ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಸೊನಿಯಾ ಗಾಂಧಿ ಅವರ ಹಿಂದೆ ಇರುವ ಪುಸ್ತಕದ ಕಪಾಟಿನಲ್ಲಿ ‘ಪವಿತ್ರ ಬೈಬಲ್’, ಯೇಸುವಿನ ಪ್ರತಿಮೆ ಮತ್ತು ‘ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ’ ಎಂಬ ಪುಸ್ತಕ ಇದೆ ಎಂದು ತೋರಿಸಲಾಗಿದೆ.
ಈ ಚಿತ್ರವನ್ನು ಟ್ವಿಟರ್‌ನಲ್ಲಿ @noconversion ಎಂಬ ಬಳಕೆದಾರ ಮೊದಲಿಗೆ ಟ್ವೀಟ್ ಮಾಡಿದ್ದರು. ಇದನ್ನು ಕೆಳಗೆ ನೋಡಬಹುದು.
ಇಷ್ಟೇ ಅಲ್ಲದೆ ತಮಿಳುನಾಡು ಬಿಜೆಪಿ ಕಾರ್ಯದರ್ಶಿ ಸುಮತಿ ವೆಂಕಟೇಶ್, ರಾಜ್ಯಸಭಾ ಸಂಸದ ಸುಬ್ರಮಣಿಯನ್ ಸ್ವಾಮಿ ಹಾಗೂ ಬಿಜೆಪಿ ಬೆಂಬಲಿಗ ರೇಣುಕಾ ಜೈನ್ ಎಂಬವರು ಕೂಡಾ ಈ ಚಿತ್ರವನ್ನು ಹಂಚಿಕೊಂಡಿದ್ದರು. ಆದರೆ ಅವರು ನಂತರ ಅದನ್ನು ಡಿಲಿಟ್ ಮಾಡಿದ್ದಾರೆ. ಅಲ್ಲದೆ ಈ ಚಿತ್ರವು ಫೇಸ್‌ಬುಕ್‌ನಲ್ಲೂ ಪ್ರಸಾರವಾಗುತ್ತಿದೆ.
ಇದನ್ನೂ ಓದಿ: ಕೋವಿಡ್ ಸಂದರ್ಭದಲ್ಲಿ ಬಿಜೆಪಿ ಐಟಿ ಸೆಲ್, ಪೋಸ್ಟ್ ಕಾರ್ಡ್, ಬಿಜೆಪಿ ವಕ್ತಾರರು ಹೇಳಿದ ಸುಳ್ಳುಗಳು
ಫೇಸ್‌ಬುಕ್ ಗುಂಪುಗಳಾದ ಒಂದು ಲಕ್ಷ ಫಾಲೋವರ್‌ಗಳು ಇರುವ ‘ಸುದರ್ಶನ್ ನ್ಯೂಸ್’ ಮತ್ತು ಮೂರು ಲಕ್ಷ ಫಾಲೋವರ್‌ಗಳಿರುವ ‘ಪಿಎಂಒ ಇಂಡಿಯಾ ನವದೆಹಲಿ’ ಈ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಮತ್ತಷ್ಟು ಹರಿದಾಡುವಂತೆ ಮಾಡಿದೆ.

ಮಾರ್ಫ್ ಮಾಡಿರುವ ಚಿತ್ರ
ಬಹಳ ಎಚ್ಚರಿಕೆಯಿಂದ ಗಮನಿಸಿದರೆ, ಈ ಚಿತ್ರದ ಎಡಭಾಗದಲ್ಲಿ ಟ್ವಿಟ್ಟರ್ ಹ್ಯಾಂಡಲ್ ಒಂದರ ಹೆಸರು @noconversion ವಾಟರ್‌ಮಾರ್ಕ್ ಇರುವುದನ್ನು ಕಾಣಬಹುದು. ಆದ್ದರಿಂದ ಇದು ಈ ಚಿತ್ರವು ಒರಿಜಿನಲ್ ಚಿತ್ರವಲ್ಲ, ಮಾರ್ಫ್ ಮಾಡಲಾಗಿದೆ ಎಂದು ಸೂಚಿಸುತ್ತದೆ.

ಇದನ್ನೂ ಓದಿ: ಇಂದೋರ್‌ನಲ್ಲಿನ ಈ ಕೊರೊನಾ ಆರೈಕೆ ಕೇಂದ್ರ RSS ನಿರ್ಮಿಸಿದ್ದಲ್ಲ!
ವೈರಲ್ ಚಿತ್ರವನ್ನು ಫ್ಯಾಕ್ಟ್‌ಚೆಕ್ ವೆಬ್‌ಸೈಟ್ ಆಲ್ಟ್‌ನ್ಯೂಸ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಾಡಿದೆ. ಆಗ 2020 ರ ಅಕ್ಟೋಬರ್‌ನಲ್ಲಿ ಕಾಂಗ್ರೆಸ್ ಪೋಸ್ಟ್ ಮಾಡಿದ ವೀಡಿಯೊವೊಂದು ಸಿಕ್ಕಿದೆ. ವಿಡಿಯೊದಲ್ಲಿ ಸೋನಿಯಾ ಗಾಂಧಿ ಅವರು ರೈತರ ಆಂದೋಲನ ಮತ್ತು ಇಂಧನ ಬೆಲೆಗಳ ಏರಿಕೆ ಕುರಿತು ಕೇಂದ್ರವನ್ನು ಪ್ರಶ್ನಿಸಿದ್ದರು. ಈ ವಿಡಿಯೋವನ್ನು ರಾಹುಲ್ ಗಾಂಧಿ ಕೂಡ ಟ್ವೀಟ್ ಮಾಡಿದ್ದಾರೆ. ವಾಸ್ತವವಾಗಿ, ಆ ಪುಸ್ತಕದ ಕಪಾಟಿನ ಮುಂದೆ ಸೋನಿಯಾ ಗಾಂಧಿ ಮಾತನಾಡುತ್ತಿರುವ ಅನೇಕ ವೀಡಿಯೊಗಳನ್ನು ಕಾಂಗ್ರೆಸ್ ಟ್ವೀಟ್ ಮಾಡಿದೆ.
‘बदलाव की बयार है।’
कांग्रेस अध्यक्ष श्रीमती सोनिया गांधी जी का बिहार की जनता के नाम संदेश आपसे साझा कर रहा हूँ।
नए बिहार के लिए एकजुट होकर महागठबंधन को जीताने का समय है। pic.twitter.com/ptmzjEjQuh
— Rahul Gandhi (@RahulGandhi) October 27, 2020
ಆಲ್ಟ್ ನ್ಯೂಸ್ ವೆಬ್‌ಸೈಟ್ ವೀಡಿಯೊದಲ್ಲಿನ ಸ್ಕ್ರೀನ್‌ಶಾಟ್ ಅನ್ನು ವೈರಲ್ ಚಿತ್ರದೊಂದಿಗೆ ಹೋಲಿಸಿದೆ. ವೀಡಿಯೊದಲ್ಲಿ ಪುಸ್ತಕದ ಕಪಾಟಿನಲ್ಲಿ ‘ಭಾರತವನ್ನು ಕ್ರಿಶ್ಚಿಯನ್ ರಾಷ್ಟ್ರವಾಗಿ ಪರಿವರ್ತಿಸುವುದು ಹೇಗೆ’ ಮತ್ತು ‘ಹೋಲಿ ಬೈಬಲ್’ ಮತ್ತು ಯೇಸುವಿನ ಪ್ರತಿಮೆ ಇಲ್ಲದಿರುವುದನ್ನು ನಾವು ಗಮನಿಸಬಹುದಾಗಿದೆ. ಹಾಗಾಗಿ, ವೈರಲ್ ಚಿತ್ರವು ಮಾರ್ಫಿಂಗ್ ಮಾಡಿರುವ ಚಿತ್ರವಾಗಿದೆ.

ಕೃಪೆ: ಆಲ್ಟ್‌ನ್ಯೂಸ್
ಇದನ್ನೂ ಓದಿ: ಗುಜರಾತ್ ನಕಲಿ ರೆಮ್ಡೆಸಿವಿರ್ ದಂಧೆ: ಬಂಧಿತರಲ್ಲಿ ಇಬ್ಬರು ಮುಸ್ಲಿಮರಷ್ಟೇ ಅಲ್ಲ, 5 ಹಿಂದೂಗಳೂ ಇದ್ದಾರೆ!



ಫ್ಯಾಸಿಸಂ ಸತ್ಯವನ್ನು ಭಯಪಡುತ್ತದೆ. ಸುಳ್ಳು ಅದರ ಬುನಾದಿ.