Homeಮುಖಪುಟಲಾಕ್‌ಡೌನ್‌-2020 ಸಮಯದಲ್ಲಿ 1200 ಕಿ.ಮಿ ಸೈಕಲ್ ತುಳಿದಿದ್ದ ಬಾಲಕಿಯ ತಂದೆ ಸಾವು

ಲಾಕ್‌ಡೌನ್‌-2020 ಸಮಯದಲ್ಲಿ 1200 ಕಿ.ಮಿ ಸೈಕಲ್ ತುಳಿದಿದ್ದ ಬಾಲಕಿಯ ತಂದೆ ಸಾವು

- Advertisement -
- Advertisement -

ಕಳೆದ ವರ್ಷ ಕೇಂದ್ರದ ಬಿಜೆಪಿ ಸರ್ಕಾರ ಹೇರಿದ್ದ ಲಾಕ್‌ಡೌನ್‌ನಿಂದಾಗಿ ಗುರುಗ್ರಾಮ್‌ನಲ್ಲಿ ಸಿಲುಕಿಕೊಂಡಿದ್ದ ತನ್ನ ಗಾಯಗೊಂಡ ತಂದೆಯನ್ನು 1,200 ಕಿ.ಮೀ ಗಿಂತಲೂ ದೂರದ ಹಳ್ಳಿಗೆ ಸೈಕಲ್‌ನ ಹಿಂಭಾಗದಲ್ಲಿ ಕೂರಿಸಿ ಕರೆದೊಯ್ದ ಜ್ಯೋತಿ ಕುಮಾರಿ ಎಂಬ ಬಿಹಾರ ಮೂಲದ ಬಾಲಕಿಯ ತಂದೆ ಮೋಹನ್ ಪಾಸ್ವಾನ್ ಅವರು ಹೃದಯಾಘಾತದಿಂದ ಸೋಮವಾರ ಮೃತಪಟ್ಟಿದ್ದಾರೆ.

ದರ್ಬಂಗಾ ಜಿಲ್ಲೆಯ ಸಿರ್ಹುಲ್ಲಿ ಗ್ರಾಮದ ನಿವಾಸಿಯಾಗಿದ್ದ ಅವರು ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದು, ಮೃತರಿಗೆ ನೆರವು ಮತ್ತು ಗೌರವ ಸಲ್ಲಿಸಲು ಸಂಬಂಧಪಟ್ಟ ಸಿಂಗ್‌ಬರಾ ಬ್ಲಾಕ್‌ನ ಬಿಡಿಒ ಅವರನ್ನು ಗ್ರಾಮಕ್ಕೆ ಕಳಿಸಲಾಗಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಾಲಕಿ ಜ್ಯೋತಿ 1200 ಕಿ.ಮಿ. ಕ್ರಮಿಸಿದ್ದು ಭಾರತೀಯರ ಸುಂದರವಾದ ಸಾಧನೆಯೆಂದ ಇವಾಂಕ ಟ್ರಂಪ್: ಹಲವರ ಆಕ್ರೋಶ

2020 ರ ಮಾರ್ಚ್‌ ಅಂತ್ಯದಲ್ಲಿ ದೇಶಾದ್ಯಂತ ಹೇರಲಾದ ಲಾಕ್‌ಡೌನ್‌ ಸಮಯದಲ್ಲಿ ಹದಿಮೂರು ವರ್ಷದ ಜ್ಯೋತಿ ಕುಮಾರಿ ಅವರು ತಮ್ಮ ತಂದೆಯನ್ನು ಗುರುಗ್ರಾಮದಿಂದ ಬಿಹಾರದಲ್ಲಿರುವ ತಮ್ಮ ಗ್ರಾಮಕ್ಕೆ ಕರೆತರಲು ಬರೋಬ್ಬರಿ 1200 ಕಿ.ಮೀ ಸೈಕಲ್ ತುಳಿದಿದ್ದರು. ಈ ಘಟನೆಗೆ ಇಡೀ ವಿಶ್ವವೇ ಮರುಕ ಪಟ್ಟಿತ್ತು ಮತ್ತು ಇಂತಹ ಸಮಸ್ಯೆಯನ್ನು ಸೃಷ್ಟಿಸಿದ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತವಾಗಿತ್ತು.

ಮಾಧ್ಯಮಗಳು ಅವರ ಪ್ರಯಾಣದ ಬಗ್ಗೆಗಿನ ವರದಿಯನ್ನು ಮಾಡಿದ ನಂತರ ಬಾಲಕಿಯನ್ನು ಬಿಹಾರದ ‘ಸೈಕಲ್‌ ಹುಡುಗಿ’ ಎಂದು ಕರೆಯಲಾಗಿತ್ತು. ಅಲ್ಲದೆ, ಅಧಿಕಾರಿಗಳು ಆಕೆಗೆ ಕ್ರೀಡಾ ಬೈಸಿಕಲ್ ಅನ್ನು ಉಡುಗೊರೆಯಾಗಿ ನೀಡಿದ್ದರು. ಜೊತೆಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಹಲವಾರು ರೀತಿಯ ನೆರವನ್ನು ಘೋಷಿಸಲಾಗಿತ್ತು.

ಕಳೆದ ವರ್ಷವು ಕೇಂದ್ರ ಸರ್ಕಾರವು ಯಾವುದೆ ಮುನ್ಸೂಚನೆಯಿಲ್ಲದೆ ದೇಶದಾದ್ಯಂತ ಕೊರೊನಾ ಲಾಕ್‌ಡೌನ್‌ ಹೇರಿದ್ದರಿಂದ ಕೋಟ್ಯಾಂತರ ವಲಸೆ ಕಾರ್ಮಿಕರು ಸಂಕಷ್ಟಕ್ಕೆ ಈಡಾದರು. ಲಕ್ಷಾಂತರ ಕಾರ್ಮಿಕರು ತಮ್ಮ ರಾಜ್ಯಗಳಿಗೆ ತೆರಳಲು ಸಾರಿಗೆ ವ್ಯವಸ್ಥೆಯಿಲ್ಲದೆ ಪರದಾಡುವಂತಾಯಿತು. ವಲಸೆ ಕಾರ್ಮಿಕರು ಸಾವಿರಾರು ಕಿ.ಮಿ. ದೂರವಿರುವ ತಮ್ಮ ಹಳ್ಳಿಗಳಿಗೆ ತೆರಳಲು ನಡಿಗೆಯನ್ನೇ ಆಶ್ರಯಿಸಿದ್ದು, ದೇಶವು ಮಹಾವಲಸೆಗೆ ಕಾರಣವಾಯಿತು.

ಈ ವೇಳೆ ಹಲವು ಕಾರ್ಮಿಕರು ದೇಶದ ಹೆದ್ದಾರಿಗಳಲ್ಲಿ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಾಲುಗಟ್ಟಿ ನಿಂತ ವಲಸೆ ಕಾರ್ಮಿಕರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ದ್ವೇಷ ಭಾಷಣ: ಮೋದಿಗೆ ಕಳುಹಿಸುವ ಬದಲು ‘ಜೆ.ಪಿ.ನಡ್ಡಾ’ಗೆ ನೊಟೀಸ್‌ ನೀಡಿದ ಚುನಾವಣಾ ಆಯೋಗ!

0
ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ದೂರುಗಳ ಆಧಾರದ ಮೇಲೆ ಚುನಾವಣಾ ಆಯೋಗವು ಮಾದರಿ ನೀತಿ ಸಂಹಿತೆ ಉಲ್ಲಂಘನೆಗಾಗಿ ನೋಟಿಸ್ ನೀಡಿದೆ. ಆದರೆ, ಈ ನೊಟೀಸ್‌ನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರಿಗೆ ಕಳುಹಿಸಲಾಗಿದ್ದು,...