Homeನ್ಯಾಯ ಪಥದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

ದೊರೆಸ್ವಾಮಿ ಶ್ರದ್ಧಾಂಜಲಿ; ಕಾಲದ ಕರೆಗೆ ಸದಾ ಸ್ಪಂದಿಸುತ್ತಿದ್ದ ಹೋರಾಟದ ಹಿರಿಯಜ್ಜ

- Advertisement -
- Advertisement -

ದೈಹಿಕವಾಗಿ ನಮ್ಮೊಡನಿಲ್ಲದ ಆದರೆ ಸದಾ ಹರಿಯುವ ಜೀವಂತಿಕೆಯ ಸೆಲೆಯಾಗಿ, ಜೀವ ಚೈತನ್ಯವಾಗಿ ನಮ್ಮೊಳಗಡೆಯೇ ಇರಲಿರುವ ಸ್ಫೂರ್ತಿಯ ಚಿಲುಮೆ ಎಚ್.ಎಸ್.ದೊರೆಸ್ವಾಮಿಯವರ ಬಗ್ಗೆ ಎಷ್ಟು ಬರೆದರೂ ಕಡಿಮೆಯೇ. ಅವರನ್ನು ನೆನೆಯುವಾಗೆಲ್ಲ ಅವರ ವಿಶಿಷ್ಟ ಗುಣಗಳಲ್ಲಿ ನನ್ನನ್ನು ಸದಾ ಅಚ್ಚರಿಗೊಳಿಸುವ, ಅರಿವಿನ ಅಳತೆಗೆ ನಿಲುಕದ ಈ ಒಂದು ಸಂಗತಿಯನ್ನು ಮಾತ್ರ ಈ ಬರಹಕ್ಕೆ ಆಯ್ದುಕೊಳ್ಳುತ್ತಿದ್ದೇನೆ. ಅದು ಸದಾ ಕಾಲ, ಕಾಲದ ಕರೆಗೆ ಸ್ಪಂದಿಸುತ್ತಿದ್ದ, ಸರ್ವರ ಒಳಿತಿಗೆ- ಸಂದರ್ಭದ ಅಗತ್ಯಕ್ಕೆ ತನ್ನನ್ನು ತಾನು ಎತ್ತರಿಸಿಕೊಳ್ಳುತ್ತಿದ್ದ, ಸದಾ ಸಮುದಾಯದೊಂದಿಗೆ ಸಮಾಜದೊಂದಿಗೆ ಎತ್ತರಕ್ಕೆ ಬೆಳೆಯುತ್ತಲೇ ಹೋದ ಅವರ ಪ್ರತಿಸ್ಪಂದಿಸುವ ಗುಣ. ಯಾವತ್ತೂ ಕಾಲ ತನ್ನ ಮೇಲೆ ಹೊರಿಸಿದ ಹೊಣೆಗಾರಿಕೆಗೆ ಬೆನ್ನುತಿರುಗಿಸದ ಸಾಮಾಜಿಕ ಬದ್ಧತೆ ಮತ್ತು ಕ್ರಿಯಾಶೀಲತೆ. ಎಷ್ಟರಮಟ್ಟಿಗೆಂದರೆ ವಯೋಸಹಜವಾದ ಯಾವುದೇ ದೈಹಿಕ-ಮಾನಸಿಕ ಒತ್ತಡಗಳೂ ಅವರ ಪ್ರಸ್ತುತದ ಕುರಿತ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ಮುಕ್ಕಾಗಿಸಲಾಗಿರಲಿಲ್ಲ.

ಸ್ವಾತಂತ್ರ್ಯಾನಂತರದಲ್ಲಿ ದೇಶ ಸಾಗಿದ ಹಾದಿಯ ಬಗ್ಗೆ ದೊರೆಸ್ವಾಮಿಯವರಿಗೆ ಸಮಾಧಾನವಿಲ್ಲದಿದ್ದು, ಆ ಕಾರಣದಿಂದಲೂ ಸೇರಿದಂತೆ ತಮ್ಮೊಳಗಿನ ಸತ್ಯ-ನ್ಯಾಯದ ಪರವಾದ ಕಿಚ್ಚಿನ ಕಾರಣಕ್ಕಾಗಿ ಅಧಿಕಾರದೆಡೆಗೆ ಸಾಗದೆ ಹೋರಾಟದ ಹಾದಿಯಲ್ಲಿ ಅವರು ಮುಂದುವರೆದಿದ್ದು ಗೊತ್ತಿರುವ ವಿಷಯ. ಹಾಗೆ ಹೋರಾಟದ ಹಾದಿಯು ಅವರಿಗೆ ಕಾಲದಿಂದ ಕಾಲಕ್ಕೆ ಹೊಳೆಸುತ್ತಾ ಹೋದ ಹೊಸ ಸತ್ಯಗಳನ್ನು ನೇರವಾಗಿ ದಿಟ್ಟವಾಗಿ ಯಾವುದೇ ಪೂರ್ವಾಗ್ರಹಗಳಿಲ್ಲದೆ ಎದುರುಗೊಳ್ಳುತ್ತಾ ಹೋದದ್ದು ಅವರ ವೈಶಿಷ್ಟ್ಯ. ಕಳೆದ ಕೆಲವು ದಶಕಗಳಲ್ಲಂತೂ ಭಾರತದಲ್ಲಿ ಎದುರಾದ ಸಂಕೀರ್ಣವಾದ ಸಾಮಾಜಿಕ ಪಲ್ಲಟಗಳನ್ನು ಹತ್ತಿರದಿಂದ ಗಮನಿಸುತ್ತಾ ವಿಶ್ಲೇಷಿಸುತ್ತಾ ಆಯಾ ಕಾಲಘಟ್ಟದಲ್ಲಿ ತಾನು ವಹಿಸಬೇಕಿರುವ ಪಾತ್ರವನ್ನೂ ನಿಭಾಯಿಸುತ್ತಾ ಬಂದವರು ದೊರೆಸ್ವಾಮಿಯವರು.

ಜಾಗತೀಕರಣದ ಅಲೆಯು ಭಾರತವನ್ನು ಅಯೋಮಯಗೊಳಿಸಿದ್ದ ಕಾಲ. 90ರ ದಶಕದಲ್ಲಿ ಒಂದೆಡೆ ಖಾಸಗೀಕರಣ, ಉದಾರೀಕರಣಗಳನ್ನು ಎತ್ತಿಹಿಡಿಯುವ ಬಲವಾದ ಮಧ್ಯಮವರ್ಗವೊಂದನ್ನು ಪ್ರವರ್ಧಮಾನಕ್ಕೆ ಬಂದಂತೆ, ಕೋಮುವಾದದ ವಿಷವನ್ನು ದೇಶದ ನರನಾಡಿಗಳೊಳಕ್ಕೆ ಇಳಿಸಿದ ಬಾಬರಿ ಮಸೀದಿಯಂತಹ ವಿನಾಶಕಾರಿ ವಿದ್ಯಮಾನಕ್ಕೂ ಸಾಕ್ಷಿಯಾಯಿತು. ಸೂಕ್ಷ್ಮ ಮನಸ್ಸಿನ ಅನೇಕರಿಗೆ ಈ ವಿದ್ಯಮಾನಗಳು ಗೊಂದಲದ ಗೂಡಾಗಿ ಉತ್ತರವಿಲ್ಲದ ಪ್ರಶ್ನೆಗಳಾಗಿ ಕಾಡಿದರೆ, ಅತ್ಯಂತ ಸ್ಪಷ್ಟವಾಗಿ ’ಜಾಗತೀಕರಣ-ಕೋಮುವಾದಗಳೆರಡೂ ಒಂದೇ ಕತ್ತಿಯ ಎರಡು ಅಲಗುಗಳು, ಎರಡನ್ನೂ ಒಟ್ಟಿಗೆ ವಿರೋಧಿಸದೆ ಗತ್ಯಂತರವಿಲ್ಲ’ ಎಂದು ಭಾವಿಸಿದವರಲ್ಲಿ ದೊರೆಸ್ವಾಮಿಯವರೂ ಮುಖ್ಯರಾದವರು. ಕೇವಲ ಅದನ್ನು ಹೇಳಿದ್ದಷ್ಟೇ ಅಲ್ಲ, ಕಾರ್ಯರೂಪಕ್ಕೆ ತರುವುದಕ್ಕೂ ಶ್ರಮಿಸಿದವರು.

ದೊರೆಸ್ವಾಮಿ, doreswamy

ಜನಪರ ಕಾಳಜಿಗಳನ್ನುಳ್ಳವರಲ್ಲೇ ಭಾರತವು ಮುಕ್ತಮಾರುಕಟ್ಟೆಗೆ ತೆರೆದುಕೊಳ್ಳಬೇಕೆಂಬುದನ್ನೂ ಬಲವಾಗಿ ಪ್ರತಿಪಾದಿಸುತ್ತಿದ್ದ ಸಾಕಷ್ಟು ಮಂದಿ ಇದ್ದ ಸಂದರ್ಭದಲ್ಲೂ, ಮುಂದೆ ಇದು ನಮ್ಮ ದೇಶವನ್ನು ಎಲ್ಲಿಗೆ ಕರೆದೊಯ್ಯಲಿದೆಯೆಂಬ ಬಗ್ಗೆ ಅತ್ಯಂತ ಸ್ಪಷ್ಟವಾಗಿ ಕಂಡು, ಮಾತನಾಡಿದವರಲ್ಲಿ ಕರ್ನಾಟಕದ ಐತಿಹಾಸಿಕ ರೈತ ಚಳವಳಿಯ ಪ್ರವರ್ತಕರಲ್ಲೊಬ್ಬರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು ಒಬ್ಬರಾದರೆ, ಎಚ್.ಎಸ್.ದೊರೆಸ್ವಾಮಿಯವರೂ ಮತ್ತೊಬ್ಬರು. ಜಾಗತೀಕರಣದ ನಂತರ ವೇಗವಾಗಿ ಬೀಸಿದ ಉದಾರೀಕರಣದ ಗಾಳಿಯಲ್ಲಿ ಭಾರತದೊಳಕ್ಕೆ ತೂರಲಾರಂಭಿಸಿದ ಬಹುರಾಷ್ಟ್ರೀಯ ಕಂಪೆನಿಗಳ ವಿರುದ್ಧ ಸಾಮ್ರಾಜ್ಯಶಾಹಿ ವಿರೋಧಿ ಒಕ್ಕೂಟ ಕಟ್ಟಿಕೊಂಡು ಹೋರಾಟದ ಕಣಕ್ಕಿಳಿದವರು ಅವರು. ಕಳೆದ ಶತಮಾನದ ಕೊನೆಯ ಅವಧಿ ಮತ್ತು ಈ ಶತಮಾನದ ಮೊದಲ ದಶಕದ ಮೊದಲರ್ಧಗಳು ಭೀಕರ ಕೋಮುಗಲಭೆಗಳಿಗೆ ದೇಶದ ಹಲವು ಭಾಗಗಳಲ್ಲಿ ಗುರಿಯಾಗುತ್ತಾ ನಲುಗುತ್ತಿದ್ದಾಗ, ಅದನ್ನು ವಿರೋಧಿಸುವ ಗಟ್ಟಿದನಿಗಳ ಜೊತೆಗೂಡಿದವರು ಈ ಹಿರಿಯಜ್ಜ.

ಅದೇರೀತಿ ನಂತರದ ದಿನಗಳಲ್ಲಿ ಕೋಮುಸೌಹಾರ್ದದ ಚಳವಳಿಗಳಲ್ಲಿ, ದೇಶದಲ್ಲಿ ಹೆಚ್ಚುತ್ತಿದ್ದ ಬಲಪಂಥೀಯ ರಾಜಕಾರಣದ ವಿರುದ್ಧದ ಆಂದೋಲನಗಳಲ್ಲಿ ದೊರೆಸ್ವಾಮಿಯವರು ಸದಾ ಸಕ್ರಿಯರಾಗಿದ್ದರು. ಶಾಂತಿಗಾಗಿ ನಾಗರಿಕರ ವೇದಿಕೆಯ ಮುಖ್ಯ ವ್ಯಕ್ತಿಗಳಲ್ಲಿ ಒಬ್ಬರಾಗಿ, ರಾಜ್ಯದಲ್ಲಿ ಭೂಗತ ಜೀವನದಿಂದ ಮುಖ್ಯವಾಹಿನಿಗೆ ಬರಲು ಹೋರಾಟಗಾರರಿಗೆ ಬೆಂಬಲವಾಗಿ ನಿಂತಿದ್ದರಲ್ಲಿ ಅವರ ಅಸಾಮಾನ್ಯವಾದ ಕಾಳಜಿ ನಮ್ಮ ಮನಸ್ಸಿಗೆ ತಾಕುತ್ತದೆ.

ಅಷ್ಟೇ ಅಲ್ಲ, ದೂರಗಾಮಿಯಾದ ಸಾಮಾಜಿಕ ಆಂದೋಲನವೊಂದನ್ನು ಹುಟ್ಟುಹಾಕಬೇಕು ಮತ್ತು ಅದು ಶೋಷಿತರಿಗೆ ಅವರ ಭೂಮಿಯ ಹಕ್ಕನ್ನು ಕೊಡಿಸುವುದೇ ಆಗಿರಬೇಕು ಎಂಬ ಖಚಿತವಾದ ಅಭಿಪ್ರಾಯವನ್ನು ಮುಂದಿಟ್ಟು ಅದರ ಮುಂಚೂಣಿ ಸ್ಥಾನವನ್ನೂ ತಾವೇ ವಹಿಸಿಕೊಂಡರು. ಅದರ ಅಂಗವಾಗಿ ಎಂತಹ ಕಷ್ಟಕರ ಹೋರಾಟಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಹಿಂಜರಿಯಲಿಲ್ಲ. ದಿಡ್ಡಳ್ಳಿಯ ಹೋರಾಟದ ಸಂದರ್ಭದಲ್ಲಿ ಮಡಿಕೇರಿ ಚಲೋಗಾದರೂ ಸರಿಯೇ, ಬೆಂಗಳೂರು ಚಲೋ ಪಾದಯಾತ್ರೆಗಾದರೂ ಸರಿಯೇ, ಸುದೀರ್ಘ 18 ದಿನಗಳ ನಿರಂತರ ಧರಣಿಗಾದರೂ ಸರಿಯೇ, ಮುಂದಿಟ್ಟ ಹೆಜ್ಜೆಯನ್ನು ಹಿಂದಿಡದೆ ಆ ಹೋರಾಟ ತಾತ್ವಿಕ ಅಂತ್ಯ ಕಾಣುವವರೆಗೆ ಪಟ್ಟುಹಿಡಿಯುವ ಅವರ ನಿರ್ಧಾರ ಸುಲಭಸಾಧ್ಯವಲ್ಲ. ಮದ್ಯನಿಷೇಧದ ಹೋರಾಟದಿಂದ ಹಿಡಿದು, ಕೆರೆ ಉಳಿಸುವ ಆಂದೋಲನದತನಕ ಎಲ್ಲದರಲ್ಲೂ ನಮಗೆ ಈ ಕಷ್ಟಸಹಿಷ್ಣು ಗುಣ ಎದ್ದು ಕಾಣುತ್ತದೆ.

ಗೌರಿ ಲಂಕೇಶರ ಹತ್ಯೆಯ ಸಂದರ್ಭದಲ್ಲೂ ಅತ್ಯಂತ ನಿಷ್ಟುರವಾಗಿ ಆಳುವ ಫ್ಯಾಸಿಸ್ಟ್ ಪಕ್ಷವನ್ನು ಗುರಿಮಾಡಿ ಮಾತನಾಡಲಾರಂಭಿಸಿ, ಆಳುವವರಿಗೆ ಶತ್ರುವಾಗಿ ಕಂಡರು. ಅಷ್ಟಾದರೂ ಸತ್ಯ, ನ್ಯಾಯ ಮತ್ತು ಹೋರಾಟದ ಹಾದಿಯಿಂದ ಹಿಂದೆಸರಿಯುವುದಿರಲಿ, ಒಂದಷ್ಟು ಮೃದುಧೋರಣೆ ತಾಳುವುದೂ ಕೂಡಾ ಅವರಿಗೆ ಎಂದಿಗೂ ಒಪ್ಪಿತವಾದ ಕೆಲಸವಲ್ಲ! ಅದಕ್ಕಾಗಿ ಬಿಜೆಪಿ ಪಾಳಯದಿಂದ ದಾಳಿಗೊಳಗಾದರೂ ಕಿಂಚಿತ್ತೂ ಅಳುಕದ ಆನೆ ನಡಿಗೆ ಅವರದ್ದು.

ತಮ್ಮ ದೂರದೃಷ್ಟಿತ್ವ, ತಳಮಟ್ಟದ ಸಮಸ್ಯೆಗಳನ್ನು ಕಂಡುಕೊಂಡು ಹೋರಾಟದ ಕಾರ್ಯತಂತ್ರ ರೂಪಿಸುವ ಸೂಕ್ಷ್ಮತೆ ಮತ್ತು ಸಾಮಾಜಿಕ ನ್ಯಾಯ ಮತ್ತು ಜಾತ್ಯತೀತತೆಯ ಕುರಿತ ತಮ್ಮ ಅಚಲವಾದ ನಿಷ್ಠೆಯ ಕಾರಣದಿಂದ ದೊರೆಸ್ವಾಮಿಯವರು ಎಂದಿಗೂ ಅನನ್ಯರಾಗಿಯೇ ಉಳಿಯುತ್ತಾರೆ. ಎಷ್ಟೋ ಬಾರಿ ಕೆಲವರ ಸಾವಿನಿಂದ ’ನಾಡು ಬಡವಾಯಿತು’, ’ಶೂನ್ಯ ಆವರಿಸಿದೆ’ ಎಂಬ ಮಾತುಗಳನ್ನು ಬಳಸಿದ್ದಿದೆ… ಆ ಮಾತುಗಳು ಈ ಸಾವಿನ ಸಂದರ್ಭದಲ್ಲಿ ಇನ್ನಷ್ಟು ತೀವ್ರವಾಗಿ ಕಾಡುತ್ತವೆ. ದೊರೆಸ್ವಾಮಿಯವರ ನಿರ್ಗಮನ ಅವರ ತುಂಬು ಬದುಕಿನ ಮತ್ತೊಂದು ಘಟ್ಟ ಎಂಬ ಅರಿವಿದ್ದರೂ ನಿಜವಾದ ಶೂನ್ಯಭಾವ ಆವರಿಸಿರುವುದಂತೂ ಸತ್ಯ.

ಮಲ್ಲಿಗೆ

ಮಲ್ಲಿಗೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ಇದನ್ನೂ ಓದಿ: ಕಲಬುರಗಿ ಕೇಂದ್ರೀಯ ವಿವಿ: ಭ್ರಷ್ಟಾಚಾರ, ಅಕ್ರಮ ನೇಮಕಾತಿ ಆರೋಪ ಅಲ್ಲಗೆಳೆದ ರಿಜಿಸ್ಟ್ರಾರ್‌‌‌‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....