ಸತೀಶ್ ಜಾರಕಿಹೋಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯು ಕೋವಿಡ್ ಸಂಬಂಧ ಜಾಗೃತಿ ಮೂಡಿಸಲು 10 ದಿನಗಳ ಆರೋಗ್ಯ ಬಂಧುತ್ವ ಅಭಿಯಾನ ಎಂಬ ವೆಬಿನಾರ್ ಸರಣಿಯನ್ನು ಆರಂಭಿಸಿದೆ. ಜಾಗೃತಿ ಅಭಿಯಾನದ ಮೊದಲ ದಿನವಾದ ನಿನ್ನೆ ಜೂನ್ 10 ರ ಗುರುವಾರ ಸಂಜೆ 7 ಗಂಟೆಗೆ ಅಭಿಯಾನದ ಉದ್ಘಾಟನೆ ನಡೆಯಿತು. ಘಟಪ್ರಭಾದ ಡಾ. ಎನ್ ಎಸ್ ಹರ್ಡೀಕರ್ ರಾಷ್ಟ್ರೀಯ ತರಬೇತಿ ಕೇಂದ್ರದಲ್ಲಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು.

ಅರೋಗ್ಯ ಬಂಧುತ್ವ ವೆಬಿನಾರ್ ಸರಣಿಯ ಮೊದಲ ಕಂತಿನಲ್ಲಿ ಕೋವಿಡ್ ಎದುರಿಸುವುದು ಹೇಗೆ? ಎಂಬ ವಿಷಯದ ಕುರಿತು ವಿಚಾರ ಸಂಕೀರ್ಣ ನಡೆಯಿತು. ವಿಜ್ಞಾನಿ ಗಿರೀಶ್ ಮೂಡ್ ಮಾತನಾಡಿ, “ಪ್ರಕೃತಿಗಿಂತ ಯಾರೂ ದೊಡ್ಡವರಲ್ಲ. ವಿಜ್ಞಾನಿಗಳೂ ಕೂಡ ಪ್ರಕೃತಿಯ ವಿರುದ್ಧ ಹೋಗಲು ಸಾಧ್ಯವಿಲ್ಲ. 2019 ರಲ್ಲಿ ವೂಹಾನ್ ನಿಂದ ಕೇರಳಕ್ಕೆ ಭೇಟಿನೀಡಿದ ವ್ಯಕ್ತಿಯಲ್ಲಿ ಮೊಟ್ಟ ಮೊದಲು ಭಾರತದಲ್ಲಿ ಕೊರೋನಾ ವೈರಸ್ ಕಾಣಿಸಿಕೊಂಡಿತ್ತು. ಇಂದು ಅದು ಮನುಷ್ಯನಿಗೆ, ವಿಜ್ಞಾನಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಕೊರೋನಾ ವೈರಸ್ ಎಲ್ಲಿಗೂ ಹೋಗುವುದಿಲ್ಲ. ನಾವು ಅದನ್ನು ಎದುರಿಸಲು ಕಲಿಯಬೇಕು. ಕೋವಿಡ್ ಪಾಸಿಟಿವ್ ಅಥವಾ ನೆಗೆಟಿವ್ ಇರಲಿ ಸೂಕ್ತ ಜಾಗೃತೆಯನ್ನು ವಹಿಸಬೇಕು” ಎಂದರು.
ಇದನ್ನೂ ಓದಿ : 5 ವರ್ಷದಲ್ಲಿ 14 ಸರ್ಕಾರಿ ಹುದ್ದೆಗೆ ಆಯ್ಕೆಯಾದ ಬಾಗಲಕೋಟೆಯ ಮಹಂತೇಶ್ ಬ್ಯಾಡಗಿ
ಮಾನವ ಬಂಧುತ್ವ ವೇದಿಕೆಯ ವಿಭಾಗೀಯ ಸಂಚಾಲಕರಾದ ಅನಂತ್ ನಾಯ್ಕರ್ ದಿಕ್ಸೂಚಿ ಮಾತುಗಳನ್ನಾಡಿ ಕೊರೋನಾ ಇಡೀ ಜಗತ್ತನ್ನು ಬಗ್ಗು ಬಡಿಯುತ್ತಿದೆ . ಜನರ ಜೀವನ ತತ್ತರಿಸುತ್ತಿದೆ. ಆಳುವವರ ನಿರ್ಲಕ್ಷ್ಯ ಮತ್ತು ಅವೈಜ್ಞಾನಿಕ ಮನೋಭಾವವೇ ಕಾರಣ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾನವ ಬಂಧುತ್ವ ವೇದಿಕೆಯ ರಾಜ್ಯ ಸಂಚಾಲಕ ರವಿಂದ್ರ ನಾಯ್ಕರ್, “ಬಂಧುತ್ವದಿಂದ ಮಾತ್ರ ಇಂತಹ ಸಂಕಷ್ಟಗಳನ್ನು ಎದುರಿಸಲು ಸಾಧ್ಯ. ಆತ್ವವಿಶ್ವಾಸ, ಆತ್ಮಸ್ಥೈರ್ಯ ಹೆಚ್ಚಿಸುವ ಮೂಲಕ ರೋಗವನ್ನು ಹೊಡೆದೋಡಿಸಲು ಸಾಧ್ಯ ಎಂದರು.
ಇದನ್ನೂ ಓದಿ : ಸೋಶಿಯಲಿಸಂನನ್ನು ವರಿಸಲಿರುವ ಮಮತಾ ಬ್ಯಾನರ್ಜಿ!: ಸಿದ್ದಾಂತ ಪ್ರೇಮಿಗಳಿಂದಾಗಿ ಗಮನ ಸೆಳೆದ ಮದುವೆ


