿಗರು ಕೋಲ್ಕತ್ತಾದ ಬೀದಿಗಳಲ್ಲಿ ಬಡಿದಾಡಿದರು ಎಂದು ಸ್ಟೇಟ್ಸ್‌ಮನ್ ವರದಿ ಮಾಡಿತ್ತು. ಈಗ ಅದನ್ನು ಚುನಾವಣಾ ಫಲಿತಾಂಸದ ನಂತರದ ಘಟನೆ ಎಂದು ಸುಳ್ಳು ಹರಡಲಾಗಿದೆ. ಅದರ ಫ್ಯಾಕ್ಟ್‌‌ಚೆಕ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: ವಾರಣಾಸಿ, ಅಯೋಧ್ಯ, ಮಥುರಾ ಪಂಚಾಯತ್‌ ಚುನಾವಣೆ: ಆದಿತ್ಯನಾಥ್‌ ಸರ್ಕಾರಕ್ಕೆ ಭಾರಿ ಮುಖಭಂಗ!

  • ರಾಮ ನವಮಿ ಸಂಭ್ರಮಾಚರಣೆಯ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರದ ಹಳೆಯ ಚಿತ್ರವನ್ನು ಹಾಕಿ, ಇತ್ತೀಚಿನ ಅಸೆಂಬ್ಲಿ ಫಲಿತಾಂಶದ ನಂತರದಲ್ಲಿ ನಡೆದ ಹಿಂಸಾಚಾರ ಎಂದು ಸುಳ್ಳು ಹರಡಲಾಗಿದೆ. ಇಲ್ಲಿ ಕ್ಲಿಕ್ ಮಾಡಿ.
  • ಹಲವಾರು ಟಿಎಂಸಿ ಸದಸ್ಯರು ಅಥವಾ ಬೆಂಬಲಿಗರು ಬಂಗಾಳಿ ಗೀತೆ ’ಖೇಲಾ ಹೋಬೆ’ಗೆ ಕತ್ತಿ ಮತ್ತು ಬಂದೂಕುಗಳನ್ನು ಹಿಡಿದು ನರ್ತಿಸುವ 16 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಡ ಬಿಜೆಪಿ ಬೆಂಬಲಿಗರು, ಮೊನ್ನೆಯ ಚುನಾವಣಾ ಫಲಿತಾಂಶದ ನಂತರದ ಘಟನೆ ಎಂದು ಅಪಪ್ರಚಾರ ಮಾಡಿದ್ದಾರೆ. ಈ ಹಾಡು ಇತ್ತೀಚಿನ ಚುನಾವಣೆಗಳಲ್ಲಿ ಟಿಎಂಸಿ ಧ್ಯೇಯ ಗೀತೆ ಆಗಿತ್ತು. ಆಲ್ಟ್ ನ್ಯೂಸ್ ಈ ವೀಡಿಯೊವನ್ನು ಕಳೆದ ವರ್ಷ ಅಪ್ಲೋಡ್ ಮಾಡಲಾಗಿದೆ ಎಂಬುದನ್ನು ಕಂಡು ಹಿಡಿದಿದೆ. ಸಂಗೀತಗಾರ ತನ್ಮೋಯ್ ಅಭಿನಾಬಾ ಬ್ಯಾನರ್ಜಿ 2021 ರಲ್ಲಿ `ಖೇಲಾ ಹೋಬೆ’ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಅಂದರೆ ಈ ಹಾಡು ಕಳೆದ ವರ್ಷ ಇರಲೇ ಇಲ್ಲ! ಈ ಹಾಡನ್ನು ಹಳೆಯ ವಿಡಿಯೊದಲ್ಲಿ ಸೂಪರ್ ಇಂಪೋಸ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿದೆ.
  • ಒಡಿಶಾದಲ್ಲಿ ಜನರು ಪೊಲೀಸರ ಮೇಲೆ ದಾಳಿ ಮಾಡಿದ ಹಳೆ ವಿಡಿಯೋ-ಫೋಟೊಗಳನ್ನು, ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರ ಎಂದು ಹಂಚಿಕೊಂಡಿದ್ದಾರೆ.
  • ಯುವಕನೊಬ್ಬನ ಸಾವಿನ ನಂತರ ಒಡಿಶಾದಲ್ಲಿ ಪೊಲೀಸ್ ವಾಹನದ ಮೇಲೆ ಜನರು ಮುಗಿಬಿದ್ದ ಹಳೆಯ ವಿಡಿಯೋವನ್ನು ಪಶ್ಚಿಮ ಬಂಗಾಳದಲ್ಲಿ ಮತದಾನದ ನಂತರದ ಹಿಂಸಾಚಾರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ: ನಟಿ ಕಂಗನಾ ರಣಾವತ್‌ ಖಾತೆಯನ್ನು ಶಾಶ್ವತವಾಗಿ ಅಮಾನತು ಮಾಡಿದ ಟ್ವಿಟರ್‌!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...