Homeಚಳವಳಿದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಗಟ್ಟಿ: ರಾಜ್ಯಾದ್ಯಂತ ಹಕ್ಕೊತ್ತಾಯ ಸಲ್ಲಿಕೆ

ದಲಿತರ ಮೇಲಿನ ದೌರ್ಜನ್ಯ, ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಗಟ್ಟಿ: ರಾಜ್ಯಾದ್ಯಂತ ಹಕ್ಕೊತ್ತಾಯ ಸಲ್ಲಿಕೆ

- Advertisement -
- Advertisement -

ಕೋವಿಡ್‌ ಸಾಂಕ್ರಾಮಿಕದಿಂದಾಗಿ ಇಡೀ ಪ್ರಪಂಚವೇ ನಲುಗಿ ಹೋಗಿದೆ. ಲಕ್ಷಾಂತರ ಸಾವುಗಳು ಸಂಭವಿಸಿವೆ. ಅತಿ ದೊಡ್ಡ ಮಾನವೀಯ ಬಿಕ್ಕಟ್ಟು ಸೃಷ್ಟಿಯಾಗಿದ್ದು ಭಾರತವು ಹೆಚ್ಚು ಹೊಡೆತ ತಿಂದಿದೆ. ಜೀವನದ ಅರ್ಥವೇನು? ಬದುಕಿನ ಮಹತ್ವವೇನು ಎಂಬುದನ್ನು ಕೋವಿಡ್ ಪಾಠ ಮಾಡಿ ಹೋಗಿದೆ. ಆದರೆ ಇದರಿಂದ ಪಾಠ ಕಲಿಯದ ಬಹಳಷ್ಟು ಮಂದಿ ತಮ್ಮ ಹಿಂದಿನ ವಿಕೃತಿ, ದರ್ಪ, ಸಣ್ಣತಣಗಳಲ್ಲಿಯೇ ಮುಳುಗಿದ್ದಾರೆ. ಹಾಗಾಗಿಯೇ ಕೋವಿಡ್ ಸಂದರ್ಭದಲ್ಲಿಯೂ ಸಹ ದಲಿತರ ಮೇಲೆ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ಅತ್ಯಾಚಾರಗಳು ಎಗ್ಗಿಲ್ಲದೆ ನಡೆಯುತ್ತಿವೆ. ಇದನ್ನು ಖಂಡಿಸಿ ಇಂದು ದಲಿತ ಸಂಘಟನೆಗಳ ಒಕ್ಕೂಟ ಮತ್ತು ಕರ್ನಾಟಕ ಜನಶಕ್ತಿ ಸಂಘಟನೆಯು ರಾಜ್ಯಾದ್ಯಂತ ಹಕ್ಕೊತ್ತಾಯ ಸಲ್ಲಿಸಿದೆ.

ಬೆಳಗಾವಿಯ ರಾಮದುರ್ಗದಲ್ಲಿ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ, ವಿಜಯಪುರದ ಕುದುರಿ ಸಾಲವಾಡಗಿಯಲ್ಲಿ ಇಬ್ಬರು ದಲಿತ ಯುವತಿಯರ ಅತ್ಯಾಚಾರ ಮತ್ತು ಕೊಲೆ,  ಸುರಪುರದ ಶಾಖಾಪುರ ಹೆಚ್.ಎಸ್ ನಲ್ಲಿ ದಲಿತ ಕುಟುಂಬದ ಮೇಲೆ ಹಲ್ಲೆ ನಡೆಸಲಾಗಿದೆ.

ಅದೇ ರೀತಿಯಲ್ಲಿ ಜಗಳೂರಿನ ಕಸವನಹಳ್ಳಿ ಯುವತಿಗೆ ಫೀಸ್ ಕಟ್ಟಿಲ್ಲವೆಂದು ಪ್ರಾಂಶುಪಾಲರಿಂದಲೇ ಜಾತಿ ನಿಂದನೆ ಮಾಡಿದ್ದಾರೆ. ಅವಮಾನ ತಾಳಲಾರದೆ ಯುವತಿ ಕಾಲೇಜಿನ ಮೂರನೇ ಮಹಡಿಯಿಂದ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ಚಿಕ್ಕಮಗಳೂರಿನ ಗೋಣಿಬೀಡುನಲ್ಲಿ ಪಿಎಸ್‌ಐ ಒಬ್ಬ ದಲಿತ ಯುವಕನಿಗೆ ಮೂತ್ರ ಕುಡಿಯುವಂತೆ ಮಾಡಿದ್ದಾನೆ.. ಈ ಎಲ್ಲಾ ದೌರ್ಜನ್ಯಗಳು ಕೇವಲ ಎರಡು ತಿಂಗಳ ಅವಧಿಯಲ್ಲಿ ಜರುಗಿವೆ.. ಈ ಅವಮಾನಗಳನ್ನು ಎಲ್ಲಿಯತನಕ ಸಹಿಸಿಕೊಳ್ಳಬೇಕು ಎಂದು ದಸಸಂ ಒಕ್ಕೂಟ ಪ್ರಶ್ನಿಸಿದೆ.

ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಮತ್ತು ಬಡಜನತೆಗೆ ಪ್ಯಾಕೇಜ್ ಜಾರಿಯಾಗಲಿ ಎಂಬ ಹಕ್ಕೊತ್ತಾಯಗಳನ್ನಿಟ್ಟುಕೊಂಡು ದಸಸಂ ಒಕ್ಕೂಟ ಮತ್ತು ಕರ್ನಾಟಕ ಜನಶಕ್ತಿ ರಾಜ್ಯಾದ್ಯಂತ ಪ್ರತಿಭಟನೆ ಮತ್ತು ಹಕ್ಕೊತ್ತಾಯ ಪತ್ರಗಳನ್ನು ಸಲ್ಲಿಸಲಾಗಿದೆ.

ದಲಿತರ ಮೇಲೆ ಹೆಚ್ಚುತ್ತಿರುವ ಜಾತಿ ದೌರ್ಜನ್ಯಗಳನ್ನು ಖಂಡಿಸಿ ಮತ್ತು
ಬಡವರೆಲ್ಲರಿಗೂ ಸಮಗ್ರ ದಿನಸಿ ಹಾಗೂ ಮಾಸಿಕ 5000 ರೂ ನೆರವು ಧನ ನೀಡಲೆಬೇಕೆಂದು ಆಗ್ರಹಿಸಿ ಇಂದು ವಿಜಯಪುರ, ಬಳ್ಳಾರಿ, ವಿಜಯನಗರ, ದಾವಣಗೆರೆ, ಮಂಡ್ಯ, ಚಿತ್ರದುರ್ಗ, ರಾಯಚೂರು, ಕೊಪ್ಪಳ, ಚಿಕ್ಕಮಗಳೂರು, ತುಮಕೂರು ಜಿಲ್ಲೆಗಳಲ್ಲಿ ಪ್ರತಿಭಟನೆ ಮತ್ತು ಹಕ್ಕೊತ್ತಾಯ ಸಲ್ಲಿಕೆ ನಡೆದಿದೆ.

ಅದರ ಕೆಲವು ಫೋಟೊಗಳು ಇಲ್ಲಿವೆ.


ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ 8,000 ಮಕ್ಕಳಿಗೆ ತಗುಲಿದ ಕೊರೋನಾ: ಕೋವಿಡ್‌ 3 ನೇ ಅಲೆಯ ಮುನ್ಸೂಚನೆ?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ಗೆ ಯಾರೂ ದೇಶ ಪ್ರೇಮದ ಪಾಠ ಹೇಳಿ ಕೊಡುವ ಅಗತ್ಯವಿಲ್ಲ: ಸಚಿವ ಪರಮೇಶ್ವರ್

0
ರಾಜ್ಯಸಭೆ ಚುನಾವಣೆಯ ಗೆಲುವಿನ ಸಂಭ್ರಮಾಚರಣೆ ವೇಳೆ ನಾಸಿರ್ ಹುಸೇನ್ ಬೆಂಬಲಿಗರು 'ಪಾಕಿಸ್ತಾನ್ ಝಿಂದಾಬಾದ್' ಘೋಷಣೆ ಕೂಗಿದ್ದಾರೆ ಎಂಬ ಆರೋಪದ ಕುರಿತು ಗೃಹ ಸಚಿವ ಡಾ.ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಗೆ ತಿರುಗೇಟು ಕೊಟ್ಟಿದ್ದಾರೆ. ಇಂದು...