ಕೊರೊನಾ ವಿರುದ್ದದ ಹೋರಾಟಕ್ಕೆ ನೆರೆಹೊರೆಯ ಸಣ್ಣ ದೇಶಗಳು ಭಾರತಕ್ಕೆ ಸಹಾಯ ನೀಡುತ್ತಿದೆ, ಆದರೆ ಕೇಂದ್ರದ ಮೋದಿ ಸರ್ಕಾರ ಮಾತ್ರ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಬಹುಕೋಟಿಯ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸಲು ಕೂಡಾ ಸಿದ್ಧವಾಗಿಲ್ಲ ಎಂದು ಶಿವಸೇನೆ ಶನಿವಾರ ಕೇಂದ್ರದ ವಿರುದ್ದ ಕಿಡಿ ಕಾರಿದೆ.
ಹಿಂದಿನ ಪ್ರಧಾನ ಮಂತ್ರಿಗಳಾದ ಪಂಡಿತ್ ಜವಾಹರಲಾಲ್ ನೆಹರು, ಇಂದಿರಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಸೇರಿದಂತೆ ಕಳೆದ 70 ವರ್ಷಗಳಲ್ಲಿ ನಿರ್ಮಿಸಲಾದ ವ್ಯವಸ್ಥೆಯೆ ಈ ಕಠಿಣ ಸಂದರ್ಭವನ್ನು ಎದುರಿಸಲು ದೇಶಕ್ಕೆ ಸಹಾಯ ಮಾಡಿದೆ ಎಂದು ಶಿವಸೇನೆ ಹೇಳಿದೆ.
ಇದನ್ನೂ ಓದಿ: ನಮ್ಮನ್ನು ನೋಡಿ ನಗುತ್ತಿದ್ದರೆ, ಮುಂಬೈ ಮಾದರಿಯನ್ನು ಹೇಗೆ ಹಂಚಿಕೊಳ್ಳುವುದು: ಮುಂಬೈ ಆಯುಕ್ತ
“ದೇಶದಲ್ಲಿ ಕೊರೊನಾ ವೈರಸ್ ಹರಡುವ ವೇಗದಿಂದಾಗಿ ಭಾರತವು ಜಗತ್ತಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ಯುನಿಸೆಫ್ ಆತಂಕ ವ್ಯಕ್ತಪಡಿಸಿದೆ. ಅದು ಕೊರೊನಾ ವಿರುದ್ಧದ ಹೋರಾಟದಲ್ಲಿ ಗರಿಷ್ಠ ಸಂಖ್ಯೆಯ ದೇಶಗಳು ಭಾರತಕ್ಕೆ ಸಹಾಯ ಮಾಡಬೇಕೆಂದು ಮನವಿ ಮಾಡಿದೆ. ಬಾಂಗ್ಲಾದೇಶ 10,000 ರೆಮ್‌ಡೆಸಿವಿರ್ ಬಾಟಲುಗಳನ್ನು ಕಳುಹಿಸಿದರೆ, ಭೂತಾನ್ ವೈದ್ಯಕೀಯ ಆಮ್ಲಜನಕವನ್ನು ಕಳುಹಿಸಿದೆ. ನೇಪಾಳ, ಮ್ಯಾನ್ಮಾರ್ ಮತ್ತು ಶ್ರೀಲಂಕಾ ಸಹ ‘ಆತ್ಮನಿರ್ಭರ್’ ಭಾರತಕ್ಕೆ ಸಹಾಯವನ್ನು ನೀಡಿವೆ” ಎಂದು ಶಿವಸೇನೆಯ ಮುಖವಾಣಿ ಸಾಮ್ನಾದಲ್ಲಿನ ಸಂಪಾದಕೀಯದಲ್ಲಿ ಪಕ್ಷವು ತಿಳಿಸಿದೆ.
“ಸ್ಪಷ್ಟವಾಗಿ ಹೇಳುವುದಾದರೆ, ನೆಹರೂ-ಗಾಂಧಿ ನಿರ್ಮಿಸಿದ ವ್ಯವಸ್ಥೆಯಲ್ಲಿ ಭಾರತ ಉಳಿದುಕೊಂಡಿದೆ. ಅನೇಕ ಬಡ ದೇಶಗಳು ಭಾರತಕ್ಕೆ ಸಹಾಯವನ್ನು ನೀಡುತ್ತಿವೆ. ಈ ಹಿಂದೆ ಪಾಕಿಸ್ತಾನ, ರುವಾಂಡಾ ಮತ್ತು ಕಾಂಗೋ ಮುಂತಾದ ದೇಶಗಳು ಇತರರಿಂದ ಸಹಾಯ ಪಡೆಯುತ್ತಿದ್ದವು. ಆದರೆ ಇಂದಿನ ಆಡಳಿತಗಾರರ ತಪ್ಪು ನೀತಿಗಳಿಂದಾಗಿ ಭಾರತವು ಈಗ ಆ ಪರಿಸ್ಥಿತಿಯನ್ನು ಎದುರಿಸುತ್ತಿದೆ” ಎಂದು ಅದು ಹೇಳಿದೆ.
ಇದನ್ನೂ ಓದಿ: ರಾಜ್ಯಕ್ಕೆ ಆಮ್ಲಜನಕ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ಆದೇಶ- ’ಬೆಡ್’ ವಿಚಾರದಲ್ಲೇ ಇರುವ BJP ಸಂಸದರು!
ಆದರೆ ಈ ಬಡ ದೇಶಗಳು ಭಾರತಕ್ಕೆ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡುತ್ತಿದ್ದರೆ, ದೆಹಲಿಯಲ್ಲಿನ 20,000 ಕೋಟಿ ಮೌಲ್ಯದ ಸೆಂಟ್ರಲ್ ವಿಸ್ಟಾದ ಯೋಜನೆಯನ್ನು ನಿಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಸಿದ್ಧರಿಲ್ಲ ಎಂದು ಶಿವಸೇನೆ ಹೇಳಿದೆ.
ಒಂದು ಕಡೆ ಭಾರತವು ಬಾಂಗ್ಲಾದೇಶ, ಶ್ರೀಲಂಕಾ ಮತ್ತು ಭೂತಾನ್ ಮುಂತಾದ ದೇಶಗಳ ಸಹಾಯವನ್ನು ಸ್ವೀಕರಿಸುತ್ತಿದೆ, ಮತ್ತೊಂದೆಡೆ ಬಹು ಕೋಟಿಯ ಸೆಂಟ್ರಲ್ ವಿಸ್ಟಾ ಯೋಜನೆಯ ಕೆಲಸವನ್ನು ನಿಲ್ಲಿಸಲು ಪ್ರಧಾನಿ ಮೋದಿ ಸಿದ್ಧರಿಲ್ಲ ಎಂಬ ಬಗ್ಗೆ ಯಾರೂ ವಿಷಾದ ವ್ಯಕ್ತಪಡಿಸುತ್ತಿಲ್ಲ ಎಂದು ಪಕ್ಷವು ಆಶ್ಚರ್ಯ ವ್ಯಕ್ತಪಡಿಸಿದೆ.
ಕೊರೊನಾ ಎರಡನೇ ಅಲೆಯ ವಿರುದ್ದ ಜಗತ್ತು ಹೋರಾಡುತ್ತಿದ್ದರೆ, ಮೂರನೇ ಅಲೆವು ಇದಕ್ಕಿಂತ ಹೆಚ್ಚು ತೀವ್ರವಾಗಿರುತ್ತದೆ ಎಂದು ತಜ್ಞರು ಊಹಿಸಿದ್ದಾರೆ ಎಂದು ಶಿವಸೇನೆ ಹೇಳಿದೆ. ಆದರೆ ಆಡಳಿತಾರೂಢ ಬಿಜೆಪಿ ಇಂದಿಗೂ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯನ್ನು ಮೂಲೆಗುಂಪು ಮಾಡಲು ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೋಮು ಸಾಮರಸ್ಯ ಕದಡುವ ಯತ್ನ: ತೇಜಸ್ವಿ ಸೂರ್ಯ ವಿರುದ್ಧ ದೂರು ದಾಖಲಾಗಲಿದೆಯೇ?



We are beggars now before the world community
Vishva Guru?