ರಿಲಯನ್ಸ್ ಹೋಮ್ ಫೈನಾನ್ಸ್ ಮತ್ತು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್‌ಗಳು ಕರ್ನಾಟಕ ಬ್ಯಾಂಕ್‌ಗೆ ಆರ್ಥಿಕ ವಂಚನೆಯನ್ನು ಮಾಡಿವೆ ಎಂದು ಕರ್ನಾಟಕ ಬ್ಯಾಂಕ್ ತಿಳಿಸಿದೆ. ಸುಮಾರು 160 ಕೋಟಿ ಮೌಲ್ಯದ ಆರ್ಥಿಕ ವಂಚನೆ ಇದಾಗಿದೆ ಎಂದು ಕರ್ನಾಟಕ ಬ್ಯಾಂಕ್ ಆಡಿಟ್ ರಿಪೋರ್ಟ್ ಬಿಡುಗಡೆ ಮಾಡಿದೆ.
ಈ 160 ಕೋಟಿಯಲ್ಲಿ ಬಹುಮುಖ್ಯವಾದ 138.41 ಕೋಟಿ ವಂಚನೆಯು ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ನಿಂದ ನಡೆದಿದೆ. 2014 ರಿಂದಲೂ ಕರ್ನಾಟಕ ಬ್ಯಾಂಕ್‌ನಿಂದ ದೊಡ್ಡ ಮೊತ್ತದ ಸಾಲವನ್ನು ಪಡೆದಿರುವ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ಇದುವರೆಗೆ ಪಡೆದ ಸಾಲವನ್ನು ಮರುಪಾವತಿಸಿಲ್ಲ. ದೀರ್ಘಕಾಲದ ಸಾಲ ಬಾಕಿಯಿಂದ ನಷ್ಟವನ್ನು ಅನುಭವಿಸಿರುವ ಕರ್ನಾಟಕ ಬ್ಯಾಂಕ್ ಈಗ ರಿಲಯನ್ಸ್ ಕಮರ್ಷಿಯಲ್ ಫೈನಾನ್ಸ್ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದೆ.
ರಿಲಯನ್ಸ್ ಹೋಮ್ ಫೈನಾನ್ಸ್ ಮತ್ತು ಕಮರ್ಷಿಯಲ್ ಫೈನಾನ್ಸ್ ಎರಡೂ ಖಾತೆಯನ್ನು ನಾನ್ ಪರ್ಫಾರ್ಮಿಂಗ್ ಅಸೆಟ್ (NPA) ಎಂದು ಪರಿಗಣಿಸಲಾಗಿದೆ. ಇದರಿಂದ ಬ್ಯಾಂಕ್‌ನ ಆರ್ಥಿಕ ಚಟುವಟಿಕೆಗೆ ಮತ್ತು ಸಾಲ ನೀಡುವ ಸಾಮರ್ಥ್ಯಕ್ಕೆ ಯಾವುದೇ ತೊಂದರೆಯಾಗಿಲ್ಲ ಎಂದು ಕರ್ನಾಟಕ ಬ್ಯಾಂಕ್ ಪ್ರಕಟಣೆಯನ್ನು ಹೊರಡಿಸಿದೆ.
ಇದನ್ನೂ ಓದಿ : ಕೊರೊನಾ 3ನೇ ಅಲೆಯಲ್ಲಿ ರಾಜ್ಯದಲ್ಲಿ 3.4 ಲಕ್ಷ ಮಕ್ಕಳಿಗೆ ಸೋಂಕು ಸಾಧ್ಯತೆ: ತಜ್ಞರ ಸಮಿತಿ


