ನ್ಯಾಯಾಲಯದಲ್ಲಿ ನಡೆಯುವ ಕಲಾಪಗಳನ್ನು (ಹಿಯರಿಂಗ್ಸ್) ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡುವ ಐತಿಹಾಸಿಕ ನಿರ್ಧಾರವನ್ನು ಕರ್ನಾಟಕ ಹೈಕೋರ್ಟ್ ಸೋಮವಾರ ತೆಗೆದುಕೊಂಡಿದೆ. ಕೋರ್ಟ್‌ನ ಈ ತೀರ್ಮಾನದಿಂದ ಹೈಕೋರ್ಟ್‌ನಲ್ಲಿ ನಡೆಯುವ ಕಲಾಪಗಳು ಜನರು ಲೈವ್‌ನಲ್ಲಿ ವೀಕ್ಷಿಸುವ ಅವಕಾಶ ಸಿಗಲಿದೆ.
ಕರ್ನಾಟಕ ಹೈಕೋರ್ಟ್‌ನ ಹಾಲ್ ನಂ.1 ರಲ್ಲಿ ನಡೆಯುವ ಎಲ್ಲಾ ರೀತಿಯ ಕಲಾಪಗಳು ಯೂಟ್ಯೂಬ್ ಮೂಲಕ ನೇರ ಪ್ರಸಾರವಾಗಲಿವೆ ಎಂದು ರಾಜ್ಯ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರು ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಲಾಕ್‌ಡೌನ್-2020 ಸಮಯದಲ್ಲಿ 1200 ಕಿ.ಮಿ ಸೈಕಲ್ ತುಳಿದಿದ್ದ ಬಾಲಕಿಯ ತಂದೆ ಸಾವು
ಜನಸಾಮಾನ್ಯರಿಗೆ ಹೈಕೋರ್ಟ್ ಕಲಾಪವನ್ನು ನೇರವಾಗಿ ವೀಕ್ಷಿಸಲು ಅನುವು ಮಾಡಿಕೊಡಲಾಗಿದ್ದು, ಇಂದು (ಸೋಮವಾರ) ಹೈಕೋರ್ಟ್ ಹಾಲ್ ನಂ.1ರ ಕಲಾಪವನ್ನು ಪ್ರಯೋಗಿಕವಾಗಿ ನೇರ ಪ್ರಸಾರ ಮಾಡಲಾಗಿದೆ.
ಇದೇ ಮೊದಲ ಬಾರಿಗೆ ಹೈಕೋರ್ಟ್ ಕಲಾಪದ ನೇರ ಪ್ರಸಾರವನ್ನು ಮಾಡಲಾಗಿದೆ. ಈಗಾಗಲೇ ಮಧ್ಯಪ್ರದೇಶ ಹೈಕೋರ್ಟ್, ಸುಪ್ರೀಂಕೋರ್ಟ್ ಕೂಡ ಕಲಾಪದ ನೇರಪ್ರಸಾರದ ಚಿಂತನೆ ನಡೆಸಿದೆ. ಇದರ ಮಧ್ಯೆ ರಾಜ್ಯ ಹೈಕೋರ್ಟ್ ಕಲಾಪವನ್ನು ನೇರ ಪ್ರಸಾರದ ಮೂಲಕ, ಜನಸಾಮಾನ್ಯರೂ ವೀಕ್ಷಿಸುವಂತ ವ್ಯವಸ್ಥೆ ಮಾಡಲಾಗಿದೆ.
ಇಂದಿನಿಂದ ಕರ್ನಾಟಕ ಹೈಕೋರ್ಟ್ ಹಾಲ್ ನಂ.1ರ ಕೋರ್ಟ್ ಕಲಾಪದ ಪ್ರಾಯೋಗಿಕ ನೇರ ಪ್ರಸಾರ ಆರಂಭಗೊಂಡಿದ್ದು, ಜನ ಸಾಮಾನ್ಯರು ಯೂಟ್ಯೂಬ್ ನಲ್ಲಿ ಹೈಕೋರ್ಟ್ ಹಾಲ್ ನಂ.1ರ ಕಲಾಪವನ್ನು ನೇರ ಪ್ರಸಾರದ ಮೂಲಕ ವೀಕ್ಷಿಸಬಹುದು.
ಇದನ್ನೂ ಓದಿ: ಮೋದಿ ಸರ್ಕಾರ ಭಾರತ ಮಾತೆಯ ಎದೆ ಬಗೆಯುತ್ತಿದೆ: ರಾಹುಲ್ ಗಾಂಧಿ ಆಕ್ರೋಶ


